Airfare: ವಿಮಾನ ಪ್ರಯಾಣ ದರದಲ್ಲಿ ಭಾರೀ ಕಡಿತ; ಬೇಗ ಫ್ಲೈಟ್​ ಬುಕ್​ ಮಾಡಿ

ದೇಶೀಯ ವಿಮಾನ ದರಗಳು (Air fares) ಕುಸಿದಿದ್ದು ಹಲವು ವಿಮಾನ ಯಾನ ಸಂಸ್ಥೆಗಳು (Airline) ಶುಲ್ಕಗಳನ್ನು ಕಡಿತಗೊಳಿಸಿವೆ. ಸರಕಾರವು ಶುಲ್ಕ ಮಿತಿಗಳನ್ನು ರದ್ದುಗೊಳಿಸಿದ ಕೆಲವೇ ದಿನಗಳಲ್ಲಿ, ದೇಶೀಯ ವಿಮಾನಯಾನ ಸಂಸ್ಥೆಗಳಾದ ಆಕಾಶ ಏರ್, ಇಂಡಿಗೋ, ಏರ್ ಏಷ್ಯಾ, ಗೋಫಾಸ್ಟ್ ಮತ್ತು ವಿಸ್ತಾರಾ ಬೆಲೆಗಳನ್ನು ಕಡಿತಗೊಳಿಸಿವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇತ್ತೀಚಿನ ತಿಂಗಳುಗಳಲ್ಲಿ ಹೆಚ್ಚಿನ ವೇತನಗಳಿಂದ (Income) ಉತ್ತೇಜನಗೊಂಡ ನಂತರ ದೇಶೀಯ ವಿಮಾನ ದರಗಳು (Air fares) ಕುಸಿದಿದ್ದು ಹಲವು ವಿಮಾನ ಯಾನ ಸಂಸ್ಥೆಗಳು (Airline) ಶುಲ್ಕಗಳನ್ನು ಕಡಿತಗೊಳಿಸಿವೆ. ಸರಕಾರವು ಶುಲ್ಕ ಮಿತಿಗಳನ್ನು ರದ್ದುಗೊಳಿಸಿದ ಕೆಲವೇ ದಿನಗಳಲ್ಲಿ, ದೇಶೀಯ ವಿಮಾನಯಾನ ಸಂಸ್ಥೆಗಳಾದ ಆಕಾಶ ಏರ್, ಇಂಡಿಗೋ, ಏರ್ ಏಷ್ಯಾ, ಗೋಫಾಸ್ಟ್ ಮತ್ತು ವಿಸ್ತಾರಾ ಬೆಲೆಗಳನ್ನು ಕಡಿತಗೊಳಿಸಿವೆ. ಆಕಾಶ ಏರ್ ವಿಮಾನ ಯಾನಗಳಲ್ಲಿ (Akasha Air Flight) ಬೆಲೆ ಕಡಿತಗೊಳಿಸಿದ್ದು ಮುಂಬೈ-ಬೆಂಗಳೂರು ಪ್ರಯಾಣ ವೆಚ್ಚ 2,000-ರೂ 2,200 ರಂತೆ ನಿಗದಿಪಡಿಸಿದ್ದು, ಮುಂಬೈ-ಅಹಮದಾಬಾದ್ ಪ್ರಯಾಣ ದರ ಬರೇ ರೂ 1,400 ಆಗಿದೆ. ಆಗಸ್ಟ್ ತಿಂಗಳಲ್ಲಿ ಪ್ರಯಾಣ ದರ ಕ್ರಮವಾಗಿ ರೂ 3,948 ಹಾಗೂ ರೂ 5,008 ಆಗಿತ್ತು.

ವಾಯು ಸಂಚಾರಗಳ ಬೆಲೆ ಹೇಗಿದೆ?
ದೇಶದ ಅತಿದೊಡ್ಡ ವಿಮಾನ ಯಾನ ಸಂಸ್ಥೆ ಇಂಡಿಗೋ ಎರಡೂ ವಾಯುಮಾರ್ಗಗಳಲ್ಲಿ ಆಕಾಶ ಏರ್‌ನ ಅದೇ ದರಗಳನ್ನು ಅನುಸರಿಸಿದ್ದು ಗೋಫಾಸ್ಟ್ ಕೂಡ ಇದೇ ವಾಯುಮಾರ್ಗಗಳಲ್ಲಿ ದರಗಳನ್ನು ಗಣನೀಯವಾಗಿ ಕಡಿತಗೊಳಿಸಿದೆ.
ದೆಹಲಿ ಹಾಗೂ ಲಕ್ನೋ ನಡುವಿನ ವಿಮಾನ ಸಂಚಾರದಲ್ಲಿ ಕೂಡ ಗಣನೀಯ ಇಳಿಕೆ ಕಂಡುಬಂದಿದ್ದು ರೂ 1900-2200 ಕ್ಕೆ ನಿಗದಿಗೊಳಿಸಲಾಗಿದೆ. ಏಷ್ಯಾ ಮತ್ತು ಇಂಡಿಗೋ ಸಂಸ್ಥೆಗಳು ಅಗ್ಗದ ದರಗಳಲ್ಲಿ ಪ್ರಯಾಣಿಕರಿಗೆ ಸಂಚಾರವನ್ನು ಕಲ್ಪಿಸುತ್ತಿವೆ.

ಇದೇ ಮಾರ್ಗದಲ್ಲಿ ಈ ಹಿಂದೆ ಸಂಚಾರ ಶುಲ್ಕ ರೂ 3,500-4000 ದ ನಡುವೆ ಇತ್ತು. ಕೊಚ್ಚಿ ಮತ್ತು ಬೆಂಗಳೂರು ನಡುವಿನ ವಿಮಾನ ದರಗಳು ರೂ 1,100-ರೂ. 1,300 ಕ್ಕೆ ಇಳಿದಿವೆ, ಗೋಫಾಸ್ಟ್, ಇಂಡಿಗೋ ಮತ್ತು ಏರ್ ಏಷ್ಯಾ ಈ ಮಾರ್ಗದಲ್ಲಿ ಅಗ್ಗದ ಸಂಚಾರ ಸೌಲಭ್ಯಗಳನ್ನು ಒದಗಿಸುತ್ತಿವೆ. ಮುಂಬೈ-ಜೈಪುರ ಸಂಚಾರದಲ್ಲಿ ಹಿಂದೆ ಇದ್ದ ರೂ 5,000-5,500 ಬೆಲೆಯಿಂದ ಕೇವಲ ರೂ 3,900 ಕ್ಕೆ ಇಳಿದಿದೆ.

ಬೆಲೆ ಕಡಿತದ ಬಗ್ಗೆ ತಜ್ಞರ ಅಭಿಪ್ರಾಯವೇನು?
ತಜ್ಞರು ಹೇಳುವಂತೆ ವಿಮಾನ ಯಾನ ಸಂಸ್ಥೆಗಳು ಇಳಿಕೆ ಮಾಡಿರುವ ಪ್ರಸ್ತುತ ದರಗಳನ್ನು ನೋಡಿದಾಗ ಇದೊಂದು ಸ್ಪರ್ಧಾತ್ಮಕ ಅಂಶವನ್ನು ಪ್ರದರ್ಶಿಸುತ್ತಿದ್ದು ಎಲ್ಲಾ ಸಂಸ್ಥೆಗಳು ಬೆಲೆ ಕಡಿಮೆ ಮಾಡಿರುವುದು ಉದ್ಯಮದ ಪ್ರಗತಿಗೆ ಸಕಾರಾತ್ಮಕ ಅಂಶವಾಗಿದೆ ಎಂದು ತಿಳಿಸಿದ್ದಾರೆ. ಕಡಿಮೆ ಬೆಲೆಯಿಂದ ಮಾರುಕಟ್ಟೆ ಬೆಲೆಯನ್ನು ಪಡೆದುಕೊಳ್ಳಲು ಅಥವಾ ಉಳಿಸಿಕೊಳ್ಳಲು ಸಾಧ್ಯವಾಗಿದ್ದು ಇದು ಸ್ಪರ್ಧೆ, ಬೇಡಿಕೆ, ಪೂರೈಕೆ, ವೆಚ್ಚಗಳು ಮತ್ತು ಸಂಭಾವ್ಯ ಸರಕು ಆದಾಯಗಳ ಉತ್ಪನ್ನವಾಗಿದೆ.

ಇದನ್ನೂ ಓದಿ:  Bengaluru Rains: ಮಳೆ ಎಫೆಕ್ಟ್; ಬೆಂಗಳೂರಲ್ಲಿ ವಿಮಾನ ಹಾರಾಟ ವ್ಯತ್ಯಯ

ಇಂತಹ ತೀವ್ರ ಸ್ಪರ್ಧೆಯು ದುರ್ಬಲ ಸಂಸ್ಥೆಗಳನ್ನು ಕೆಳಕ್ಕೆ ತಳ್ಳಬಹುದು ಅಂತೆಯೇ ಪ್ರಯಾಣಿಕರೆಲ್ಲರೂ ಸುತ್ತಾಡಲು ಬಯಸಿದರೆ ಲಾಭದ ಹಾದಿಯನ್ನು ವಿಳಂಬಗೊಳಿಸಬಹುದು ಎಂದು ತಜ್ಞರಾದ ಅಮೇಯಾ ಜೋಶಿ ಅಭಿಪ್ರಾಯ ಪಟ್ಟಿದ್ದಾರೆ. ಜುಲೈ-ಸಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದಲ್ಲಿ ಪ್ರಯಾಣವು ಅಕಾಲವಾಗಿರುವುದರಿಂದ ಭಾರತದಾದ್ಯಂತ ವಿಮಾನ ಯಾನಗಳಲ್ಲಿ ಬೆಲೆ ಕುಸಿತವಾಗಿವೆ ಎಂಬುದು ಹಿರಿಯ ಏರ್‌ಲೈನ್ ಅಧಿಕಾರಿಯೊಬ್ಬರ ಅಭಿಪ್ರಾಯವಾಗಿದೆ.

ಸರಕಾರ ಜಾರಿಗೆ ತಂದ ನೀತಿ
ಮುಂಬರುವ ಹಬ್ಬದ ಸಮಯದಲ್ಲಿ ಬೆಲೆಗಳಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆ ಕಂಡುಬರಬಹುದು, ಅದಾಗ್ಯೂ ಶುಲ್ಕದ ಮಿತಿಗಳು ಜಾರಿಯಲ್ಲಿರುವಾಗ ಬೆಲೆ ಕಡಿಮೆ ಇರುತ್ತದೆ ಎಂದು ಪರಿಣಿತರ ಅನಿಸಿಕೆಯಾಗಿದೆ. ಕಳೆದ ಕೆಲವು ತಿಂಗಳಲ್ಲಿ ಕಾರ್ಪೋರೇಟ್ ಪ್ರಯಾಣ ಹಿಂತಿರುಗುವಿಕೆಯು ಉತ್ತೇಜನದ ಸಂಕೇತವಾಗಿದೆ ಹಾಗೂ ಕಡಿಮೆ ಬೆಲೆಗಳನ್ನು ಒದಗಿಸುವ ವಿಶ್ವಾಸವನ್ನು ಸಂಸ್ಥೆಗಳು ಒದಗಿಸುತ್ತವೆ ಎಂದು ದೇಶೀಯ ವಿಮಾನಯಾನ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ:  Intranasal Covid 19 Vaccine: ಮೂಗಿನ ಮೂಲಕ ನೀಡುವ ಭಾರತದ ಮೊದಲ ಕೊರೊನಾ ಲಸಿಕೆ ಬಳಕೆಗೆ ಅನುಮತಿ

ಕಾರ್ಪೋರೇಟ್ ಪ್ರಯಾಣದ ಮೂಲಕ ಪ್ರಯಾಣಿಕರ ಹೊರೆಯ ಅಂಶಗಳು ಹೆಚ್ಚುತ್ತಿವೆ ಇದರಿಂದ ಕಡಿಮೆ ಬೆಲೆಗಳನ್ನು ನೀಡಲು ಅವಕಾಶ ಒದಗಿಸುತ್ತವೆ ಎಂಬುದಾಗಿ ಅಧಿಕೃತ ವಲಯ ತಿಳಿಸಿದೆ. ಮೇ 2020 ರಲ್ಲಿ, ಬೆಲೆ ಏರಿಕೆಯನ್ನು ನಿಯಂತ್ರಿಸುವ ದೃಷ್ಟಿಯಿಂದ ಭಾರತ ಸರಕಾರವು ದೇಶೀಯ ವಿಮಾನ ದರಗಳಲ್ಲಿ ಬೆಲೆ ಪಟ್ಟಿಗಳನ್ನು ಜಾರಿಗೆ ತಂದಿತು. ಅಂತಹ ಶುಲ್ಕ ಬ್ಯಾಂಡ್‌ಗಳನ್ನು ಆಗಸ್ಟ್ 2022 ರ ಅಂತ್ಯದ ವೇಳೆಗೆ ಹಂತಹಂತವಾಗಿ ತೆಗೆದುಹಾಕಲಾಗುವುದು ಎಂದು ಸರಕಾರ ಇತ್ತೀಚೆಗೆ ಘೋಷಿಸಿತು.
Published by:Ashwini Prabhu
First published: