ಕಾಣೆಯಾದ ಮಹಿಳೆ ಹುಡುಕಲು ಜಾತಕದ ದೋಷ, ಗ್ರಹಗತಿ ಲೆಕ್ಕ ಹಾಕುತ್ತಿರುವ ಪೊಲೀಸ್ ಅಧಿಕಾರಿ

ಕಾಣೆಯಾದ ಮಹಿಳೆಯ ಜಾತಕ ಹಾಗೂ ತನಿಖೆ ನಡೆಸುವ ಪೊಲೀಸ್ ಅಧಿಕಾರಿಯ ಜಾತಕ ಎರಡರಲ್ಲೂ ಏಪ್ರಿಲ್ 19ರವರೆಗೆ ಕೆಟ್ಟ ಕಾಲವಿದೆ. ಹೀಗಾಗಿ, ಅಲ್ಲಿಯವರೆಗೆ ಎಷ್ಟೇ ಹುಡುಕಿದರೂ ವ್ಯರ್ಥ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರಂತೆ.

Vijayasarthy SN | news18
Updated:April 17, 2019, 5:45 PM IST
ಕಾಣೆಯಾದ ಮಹಿಳೆ ಹುಡುಕಲು ಜಾತಕದ ದೋಷ, ಗ್ರಹಗತಿ ಲೆಕ್ಕ ಹಾಕುತ್ತಿರುವ ಪೊಲೀಸ್ ಅಧಿಕಾರಿ
ಸುಲಕ್ಷಣಾ ನರುಲಾ
Vijayasarthy SN | news18
Updated: April 17, 2019, 5:45 PM IST
ನವದೆಹಲಿ(ಏ. 17): ರಾಜಕಾರಣಿಗಳು ಶಂಕುಸ್ಥಾಪನೆಗೆ ಜಾತಕ ನೀಡಿ ‘ಶುಭ’ ಕಾಲ ನಿರ್ಧರಿಸುವುದನ್ನು ನೋಡಿದ್ದೇವೆ. ಸಿನಿಮಾ ಪ್ರಾರಂಭಕ್ಕೆ ಮುಹೂರ್ತ ಇಡುವುದನ್ನು ನೋಡಿದ್ಧೇವೆ. ಆದರೆ, ಅಪರಾಧ ಪ್ರಕರಣಗಳ ತನಿಖೆ ಮಾಡಲು ಪೊಲೀಸರೂ ಗ್ರಹಗತಿ ಲೆಕ್ಕಾಚಾರ ಹಾಕುವುದನ್ನು ಎಲ್ಲಿಯಾದರೂ ನೋಡಿದ್ದೀರಾ? ಇಂಥ ಒಬ್ಬ ಪೊಲೀಸ್ ಅಧಿಕಾರಿ ದಿಲ್ಲಿ ಪೊಲೀಸ್ ಇಲಾಖೆಯಲ್ಲಿದ್ದಾರೆ. ನಾಪತ್ತೆಯಾಗಿರುವ ಏರ್ ಇಂಡಿಯಾ ಮ್ಯಾನೇಜರ್ ಸುಲಕ್ಷಣಾ ನರುಲಾ ಅವರನ್ನು ಹುಡುಕಲು ದಿಲ್ಲಿಯ ಕ್ರೈಂ ಬ್ರ್ಯಾಂಚ್ ಇನ್ಸ್​ಪೆಕ್ಟರ್ ವಿಜಯ್ ಸಮಾರಿಯಾ ಅವರು ಜಾತಕದ ಮೊರೆಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ, ಕೆಟ್ಟ ಕಾಲದ ಕಂಟಕವನ್ನು ನೀಗಿಸಲು ಪೂಜೆ ಮಾಡಿಸುವ ಸಲಹೆಯನ್ನೂ ಈ ಪೊಲೀಸ್ ಅಧಿಕಾರಿ ನೀಡಿದ್ದಾರೆ.

ಕಾಣೆಯಾದ ಸುಲಕ್ಷಣಾ ನರುಲಾ ಅವರ ಜಾತಕವನ್ನು ಪಡೆದ ವಿಜಯ್ ಸಮಾರಿಯಾ ಅವರು ಅದನ್ನು ಜ್ಯೊತಿಷಿಯೊಬ್ಬರ ಬಳಿ ತೋರಿಸಿ ಸಲಹೆ ಪಡೆದಿದ್ಧಾರೆ. ಶಕುಂತಲಾ ಅವರ ಜಾತಕದಲ್ಲಿ ಸದ್ಯಕ್ಕೆ ಮಹಾದೋಷವಿದೆ. ಅದಕ್ಕೆ ಹೀಗೆಲ್ಲಾ ಆಗುತ್ತಿದೆ ಎಂದು ಹೇಳಿದರಂತೆ. ಈ ಮಹಾದೋಷ ಕಳೆಯುವವರೆಗೂ ಸುಲಕ್ಷಣಾ ಅವರನ್ನು ಹುಡುಕಲು ಸಾಧ್ಯವಿಲ್ಲ. ಏಪ್ರಿಲ್ 19ರವರೆಗೂ ಕೆಟ್ಟ ಕಾಲವಿದ್ದು, ಅದು ಮುಗಿದ ಬಳಿಕ ಹುಡುಕಿ ಕೊಡುವೆ ಎಂದು ಇನ್ಸ್​ಪೆಕ್ಟರ್ ವಿಜಯ್ ಸಮಾರಿಯಾ ಅವರು ಸುಲಕ್ಷಣಾ ಅವರ ಕುಟುಂಬದವರಿಗೆ ಭರವಸೆ ನೀಡಿದ್ದಾರಂತೆ. ಹಾಗಂತ, ಸುಲಕ್ಷಣಾ ಅವರ ಮನೆಯವರು ಹೇಳಿದ್ದಾರೆ.

ಇದನ್ನೂ ಓದಿ: 'ನನಗೆ ಹೆಂಡತಿ, ಮಗಳು, ಅಳಿಯ ಮತ್ತು ಸೋದರ ಸಂಬಂಧಿಗಳು ಇದ್ದಾರೆ, ಮೋದಿಗೆ ಒಬ್ಬರೂ ಇಲ್ಲ'; ಶರದ್ ಪವಾರ್

ಇನ್ನೂ ಕಾಕತಾಳೀಯವೆಂದರೆ, ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ವಿಜಯ್ ಸಮಾರಿಯಾ ಅವರ ಜಾತಕದಲ್ಲೂ ಏಪ್ರಿಲ್ 18-19ರವರೆಗೆ ಕೆಟ್ಟ ಕಾಲ ನಡೆಯುತ್ತಿದೆಯಂತೆ. ಈ ಕೆಟ್ಟ ಕಾಲ ಮುಗಿಯುವವರೆಗೂ ಸುಲಕ್ಷಣಾ ಅವರನ್ನು ಹುಡುಕಲು ಸಾಧ್ಯವಾಗುವುದಿಲ್ಲ. ಆದರೆ, ಸುಲಕ್ಷಣಾ ಅವರ ಜಾತದಲ್ಲಿ ವಾಪಸ್ ಬರುವ ಯೋಗವಿದೆ ಎಂದೂ ತಮಗೆ ಇನ್ಸ್​ಪೆಕ್ಟರ್ ಆಶ್ವಾಸನೆ ನೀಡಿದರೆಂದು ಸುಲಕ್ಷಣಾ ಅವರ ಮಗ ಅನುಭವ್ ಅವರು ನ್ಯೂಸ್18 ವಾಹಿನಿಗೆ ತಿಳಿಸಿದ್ದಾರೆ.

ಜಾತಕದಲ್ಲಿರುವ ಈ ದೋಷ ನೀಗಿಸಲು ತಿಳಿಸಿದರು. ಛತ್ತರ್​ಪುರ್ ದೇವಸ್ಥಾನಕ್ಕೆ ಹೋಗಿ ಬಾಗಲಾಮುಖಿ ದೇವತೆಗೆ ಹೋಗಿ ಪೂಜೆ ಮಾಡಬೇಕೆಂದು ಸಲಹೆ ನೀಡಿದರು. ಅದರಂತೆ ನಾವು ಹೋಗಿ ಬಂದೆವು. ಆದರೆ, ನಮಗೆ ಇದರ ಮೇಲೆಲ್ಲಾ ನಂಬಿಕೆ ಇಲ್ಲ ಎಂದು ಅನುಭವ್ ಅವರು ಹತಾಶೆ ತೋರ್ಪಡಿಸಿದ್ದಾರೆ.

ಇದನ್ನೂ ಓದಿ: ಅದೃಷ್ಟದ ರೇಂಜ್​ ರೋವರ್ ಕಾರನ್ನು​ ರಿಪೇರಿಗೆ ಬಿಟ್ಟ ಎಚ್​ಡಿಕೆ; ಭಾರತಕ್ಕೆ ಬಂದ ಮೊದಲ ಲೆಕ್ಸೆಸ್ ದುಬಾರಿ​ ಕಾರಿ​ನಲ್ಲಿ ಸಿಎಂ ಓಡಾಟ!
Loading...

ಏರ್ ಇಂಡಿಯಾ ವೈಮಾನಿಕ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿರುವ 58 ವರ್ಷದ ಸುಲಕ್ಷಣಾ ನರುಲಾ ಅವರು ಕಳೆದ ವರ್ಷದ ಸೆಪ್ಟೆಂಬರ್ 30ರಿಂದಲೇ ನಾಪತ್ತೆಯಾಗಿದ್ದಾರೆ. ಅವರು ಸಾಮಾನ್ಯವಾಗಿ ಭೇಟಿ ಮಾಡುವ ದೇವಸ್ಥಾನ, ಗುರುದ್ವಾರ ಮೊದಲಾದ ಸ್ಥಳಗಳಲ್ಲೆಲ್ಲಾ ಶೋಧಿಸಿದ ಬಳಿಕ ಆಕೆಯ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೂರು ದಿನಗಳ ಬಳಿಕ ಅಪಹರಣದ ಸೆಕ್ಷನ್​ಗಳಡಿ ಎಫ್​ಐಆರ್ ದಾಖಲಿಸಲಾಗಿದೆ.

ಒಂದು ತಿಂಗಳ ನಂತರ ಈ ಪ್ರಕರಣವನ್ನು ದಿಲ್ಲಿಯ ಚಾಣಕ್ಯಪುರಿಯ ಕ್ರೈಂ ಬ್ರ್ಯಾಂಚ್​ಗೆ ವರ್ಗಾಯಿಸಲಾಯಿತು. 10-15 ದಿನದೊಳಗೆ ಆಕೆಯನ್ನು ಹುಡುಕಿ ಕೊಡುವುದಾಗಿ ಸಿಸಿಡಿ ಪೊಲೀಸರು ಭರವಸೆ ನೀಡಿದ್ದರು. ಐದು ತಿಂಗಳಾದರೂ ಪೊಲೀಸರು ಈ ಪ್ರಕರಣದಲ್ಲಿ ಏನೂ ಮುಂದುವರಿದಿಲ್ಲ.

ಇದನ್ನೂ ಓದಿ: ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗದಿದ್ದಕ್ಕೆ ಆಯ್ಕೆದಾರರನ್ನೇ ಟ್ರೋಲ್ ಮಾಡಿದ್ರಾ ರಾಯುಡು?

ವಿಚಿತ್ರವೆಂದರೆ, ಪ್ರಕರಣದಲ್ಲಿ ಸುಲಕ್ಷಣಾ ಬಗ್ಗೆ ಸುಳಿವು ಸಿಕ್ಕರೂ ಪೊಲೀಸರು ಅದನ್ನು ಭೇದಿಸಲು ಮೀನಮೇಷ ಎಣಿಸುತ್ತಿದ್ದಾರೆನ್ನಲಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಮ್ಮ ತಾಯಿಯನ್ನು ನೋಡಿದ್ದಾಗಿ ಹೋಟೆಲ್​ವೊಂದರ ಮಾಲೀಕರೊಬ್ಬರು ಹೇಳಿದ್ದರು. ಅದರಂತೆ ಪೊಲೀಸರ ಜೊತೆ ಹೋಗಿ ಹೋಟೆಲ್​ನ ಸಿಸಿಟಿವಿ ಫೂಟೇಜ್ ಕೇಳಿದೆವು. ಸಿಸಿಟಿವಿಯಲ್ಲಿ ಹಳೆಯ ದಾಖಲೆಗಳೆಲ್ಲಾ ಅಳಸಿಹೋಗಿವೆ ಎಂದು ಪೊಲೀಸರು ಕೈಚೆಲ್ಲಿದರು. ಆದರೆ, ಡಿಲೀಟ್ ಆದ ವಿಡಿಯೋಗಳನ್ನ ರಿಕವರ್ ಮಾಡಬಲ್ಲ ತಂತ್ರಜ್ಞಾನಗಳು ಇದ್ದರೂ ಪೊಲೀಸರು ಮಾತ್ರ ಯಾವುದೇ ಉತ್ಸಾಹ ತೋರುತ್ತಿಲ್ಲ ಎಂದು ಸುಲಕ್ಷಣಾ ಅವರ ಕುಟುಂಬ ಸದಸ್ಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಾಟ್ಸ್​​ಆ್ಯಪ್​ನಲ್ಲಿ ನಿಮ್ಮನ್ನ ಯಾರಾದ್ರು ಬ್ಲಾಕ್ ಮಾಡಿದ್ದಾರ?

ಕಾಣೆಯಾಗುವ ಕೆಲವಾರು ತಿಂಗಳ ಮುಂಚಿನಿಂದಲೂ ಸುಲಕ್ಷಣಾ ನರುಲಾ ಅವರು ಸಂಕಷ್ಟದಲ್ಲಿದ್ದರು. ಆಕೆಯ ವೃತ್ತಿ ಜೀವನ ಮತ್ತು ಖಾಸಗಿ ಜೀವನ ಎರಡೂ ಕೂಡ ಡೋಲಾಯಮಾನ ಸ್ಥಿತಿಯಲ್ಲಿದ್ದವು. ಏರ್ ಇಂಡಿಯಾ ಸಂಸ್ಥೆಯಲ್ಲಿ ಕೆಲಸ ಮಾಡುವ ಅವರು ತಮಗೆ ಭಡ್ತಿ ನೀಡಿಲ್ಲವೆಂದು ಸಂಸ್ಥೆಯ ವಿರುದ್ಧ ಕೇಸ್ ಹಾಕಿದ್ದರು. ಅದರಲ್ಲಿ ಆಕೆಗೆ ಸೋಲಾಗಿತ್ತು. ಆಕೆಯನ್ನು ಮೀರಿ ಭಡ್ತಿ ಪಡೆದ ಕಿರಿಯ ಸಹೋದ್ಯೋಗಿಗಳು ಆಕೆಯ ಬಗ್ಗೆ ಕುಹಕವಾಡುತ್ತಿದ್ದರೆನ್ನಲಾಗಿದೆ. ಇದರ ಜೊತೆಗೆ ಆಕೆ ತನ್ನ ಸಹೋದರನ ಜೊತೆ ಆಸ್ತಿ ವಿಚಾರದಲ್ಲಿ ಜಗಳ ಮಾಡಿಕೊಂಡಿದ್ದಳು. ಇದೆಲ್ಲವೂ ಆಕೆಯನ್ನು ಮಾನಸಿಕವಾಗಿ ಕುಗ್ಗಿಸಿದ್ದವು ಎಂದು ಸುಲಕ್ಷಣಾ ಅವರ ಮಗ ಅನುಭವ್ ಹೇಳಿದ್ದಾರೆ.

ತಮ್ಮ ತಾಯಿಯನ್ನು ಹುಡುಕಲೆಂದೇ ಅನುಭವ್ ಅವರು ಆ್ಯಪ್​ವೊಂದನ್ನು ಹೊರತಂದಿದ್ದಾರೆ. ಅದರಲ್ಲಿ ಆಕೆಯ ತಾಯಿಯ ಫೋಟೋ ಮತ್ತಿತರ ವಿವರಗಳನ್ನು ಹಾಕಲಾಗಿದೆ. ಅಲ್ಲದೇ, ಆಕೆಯನ್ನು ಹುಡುಕಿಕೊಟ್ಟವರಿಗೆ 1 ಲಕ್ಷ ರೂ ಬಹುಮಾನ ಕೂಡ ಕೊಡುವುದಾಗಿ ತಿಳಿಸಿದ್ಧಾರೆ.
First published:April 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626