HOME » NEWS » National-international » AIRASIA PASSENGERS AN UNPRECEDENTED INCIDENT IN BENGALURU TO DELHI FLIGHT SESR

Airasia: ಬೆಂಗಳೂರು-ದೆಹಲಿ ಏರ್​ಏಷ್ಯಾ ವಿಮಾನದಲ್ಲಿ ಪ್ರಯಾಣಿಕನ ಹುಚ್ಚಾಟ; ಬಟ್ಟೆ ಕಳಚಿ, ಅಸಭ್ಯ ವರ್ತನೆ

ಮೊದಲಿಗೆ ಲೈಫ್​ ಜಾಕೆಟ್​ ಕಾರಣಕ್ಕಾಗಿ ವಿಮಾನದ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ. ಈ ಮಾತಿನ ಚಕಮಕಿ ನಡುವೆ ಆತ ತಕ್ಷಣಕ್ಕೆ ತನ್ನ ಬಟ್ಟೆಗಳನ್ನೆಲ್ಲಾ ಕಳಚಿ ಬೆತ್ತಲಾಗಿದ್ದಾನೆ

news18-kannada
Updated:April 8, 2021, 5:45 PM IST
Airasia: ಬೆಂಗಳೂರು-ದೆಹಲಿ ಏರ್​ಏಷ್ಯಾ ವಿಮಾನದಲ್ಲಿ ಪ್ರಯಾಣಿಕನ ಹುಚ್ಚಾಟ; ಬಟ್ಟೆ ಕಳಚಿ, ಅಸಭ್ಯ ವರ್ತನೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರಿನಿಂದ ದೆಹಲಿಗೆ ಹೋಗುತ್ತಿದ್ದ ಏರ್​ ಏಷ್ಯಾ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕನೊಬ್ಬ ವಿಮಾನ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಘಟನೆ ನಡೆದಿದೆ. ವಿಮಾನ ಹಾರಾಟದ ವೇಳೆ ಬಟ್ಟೆ ಕಳಜಿ ಬೆತ್ತಲಾಗಿದ್ದಾನೆ. ಅಲ್ಲದೇ ಸಿಬ್ಬಂದಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ ಎಂದು ವರದಿಯಾಗಿದೆ. ಮೊದಲಿಗೆ ಲೈಫ್​ ಜಾಕೆಟ್​ ಕಾರಣಕ್ಕಾಗಿ ವಿಮಾನದ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ. ಈ ಮಾತಿನ ಚಕಮಕಿ ನಡುವೆ ಆತ ತಕ್ಷಣಕ್ಕೆ ತನ್ನ ಬಟ್ಟೆಗಳನ್ನೆಲ್ಲಾ ಕಳಚಿ ಬೆತ್ತಲಾಗಿದ್ದಾನೆ ಎಂದು ಸಹ ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ ಎಂದು ಎನ್​ಡಿಟಿವಿ ವರದಿ ಮಾಡಿದೆ.

ಇನ್ನು ಈ ಘಟನೆಯನ್ನು ಸ್ಪಷ್ಟನೆ ನೀಡಿರುವ ಏರ್​ಏಷ್ಯಾ ಇಂಡಿಯಾ ವಕ್ತಾರ, ಏಪ್ರಿಲ್​ 6ರಂದು ಮಂಗಳವಾರ ಬೆಂಗಳೂರಿನಿಂದ ನವದೆಹಲಿಗೆ ಹೋಗುತ್ತಿದ್ದ ಐ5-722 ವಿಮಾನದಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕರೊಬ್ಬರು ಕ್ಯಾಬಿನ್​ ಸಿಬ್ಬಂದಿಯೊಂದಿಗೆ ಅತಿರೇಕದ ವರ್ತನೆ ತೋರಿದ್ದಾರೆ. ಈ ಕುರಿತು ಅವರಿಗೆ ಸಿಬ್ಬಂದಿಗಳು ಪದೇ ಪದೇ ಆತನಿಗೆ ಮನವಿಯನ್ನು ಮಾಡಿದ್ದಾರೆ ತಿಳಿಸಿದರು.

ಇದನ್ನು ಓದಿ: ಮದುವೆ ವಿವಾದ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಬಿಗ್​ಬಾಸ್​ ಅಭ್ಯರ್ಥಿ ಚೈತ್ರಾ ಕೋಟೂರು

ಬಳಿಕ ಕ್ಯಾಬಿನ್​ನ ಸಿಬ್ಬಂದಿ ಸಹ ಪ್ರಯಾಣಿಕರೊಬ್ಬರ ಸಹಾಯದಿಂದ ಈ ವ್ಯಕ್ತಿಯ ಅಶಿಸ್ತಿನ ವರ್ತನೆಯನ್ನು ನಿಯಂತ್ರಿಸಿದ್ದಾರೆ. ಈ ಘಟನೆ ಬಗ್ಗೆ ಪೈಲಟ್​ಗಳಿಗೆ ಮಾಹಿತಿ ನೀಡಲಾಯಿತು. ಪೈಲಟ್​ ಈ ಘಟನೆಯನ್ನು ದೆಹಲಿಯ ಏರ್​ ಟ್ರಾಫಿಕ್​ ಕಂಟ್ರೋಲ್​ಗೆ ತಿಳಿಸಿದ ಬಳಿಕ ತಕ್ಷಣಕ್ಕೆ ವಿಮಾನ ಕೆಳಗಿಳಿಸುವ ಕುರಿತು ಮಾಹಿತಿ ನೀಡಿದರು. ವಿಮಾನ ಕೆಳಗಿಳಿದ ಬಳಿಕ ಅಶಿಸ್ತು ತೋರಿದ ಪ್ರಯಾಣಿಕನನ್ನು ವಾಯುಯಾನ ಭದ್ರತಾ ಸಿಬ್ಬಂದಿ ಅವರನ್ನು ಪೊಲೀಸರಿಗೆ ಒಪ್ಪಿಸಿದ್ದರು.

ಘಟನೆ ಕುರಿತು ಏರ್​ಏಷ್ಯಾ ಪ್ರಯಾಣಿಕರ ನಿರ್ವಹಣಾ ನೀತಿಯಡಿ ದೆಹಲಿ ಪೊಲೀಸರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ದೂರು ನೀಡಿದ. ಘಟನೆ ಕುರಿತು ತಿಳಿಸಿರುವ ಸಂಸ್ಥೆ ನಮ್ಮ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರೊಂದಿಗೆ ಈ ರೀತಿಯ ಅಸಭ್ಯ ವರ್ತನೆಗಳನ್ನು ಬಲವಾಗಿ ಖಂಡಿಸುವುದಾಗಿ ತಿಳಿಸಿದೆ. ಅಶಿಸ್ತಿನ ವರ್ತನೆ ತೋರಿದ ವ್ಯಕ್ತಿ ಮೇಲೆ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Published by: Seema R
First published: April 8, 2021, 5:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories