ಉಕ್ರೇನ್ (Ukraine) ವಿರುದ್ದ ರಷ್ಯಾ (Russia) ಸಮರ ಸಾರಿದ್ದು, ಈ ಉದ್ವಿಗ್ನತೆಯನ್ನು ಶಮನಗೊಳಿಸಬೇಕು ಎಂದು ಭಾರತ ತನ್ನ ನಿಲುವನ್ನು ವಿಶ್ವಸಂಸ್ಥೆ ಮುಂದೆ ತಿಳಿಸಿದೆ. ಈ ನಡುವೆ ಉಕ್ರೇನ್ನಲ್ಲಿರುವ ಭಾರತೀಯರ (Indians) ಕರೆತರಲು ಹೊರಟ್ಟಿದ್ದ ಏರ್ ಇಂಡಿಯಾ ವಿಮಾನ (Air India Flight) ದೆಹಲಿಗೆ ಮರಳಿದೆ. ರಷ್ಯಾದ ಮಿಲಿಟರಿ ಕಾರ್ಯಾಚರಣೆಗಳ ಮಧ್ಯೆ ತನ್ನ ವಾಯುಪ್ರದೇಶವನ್ನು ಮುಚ್ಚಿದೆ ಎಂದು ರಷ್ಯಾ ತಿಳಿಸಿದೆ. ಈ ನಡುವೆ ಸಾವಿರಾರು ಭಾರತೀಯರು ಸ್ವದೇಶಕ್ಕೆ ಹಿಂದಿರುಗಲು ಕಾಯುತ್ತಿದ್ದಾರೆ
ವಾಯು ಪ್ರದೇಶ ಮುಚ್ಚಿದ ರಷ್ಯಾ
ರಷ್ಯಾ ಉಕ್ರೇನ್ ವಿಮಾನ ನಿಲ್ದಾಣಗಳು ಮತ್ತು ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಇದರಿಂದಾಗಿ ಉಕ್ರೇನ್ ತನ್ನ ವಾಯುಪ್ರದೇಶವನ್ನು ಮಾರ್ಗ ಮುಚ್ಚಿದೆ. ಈ ಕಾರಣದಿಂದಾಗಿ, ಕೈವ್ಗೆ ಹಾರುವ ಏರ್ ಇಂಡಿಯಾ ವಿಮಾನವು ಭಾರತೀಯರನ್ನು ಮರಳಿ ಕರೆತರಲು ದೆಹಲಿಗೆ ಮರಳುತ್ತಿದೆ. ಕೈವ್ನಲ್ಲಿ NOTAM ನೀಡಿರುವುದರಿಂದ ಏರ್ ಇಂಡಿಯಾ ಫ್ಲೈಟ್ AI 1947 ಹಿಂತಿರುಗುತ್ತಿದೆ ಎಂದು ಏರ್ಲೈನ್ ವಕ್ತಾರರು ತಿಳಿಸಿದ್ದಾರೆ.
ಉಕ್ರೇನ್ಗೆ ಹೋಗುವ ಎಲ್ಲಾ ವಿಮಾನಗಳಿಗೆ ಏರ್ಮೆನ್ಗಳಿಗೆ ಸೂಚನೆಯನ್ನು ಕಳುಹಿಸಿದ ನಂತರ ಏರ್ ಇಂಡಿಯಾ ವಿಮಾನವು ದೆಹಲಿಗೆ ಹಿಂತಿರುಗಿದೆ. ಈ ನಡುವೆ ಪರ್ಯಾಯ ಸ್ಥಳಾಂತರಿಸುವ ಮಾರ್ಗಗಳನ್ನು ಸಕ್ರಿಯಗೊಳಿಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.
ವಿಮಾನ ಹಾರಾಟ ನಿಷೇಧ
ಬೆಳಗ್ಗೆಯಿಂದ ಉಕ್ರೇನ್ನೊಳಗೆ ನಾಗರಿಕ ವಿಮಾನಗಳ ಹಾರಾಟವನ್ನು ನಿಷೇಧಿಸಲಾಗಿದೆ. ಈ ಸೂಚನೆಯ ನಂತರ ವಿಮಾನವನ್ನು ದೆಹಲಿಗೆ ಹಿಂತಿರುಗಿಸಲು ಏರ್ ಇಂಡಿಯಾ ಮತ್ತು ಕೇಂದ್ರ ಸರ್ಕಾರ ನಿರ್ಧರಿಸಿತು. ವಿಮಾನವು ಇರಾನ್ ವಾಯುಪ್ರದೇಶದಿಂದ ಯು-ಟರ್ನ್ ತೆಗೆದುಕೊಂಡು ದೆಹಲಿಗೆ ಮರಳಿದೆ.
ಇದನ್ನೂ ಓದಿ: ರಷ್ಯಾ - ಉಕ್ರೇನ್ ಬಿಕ್ಕಟ್ಟಿಗೆ ಲಾರ್ಡ್ ಬಾಬಿಯೇ ಪರಿಹಾರವಂತೆ
ನಿನ್ನೆ 182 ಜನರನ್ನು ಹೊತ್ತು ತಂದಿದ್ದ ವಿಮಾನ
ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (IGIA) ಕೈವ್ನ ಬೋರಿಸ್ಪಿಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ 7.30 ರ ವಿಮಾನ ಹಾರಾಟ ಪ್ರಾರಂಭವಾಯಿತು. ಈ ಮಧ್ಯೆ, ಕೈವ್ನಿಂದ ಉಕ್ರೇನ್ ಇಂಟರ್ನ್ಯಾಶನಲ್ ಏರ್ಲೈನ್ಸ್ ವಿಮಾನವು ಗುರುವಾರ ಬೆಳಿಗ್ಗೆ 7.45 ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಗುರುವಾರ 182 ಭಾರತೀಯ ಪ್ರಜೆಗಳು ಉಕ್ರೇನ್ನಿಂದ ಭಾರತಕ್ಕೆ ಮರಳಿದ್ದಾರೆ.
ಫೆಬ್ರವರಿ 22 ರಂದು ಮೊದಲ ಬಾರಿಗೆ ಉಕ್ರೇನ್ನಿಂದ ಸುಮಾರ 240 ಜನ ಭಾರತೀಯರನ್ನು ಕರೆತರಲಾಗಿತ್ತು. ನಿನ್ನೆ ಒಂದು ವಿಮಾನ 182 ಜನರನ್ನು ಕರೆತಂದಿದ್ದು. ಇಂದು ಮೂರನೇ ವಿಮಾನ ಉಕ್ರೇನ್ಗೆ ಹೋಗಿ ಅರ್ಧ ದಾರಿಯಲ್ಲೇ ಮರಳಿದೆ.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧ ಬಿಕ್ಕಟ್ಟು; ಭಾರತದಲ್ಲಿ ಈ ವಸ್ತುಗಳ ಬೆಲೆ ಏರಿಕೆ
ಭಾರತೀಯರ ಕರೆತರಲು ಮುಂದಾದ ಕೇಂದ್ರ
ಇನ್ನು ವಿದ್ಯಾರ್ಥಿಗಳು ಸೇರಿದಂತೆ ಇಪ್ಪತ್ತು ಸಾವಿರಕ್ಕೂ ಹೆಚ್ಚು ಭಾರತೀಯ ಪ್ರಜೆಗಳು ಉಕ್ರೇನ್ನ ಗಡಿ ಪ್ರದೇಶಗಳನ್ನು ಒಳಗೊಂಡಂತೆ ವಿವಿಧ ಭಾಗಗಳಲ್ಲಿ ನೆಲೆಸಿದ್ದಾರೆ. ಹೀಗಾಗಿ ಅವರನ್ನು ಸುರಕ್ಷಿತವಾಗಿ ಮರಳಿ ದೇಶಕ್ಕೆ ಕರೆತರಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿರುಮೂರ್ತಿ ತಿಳಿಸಿದ್ದಾರೆ. ಇನ್ನು ಸಾಧ್ಯವಾದಷ್ಟು ಬೇಗ ಉಕ್ರೇನ್ ಅನ್ನು ತೊರೆಯುವಂತೆ ಭಾರತದ ಪ್ರಜೆಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಭಾರತೀಯ ರಾಯಭಾರ ಕಚೇರಿ ಮತ್ತೊಮ್ಮೆ ಸಲಹೆ ನೀಡಿದೆ. ಅನಿವಾರ್ಯ ಇದ್ದರೆ ಮಾತ್ರ ಉಕ್ರೇನ್ನಲ್ಲಿ ಉಳಿದುಕೊಳ್ಳಿ ಎಂದು ಸೂಚಿಸಿದೆ. ಇದಿಷ್ಟೇ ಅಲ್ಲದೆ ಉಕ್ರೇನ್ನಲ್ಲಿರುವ ಭಾರತೀಯರನ್ನು ಕರೆತರಲು ಏರಿಂಡಿಯಾದ 3 ವಿಶೇಷ ವಿಮಾನಗಳನ್ನು ಕಾರ್ಯಾಚರಣೆಗೆ ನಿಯೋಜಿಸಿದ್ದು, ಇನ್ನೆರಡು ವಿಮಾನ ಫೆ. 22, 24, 26ರಂದು ಕಾರ್ಯಾಚರಣೆ ನಡೆಸಲಿವೆ.
ಇನ್ನು ಉಕ್ರೇನ್ನ ಗಡಿಯುದ್ದಕ್ಕೂ ರಷ್ಯಾ ಅನೇಕ ಚೆಕ್ಪೋಸ್ಟ್ಗಳ ಮೇಲೆ ದಾಳಿ ಮಾಡುತ್ತಿದೆ ಎಂದು ಇಂಟರ್ಫ್ಯಾಕ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಉಕ್ರೇನ್ನ ಕೈವ್ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ದಾಳಿಗೆ ಒಳಗಾಗಿದೆ ಎಂದು ಆಂತರಿಕ ಸಚಿವಾಲಯವು ಎಚ್ಚರಿಸಿದೆ. ರಷ್ಯಾದ ಸೇನಾ ಪಡೆಗಳು ಕಪ್ಪು ಸಮುದ್ರದ ಬಂದರು ನಗರಗಳಾದ ಒಡೆಸಾ ಮತ್ತು ಮರಿಯುಪೋಲ್ನಲ್ಲಿ ಇಳಿದಿವೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ