ಬೋಯಿಂಗ್ 737 ವಿಮಾನ​ ಹಾರಾಟ ಬಂದ್ ಪರಿಣಾಮ​; ಎಲ್ಲ ವಿಮಾನಯಾನ ಸಂಸ್ಥೆಗಳ ಟಿಕೆಟ್​ ದರ ದುಪ್ಪಟ್ಟು!

ಮುಂಬೈ-ಚೆನ್ನೈ ಪ್ರಯಾಣದರ 26, 073 ರೂ. ದಾಟಿದೆ. ಕಳೆದ ವರ್ಷಇದೇ ಸಮಯದಲ್ಲಿ 5,359 ರೂ. ಇತ್ತು. ಹೋಳಿ ಹಬ್ಬ ಮತ್ತು ಶಾಲೆಗಳಿಗೆ ಬೇಸಿಗೆ ರಜೆ ಆರಂಭವಾಗಿರುವ ಕಾರಣ ಪ್ರವಾಸಿಗರ ದಟ್ಟಣೆ ಹೆಚ್ಚಳವಾಗಿದೆ. ಇದರ ಲಾಭ ಪಡೆಯಲು ವಿಮಾನಯಾನ ಸಂಸ್ಥೆಗಳು ದರ ಏರಿಕೆ ಮಾಡಿವೆ.

Latha CG | news18
Updated:March 15, 2019, 12:44 PM IST
ಬೋಯಿಂಗ್ 737 ವಿಮಾನ​ ಹಾರಾಟ ಬಂದ್ ಪರಿಣಾಮ​; ಎಲ್ಲ ವಿಮಾನಯಾನ ಸಂಸ್ಥೆಗಳ ಟಿಕೆಟ್​ ದರ ದುಪ್ಪಟ್ಟು!
ಸಾಂದರ್ಭಿಕ ಚಿತ್ರ
Latha CG | news18
Updated: March 15, 2019, 12:44 PM IST
ಇಥಿಯೋಪಿಯಾದಲ್ಲಿ ಬೋಯಿಂಗ್​ 737 ಮ್ಯಾಕ್ಸ್-​​​​ 8 ವಿಮಾನ ಪತನದ ಬಳಿಕ ಸುರಕ್ಷತೆಯ ದೃಷ್ಟಿಯಿಂದ ಈ ಸರಣಿಯ ಎಲ್ಲಾ ವಿಮಾನಗಳು ಹಾರಾಟವನ್ನು ಭಾರತದಲ್ಲಿ ಸ್ಥಗಿತಗೊಳಿಸಿರುವುದರಿಂದ ವಿಮಾನ ಪ್ರಯಾಣ ದರ ದುಪ್ಪಟ್ಟಾಗಿದೆ. ಇಥಿಯೋಪಿಯಾದ ವಿಮಾನ ಪತನಗೊಂಡು ನಾಲ್ವರು ಭಾರತೀಯರೂ ಸೇರಿದಂತೆ 157 ಜನರು ಸಜೀವ ದಹನವಾಗಿದ್ದರು. ಇದಾದ ಬಳಿಕ, ಜಗತ್ತಿನ ಅನೇಕ ದೇಶಗಳು ಬೋಯಿಂಗ್​ ವಿಮಾನ ಹಾರಾಟವನ್ನು ನಿಲ್ಲಿಸುವಂತೆ ಸೂಚನೆ ನೀಡಿತ್ತು.

ಭಾರತೀಯ ಏರ್​ಲೈನ್ಸ್​ನಿಂದ ಕಾರ್ಯನಿರ್ವಹಿಸಲ್ಪಡುವ ಎಲ್ಲ ಬೋಯಿಂಗ್ 737 ಮ್ಯಾಕ್ಸ್​-8 ಮಾದರಿಯ ವಿಮಾನಗಳ ಹಾರಾಟವನ್ನು ಗುರುವಾರದಿಂದ ಸ್ಥಗಿತಗೊಳಿಸಿವೆ. ಇದರ ಬೆನ್ನಲ್ಲೇ ಸ್ಪೈಸ್​ ಜೆಟ್​, ಇಂಡಿಗೋ ಮತ್ತು ಜೆಟ್​​ ಏರ್​ವೇಸ್​​​​ ವಿಮಾನಗಳು ಕೂಡ ಹಾರಾಟ ನಿಲ್ಲಿಸಿವೆ. ನಾಗರಿಕ ವಿಮಾನಯಾನ ಪ್ರಾಧಿಕಾರದ ಆದೇಶದ ಮೇರೆಗೆ ಸ್ಪೈಸ್​ ಜೆಟ್​ ಬೋಯಿಂಗ್​ 35 ವಿಮಾನಗಳು ಹಾರಾಟ ಸ್ಥಗಿತಗೊಳಿಸಿದೆ. ಇದರ ಜೊತೆಗೆ ಏರ್​ಲೈನ್ಸ್​ ಕೂಡ ತನ್ನ 14 ವಿಮಾನಗಳನ್ನು ಬಂದ್​ ಮಾಡಿದೆ. ತೀವ್ರವಾದ ಆರ್ಥಿಕ ಹೊರೆ ಎದುರಿಸುತ್ತಿರುವ ಜೆಟ್​ ಏರ್​ವೇಸ್​ 32 ವಿಮಾನಗಳ ಹಾರಾಟ ಸೇವೆ ಲಭ್ಯವಾಗುತ್ತಿಲ್ಲ. ಬಾಡಿಗೆ ಪಾವತಿಗೆ ವಿಫಲವಾದ ಕಾರಣ ವಾರಸುದಾರ ಸಂಸ್ಥೆ 4 ವಿಮಾನಗಳನ್ನು ಹಿಂಪಡೆದುಕೊಂಡಿವೆ. ಈ ಎಲ್ಲ ಬೆಳವಣಿಗೆಗಳು ಟಿಕೆಟ್​ ದರದ ಮೇಲೆ ನೇರ ಪರಿಣಾಮ ಬೀರಿದೆ.

ಸ್ಪೈಸ್ ಜೆಟ್​ಗೆ ಭಾರೀ ಸಂಕಟ, ಬಹುತೇಕ ವಿಮಾನಗಳು ಸ್ಥಗಿತ; ಟಿಕೆಟ್ ದರ ಏರಿಕೆ ಸಾಧ್ಯತೆ

ಇದರ ಪರಿಣಾಮ ವಿಮಾನ ಪ್ರಯಾಣ ದರ ಏರಿಕೆಯಾಗಿದ್ದು, ಪ್ರಯಾಣಿಕರು ಪರದಾಡುತ್ತಿದ್ದಾರೆ. ಬೋಯಿಂಗ್​ 737 ಮ್ಯಾಕ್ಸ್​​​ ವಿಮಾನ ಹಾರಾಟ ರದ್ದುಗೊಂಡಿರುವ ಕಾರಣ ಬೇರೆ ವಿಮಾನಗಳಲ್ಲಿ ಸೀಟು ಕಾಯ್ದಿರಿಸಲು ಮುಂದಾಗಿದ್ದಾರೆ. ಪ್ರಯಾಣಿಕರು ಕೊನೆ ಕ್ಷಣದಲ್ಲಿ ಸೀಟು ಬುಕಿಂಗ್​ ಮಾಡುತ್ತಿದ್ದಾರೆ. ಆದರೆ ಕೊನೆಯ ಕ್ಷಣದಲ್ಲಿ ಪ್ರಯಾಣ ದರ ಶೇ.100 ಕ್ಕಿಂತ ಹೆಚ್ಚಾಗಿದ್ದು, ಪ್ರಯಾಣಿಕರಿಗೆ ತಲೆ ನೋವಾಗಿ ಪರಿಣಮಿಸಿದೆ.

ದೆಹಲಿ- ಮುಂಬೈ, ಮುಂಬೈ-ಚೆನ್ನೈ, ಮುಂಬೈ- ಕೋಲ್ಕತ್ತಾ ಮತ್ತು ಮುಂಬೈ- ಬೆಂಗಳೂರು ಮಾರ್ಗಗಳ ವಿಮಾನದಲ್ಲಿ ಪ್ರಯಾಣ ದರ ದುಪ್ಪಟ್ಟು ಹೆಚ್ಚಳವಾಗಿದೆ ಎಂದು ವಿಮಾನಯಾನ ವಲಯದ ಮೂಲಗಳು ತಿಳಿಸಿವೆ. ಮುಂಬೈ-ಚೆನ್ನೈ ಪ್ರಯಾಣದರ 26, 073 ರೂ. ದಾಟಿದೆ. ಕಳೆದ ವರ್ಷಇದೇ ಸಮಯದಲ್ಲಿ 5,359 ರೂ. ಇತ್ತು. ಹೋಳಿ ಹಬ್ಬ ಮತ್ತು ಶಾಲೆಗಳಿಗೆ ಬೇಸಿಗೆ ರಜೆ ಆರಂಭವಾಗಿರುವ ಕಾರಣ ಪ್ರವಾಸಿಗರ ದಟ್ಟಣೆ ಹೆಚ್ಚಳವಾಗಿದೆ. ಇದರ ಲಾಭ ಪಡೆಯಲು ವಿಮಾನಯಾನ ಸಂಸ್ಥೆಗಳು ದರ ಏರಿಕೆ ಮಾಡಿವೆ.
First published:March 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...