ನವದೆಹಲಿ (ಡಿ. 17): ಏರ್ ಇಂಡಿಯಾ ವಿಮಾನವನ್ನು ಕೇಂದ್ರ ಸರ್ಕಾರ ಖಾಸಗಿ ಕಂಪನಿಗೆ ಮಾರಾಟ ಮಾಡಲು ನಿರ್ಧರಿಸಿರುವುದು ಗೊತ್ತೇ ಇದೆ. ಈ ಏರ್ ಇಂಡಿಯಾ ವಿಮಾನ ಹಿರಿಯ ನಾಗರಿಕೆ ಹೊಸ ಆಫರ್ ನೀಡಿದ್ದು, ಏರ್ ಇಂಡಿಯಾದಲ್ಲಿ ಟಿಕೆಟ್ ಬುಕ್ ಮಾಡುವ ಹಿರಿಯ ನಾಗರಿಕರಿಗೆ ಶೇ. 50ರಷ್ಟು ರಿಯಾಯಿತಿ ನೀಡಲಾಗುವುದು. ಆದರೆ, ಈ ಆಫರ್ ಡೊಮೆಸ್ಟಿಕ್ ವಿಮಾನಯಾನಕ್ಕೆ ಮಾತ್ರ ಅನ್ವಯವಾಗಲಿದೆ. ಹಾಗೇ, 60 ವರ್ಷ ಮೇಲ್ಪಟ್ಟ ಪ್ರಯಾಣಿಕರು ಈ ರಿಯಾಯಿತಿ ಸೌಲಭ್ಯವನ್ನು ಪಡೆಯಬಹುದು. ಈ ಕುರಿತು ಏರ್ ಇಂಡಿಯಾ ವೆಬ್ಸೈಟ್ನಲ್ಲಿ ಮಾಹಿತಿ ನೀಡಲಾಗಿದೆ.
ಏರ್ ಇಂಡಿಯಾದಲ್ಲಿ ಶೇ. 50ರಷ್ಟು ರಿಯಾಯಿತಿ ಪಡೆಯುವ ಹಿರಿಯ ನಾಗರಿಕರು ಭಾರತೀಯ ಪ್ರಜೆಗಳಾಗಿರಬೇಕು. ಬೇರೆ ದೇಶದ ಪ್ರಜೆಗಳಿಗೆ ಈ ಆಫರ್ ಅನ್ವಯವಾಗುವುದಿಲ್ಲ. ಅವರು ಪ್ರಯಾಣ ಮಾಡುವ ದಿನಕ್ಕೆ ಅನ್ವಯವಾಗುವಂತೆ ಅವರಿಗೆ 60 ವರ್ಷ ತುಂಬಿರಬೇಕು. ಹಾಗೇ, ಅವರು ಭಾರತದಲ್ಲಿಯೇ ವಾಸ್ತವ್ಯ ಹೂಡಿರಬೇಕು ಎಂಬ ನಿಬಂಧನೆಗಳನ್ನೂ ಏರ್ ಇಂಡಿಯಾ ಹಾಕಿದೆ.
ಇದನ್ನೂ ಓದಿ: Karnataka Weather: ಬೆಂಗಳೂರು, ಕರಾವಳಿ, ಕೊಡಗು, ಚಿಕ್ಕಮಗಳೂರಿನಲ್ಲಿ ಇಂದಿನಿಂದ 3 ದಿನ ಮಳೆ
ಏರ್ ಇಂಡಿಯಾದಲ್ಲಿ ಮುಂದಿನ ಒಂದು ವರ್ಷದವರೆಗೆ ಈ ಆಫರ್ ಲಭ್ಯವಿರಲಿದೆ. ಪ್ರಯಾಣದ ಮೂರು ದಿನ ಮೊದಲು ಟಿಕೆಟ್ ಪಡೆಯಬೇಕು. ಪ್ರಯಾಣಿಸುವಾಗ ಹಿರಿಯ ನಾಗರಿಕರು ಐಡೆಂಟಿಟಿ ಕಾರ್ಡ್, ಪಾಸ್ಪೋರ್ಟ್, ಡಿಎಲ್, ಏರ್ ಇಂಡಿಯಾ ನೀಡಿರುವ ಸೀನಿಯರ್ ಸಿಟಿಜನ್ ಐಡಿ ದಾಖಲೆಗಳನ್ನು ತೋರಿಸಬೇಕು. ಈ ದಾಖಲೆಗಳು ಇಲ್ಲದಿದ್ದರೆ ಅವರಿಗೆ ಪ್ರಯಾಣಿಸಲು ಅವಕಾಶ ನೀಡುವುದಿಲ್ಲ. ಹಾಗೇ, ಅವರ ಟಿಕ್ ಮೊತ್ತದ ಹಣವನ್ನು ಕೂಡ ಮರುಪಾವತಿ ಮಾಡುವುದಿಲ್ಲ ಎಂದು ಏರ್ ಇಂಡಿಯಾ ತಿಳಿಸಿದೆ.
ಭಾರತದೊಳಗೆ ಪ್ರಯಾಣಿಸುವ ಹಿರಿಯ ನಾಗರಿಕರಿಗೆ ಮಾತ್ರ ಈ ಶೇ. 50ರಷ್ಟು ರಿಯಾಯಿತಿಯ ಆಫರ್ ಅನ್ವಯವಾಗುತ್ತದೆ. ಅಂತಾರಾಷ್ಟ್ರೀಯ ವಿಮಾನಗಳಿಗೆ ಇದು ಅನ್ವಯವಾಗುವುದಿಲ್ಲ. 60 ಸಾವಿರ ಕೋಟಿಗೂ ಹೆಚ್ಚು ಸಾಲವನ್ನು ಹೊಂದಿರುವ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನವನ್ನು ಖಾಸಗಿ ಕಂಪನಿಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಹರಾಜನ್ನೂ ಕರೆಯಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ