ಕೊಚ್ಚಿ (ಆಗಸ್ಟ್ 07); ಏರ್ ಇಂಡಿಯಾ ವಿಮಾನ ಇಂದು ಸಂಜೆ ಕೇರಳದ ಕೋಯಿಕ್ಕೋಡ್ ವಿಮಾನ ನಿಲ್ದಾಣದ ರನ್ವೇನಲ್ಲಿ ಲ್ಯಾಂಡಿಂಗ್ ವೇಳೆ ಅಪಘಾತಕ್ಕೆ ಈಡಾಗಿದೆ. 174 ಮಂದಿ ಪ್ರಯಾಣಿಕರಿದ್ದ ವಿಮಾನ ಅಪಘಾತಕ್ಕೆ ಈಡಾಗಿದ್ದು, ಪೈಲಟ್ ಸೇರಿದಂತೆ 14 ಜನ ಮೃತಪಟ್ಟಿದ್ದಾರೆ ಎಂದು ಅಧಿಕೃತ ಮಾಹಿತಿ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ನಾಗರೀಕ ವಿಮಾನಯಾನ ಸಚಿವಾಲಯ ಈ ಅಪಘಾತದ ತನಿಖೆಗೆ ಆದೇಶಿಸಿದೆ.
ದುಬೈ- ಕೊಜಿಕೋಡ್ ವಿಮಾನ X1344 ಬೋಯಿಂಗ್ 737 ವಿಮಾನದಲ್ಲಿ 174 ಮಂದಿ ಪ್ರಯಾಣಿಕರು ಇದ್ದರು. ಸಂಜೆ 7;41ರಲ್ಲಿ ಲ್ಯಾಂಡ್ ಆಗಿದ್ದು, ರನ್ವೇನಲ್ಲಿ ಅಪಘಾತಕ್ಕೆ ಈಡಾಗಿದೆ ಎಂದು ವಿಮಾನಯಾನ ಸಂಸ್ಥೆಯ ಮೂಲಗಳು ತಿಳಿಸಿವೆ. ಸ್ಥಳದಲ್ಲಿ 24 ಆ್ಯಂಬುಲೆನ್ಸ್ಗಳು ಹಾಗೂ ಅಗ್ನಿ ಶಾಮಕ ವಾಹನಗಳು ಇದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಅಲ್ಲದೆ, ಎನ್ಡಿಆರ್ಎಫ್ ತಂಡದ 50 ಸೈನಿಕರು ರಕ್ಷಣಾ ಸ್ಥಳಕ್ಕೆ ಧಾವಿಸಿದ್ಧಾರೆ.
First picture of the #Calicut crash of the #AirIndiaExpress plane pic.twitter.com/CxzgKq2JmZ
— Sudhir Chaudhary (@sudhirchaudhary) August 7, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ