Air Force Day 2021: ಅಕ್ಟೋಬರ್‌ 8ರಂದೇ ವಾಯುಪಡೆ ದಿನ ಆಚರಿಸುವುದೇಕೆ..? ಈ ದಿನದ ಇತಿಹಾಸ, ಮಹತ್ವ ತಿಳಿಯಿರಿ..

IAFನ ಧ್ಯೇಯವಾಕ್ಯವೆಂದರೆ 'ನಭ ಸ್ಪರ್ಶಂ ದೀಪ್ತಮ್', ಅಂದರೆ 'ಆಕಾಶವನ್ನು ವೈಭವದಿಂದ ಸ್ಪರ್ಶಿಸಿ' ಎಂದು. ಇದನ್ನು ಭಗವದ್ಗೀತೆಯ 11ನೇ ಅಧ್ಯಾಯದಿಂದ ಆಯ್ದುಕೊಳ್ಳಲಾಗಿದೆ.

ಭಾರತೀಯ ವಾಯುಪಡೆ

ಭಾರತೀಯ ವಾಯುಪಡೆ

  • Share this:
ವರ್ಷದ 365 ದಿನಗಳಲ್ಲಿ ಬಹುತೇಕ ಎಲ್ಲ ದಿನವೂ ಏನಾದರೊಂದು ವಿಶೇಷ ಇದ್ದೇ ಇರುತ್ತದೆ. ಅದೇ ರೀತಿ, ಇಂದು ವಾಯುಪಡೆಯ ದಿನ(Air Force Day) ಅಥವಾ ಏರ್‌ಫೋರ್ಸ್‌ ದಿನ. ವಾಯುಪಡೆಯ ದಿನವು ವಾರ್ಷಿಕ ಆಚರಣೆಯಾಗಿದ್ದು ಇದನ್ನು ಸಶಸ್ತ್ರ ಪಡೆ ಹೊಂದಿರುವ ಹಲವಾರು ರಾಷ್ಟ್ರಗಳು ಆಚರಿಸುತ್ತವೆ. ಇದು ದೇಶವೊಂದರ ವಾಯುಪಡೆಗೆ ಮಾನ್ಯತೆ ನೀಡುವ ದಿನವಾಗಿದೆ. ಭಾರತೀಯ ವಾಯುಪಡೆಯ(IAF)ರಾಷ್ಟ್ರೀಯ ಭದ್ರತೆ ಮತ್ತು ಅಧಿಕಾರವನ್ನು ಬಲಪಡಿಸಲು ಶ್ರಮಿಸುವ ಸಂಸ್ಥೆಯಾಗಿ ಜಾಗೃತಿ ಮೂಡಿಸಲು ಭಾರತವು(India) ಅಕ್ಟೋಬರ್ 8ರಂದು ವಾಯುಪಡೆ ದಿನವನ್ನು ಆಚರಿಸುತ್ತದೆ.

ಭಾರತೀಯ ವಾಯುಪಡೆಯು ವಿಶ್ವದ ನಾಲ್ಕನೇ ಅತಿದೊಡ್ಡ ವಾಯುಪಡೆಯಾಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಹಿಂಡನ್ ಏರ್ ಫೋರ್ಸ್ ಸ್ಟೇಷನ್ ಏಷ್ಯಾದಲ್ಲೇ ಅತಿ ದೊಡ್ಡದಾಗಿದೆ.

IAFನ ಧ್ಯೇಯವಾಕ್ಯವೆಂದರೆ 'ನಭ ಸ್ಪರ್ಶಂ ದೀಪ್ತಮ್', ಅಂದರೆ 'ಆಕಾಶವನ್ನು ವೈಭವದಿಂದ ಸ್ಪರ್ಶಿಸಿ' ಎಂದು. ಇದನ್ನು ಭಗವದ್ಗೀತೆಯ 11ನೇ ಅಧ್ಯಾಯದಿಂದ ಆಯ್ದುಕೊಳ್ಳಲಾಗಿದೆ. ಇದು ಮಹಾಭಾರತ ಯುದ್ಧದ ಸಮಯದಲ್ಲಿ ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ಶ್ರೀಕೃಷ್ಣ ನೀಡಿದ ಪ್ರವಚನವನ್ನು ಒಳಗೊಂಡಿದೆ.

ಇತಿಹಾಸ: ಅಕ್ಟೋಬರ್ 8 ಏಕೆ..?

ವಾಯುಪಡೆಯ ದಿನವನ್ನು ಪ್ರತಿವರ್ಷ 8 ಅಕ್ಟೋಬರ್‌ನಲ್ಲಿ ಆಚರಿಸಲಾಗುತ್ತದೆ. 1932ರಲ್ಲಿ ಈ ದಿನವೇ ಭಾರತೀಯ ವಾಯುಪಡೆಯು ಅಧಿಕೃತವಾಗಿ ಯುನೈಟೆಡ್ ಕಿಂಗ್‌ಡಂನ ರಾಯಲ್ ಏರ್ ಫೋರ್ಸ್‌ಗೆ ಬೆಂಬಲ ನೀಡುವ ಶಕ್ತಿಯಾಗಿ ಸ್ಥಾಪಿಸಲ್ಪಟ್ಟಿತು. ಭಾರತೀಯ ವಾಯುಪಡೆಯ ಮೊದಲ ಕಾರ್ಯಾಚರಣಾ ತಂಡವು 1933ರಲ್ಲಿ ಅಸ್ತಿತ್ವಕ್ಕೆ ಬಂದರೂ, ಅಕ್ಟೋಬರ್ 8 ಅನ್ನೇ ವಾಯುಪಡೆಯ ದಿನ ಎಂದು ಕರೆಯಲಾಯಿತು.

ಎರಡನೇ ಮಹಾಯುದ್ಧದಲ್ಲಿ ಭಾರತೀಯ ಸೇನೆಯು ಭಾಗವಹಿಸಿದ ನಂತರ ವಿಷಯಗಳು ಬಹಳಷ್ಟು ಬದಲಾದವು. ಅಂದಿನಿಂದ ಮತ್ತು 1940ರ ದಶಕದ ಅಂತ್ಯದವರೆಗೆ ಭಾರತವು ಗಣರಾಜ್ಯವಾಗುವವರೆಗೆ, ಭಾರತೀಯ ವಾಯುಪಡೆಯನ್ನು ರಾಯಲ್ ಇಂಡಿಯನ್ ಏರ್ ಫೋರ್ಸ್ ಎಂದು ಕರೆಯಲಾಗುತ್ತಿತ್ತು.

ವಿಶೇಷ ಕಾರ್ಯಕ್ರಮಗಳು

1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ, ವಾಯುಪಡೆಯ ದಿನವನ್ನು ಹೊಸ ದೆಹಲಿಯ ಪಾಲಂನಲ್ಲಿ ಈವೆಂಟ್‌ಗಳು, ಮೆರವಣಿಗೆಗಳು ಮತ್ತು ಫ್ಲೈಪಾಸ್ಟ್‌ ಅಥವಾ ಚಿತ್ತಾಕರ್ಷಕ ವೈಮಾನಿಕ ಪ್ರದರ್ಶನ ಮುಂತಾದ ವಿಶೇಷ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತಿತ್ತು. ಆದರೆ, ಕಳೆದ 15 ವರ್ಷಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಗಳಿಂದಾಗಿ ಈ ಕಾರ್ಯಕ್ರಮಗಳನ್ನು ಹಿಂಡನ್ ಏರ್ ಬೇಸ್‌ಗೆ ವರ್ಗಾಯಿಸಲಾಗಿದೆ.

ಹಿಂಡನ್‌ನಲ್ಲಿ ಈ ದಿನ ಅಂದರೆ ಅಕ್ಟೋಬರ್ 8ರಂದು ಪುರುಷರು ಮತ್ತು ಮಹಿಳಾ ಪೈಲಟ್‌ಗಳು ಮೆರವಣಿಗೆ ನಡೆಸುತ್ತಾರೆ, ಹಾಗೂ ಇನ್ವೆಸ್ಟಿಟರ್‌ ಸಮಾರಂಭದಲ್ಲಿ ವಾಯುಪಡೆಯ ಮುಖ್ಯಸ್ಥರು(CAS)ಪದಕಗಳನ್ನು ಸ್ವೀಕರಿಸುವವರ ಸಮವಸ್ತ್ರಕ್ಕೆ ಪಿನ್ ಮಾಡಲಾಗುತ್ತದೆ.

ಈ ವರ್ಷವೂ, ಈ ದಿನವನ್ನು ಆಚರಿಸಲು ಭಾರತೀಯ ವಾಯುಪಡೆಯು ಈಗಾಗಲೇ ವಾಯುಪಡೆ ದಿನಾಚರಣೆಯ ಪೂರ್ಣ ಉಡುಗೆ ಅಭ್ಯಾಸವನ್ನು ನಡೆಸಿತು. ‘’ಏರ್‌ಫೋರ್ಸ್‌ ಸ್ಟೇಷನ್‌ ಹಿಂಡನ್ (ಗಾಜಿಯಾಬಾದ್) ನಲ್ಲಿ ವಾಯುಪಡೆಯ ದಿನದ ಪೆರೇಡ್- ಹಾಗೂ ಇನ್ವೆಸ್ಟಿಟರ್‌ ಸಮಾರಂಭದ ವಿಶಿಷ್ಟ ಲಕ್ಷಣವೆಂದರೆ ವಿವಿಧ ವಿಮಾನಗಳಿಂದ ಆಕರ್ಷಕ ವಾಯು ಪ್ರದರ್ಶನ’’ ಎಂದು ರಕ್ಷಣಾ ಸಚಿವಾಲಯ (MoD) ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆ ತಿಳಿಸಿದೆ.

ವಾಯುಪಡೆಯ ದಿನ 2021ಕ್ಕೆ ಮುಂಚಿತವಾಗಿ, ಭಾರತೀಯ ವಾಯುಪಡೆ (IAF) ವಾಯುಪಡೆಯ ದಿನ 2021ನ ರಿಹರ್ಸಲ್‌ನ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ.
Published by:Latha CG
First published: