Aircraft Crash: ಪಂಜಾಬ್​ನಲ್ಲಿ ಮಿಗ್-21 ಯುದ್ಧವಿಮಾನ ಪತನ; IAF ಪೈಲಟ್ ಸಾವು

Mig-21 Fighter Jet Accident: ಪಂಜಾಬ್​ನ ಮೋಗ ಜಿಲ್ಲೆಯ ಲಂಗಿಯಾನ ಗ್ರಾಮದಲ್ಲಿ ನಿನ್ನೆ ರಾತ್ರಿ 1 ಗಂಟೆಗೆ Mig-21 ಯುದ್ಧವಿಮಾನ ಪತನಗೊಂಡಿದೆ. ಈ ದುರಂತದಲ್ಲಿ ಐಎಎಫ್​ ಪೈಲಟ್ ಅಭಿನವ್ ಚೌಧರಿ ಸಾವನ್ನಪ್ಪಿದ್ದಾರೆ.

ಮಿಗ್-21 ವಿಮಾನ ಪತನ

ಮಿಗ್-21 ವಿಮಾನ ಪತನ

  • Share this:
ಪಂಜಾಬ್ (ಮೇ 21): ಭಾರತೀಯ ವಾಯುಪಡೆಯ (IAF) ಮಿಗ್-21 ಯುದ್ಧವಿಮಾನ ಪಂಜಾಬ್​ನ ಮೋಗ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಪತನಗೊಂಡಿದೆ. ಪಂಜಾಬ್​ನ ಮೋಗ ಜಿಲ್ಲೆಯ ಲಂಗಿಯಾನ ಗ್ರಾಮದಲ್ಲಿ ನಡೆದ Mig-21 ವಿಮಾನ ದುರಂತದಲ್ಲಿ ಐಎಎಫ್​ ಪೈಲಟ್ ಸ್ಕ್ವಾರ್ಡನ್ ಲೀಡರ್ ಅಭಿನವ್ ಚೌಧರಿ ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪೈಲಟ್ ಅಭಿನವ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಮಧ್ಯರಾತ್ರಿ 1 ಗಂಟೆಗೆ ಮಿಗ್-21 ವಿಮಾನ ಪತನವಾಗಿದೆ. ಈ ಬಗ್ಗೆ ಭಾರತೀಯ ವಾಯುಪಡೆ ಟ್ವಿಟ್ಟರ್​ನಲ್ಲಿ ಖಚಿತಪಡಿಸಿದೆ.



ಇದನ್ನೂ ಓದಿ: Israel- Palestine Conflict: ಇಸ್ರೇಲ್​ನಿಂದ ಗಾಜಾದಲ್ಲಿ ಕದನವಿರಾಮ ಘೋಷಣೆ; ಪ್ಯಾಲೆಸ್ತೀನ್​ನ ಜಯ ಎಂದ ಹಮಾಸ್



Mig-21 Fighter jet ಪತನಕ್ಕೆ ನಿಖರ ಕಾರಣವೇನೆಂಬ ಬಗ್ಗೆ ತನಿಖೆ ನಡೆಸಲು ಭಾರತೀಯ ವಾಯುಪಡೆ ಆದೇಶಿಸಿದೆ. ಹಾಗೇ, ಮೃತಪಟ್ಟ ಪೈಲಟ್​ನ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದೆ. ಮೀರತ್​ನವರಾಗಿದ್ದ ಅಭಿನವ್ ಚೌಧರಿ ಕಳೆದ ವರ್ಷವಷ್ಟೇ ಮದುವೆಯಾಗಿದ್ದರು. ಅವರು ಹೆಂಡತಿ, ತಂದೆ-ತಾಯಿ, ಕುಟುಂಬಸ್ಥರನ್ನು ಅಗಲಿದ್ದಾರೆ.



ಈ ವರ್ಷ ನಡೆಯುತ್ತಿರುವ ಮಿಗ್-21 ಯುದ್ಧವಿಮಾನದ ಮೂರನೇ ಪತನ ಇದಾಗಿದೆ. ಮಾರ್ಚ್ ತಿಂಗಳಲ್ಲಿ ಮಿಗ್-21 ಟೇಕಾಫ್ ಆಗುವಾಗ ಭಾರತೀಯ ವಾಯುಪಡೆಯ ಕ್ಯಾಪ್ಟನ್ ಎ ಗುಪ್ತಾ ಸಾವನ್ನಪ್ಪಿದ್ದರು. ಜನವರಿಯಲ್ಲಿ ರಾಜಸ್ಥಾನದಲ್ಲಿ ವಿಮಾನ ಪತನಗೊಂಡು ಓರ್ವ ಅಧಿಕಾರಿ ಸಾವನ್ನಪ್ಪಿದ್ದರು. ಇದೀಗ ಪಂಜಾಬ್​ನಲ್ಲಿ ಐಎಎಫ್​ನ ಪೈಲಟ್ ಪ್ರಾಣ ಕಳೆದುಕೊಂಡಿದ್ದಾರೆ.
Published by:Sushma Chakre
First published: