News18 India World Cup 2019

ಮಹಿಳಾ ಪೈಲಟ್​ ಲೈಂಗಿಕ ಜೀವನ ಕುರಿತು ಕೆದಕಿದ ಕ್ಯಾಪ್ಟನ್​: ಕ್ರಮಕ್ಕೆ ಮುಂದಾದ ಏರ್​ ಇಂಡಿಯಾ

ಮಹಿಳಾ ಪೈಲಟ್ ಲೈಂಗಿಕ ಜೀವನ ಸೇರಿದಂತೆ​ ಖಾಸಗಿ ವಿಷಯದ ಕುರಿತು ಅಸಂಬದ್ಧ ಪ್ರಶ್ನೆ ಕೇಳಿದ ಆರೋಪದ ಮೇಲೆ ಏರ್​ ಇಂಡಿಯಾ ಈ ಕ್ರಮಕ್ಕೆ ಮುಂದಾಗಿದೆ.

Seema.R | news18
Updated:May 15, 2019, 9:24 PM IST
ಮಹಿಳಾ ಪೈಲಟ್​ ಲೈಂಗಿಕ ಜೀವನ ಕುರಿತು ಕೆದಕಿದ ಕ್ಯಾಪ್ಟನ್​: ಕ್ರಮಕ್ಕೆ ಮುಂದಾದ ಏರ್​ ಇಂಡಿಯಾ
ಏರ್​ ಇಂಡಿಯಾ
Seema.R | news18
Updated: May 15, 2019, 9:24 PM IST
ನವದೆಹಲಿ (ಮೇ.15): ತನ್ನ ಸಹೋದ್ಯೋಗಿ ಮಹಿಳೆ ಜೊತೆ ಅನುಚಿತ ವರ್ತನೆ ತೋರಿದ ಹಿರಿಯ ಕ್ಯಾಪ್ಟನ್​ ವಿರುದ್ಧ ತನಿಖೆಗೆ ಏರ್​ ಇಂಡಿಯಾ ಮುಂದಾಗಿದೆ. ಮಹಿಳಾ ಪೈಲಟ್ ಲೈಂಗಿಕ ಜೀವನ ಸೇರಿದಂತೆ​ ಖಾಸಗಿ ವಿಷಯದ ಕುರಿತು ಅಸಂಬದ್ಧ ಪ್ರಶ್ನೆ ಕೇಳಿದ ಆರೋಪದ ಮೇಲೆ ಈ ಕ್ರಮಕ್ಕೆ ಆದೇಶಿಸಲಾಗಿದೆ. ಹಿರಿಯ ಕ್ಯಾಪ್ಟನ್​ ವಿರುದ್ಧ ದೂರು ದಾಖಲಿಸಿರುವ ಮಹಿಳಾ ಪೈಲಟ್​ ಘಟನೆಯ ವಿವರವನ್ನು ತಿಳಿಸಿದ್ದಾರೆ.

ದೂರಿನ ಸಾರಾಂಶ

“ಹಿರಿಯ ಕ್ಯಾಪ್ಟನ್​ ಜೊತೆ ಹಲವಾರು ಬಾರಿ ಒಟ್ಟಿಗೆ ವಿಮಾನ ಹಾರಾಟ ನಡೆಸಿದ್ದೆ. ಅವರು ಸಭ್ಯಸ್ಥರಂತೆ ಕಂಡು ಬಂದಿದ್ದರು. ಈ ಹಿನ್ನೆಲೆಯಲ್ಲಿ ತರಬೇತಿ ಅವಧಿ ಬಳಿಕ ಅವರೊಟ್ಟಿಗೆ ರಾತ್ರಿ ಊಟಕ್ಕೆ ತೆರಳಿದ್ದೆ. ಮೇ 5ರಂದು ಹೈದ್ರಾಬಾದ್​ನ ರೆಸ್ಟೋರೆಂಟ್​​ನಲ್ಲಿ ಊಟಕ್ಕೆ ಕುಳಿತ ನನಗೆ ಆಗ ಅಗ್ನಿ ಪರೀಕ್ಷೆ ಶುರುವಾಯಿತು," ಎಂದು ದೂರಿನಲ್ಲಿ ದಾಖಲಿಸಿದ್ದಾರೆ.

"ತಮ್ಮ ಸಂಸಾರಿಕ ಜೀವನ ಕುರಿತು ಮಾತು ಆರಂಭಿಸಿದ ಕ್ಯಾಪ್ಟನ್​ ತಮ್ಮ ದಾಂಪತ್ಯದಲ್ಲಿ ಅತೃಪ್ತಿಕರ ಹಾಗೂ ನೋವು, ಖಿನ್ನತೆಗಳಿಂದ ಬಳಲುತ್ತಿರುವ ಬಗ್ಗೆ ತಿಳಿಸಿದರು. ಈ ವೇಳೆ ವಿಮಾನ ಪ್ರಯಾಣದ ವೇಳೆ ನಿಮ್ಮ ಗಂಡನ ಅಗಲಿಕೆಯ ವಿರಹವನ್ನು ಹೇಗೆ ನಿಭಾಯಿಸುತ್ತೀರಾ. ಈ ಸಂದರ್ಭದಲ್ಲಿ ಪ್ರತಿದಿನ ಲೈಂಗಿಕ ಕ್ರಿಯೆ ಅವಶ್ಯಕತೆ ಇಲ್ಲವೇ ಎಂದು ಪ್ರಶ್ನಿಸಿದರು. ಅವರ ಮಾತನ್ನು ಕೇಳಿ ಆ ಕೂಡಲೇ ನಿಮ್ಮೊಟ್ಟಿಗೆ ಮಾತನಾಡಲು ನನಗೆ ಇಚ್ಛೆಯಿಲ್ಲ ಎಂದು ಹೇಳಿ ಅರ್ಧದಲ್ಲೇ ಎದ್ದು ಬಂದೆ," ಎಂದು ತಿಳಿಸಿದ್ದಾರೆ.

ಇದನ್ನು ಓದಿ: ಜೆಟ್ ಏರ್​ವೇಸ್ ಸಿಇಓ ಮತ್ತು ಸಿಎಫ್ಓ ರಾಜೀನಾಮೆ

ಮಹಿಳಾ ಪೈಲಟ್​ ದೂರಿನ ಆಧಾರದ ಮೇಲೆ ಕ್ಯಾಪ್ಟನ್​ ವಿರುದ್ಧ ತನಿಖೆಗೆ ತಂಡವನ್ನು ರಚಿಸಲಾಗಿದೆ. ಈ ಬಗ್ಗೆ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಏರ್​ಲೈನ್ಸ್​ ವಕ್ತಾರ ತಿಳಿಸಿದ್ದಾರೆ.
Loading...

'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ'

First published:May 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...