ನಿರ್ಮಾಣ ಹಂತದ ರನ್​ವೇನಲ್ಲಿ ಲ್ಯಾಂಡ್​ ಆದ ಏರ್​ ಇಂಡಿಯಾ ವಿಮಾನ; ತಪ್ಪಿದ ಅನಾಹುತ

news18
Updated:September 7, 2018, 8:02 PM IST
ನಿರ್ಮಾಣ ಹಂತದ ರನ್​ವೇನಲ್ಲಿ ಲ್ಯಾಂಡ್​ ಆದ ಏರ್​ ಇಂಡಿಯಾ ವಿಮಾನ; ತಪ್ಪಿದ ಅನಾಹುತ
news18
Updated: September 7, 2018, 8:02 PM IST
ನ್ಯೂಸ್​ 18 ಕನ್ನಡ

ನವದೆಹಲಿ (ಸೆ.07): ಸುರಕ್ಷತಾ ವೈಫಲ್ಯದಿಂದ 136 ಜನ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಕೇರಳದ ಏರ್​ ಇಂಡಿಯಾ ವಿಮಾನವೊಂದು ಮತ್ತೊಂದು ರನ್​ವೇಯಲ್ಲಿ ಇಳಿದು ಆತಂಕ ಸೃಷ್ಟಿಸಿದ ಘಟನೆ ಮಾಲ್ಡೀವ್ಸ್​ನಲ್ಲಿ ನಡೆದಿದೆ.

ಸುರಕ್ಷತಾ ವೈಫಲ್ಯದಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. ತಿರುವನಂತಪುರದಿಂದ ಮಾಲ್ಢೀವ್ಸ್​ಗೆ ಹೊರಟ ಎ.320 ನೀಯೊ ವಿಮಾನ ನಿರ್ಮಾಣ ಹಂತದ ರನ್​ವೇನಲ್ಲಿ ವಿಮಾನ ಲ್ಯಾಂಡ್​ ಆಗಿದ್ದು, ಭಾರೀ ಅನಾಹುತವೊಂದು ತಪ್ಪಿದೆ

ಕಳೆದು ಒಂದು ತಿಂಗಳಲ್ಲಿ ನಡೆದ ಇಂಡಿಯಾ ಏರ್​ಲೈನ್ಸ್​ನಲ್ಲಿ ನಡೆದ ಎರಡನೇ ಅನಾಹುತ ಇದಾಗಿದೆ. ಆಗಸ್ಟ್​ನಲ್ಲಿ ಸೌದಿ ಅರೇಬಿಯಾದ ರಿಯಾದ್ನಲ್ಲಿ ರನ್​ವೇನಲ್ಲಿ ​ ವಿಮಾನ ಪೈಲ ಇಲ್ಲದಿದ್ದರೂ ಟೇಕ್​ ಆಫ್​ ಮಾಡಲು ಜೆಟ್​ ಏರ್​ ವೇಸ್ ಫೈಲಟ್​ ಮುಂದಾಗಿದ್ದರು.
First published:September 7, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ