HOME » NEWS » National-international » AIR POLLUTION NOT DECREASED IN NEW DELHI AFTER DEEPAVALI FESTIVAL LG

ದೀಪಾವಳಿ ಆಗಿ ವಾರ ಕಳೆದರೂ ದೆಹಲಿಯಲ್ಲಿ ಕಡಿಮೆಯಾಗದ ವಾಯುಮಾಲಿನ್ಯ

ದೀಪಾವಳಿ ಸಂದರ್ಭದಲ್ಲಿ ದೆಹಲಿಯ ಸುತ್ತ ಇರುವ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಬೆಳೆ ತ್ಯಾಜ್ಯ ಸುಡಲಾಗುತ್ತದೆ. ಅದರ ಹೊಗೆ ದೆಹಲಿಯತ್ತ ಬರಲಿದೆ.‌ ಇದಲ್ಲದೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಿಪರೀತ ಪಟಾಕಿ ಸಿಡಿಸಲಾಗುತ್ತದೆ.

news18-kannada
Updated:November 23, 2020, 11:49 AM IST
ದೀಪಾವಳಿ ಆಗಿ ವಾರ ಕಳೆದರೂ ದೆಹಲಿಯಲ್ಲಿ ಕಡಿಮೆಯಾಗದ ವಾಯುಮಾಲಿನ್ಯ
ದೆಹಲಿ ವಾಯುಮಾಲಿನ್ಯ (ಸಾಂದರ್ಭಿಕ ಚಿತ್ರ)
  • Share this:
ನವದೆಹಲಿ(ನ.‌ 23): ಸಾಮಾನ್ಯವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ವಾಯು ಮಾಲಿನ್ಯ ಬಹಳ ಜಾಸ್ತಿಯಾಗುತ್ತದೆ. ಹಾಗೆ ಕ್ರಮೇಣ ಕಡಿಮೆ ಆಗುತ್ತದೆ. ಆದರೆ ಈ ಬಾರಿ ವಾರ ಕಳೆದರೂ ಕಡಿಮೆ ಆಗುತ್ತಿಲ್ಲದಿರುವುದು ಆತಂಕವನ್ನು ಸೃಷ್ಟಿ ಮಾಡಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ಮಾಹಿತಿ ಪ್ರಕಾರ, ಸರಾಸರಿ 24 ಗಂಟೆಗಳ ವಾಯು ಗುಣಮಟ್ಟದ ಸೂಚ್ಯಂಕ ದೆಹಲಿಯ ವಿವಿಧ ಪ್ರದೇಶಗಳಲ್ಲಿ ಈ ರೀತಿ ಇದೆ. ದೆಹಲಿ ವಿಶ್ವವಿದ್ಯಾಲಯ ಪ್ರದೇಶದಲ್ಲಿ 308. ನೋಯ್ಡಾ ಸುತ್ತಾ ಮುತ್ತಾ 317. ಪೂಸಾ ಪ್ರದೇಶದ ವ್ಯಾಪ್ತಿಯಲ್ಲಿ 286. ದೆಹಲಿ ಐಐಟಿ ಪ್ರದೇಶಗಳಲ್ಲಿ 252. ಗಾಳಿಯ ಗುಣಮಟ್ಟವು 301-400 ಅಂಕದ ನಡುವೆ ಇದ್ದರೆ ಅದನ್ನು 'ಅತ್ಯಂತ ಕಳಪೆ' ಎಂದು ವ್ಯಾಖ್ಯಾನಿಸಲಾಗುತ್ತದೆ. ಜೊತೆಗೆ ಅದನ್ನು 'ಉಸಿರಾಡಲು ಅನರ್ಹ' ಎಂದೂ ಹೇಳಲಾಗುತ್ತದೆ. ಹಾಗಾಗಿಯೇ ಇಂದು ಕೆಲ ಪ್ರದೇಶಗಳಲ್ಲಿ ಏರ್ ಕ್ವಾಲಿಟಿ ಇಂಡೆಕ್ಸ್ 300 ಅನ್ನು ದಾಟಿರುವುದರಿಂದ ಜನ ಆತಂಕಕ್ಕೀಡಾಗಿದ್ದಾರೆ.

ಮಹಾತ್ಮ ಗಾಂಧೀಜಿಯವರ ಮೊಮ್ಮಗ ಸತೀಶ್ ದುಪೇಲಿಯಾ ಕೊರೋನಾಗೆ ಬಲಿ

ದೀಪಾವಳಿ ಸಂದರ್ಭದಲ್ಲಿ ದೆಹಲಿಯ ಸುತ್ತ ಇರುವ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಬೆಳೆ ತ್ಯಾಜ್ಯ ಸುಡಲಾಗುತ್ತದೆ. ಅದರ ಹೊಗೆ ದೆಹಲಿಯತ್ತ ಬರಲಿದೆ.‌ ಇದಲ್ಲದೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಿಪರೀತ ಪಟಾಕಿ ಸಿಡಿಸಲಾಗುತ್ತದೆ. ಜೊತೆಗೆ ಈ ಸಂದರ್ಭದಲ್ಲಿ ಗಾಳಿಯ ವೇಗ ಕೂಡ ಕಡಿಮೆ ಆಗಲಿದೆ. ಈ ಎಲ್ಲಾ ಕಾರಣಗಳಿಂದ ದೆಹಲಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ವಾಯುಮಾಲಿನ್ಯ ಹೆಚ್ಚಾಗುವುದು ಸಾಮಾನ್ಯ.

ಆದರೆ ಈ ಬಾರಿ ದೆಹಲಿಯಲ್ಲಿ ಬೆಳೆ ತ್ಯಾಜ್ಯ ಸುಡುವುದನ್ನು ನಿಲ್ಲಿಸಲಾಗಿದೆ. ಅದಕ್ಕೆ ಬದಲಾಗಿ ತಾಜ್ಯದ ಮೇಲೆ ಕೆಮಿಕಲ್ ಸಿಂಪಡಿಸಲಾಗಿದೆ. ಇದಲ್ಲದೆ ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ಇಷ್ಟೆಲ್ಲವನ್ನೂ ಮಾಡಿದ್ದರೂ ಮತ್ತು ದೀಪಾವಳಿ ಆಗಿ ವಾರ ಕಳೆದಿದ್ದರೂ ವಾಯುಮಾಲಿನ್ಯ ನಿಯಂತ್ರಣ ಆಗಿಲ್ಲದಿರುವುದರಿಂದ ಆತಂಕವನ್ನು ಸೃಷ್ಟಿಸಿದೆ.
Youtube Video

ಕೇಂದ್ರ ಸರ್ಕಾರದ ಹೊಸ ಕಾನೂನಿನ ಪ್ರಕಾರ ಗಾಳಿಯನ್ನು ಮಲಿನಗೊಳಿಸುವ ಯಾವುದೇ ಚಟುವಟಿಕೆಗಳನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಈ ಕಾನೂನನ್ನು ಉಲ್ಲಂಘಿಸಿದವರಿಗೆ ದಂಡ ಹಾಗೂ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಆದರೆ ಇವೆಲ್ಲವೂ ಕಾಗದದ ಮೇಲಿವೆಯೇ ಹೊರತು ವಾಸ್ತವವಾಗಿ ಅನುಷ್ಠಾನಕ್ಕೆ ಬಂದಿಲ್ಲ ಎಂಬುದು ದೆಹಲಿಯ ವಾಯು ಮಾಲಿನ್ಯದಿಂದ ಸ್ಪಷ್ಟವಾಗುತ್ತದೆ.
Published by: Latha CG
First published: November 23, 2020, 11:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories