ಚಿದಂಬರಂ ಆಸ್ಪತ್ರೆಗೆ ಸೇರುವ ಅವಶ್ಯಕತೆ ಇಲ್ಲ; ಮಾಸ್ಕ್​, ಪರಿಶುದ್ದ ನೀರು ನೀಡಿ: ಕೋರ್ಟ್​ ಸೂಚನೆ

ದೆಹಲಿಯಲ್ಲಿ ವಾಯುಮಾಲಿನ್ಯ ಅಪಾಯ ಮಟ್ಟ ಮೀರಿರುವ ಹಿನ್ನೆಲೆ, ಅವರ ಆರೋಗ್ಯದ ದೃಷ್ಟಿಯಿಂದ ಮಾಸ್ಕ್​ ನೀಡಬೇಕು. ಹಾಗೂ ಪರಿಶುದ್ಧ ನೀರನ್ನು ಕುಡಿಯಲು ಬೇಕು ಎಂದು ಸೂಚನೆ ನೀಡಿದೆ.

Seema.R | news18-kannada
Updated:November 1, 2019, 5:23 PM IST
ಚಿದಂಬರಂ ಆಸ್ಪತ್ರೆಗೆ ಸೇರುವ ಅವಶ್ಯಕತೆ ಇಲ್ಲ; ಮಾಸ್ಕ್​, ಪರಿಶುದ್ದ ನೀರು ನೀಡಿ: ಕೋರ್ಟ್​ ಸೂಚನೆ
ಪಿ. ಚಿದಂಬರಂ
  • Share this:
ನವದೆಹಲಿ (ನ.1) ಅನಾರೋಗ್ಯದಿಂದ ಬಳಲುತ್ತಿರುವ ಕಾಂಗ್ರೆಸ್​ ಹಿರಿಯ ನಾಯಕ ಪಿ ಚಿದಂಬರಂ ಅವರು ಏಮ್ಸ್​ಗೆ ದಾಖಲಾಗುವ ಅವಶ್ಯಕತೆ ಇಲ್ಲ ಎಂದು ವೈದ್ಯರ ಸಮಿತಿ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದೆ. ಈ ಹಿನ್ನೆಲೆ ಚಿದಂಬರಂ ಅವರ ಜಾಮೀನು ಅರ್ಜಿ ತಳ್ಳಿ ಹಾಕಿದ್ದು, ಅವರ ತಿಹಾರ್​ ಜೈಲ್​ನ ಸೆರೆವಾಸ ಮುಂದುವರೆಯಲಿದೆ.

ಅನಾರೋಗ್ಯದ ಹಿನ್ನೆಲೆ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ಹಿನ್ನೆಲೆ ಏಮ್ಸ್​ ವೈದ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಿ ಅವರ ಆರೋಗ್ಯ ಕುರಿತು ಇಂದು ಮಧ್ಯಾಹ್ನದೊಳಗೆ ವರದಿ ನೀಡುವಂತೆ ಸೂಚನೆ ನೀಡಿತು.

ಇನ್ನು ದೆಹಲಿಯಲ್ಲಿ ವಾಯುಮಾಲಿನ್ಯ ಅಪಾಯ ಮಟ್ಟ ಮೀರಿರುವ ಹಿನ್ನೆಲೆ, ಅವರ ಆರೋಗ್ಯದ ದೃಷ್ಟಿಯಿಂದ ಮಾಸ್ಕ್​ ನೀಡಬೇಕು. ಹಾಗೂ ಪರಿಶುದ್ಧ ನೀರನ್ನು ಕುಡಿಯಲು ಬೇಕು ಎಂದು ಸೂಚನೆ ನೀಡಿದೆ.

ಇದನ್ನು ಓದಿ: ದೆಹಲಿಯಲ್ಲಿ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ ಮಾಲಿನ್ಯ ನಿಯಂತ್ರಣ ಮಂಡಳಿ

ಹೊಟ್ಟೆ ನೋವಿನಿಂದ ಬಳಲುತ್ತಿರುವ ಅವರು ಕಳೆದ ಸೋಮವಾರ ಏಮ್ಸ್​ಗೆ ದಾಖಲಾಗಿದ್ದರು. ತಮ್ಮ ಆರೋಗ್ಯ ಸುಧಾರಿಸಿದ ಹಿನ್ನೆಲೆ ಹೈದ್ರಾಬಾದ್​​ನ ತಮ್ಮ ವೈದ್ಯರ ಬಳಿ ತಪಾಸಣೆಗೆ ಅನುಮತಿ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಏಮ್ಸ್​ ಸಮಿತಿಯಲ್ಲಿ ಹೈದ್ರಾಬಾದ್​ ಮೂಲದ ಗ್ಯಾಸ್ಟ್ರೋಲಾಜಿಸ್ಟ್​ ನಾಗೇಶ್ವರ ರೆಡ್ಡಿ ಅವರು ಇರಬೇಕು.  ಈ ಸಮಿತಿ ಸದಸ್ಯರು ಮಾಜಿ ಸಚಿವರ ಆರೋಗ್ಯ ಕುರಿತು ಅಭಿಪ್ರಾಯ ತಿಳಿಸಬೇಕು ಎಂದು ಸೂಚನೆ ನೀಡಿದ್ದರು.

First published: November 1, 2019, 5:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading