ಸಹೋದ್ಯೋಗಿ ಮೇಲೆ ಆತ್ಯಾಚಾರವೆಸಗಿದ ಆರೋಪ; AIIMS ವೈದ್ಯನ ವಿರುದ್ಧ ಪ್ರಕರಣ ದಾಖಲು

ಬರ್ತ್ ಡೇ ಮುಗಿದ ಬಳಿಕ ವೈದ್ಯೆಯನ್ನು ರೂಮಿಗೆ ಬಿಡುವ ನೆಪದಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಡಾ.ಹೌಸ್ ಖಾಸ್ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ: ಏಮ್ಸ್ ( All India Insitute of Medical Sciences (AIIMS)) ಹಿರಿಯ ವೈದ್ಯರ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದೆ. ಹಿರಿಯ ವೈದ್ಯ (AIIMS Delhi doctor) ಏಮ್ಸ್ ಕ್ಯಾಂಪಸ್ ನಲ್ಲಿಯೇ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಕಿರಿಯ ವೈದ್ಯೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಡಾ.ಹೌಸ್ ಖಾಸ್ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಕಿರಿಯ ವೈದ್ಯೆಯನ್ನು ಬರ್ತ್ ಡೇ ಪಾರ್ಟಿ(birthday Party)ಗೆ ಕರೆದು ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  ಬರ್ತ್​​ ಡೇ ಪಾರ್ಟಿಗೆ ಕರೆದು ರೇಪ್​

  ಸೆಪ್ಟೆಂಬರ್ 26ರಂದು ವೈದ್ಯನ ಮನೆಯಲ್ಲಿ ಹುಟ್ಟುಹಬ್ಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂತ್ರಸ್ತೆ ಸಹ ಏಮ್ಸ್ ನಲ್ಲಿಯೇ ಕೆಲಸ ಮಾಡುತ್ತಿದ್ದರಿಂದ ಬರ್ತ್ ಡೇ ಪಾರ್ಟಿಗೆ ಆಹ್ವಾನಿಸಲಾಗಿತ್ತು. ಸಂತ್ರಸ್ತೆಯೂ ಸೇರಿದಂತೆ ಬರ್ತ್ ಡೇ ಪಾರ್ಟಿಯಲ್ಲಿ ಹಲವರು ಆಗಮಿಸಿದ್ದರು. ಬರ್ತ್ ಡೇ ಮುಗಿದ ಬಳಿಕ ವೈದ್ಯೆಯನ್ನು ರೂಮಿಗೆ ಬಿಡುವ ನೆಪದಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗಿದೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376 ಮತ್ತು 377ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ಟೋಬರ್ 11ರಂದು ಹೌಜ್ ಖಾಸ್ ಪೊಲೀಸ್ ಠಾಣೆಗೆ ಆಗಮಿಸಿದ ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ಎಫ್‍ಐಆರ್ ದಾಖಲಿಸಿಕೊಂಡು ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ. ಇತ್ತ ಸಂತ್ರಸ್ತೆ ನ್ಯಾಯಲಯದ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ.

  ಯುಪಿ ಲಲಿತಪುರ ರೇಪ್ ಕೇಸ್, ಏಳು ಜನರ ಬಂಧನ 

  ಉತ್ತರ ಪ್ರದೇಶ ಲಲಲಿತಪುರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ. 17 ವರ್ಷದ ವಿದ್ಯಾರ್ಥಿನಿ ತಂದೆ, ಬಹುಜನ ಮತ್ತು ಸಮಾಜವಾದಿ ಪಕ್ಷದ ಮುಖಂಡರು ಸೇರಿದಂತೆ 28 ಜನರ ವಿರುದ್ಧ ಆತ್ಯಾಚಾರದ ಆರೋಪ ಮಾಡಿದ್ದಳು. ಸದ್ಯ ವಿದ್ಯಾರ್ಥಿನಿಯ ತಂದೆ, ಎಸ್‍ಪಿ, ಬಿಎಸ್‍ಪಿ ಮುಖಂಡ ಸೇರಿದಂತೆ ಏಳು ಜನರನ್ನು ಬಂಧಿಸಲಾಗಿದೆ. 11ನೇ ಕ್ಲಾಸ್ ವಿದ್ಯಾರ್ಥಿನಿ ತಾಯಿಯ ಜೊತೆ ಬಂದು ದೂರು ದಾಖಲಿಸಿದ್ದಳು. ಈ ವೇಳೆ ಸಂತ್ರಸ್ತೆ ತಾಯಿ, ಪತಿ ತಮ್ಮ 10 ವರ್ಷದ ಮಗನಿಗೂ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದರು.

  ಇದನ್ನೂ ಓದಿ: Facebook Cheating: ಫೇಸ್​ಬುಕ್​ನಲ್ಲಿ ನಗ್ನ ಕರೆ ಮಾಡಿದ ಮಾಯಾಂಗನೆ, ವಿಡಿಯೋ ಕಾಲ್​ ರೆಕಾರ್ಡ್ ಮಾಡಿ ಬ್ಲ್ಯಾಕ್​ಮೇಲ್

  ಮಗಳು ಆರನೇ ತರಗತಿಯಲ್ಲಿದ್ದಾಗಲೇ ಆಕೆಗೆ ಸೆಕ್ಸ್ ವಿಡಿಯೋಗಳನ್ನು ನೋಡುವಂತೆ ಬಲವಂತ ಮಾಡುತ್ತಿದ್ದನು. ಒಮ್ಮೆ ಹೊಸ ಬಟ್ಟೆ ಕೊಡಿಸಿ, ಬೈಕ್ ಕಲಿಸುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಗಳ ಮೇಲೆ ಅತ್ಯಾಚಾರ ಎಸಗಿದ್ದನು. ತದನಂತರ ನಿರಂತರವಾಗಿ ಮಗಳನ್ನ ಅತ್ಯಾಚಾರಗೈದಿದ್ದನು.

  10 ದಿನದಲ್ಲಿ ಕಾಮುಕನಿಗೆ ಶಿಕ್ಷೆ 

  ಜೈಪುರನ ಪೋಕ್ಸೋ ಕೋರ್ಟ್-3-ಮೆಟ್ರೋ-1 10 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ತೀರ್ಪನ್ನು 10 ದಿನದಲ್ಲಿ ಪ್ರಕಟಿಸಿತ್ತು. ನ್ಯಾಯಾಲಯ ಆಪರಾಧಿಗೆ 20 ವರ್ಷ ಜೈಲು ಶಿಕ್ಷೆಯ ತೀರ್ಪು ನೀಡಿದೆ. ರಾಜಸ್ಥಾನದ ನ್ಯಾಯಾಲಯದ ಇತಿಹಾಸದಲ್ಲಿ  ಪ್ರಕರಣದ ವಿಚಾರಣೆ ನಡೆಸಿ 10 ದಿನದಲ್ಲಿ ತೀರ್ಪು ನೀಡಿದ ಮೊದಲ ಕೇಸ್ ಇದಾಗಿದೆ. ಸೆಪ್ಟೆಂಬರ್ 26ರಂದು ಕೋಟಖ್ವಾದಾ ವ್ಯಾಪ್ತಿಯಲ್ಲಿ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಅಷ್ಟೇ ವೇಗವಾಗಿ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ 5 ದಿನ ವಿಚಾರಣೆ ನಡೆದಿತ್ತು. ನ್ಯಾಯಾಲಯ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ಮತ್ತು 2 ಲಕ್ಷ ರೂ. ದಂಡ ವಿಧಿಸಿದೆ. ನ್ಯಾಯಾಲಯ ತೀರ್ಪು ಪ್ರಕಟಿಸುತ್ತಿದ್ದಾಗ ಅಪರಾಧಿ ತಲೆ ತಗ್ಗಿಸಿಯೇ ನಿಂತಿದ್ದನು.

  ವರದಿ: ಮೊಹ್ಮದ್​ ರಫೀಕ್​ ಕೆ 
  Published by:Kavya V
  First published: