Achievement: ಗಗನಸಖಿ ಕೆಲಸ ತೊರೆದು ಪೊಲೀಸ್ ಆದ ನೇಹಾ ಪಚ್ಚಿಸಿಯಾ; ಈಕೆಯ ಪಯಣ ಅದ್ಭುತ

ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದ ಡಿಎಸ್ ಪಿ ನೇಹಾ ಪಚ್ಚಿಸಿಯಾ ಮೊದಲು ಗಗನಸಖಿಯಾಗಿದ್ದರು. ನಂತರ ಕೆಲಸ ತೊರೆದು ಪಿಎಸ್ ಐ ಪರೀಕ್ಷೆ ಪಾಸು ಮಾಡಿ ಈಗ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಯಾಗಿದ್ದಾರೆ.

ನೇಹಾ ಪಚ್ಚಿಸಿಯಾ

ನೇಹಾ ಪಚ್ಚಿಸಿಯಾ

  • Share this:
    ಮೊದಲಿನಿಂದಲೂ ಹೋರಾಟದ (Fighter) ಜೀವನವನ್ನೇ (Life) ನಡೆಸಿಕೊಂಡು ಬಂದಿರುವ ಅನೇಕ ಪೊಲೀಸ್ (Police) ಅಧಿಕಾರಿಗಳು ದೇಶದಲ್ಲಿದ್ದಾರೆ. ಆದರೆ ಅವರು ಎಲ್ಲಾ ಕಷ್ಟಗಳನ್ನು (Problems) ಎದುರಿಸಿ ತಮ್ಮ ಸ್ಥಾನಮಾನ ಸಾಧಿಸಿದ್ದಾರೆ. ಮತ್ತು ದೇಶ ಸೇವೆಗಾಗಿ ಪೋಲಿಸ್ ವಿಭಾಗದಲ್ಲಿ ನೇಮಕಗೊಂಡಿದ್ದಾರೆ. ಈ ಪೊಲೀಸ್ ಅಧಿಕಾರಿಗಳು ತಮ್ಮ ಕೆಲಸದಿಂದಲೇ (Work) ಹೆಚ್ಚು ಹೆಸರುವಾಸಿಯಾಗಿದ್ದಾರೆ. ಗಗನಸಖಿ ಕೆಲಸ ಬಿಟ್ಟು ದೇಶ ಸೇವೆಗೆ ಮುಂದಾಗಬೇಕು ಎಂದು ಯೋಚಿಸಿ ಪೊಲೀಸ್ ಸೇವೆಗೆ ಸೇರಿರುವ ಒಬ್ಬ ಮಹಿಳಾ ಪೊಲೀಸ್ ಅಧಿಕಾರಿಯ ಬಗ್ಗೆ ಇಲ್ಲಿ ಹೇಳಲಾಗುತ್ತಿದೆ. ಪಿಎಸ್ ಐ ಪರೀಕ್ಷೆ ಪಾಸು ಮಾಡಿದ ನಂತರ ತಮ್ಮ ಕೆಲಸ, ಕೈಂಕರ್ಯದಿಂದ ಗುರುತಿಸಲ್ಪಟ್ಟ ಈ ಮಹಿಳಾ DSP ಗಳ ಹೆಸರು ನೇಹಾ ಪಚ್ಚಿಸಿಯಾ. ಅವರು ಮಧ್ಯಪ್ರದೇಶದ ಭೋಪಾಲ್ ನ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನೇಮಕಗೊಂಡಿದ್ದಾರೆ.

    ಡಿಎಸ್ಪಿ ನೇಹಾ ಅವರು ಪೊಲೀಸ್ ಸೇರುವ ಮೊದಲು ಏರ್ ಹೋಸ್ಟೆಸ್ ಆಗಿದ್ದರು ಮತ್ತು ಅನೇಕ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡಿದ್ದರು.

    ನೇಹಾ ಪಚ್ಚಿಸಿಯಾ ಯಾರು?

    ಡಿಎಸ್‌ಪಿ ನೇಹಾ ಪಚ್ಚಿಸಿಯಾ ಮಧ್ಯಪ್ರದೇಶದ ರಾಜ್‌ಗಢ್ ಜಿಲ್ಲೆಯ ಪಚೋರ್ ತಹಸಿಲ್ ನಿವಾಸಿ. ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಅವರ ತಂದೆ ಶಿಕ್ಷಕ ಮತ್ತು ತಾಯಿ ಗೃಹಿಣಿ. ಅವಳು 4 ಸಹೋದರಿಯರಲ್ಲಿ ಹಿರಿಯ ಮಗಳು.

    ಅವರು 2012 ರಿಂದ 2016 ರವರೆಗೆ ಪಿಎಸ್ ಐ ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಯನ್ನು ಬರೆದರು. ನಂತರ 2016 ರಲ್ಲಿ ಸಂದರ್ಶನಗಳನ್ನು ಒಟ್ಟಿಗೆ ನಡೆಸಿದಾಗ, ಅವರು ಎಲ್ಲಾ ನಾಲ್ಕು ಪರೀಕ್ಷೆಗಳಲ್ಲಿ ಪಾಸಾಗಿ ಒಟ್ಟಿಗೆ ಆಯ್ಕೆಯಾದರು. ಎಂಪಿಪಿಎಸ್‌ಸಿಯಲ್ಲಿ 20ನೇ ರ್ಯಾಂಕ್ ಪಡೆದಿದ್ದಾರೆ.

    ಇದನ್ನೂ ಓದಿ: ಗುರುಗ್ರಾಮದಲ್ಲಿ ಉದ್ಘಾಟನೆಯಾಗಲಿದೆ 'ವಿಶ್ವ ಶಾಂತಿ ಕೇಂದ್ರ'! ಇದರ ವಿಶೇಷತೆಗಳು ಏನು ಗೊತ್ತಾ?

    ತಾಯಿ 3 ದಿನಗಳವರೆಗೆ ಆಹಾರ ಸೇವಿಸಲಿಲ್ಲ

    ಡಿಎಸ್ಪಿ ನೇಹಾ ಸಂದರ್ಶನವೊಂದರಲ್ಲಿ ಹೇಳಿದ್ದು, ಮೊದಲಿನಿಂದಲೂ ತನ್ನ ತಾಯಿ ತನ್ನ ಹೆಣ್ಣು ಮಕ್ಕಳನ್ನು ಒಳ್ಳೆಯ ಶಾಲೆಯಲ್ಲಿ ಓದಿಸಲು ಬಯಸಿದ್ದರು. ಅವರು ಶಾಲೆಯಲ್ಲಿದ್ದಾಗ, ಪಾಚೋರ್‌ನಲ್ಲಿ ಒಂದೇ ಒಂದು ಒಳ್ಳೆಯ ಶಾಲೆ ಇರಲಿಲ್ಲ. ಆದರೆ ಆಂಗ್ಲ ಮಾಧ್ಯಮ ಶಾಲೆ ಇತ್ತು.

    ಆದರೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಗಳನ್ನು ಓದಿಸಿದರೆ ನಂತರ ಅವಳು ಧರ್ಮ ಬದಲಾಯಿಸಿದರೆ ಏನು ಮಾಡುವುದು ಎಂದು ಆಲೋಚಿಸಿದ್ದರು. ಹೀಗಾಗಿ ಕುಟುಂಬದ ಹಿರಿಯರು ಆಂಗ್ಲ ಮಾಧ್ಯಮ ಶಾಲೆಗೆ ಪ್ರವೇಶ ನೀಡಲು ಸಿದ್ಧರಿರಲಿಲ್ಲ. ಆದರೆ ಅವರ ಶಾಲಾ ಪ್ರವೇಶ ಕಾರಣದಿಂದಾಗಿ ನೇಹಾರ ತಾಯಿ ಕಾಳಜಿಯಿಂದ 3 ದಿನಗಳವರೆಗೆ ಆಹಾರವನ್ನು ಸೇವಿಸಿರಲಿಲ್ಲ ಎಂದು ಹೇಳಿದ್ದಾರೆ.

    ಗಗನಸಖಿಯಿಂದ ಡಿಎಸ್‌ಪಿವರೆಗೆ ಪಯಣ

    ಡಿಎಸ್‌ಪಿ ನೇಹಾ 12ನೇ ತರಗತಿಯ ನಂತರ ಏವಿಯೇಷನ್‌ನಲ್ಲಿ ಡಿಪ್ಲೊಮಾ ಮಾಡಿ ನಂತರ ಏರ್‌ ಇಂಡಿಯಾದಲ್ಲಿ ಗಗನಸಖಿಯಾಗಿ ಕೆಲಸ ಮಾಡಿದರು. ಇದರೊಂದಿಗೆ ವಿದೇಶದ ಹಲವು ಕಂಪನಿಗಳಿಂದ ಉದ್ಯೋಗದ ಆಫರ್ ಬರಲಾರಂಭಿಸಿದ್ದು, ಅದರಲ್ಲಿ ಉದ್ಯೋಗವನ್ನೂ ಗಿಟ್ಟಿಸಿಕೊಂಡಿದ್ದರು.  ಸಂದರ್ಶನದ ವೇಳೆ ನೇಹಾ ಹೇಳಿದ್ದು,

    ನನ್ನ ಗಗನಸಖಿ ಕೆಲಸದಲ್ಲಿ ಗ್ಲಾಮರ್ ಇತ್ತು. ಆದರೆ ಆಂತರಿಕವಾಗಿ ನನಗೆ ತೃಪ್ತಿ ಸಿಗುತ್ತಿರಲಿಲ್ಲ. ಕೆಲಸದಿಂದ ನನಗೆ ಅಷ್ಟು ಸಂತೋಷ ಸಿಗುತ್ತಿರಲಿಲ್ಲ ಎಂದಿದ್ದಾರೆ. ಅದಾದ ನಂತರ ಒಮ್ಮೆ ಹೊರಗೆ ಹೋಗಿದ್ದೆ. ಈ ವೇಳೆ ಒಂದು ವಿಚಾರ ಮನಸ್ಸಿಗೆ ಬಂದಿತ್ತು. ನಾನು ಸಂತೋಷವಾಗಿರಲು ನಾನು ಇತರೆ ನನ್ನಂತ ಹುಡುಗಿಯರಿಗೆ ಸಹಾಯ ಮಾಡಬೇಕು ಎಂದು ಆಲೋಚಿಸಿದೆ.

    ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಮದ್ಯದ ಬೆಲೆ ಕೇಳಿ ರೊಚ್ಚಿಗೆದ್ದು ಬಾರ್ ಮೇಲೆ ಕಲ್ಲು ತೂರಿದ Uma Bharti..!

    ನಂತರ ನಾನು ಕೆಲಸ ಬಿಟ್ಟು ಪಿಎಸ್ ಐ ಗೆ ತಯಾರಿ ಆರಂಭಿಸಿದೆ. ಪೊಲೀಸ್ ಇಲಾಖೆಗೆ ಆಯ್ಕೆಯಾಗುವ ಮೊದಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿಯೂ ಕೆಲಸ ಮಾಡಿದ್ದೆ ಎಂದು ಹೇಳಿದ್ದಾರೆ.
    Published by:renukadariyannavar
    First published: