Air India Data Leak: ನವದೆಹಲಿ (ಮೇ 22): ಏರ್ ಇಂಡಿಯಾ ಮೇಲೆ ಭಾರೀ ದೊಡ್ಡ ಸೈಬರ್ ದಾಳಿ ನಡೆದಿದ್ದು, Air Indiaದ 45 ಲಕ್ಷ ಪ್ರಯಾಣಿಕರ ಕ್ರೆಡಿಟ್ ಕಾರ್ಡ್, ಪಾಸ್ಪೋರ್ಟ್ ಮಾಹಿತಿ, ಫೋನ್ ನಂಬರ್ಗಳು ಸೇರಿದಂತೆ ಹಲವು ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ Air India Data Processor ಮೇಲೆ Cyber attack ನಡೆದಿದ್ದು, ಭಾರೀ ಪ್ರಮಾಣದ ಪ್ರಯಾಣಿಕರ ಮಾಹಿತಿಗಳನ್ನು ಕಳುವು ಮಾಡಲಾಗಿದೆ.
2011ರ ಆಗಸ್ಟ್ 26ರಿಂದ 2021ರ ಫೆಬ್ರವರಿ 3ರವರೆಗಿನ ಅವಧಿಯಲ್ಲಿ ಈ ಡೇಟಾ ಮಾಹಿತಿ ಸೋರಿಕೆಯಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ. ಈ ಅವಧಿಯಲ್ಲಿ ಏರ್ ಇಂಡಿಯಾದಲ್ಲಿ ಟಿಕೆಟ್ ಬುಕ್ ಮಾಡಿದವರ ಮಾಹಿತಿಗಳನ್ನು ಸಂಗ್ರಹಿಸಿಡಲಾಗಿತ್ತು. ಕ್ರೆಡಿಟ್ ಕಾರ್ಡ್ ಹೊಂದಿದ್ದ ಪ್ರಯಾಣಿಕರ CVV/ CVC ಮಾಹಿತಿಯನ್ನು ನಾವು ಸಂಗ್ರಹಿಸಿಟ್ಟಿರಲಿಲ್ಲ. ಹೀಗಾಗಿ, ಆ ಮಾಹಿತಿ ಸೋರಿಕೆಯಾಗಿಲ್ಲ. ಏರ್ ಇಂಡಿಯಾದ ಡೇಟಾ ಪ್ರೋಸೆಸರ್ ಆಫ್ ಪ್ಯಾಸೆಂಜರ್ ಸರ್ವಿಸ್ ಸಿಸ್ಟಂ ಮೇಲೆ ಸೈಬರ್ ದಾಳಿ ನಡೆದಿದ್ದು, ಸುಮಾರು 45 ಲಕ್ಷ ಪ್ರಯಾಣಿಕರ ವೈಯಕ್ತಿಕ ಮಾಹಿತಿಗಳನ್ನು ಕದಿಯಲಾಗಿದೆ ಎಂದು ಏರ್ ಇಂಡಿಯಾ ಅಧಿಕೃತವಾಗಿ ಪ್ರಕಟಿಸಿದೆ.
Massive Air India data breach, involved personal data registered b/w 26th Aug 2011 & 3rd Feb 2021, with details including name, DOB, contact info, passport info, ticket info, Star Alliance & Air India frequent flyer data (no passwords data affected) & credit cards data: Air India
— ANI (@ANI) May 21, 2021
ಈ ಘಟನೆಯು ವಿಶ್ವದ ಸುಮಾರು 4,500,000 ಡೇಟಾದ ಮೇಲೆ ಪರಿಣಾಮ ಬೀರಿದೆ. ಇದರಲ್ಲಿ ಹೆಸರು, ಹುಟ್ಟಿದ ದಿನಾಂಕ, ಸಂಪರ್ಕ ಮಾಹಿತಿ, ಪಾಸ್ ಪೋರ್ಟ್ ಮಾಹಿತಿ, ಟಿಕೆಟ್ ಮಾಹಿತಿ, ಸ್ಟಾರ್ ಅಲೈಯನ್ಸ್ ಮತ್ತು ಏರ್ ಇಂಡಿಯಾ ಪ್ರಯಾಣಿಕರ ಡೇಟಾ, ಕ್ರೆಡಿಟ್ ಕಾರ್ಡ್‌ಗಳ ಡೇಟಾ ಕೂಡ ಇತ್ತು. ಈ ಡೇಟಾ ಭದ್ರತಾ ಲೋಪಕ್ಕೆ ಕಾರಣವೇನೆಂಬ ಬಗ್ಗೆ ಗಂಭೀರವಾಗಿ ತನಿಖೆ ನಡೆಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಏರ್ ಇಂಡಿಯಾ ಘೋಷಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ