• Home
  • »
  • News
  • »
  • national-international
  • »
  • Party Ban: ಶಾಶ್ವತವಾಗಿ ಪಾರ್ಟಿಗಳನ್ನು ನಿಷೇಧಿಸಿದ ಏರ್‌ಬಿಎನ್‌ಬಿ: ನಿಯಮ ಉಲ್ಲಂಘಿಸಿದ್ರೆ ಕ್ರಮ ಗ್ಯಾರಂಟಿ

Party Ban: ಶಾಶ್ವತವಾಗಿ ಪಾರ್ಟಿಗಳನ್ನು ನಿಷೇಧಿಸಿದ ಏರ್‌ಬಿಎನ್‌ಬಿ: ನಿಯಮ ಉಲ್ಲಂಘಿಸಿದ್ರೆ ಕ್ರಮ ಗ್ಯಾರಂಟಿ

ಏರ್‌ಬಿಎನ್‌ಬಿ

ಏರ್‌ಬಿಎನ್‌ಬಿ

ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ವಸತಿ ಮತ್ತು ಪಾರ್ಟಿಗಳನ್ನು ಆಯೋಜಿಸುವ ಅಮೇರಿಕಾದ ಕಂಪನಿ Airbnb ಪಾರ್ಟಿಗಳ ಮೇಲೆ ಶಾಶ್ವತವಾಗಿ ನಿಷೇಧ ಹೇರಲು ನಿರ್ಧರಿಸಿದೆ. ಸಾಂಕ್ರಾಮಿಕ ರೋಗ ಕೋವಿಡ್- 19 ಆರಂಭಿಕ ದಿನಗಳಲ್ಲಿ ತಾತ್ಕಾಲಿಕವಾಗಿ ಕಂಪನಿ ಪಾರ್ಟಿಗಳನ್ನು ಬ್ಯಾನ್ ಮಾಡಿತ್ತು.

ಮುಂದೆ ಓದಿ ...
  • Share this:

ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ವಸತಿ ಮತ್ತು ಪಾರ್ಟಿಗಳನ್ನು (Party) ಆಯೋಜಿಸುವ ಅಮೇರಿಕಾದ ಕಂಪನಿ Airbnb ಪಾರ್ಟಿಗಳ ಮೇಲೆ ಶಾಶ್ವತವಾಗಿ ನಿಷೇಧ ಹೇರಲು ನಿರ್ಧರಿಸಿದೆ. ಸಾಂಕ್ರಾಮಿಕ ರೋಗ ಕೋವಿಡ್- 19 ಆರಂಭಿಕ ದಿನಗಳಲ್ಲಿ ತಾತ್ಕಾಲಿಕವಾಗಿ ಕಂಪನಿ ಪಾರ್ಟಿಗಳನ್ನು (Company Party) ಬ್ಯಾನ್ ಮಾಡಿತ್ತು. ಪ್ರಸ್ತುತ ಈ ಕ್ರಮವನ್ನು ಮುಂದುವರಿಸುವುದಾಗಿ ಮಂಗಳವಾರ ಘೋಷಿಸಿದೆ. ಅನಧಿಕೃತ ಕೂಟಗಳನ್ನು ನಿಗ್ರಹಿಸುವ ಸಲುವಾಗಿ ಪಾರ್ಟಿಗಳನ್ನು ಶಾಶ್ವತವಾಗಿ ಬ್ಯಾನ್ ಮಾಡಲಾಗುತ್ತಿದೆ ಎಂದು ತಿಳಿಸಿದೆ. ಸಾಮಾಜಿಕ ಅಂತರ (Social Distance) ಕಾಪಾಡುವ ಮತ್ತು ಕೋವಿಡ್-19 ಹರಡುವಿಕೆಯನ್ನು ತಪ್ಪಿಸುವ ಪ್ರಯತ್ನದ ಭಾಗವಾಗಿ Airbnb ಕಂಪನಿಯು ತನ್ನ ಎಲ್ಲಾ ಪಾರ್ಟಿಗಳ ಮೇಲೆ ತಾತ್ಕಾಲಿಕ ನಿಷೇಧವನ್ನು ಆಗಸ್ಟ್ 2020ರಲ್ಲಿ ಘೋಷಿಸಿತು.


ಏರ್‌ಬಿಎನ್‌ಬಿ, ಗ್ರಾಹಕರು ಅವರ ಪ್ಲಾಟ್‌ಫಾರ್ಮ್ ನಲ್ಲಿ ಬಾಡಿಗೆಗೆ ಪಡೆದ ಮನೆಗಳಲ್ಲಿ ಅನಧಿಕೃತ ಕೂಟಗಳನ್ನು ನಡೆಸುವ ಕೆಲವು ಪ್ರಕರಣಗಳ ಬಗ್ಗೆಯೂ ಈ ಹಿಂದೆ ವರದಿ ಮಾಡಿತ್ತು. ಹೀಗಾಗಿ ಇಂತಹ ಅನಧಿಕೃತ ಚಟುವಟಿಕೆಗಳ ಮೇಲೆ ಕಡಿವಾಣ ಹಾಕಲು, ಗ್ರಾಹಕರ ಸುರಕ್ಷತೆಯ ಸಲುವಾಗಿ ಪಾರ್ಟಿ ನಿಷೇಧದ ಕ್ರಮವನ್ನು ಸದ್ಯ ಕೈಗೊಂಡಿದೆ.


ಪಾರ್ಟಿ ನಿಷೇಧದ ನಂತರ ಕಂಪನಿ ಆದಾಯ ಗಳಿಕೆಯಲ್ಲೂ ಸಹ ನಷ್ಟ ಅನುಭವಿಸಿದೆ. Airbnb ಪಾರ್ಟಿಗಳ ನಿಷೇಧದಿಂದಾಗಿ ವರ್ಷದಿಂದ ವರ್ಷಕ್ಕೆ 44% ಕುಸಿತವನ್ನು ಕಂಡಿದೆ ಎಂದು ಕಂಪನಿ ಹೇಳಿದೆ.


ನಿಯಮ ಉಲ್ಲಂಘನೆಯಾದರೆ ಗ್ರಾಹಕರ ವಿರುದ್ಧ ಕ್ರಮ
"ಕಾಲಾನಂತರದಲ್ಲಿ, ಪಾರ್ಟಿಗಳ ನಿಷೇಧವು ಸಾರ್ವಜನಿಕ ಆರೋಗ್ಯದ ಕ್ರಮಕ್ಕಿಂತ ಹೆಚ್ಚಾಯಿತು" ಎಂದು ಕಂಪನಿಯು ಮಂಗಳವಾರ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಪಾರ್ಟಿಗಳನ್ನು ಬ್ಯಾನ್ ಮಾಡುತ್ತಿರುವುದು ಅನಧಿಕೃತ ಪಾರ್ಟಿಗಳನ್ನು ತಡೆಯುವ ಕಂಪನಿಯ ಪ್ರಯತ್ನವಾಗಿದೆ ಎಂದೂ ಸಹ ತಿಳಿಸಿದೆ. ಈ ನಿಯಮಗಳನ್ನು ಉಲ್ಲಂಘಿಸಲು ಪ್ರಯತ್ನಿಸುವ ಅತಿಥಿಗಳ ಖಾತೆಯನ್ನು ಬ್ಲಾಕ್ ಮಾಡುವುದರಿಂದ ಹಿಡಿದು ಪ್ಲಾಟ್‌ಫಾರ್ಮ್‌ನಿಂದ ಸಂಪೂರ್ಣವಾಗಿ ತೆಗೆದುಹಾಕುವವರೆಗೆ ವಿವಿಧ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಕಂಪನಿ ಹೇಳಿದೆ.


ಇದನ್ನೂ ಓದಿ: Pet Dog: ಸ್ಕಿನ್ ಅಲರ್ಜಿ ಇರೋ ನಾಯಿಮರಿಯನ್ನು ಕಾರಿಂದ ಎಸೆದ ಮಾಲೀಕರು, ಕೇಸ್ ದಾಖಲು


ಪಾರ್ಟಿ ನಿಷೇಧವನ್ನು ಉಲ್ಲಂಘಿಸಲು ಪ್ರಯತ್ನಿಸಿದ್ದಕ್ಕಾಗಿ 2021ರಲ್ಲಿ 6,600 ಅತಿಥಿಗಳನ್ನು Airbnb ನಿಂದ ಅಮಾನತುಗೊಳಿಸಲಾಗಿದೆ ಎಂದುಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ Airbnb ಕಂಪನಿ ಹೇಳಿದೆ.


ಇನ್ನೂ ಕೆಲ ಕ್ರಮಗಳನ್ನು ತೆಗೆದುಕೊಂಡ Airbnb ಕಂಪನಿ ತನ್ನ 16 ವ್ಯಕ್ತಿಗಳ ಮಿತಿಯನ್ನು ಸಹ ತೆಗೆದುಹಾಕುವುದಾಗಿ ಹೇಳಿದೆ, ಪ್ಲಾಟ್‌ಫಾರ್ಮ್‌ನಲ್ಲಿ ಪಟ್ಟಿ ಮಾಡಲಾದ ದೊಡ್ಡ ಮನೆಗಳನ್ನು ಪೂರ್ಣ ಆಕ್ಯುಪೆನ್ಸಿಗೆ ಬುಕ್ ಮಾಡಲು ಅನುಮತಿಸಲಾಗುತ್ತದೆ ಎಂದಿದೆ.


ಬಾಡಿಗೆ ಆಸ್ತಿಯಲ್ಲಿ ಇಬ್ಬರ ಹತ್ಯೆ
ಈ ವರ್ಷದ ಆರಂಭದಲ್ಲಿ ಪಿಟ್ಸ್‌ಬರ್ಗ್‌ನಲ್ಲಿ ಏರ್‌ಬಿಎನ್‌ಬಿ-ಬಾಡಿಗೆ ಆಸ್ತಿಯಲ್ಲಿ ನಡೆದಿದ್ದ ಪಾರ್ಟಿಯಲ್ಲಿ ಮಾರಣಾಂತಿಕ ಗುಂಡಿನ ದಾಳಿ ನಡೆದಿದ್ದು ಇಬ್ಬರು ಹದಿಹರೆಯದವರ ಕೊಲೆಯಾಗಿತ್ತು ಮತ್ತು ಹಲವರು ಗಾಯಗೊಂಡಿದ್ದರು. ಈ ವೇಳೆಯಲ್ಲಿ ನಮಗೆ ತಿಳಿಯದೇ ಅನಧಿಕೃತ ಪಾರ್ಟಿಯನ್ನು ಆಯೋಜಿಸಿದ್ದಾರೆ ಎಂದು ಕಂಪನಿ ಹೇಳಿತ್ತು. ಇದೇ ಸಮಯದಲ್ಲಿ ಕಂಪನಿಯು ಸಾಮಾಜಿಕ ಮಾಧ್ಯಮದಲ್ಲಿ ಏರ್‌ಬಿಎನ್‌ಬಿ ಸ್ಥಳಗಳಲ್ಲಿ ಜಾಹೀರಾತು ಪಾರ್ಟಿಗಳನ್ನು ನಿಷೇಧಿಸಿತು.


ಇದನ್ನೂ ಓದಿ: Crime News: ಎಂಎಲ್ಎ ಮನೆಯ ಮರದಿಂದ ಮಾವಿನಹಣ್ಣು ಕದ್ದು ಒಂದು ರಾತ್ರಿ ಜೈಲಿನಲ್ಲಿ ಕಳೆದ ಅಮಾಯಕ


ಹೀಗಾಗಿ ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿದ Airbnb 2019ರಿಂದಲೂ ತನ್ನ ಗ್ರಾಹಕರ ಸುರಕ್ಷತಾ ದೃಷ್ಟಿಯಿಂದಾಗಿ ಇಂತಹ ಕಟ್ಟುನಿಟ್ಟಾದ ಮಿತಿಗಳನ್ನು ವಿಧಿಸಲು ಪ್ರಾರಂಭಿಸಿತು.


ಏರ್‌ಬಿಎನ್‌ಬಿ ಗಳಿಕೆಯಲ್ಲಿ ಏರಿಕೆ
ಕೊರೋನಾ ಸಂದರ್ಭದಲ್ಲಿ ಉದ್ಯಮದಲ್ಲಿ ಕುಸಿತ ಕಂಡು ಬಂದರೂ ಸಹ ನಂತರದ ದಿನಗಳಲ್ಲಿ ಕಂಪನಿ ಚೇತರಿಸಿಕೊಂಡಿತು. ಕೋವಿಡ್ ನಂತರ ಕಂಪನಿಯಲ್ಲಿ ಬುಕ್ಕಿಂಗ್ ಗಳು ಹೆಚ್ಚಾಗ ತೊಡಗಿದವು. ಮೇ 2022 ರಲ್ಲಿ, ಕಂಪನಿಯು 2022ರ ಮೊದಲ ತ್ರೈಮಾಸಿಕದಲ್ಲಿ $ 1.5 ಶತಕೋಟಿ ಆದಾಯವನ್ನು ದಾಖಲಿಸಿರುವುದಾಗಿ ಹೇಳಿಕೊಂಡಿದೆ. ಈ ವರ್ಷದ ಆದಾಯವು ಹಿಂದಿನ ವರ್ಷದ ಆದಾಯಕ್ಕಿಂತ 70% ನಷ್ಟು ಹೆಚ್ಚಾಗಿದೆ ಎಂಬುದರ ಬಗ್ಗೆಯೂ ಸಹ ವರದಿ ಮಾಡಿದೆ.

Published by:Ashwini Prabhu
First published: