ಏರ್ಸೆಲ್​-ಮ್ಯಾಕ್ಸಿಸ್​ ಕೇಸ್​, ಕಾರ್ತಿ ಸಂಸ್ಥೆ ವಿರುದ್ಧ ಲಂಚ ಸ್ವೀಕಾರ ಆರೋಪ: ಚಾರ್ಜ್​ಶೀಟ್​ನಲ್ಲಿ ‘ಇ.ಡಿ’ ಉಲ್ಲೇಖ


Updated:June 13, 2018, 10:35 PM IST
ಏರ್ಸೆಲ್​-ಮ್ಯಾಕ್ಸಿಸ್​ ಕೇಸ್​, ಕಾರ್ತಿ ಸಂಸ್ಥೆ ವಿರುದ್ಧ ಲಂಚ ಸ್ವೀಕಾರ ಆರೋಪ: ಚಾರ್ಜ್​ಶೀಟ್​ನಲ್ಲಿ ‘ಇ.ಡಿ’ ಉಲ್ಲೇಖ
ಕಾರ್ತಿ ಚಿದಂಬರಂ

Updated: June 13, 2018, 10:35 PM IST

-ನ್ಯೂಸ್​-18 ಕನ್ನಡ

ನವದೆಹಲಿ(ಜೂನ್​.13): ಬಹುಕೋಟಿ ಏರ್ಸೆಲ್​-ಮ್ಯಾಕ್ಸಿಸ್​ ಪ್ರಕರಣದಲ್ಲಿ ಮತ್ತೊಂದು ಸ್ಪೋಟಕ ಮಾಹಿತಿ ಹೊರಬಿದ್ದಿದೆ. ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್​ ಹಿರಿಯ ಮುಖಂಡ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರ ನಿಯಂತ್ರಣದ ಸಂಸ್ಥೆ ಅಡ್ವಾಂಟೇಜ್ ಸ್ಟ್ರಾಟೆಜಿಕ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್(ಎಎಸ್ ​ಸಿಪಿಎಲ್) 26 ಲಕ್ಷ. ರೂ ಲಂಚ ಸ್ವೀಕರಿಸಿದೆ ಎಂದು ತಿಳಿದು ಬಂದಿದೆ.


Loading...

ಈ ಸಂಬಂಧ ಜಾರಿ ನಿರ್ದೇಶನಾಲಯ(ಇಡಿ) ದೋಷರೋಪಣಾ ಪಟ್ಟಿಯಲ್ಲಿ ಉಲ್ಲೇಖ ಮಾಡಿದ್ದು ಗಂಭೀರ ಆರೋಪ ಎಸಗಿದೆ. ಏರ್ಸೆಲ್​-ಮ್ಯಾಕ್ಸಿಸ್​ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಕಾರ್ತಿ ಚಿದಂಬರಂ ವಿರುದ್ಧ ದೆಹಲಿ ಕೋರ್ಟ್​ಗೆ ಇಡಿ ಚಾರ್ಜ್​ಶೀಟ್​ ಸಲ್ಲಿಸಿದೆ.ಎಎಸ್​ ಸಿಪಿಎಲ್​ ಕಂಪನಿಯನ್ನು ಕಾರ್ತಿ ನಿರ್ದೇಶನದ ಮೇರೆಗೆ ಸ್ಥಾಪಿಸಿದ್ದು, ಅಕ್ರಮ ಹಣದ ವಹಿವಾಟು ನಡೆಯುತ್ತಿದೆ. ಕಂಪನಿ ಸಂಪೂರ್ಣ ಕಾರ್ತಿ ಅವರ ಹಿಡಿತದಲ್ಲಿದೆ ಎಂದು ದೋಷರೋಪಣ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ಕಂಪನಿಗೆ ಬೇಕಿರುವ ಹಣದ ಅಗತ್ಯತೆಯನ್ನು ಕಾರ್ತಿ ಅವರು ಪೂರೈಸುತ್ತಾರೆ ಎನ್ನಲಾಗಿದೆ.


ಈ ಸಂಬಂಧ ಜಾರಿ ನಿರ್ದೇಶನಾಲಯ ಅಧಿಕಾರಿಗಳು ನಿನ್ನೆ ಕಾರ್ತಿ ಚಿದಂಬರಂ ಅವರನ್ನು ವಿಚಾರಣೆ ನಡೆಸಿದ್ದರು. ಬಳಿಕ ಎಲ್ಲಾ ಇಮೇಲ್​ ವ್ಯವಹಾರಗಳನ್ನು ಪರಿಶೀಲಿಸಿದ್ದು, ಇದು ಕಾರ್ತಿ ಹಣದ ಸಹಾಯದಿಂದ ನಡೆಯುತ್ತಿರುವ ಕಂಪನಿ ಎಂದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖ ಮಾಡಿದ್ದಾರೆ.


First published:June 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...