Air India vs Air Force Oneಗಿರುವ ವ್ಯತ್ಯಾಸವೇನು? ಮಲ್ಟಿ-ಬಿಲಿಯನ್ ಬೋಯಿಂಗ್ ಬಿ 777 ವಿಶೇಷತೆ ಏನು?

Air Force One vs Air India One: ಮೂಲತಃ ಈ ವಿಮಾನವು Air India ಒಡೆತನದಲ್ಲಿತ್ತು ನಂತರ ಇದನ್ನು ಪ್ರಧಾನಿ, ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳ ಪ್ರಯಾಣ ಸೌಖರ್ಯಕ್ಕಾಗಿ ಭಾರತೀಯ ವಾಯುಪಡೆಗೆ ಹಸ್ತಾಂತರಿಸಲಾಯಿತು.

ಏರ್​ ಇಂಡಿಯಾ ಒನ್​ ವಿಮಾನ

ಏರ್​ ಇಂಡಿಯಾ ಒನ್​ ವಿಮಾನ

  • Share this:
    ಲಾಕ್‌ಡೌನ್ ನಂತರ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಎರಡನೇ ಅಂತರಾಷ್ಟ್ರೀಯ ಪ್ರವಾಸದಲ್ಲಿ ಅಮೆರಿಕಾಕ್ಕೆ ತೆರಳಿದ್ದಾರೆ. ಬಾಂಗ್ಲಾದೇಶಕ್ಕೆ ಸಣ್ಣ ಭೇಟಿಯನ್ನೂ ನೀಡಲಿದ್ದು, ಅವರು ತಮ್ಮ ಮೊದಲ ದೀರ್ಘ ವಿಮಾನ ಯಾನವನ್ನು ಹೊಸದಾಗಿ ಪರಿಚಯಿಸಲಾದ ಬೋಯಿಂಗ್ 777 ವಿವಿಐಪಿ ವಿಮಾನದಲ್ಲಿ ಮಾಡಲಿದ್ದಾರೆ. ರಾಷ್ಟ್ರಪತಿ ಉಪರಾಷ್ಟ್ರಪತಿ ಹಾಗೂ ಅಂತರಾಷ್ಟ್ರೀಯ ದೇಶಗಳ ಪ್ರವಾಸಕ್ಕಾಗಿ ಪ್ರಧಾನ ಮಂತ್ರಿಯವರಿಗೆ ಪ್ರಯಾಣಿಸಲು ಬಳಸುತ್ತಿದ್ದ ಹಳೆಯ 747 ಬದಲಿಗೆ ಕಸ್ಟಮ್ ನಿರ್ಮಿತ ಬೋಯಿಂಗ್ 777 ಅನ್ನು ಕಳೆದ ವರ್ಷ ಪರಿಚಯಿಸಲಾಯಿತು. ಈ ವಿಮಾನವನ್ನು ಅತ್ಯಾಧುನಿಕ ಆತ್ಮಸಂರಕ್ಷಣಾ ಸೂಟ್‌ನೊಂದಿಗೆ VVIP ಪ್ರವಾಸ ಸೌಲಭ್ಯಗಳಿಗಾಗಿ ಮರುಜೋಡಣೆ ಮಾಡಲಾಗುತ್ತದೆ.

    ಮೂಲತಃ ಈ ವಿಮಾನವು Air India ಒಡೆತನದಲ್ಲಿತ್ತು ನಂತರ ಇದನ್ನು ಪ್ರಧಾನಿ, ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳ ಪ್ರಯಾಣ ಸೌಖರ್ಯಕ್ಕಾಗಿ ಭಾರತೀಯ ವಾಯುಪಡೆಗೆ ಹಸ್ತಾಂತರಿಸಲಾಯಿತು. ಈ ಹೊಸ ವಿಮಾನವನ್ನು ‘Air India One’ ಎಂಬ ಅನನ್ಯ ಕಾಲ್ ಸೈನ್ (ಕೋಡ್) ಅನ್ನು ಹೊಂದಿದೆ. ಇವುಗಳು ಒಂದೇ ರೀತಿಯ ವಿಮಾನಗಳ ಮಾರ್ಪಾಡುಗಳನ್ನು ಹೊಂದಿದ್ದು ಬೆಲೆ ಸುಮಾರು 8,400 ಕೋಟಿಯಾಗಿದೆ.

    B777 ವಿಮಾನಗಳು ಅತ್ಯಾಧುನಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನೊಳಗೊಂಡಿದ್ದು ಇವುಗಳನ್ನು ಅತಿದೊಡ್ಡ ವಿಮಾನ ಅವರೋಹಿತ ಕ್ರಿಯೆ (LAIRCM) ಹಾಗೂ ಸ್ವಯಂ ರಕ್ಷಣಾ ಸೂಟ್‌ಗಳು (Self Protection Suit) ಎಂದು ಕರೆಯಲಾಗಿದೆ. ವಿಮಾನದಲ್ಲಿ ಸಂಕೇತವಾಗಿ ರಾಷ್ಟ್ರೀಯ ಲಾಂಛನವನ್ನು ಹೊಂದಿದ್ದು ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಬರೆದ ‘ಇಂಡಿಯಾ’ ಹಾಗೂ ‘ಭಾರತ್’ ಹೆಸರುಗಳನ್ನು ವಿಮಾನದ ಎರಡೂ ಬದಿಗಳಲ್ಲಿ ಕಾಣಬಹುದಾಗಿದೆ. ರಾಷ್ಟ್ರಧ್ವಜವನ್ನು ವಿಮಾನದ ಬಾಲದಲ್ಲಿನ ರೆಕ್ಕೆಯಲ್ಲಿ ಕಾಣಬಹುದಾಗಿದೆ.

    ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆ ಆರೋಪಿ ವಿರುದ್ಧದ KCOCA ರದ್ದು; ಸುಪ್ರೀಂಗೆ ಕವಿತಾ ಮೊರೆ, ಆದೇಶ ಕಾಯ್ದಿರಿಸಿದ ಕೋರ್ಟ್

    ಈ ವಿಮಾನವನ್ನು ಭಾರತೀಯ ವಾಯು ಪಡೆಯ ಪೈಲಟ್‌ಗಳು ಚಲಾಯಿಸುತ್ತಾರೆ ಹಾಗೂ ಏರ್ ಇಂಡಿಯಾದ ಪೈಲಟ್‌ಗಳಲ್ಲ ಎಂಬ ಅಂಶವನ್ನು ಗಮನಿಸಬೇಕು. ಈ ವಿಮಾನದ ನಿರ್ವಹಣಾ ಕಾರ್ಯವನ್ನು ಏರ್ ಇಂಡಿಯಾ ಎಂಜಿನಿಯರಿಂಗ್ ಸರ್ವೀಸಸ್ ಲಿಮಿಟೆಡ್‌ (Air India Engineering Services Limited) ನಿರ್ವಹಿಸುತ್ತಿದ್ದು, ಭಾರತೀಯ ರಾಷ್ಟ್ರೀಯ ವಾಹಕದ ಅಂಗಸಂಸ್ಥೆಯಾಗಿದೆ. ಮಧ್ಯೆ ಇಂಧನ ತುಂಬಿಸಿಕೊಳ್ಳುವ ಅವಶ್ಯಕತೆ ಇಲ್ಲದೆಯೇ ವಿಮಾನಗಳು ಭಾರತ ಹಾಗೂ ಅಮೆರಿಕಾ ನಡುವೆ ಹಾರಾಟ ನಡೆಸಬಲ್ಲವು.

    ಇದನ್ನೂ ಓದಿ: ಅಸಾದುದ್ದೀನ್ ಓವೈಸಿ ದೆಹಲಿ ಮನೆ ಮೇಲೆ ದಾಳಿ; ಐದು ಜನ ಹಿಂದೂಸೇನಾ ಕಾರ್ಯಕರ್ತರ ಬಂಧನ!

    ಏರ್‌ ಇಂಡಿಯಾ ಒನ್ ವಿಮಾನಗಳು ಅಮೆರಿಕಾದ ಅಧ್ಯಕ್ಷರು ಬಳಸುವ Air Force One ವಿಮಾನದಗಳಂತೆಯೇ ಭದ್ರತಾ ವ್ಯವಸ್ಥೆಗಳನ್ನು ಒಳಗೊಂಡಿವೆ. ಏರ್ ಫೋರ್ಸ್ ಒನ್‌ನಂತೆಯೇ ಏರ್ ಇಂಡಿಯಾ ಒನ್ ವಿಮಾನವು ಸ್ವಯಂ-ಸಂರಕ್ಷಣಾ ಸೂಟ್‌ಗಳನ್ನು ಹಾಗೂ ಕಾನ್ಫರೆನ್ಸ್ ಕ್ಯಾಬಿನ್‌ಗಳೊಂದಿಗೆ ಬೃಹತ್ ಕಚೇರಿ ಸ್ಥಳವನ್ನು ಹೊಂದಿದೆ. ಫೆಬ್ರವರಿ 2020 ರಲ್ಲಿ, ಯುಎಸ್ ಎರಡು ರಕ್ಷಣಾ ವ್ಯವಸ್ಥೆಗಳನ್ನು ಭಾರತಕ್ಕೆ 190 ಮಿಲಿಯನ್ ಡಾಲರ್ ವೆಚ್ಚದಲ್ಲಿ ಮಾರಾಟ ಮಾಡಲು ಒಪ್ಪಿಕೊಂಡಿತು. ಈ ವಿಮಾನಗಳು ಸುಧಾರಿತ ಸಂವಹನ ವ್ಯವಸ್ಥೆಯನ್ನು ಹೊಂದಿವೆ.

    ಪೋಟಸ್ (ಅಮೆರಿಕಾದ ಅಧ್ಯಕ್ಷರು) ಫ್ಲೈ ಇನ್ ಎಂದರೇನು?

    1953 ರಲ್ಲಿ ಈಸ್ಟರ್ನ್ ಏರ್‌ಲೈನ್ಸ್ ವಿಮಾನ 8610 ಮತ್ತು ಏರ್ ಫೋರ್ಸ್ ವಿಮಾನ 8610 ಮಾರಕ ಘರ್ಷಣೆಯನ್ನುಂಟು ಮಾಡಬಹುದಾಗಿದ್ದ ಗೊಂದಲಮಯವಾದ ಆಯೋಜನೆಗೆ ಒಳಪಟ್ಟಿದ್ದವು. ಅದೃಷ್ಟವಶಾತ್ ಯಾವುದೇ ಘರ್ಷಣೆಗಳು ಸಂಭವಿಸರಲಿಲ್ಲ. ಇದು ಹೆಚ್ಚು ಅದೃಷ್ಟಶಾಲಿಯಾದ ಸಂಗತಿ ಯಾಕಾಗಿತ್ತು ಎಂದರೆ ಅದರಲ್ಲೊಂದು ವಿಮಾನವು ಅಮೆರಿಕಾ ಅಧ್ಯಕ್ಷರಾದ ಫ್ರಾಂಕ್ಲಿನ್ ಡಿ. ರೂಸ್‌ವೆಲ್ಟ್ ಅವರನ್ನು ಹೊತ್ತೊಯ್ಯುತ್ತಿತ್ತು. ಈ ಘಟನೆಯ ನಂತರ ಯುಎಸ್ ಸರಕಾರವು ಅಮೆರಿಕಾದ ಅಧ್ಯಕ್ಷರಿಗಾಗಿ ಪ್ರತ್ಯೇಕ ವಿಮಾನವನ್ನು (POTUS) ಸಜ್ಜುಗೊಳಿಸಲು ನಿರ್ಧರಿಸಿತು.

    'Flying Whitehouse' ಎಂದು ವಿನ್ಯಾಸಗೊಳಿಸಲಾಗಿರುವ ಬೋಯಿಂಗ್ 747-200B ಅನ್ನು, 'ಏರ್ ಫೋರ್ಸ್ ಒನ್' ಎಂದೂ ಕರೆಯಲಾಗುತ್ತದೆ. ಪ್ರಸ್ತುತ ಈ ವಿಮಾನವನ್ನು ಅಮೆರಿಕಾದ ಅಧ್ಯಕ್ಷರ ಪ್ರಯಾಣಕ್ಕೆ ಬಳಸಲಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಏರ್ ಫೋರ್ಸ್ ಒನ್ ಎಂಬುದು ವಿಮಾನದ ಹೆಸರಲ್ಲ ಬದಲಿಗೆ ಅಧ್ಯಕ್ಷರಿರುವ ಯಾವುದೇ ವಿಮಾನಕ್ಕೆ ಯುಎಸ್ ಏರ್ ಫೋರ್ಸ್‌ನ ಕಾಲ್ ಸೈನ್ (ಕೋಡ್) ಆಗಿದೆ. ಪ್ರಸ್ತುತ 747 ವಿಮಾನಗಳು ಯುಎಸ್ ವಾಯುಪಡೆಯ ಅಧಿಕೃತ ಏರ್ ಫೋರ್ಸ್ ಒನ್ ವಿಮಾನವಾಗಿದ್ದು ವಿಮಾನವನ್ನು VC-25A ಎಂದು ಗೊತ್ತುಪಡಿಸಲಾಗಿದೆ. ಈ ವಿಮಾನಗಳ ಟೇಲ್ ಕೋಡ್‌ಗಳು 28000 ಹಾಗೂ 29000 ಆಗಿವೆ.

    ಏರ್ ಫೋರ್ಸ್ ಒನ್‌ನ ಪೈಲಟ್‌ಗಳನ್ನು 2,500 ಗಂಟೆಗಳ ಫ್ಲೈಯಿಂಗ್ ಫೈಟರ್ ಜೆಟ್ ಮತ್ತು ಇತರ ಮಿಲಿಟರಿ ವಿಮಾನಗಳು ಮತ್ತು USAF ಗೆ ಸುಮಾರು ಎರಡು ದಶಕಗಳ ಸೇವೆಗಳ ಕನಿಷ್ಠ ಮಾನದಂಡದೊಂದಿಗೆ ಯುಎಸ್ ಏರ್ ಫೋರ್ಸ್ ಆಯ್ಕೆಮಾಡುತ್ತದೆ. 12,395 ಪೈಲಟ್‌ಗಳು ಮತ್ತು 329,839 ಏರ್ ಫೋರ್ಸ್ ಸಿಬ್ಬಂದಿಗಳಲ್ಲಿ, 80 ಪೈಲಟ್‌ಗಳು ಮತ್ತು 89 ದೊಡ್ಡ ವಿಮಾನ ಸಿಬ್ಬಂದಿಗಳನ್ನು ಏರ್ ಫೋರ್ಸ್ ಒನ್ ಸೇವೆಗಾಗಿ ಆಯ್ಕೆ ಮಾಡಲಾಗಿದೆ. ಮೇರಿಲ್ಯಾಂಡ್‌ನಲ್ಲಿರುವ ಜಾಯಿಂಟ್ ಬೇಸ್ ಆ್ಯಂಡ್ರ್ಯೂಸ್ ಅಧ್ಯಕ್ಷೀಯ ನೌಕಾಪಡೆಯ ಅಧಿಕೃತ ನೆಲೆಯಾಗಿದೆ.
    Published by:Sharath Sharma Kalagaru
    First published: