AIADMK Tussle: ಎಐಎಡಿಎಂಕೆ ಪಕ್ಷದ ನಾಯಕತ್ವ ಸ್ಥಾನಕ್ಕೆ ಭಾರೀ ಕಿತ್ತಾಟ; ತಮಿಳುನಾಡಲ್ಲಿ ಏನಾಗುತ್ತಿದೆ?

Tamil Nadu Politics: ಸೋಮವಾರದ ಪ್ರಸ್ತಾವಿತ ಸಭೆಯಲ್ಲಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಸಂಘಟನೆಯ ಏಕೈಕ ನಾಯಕರನ್ನಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಹೀಗಾಗಿ ಪಳನಿಸ್ವಾಮಿ ಬೆಂಬಲಿಗರಿಗೆ ಈ ಸಭೆಯು ಮಹತ್ವ ಪಡೆದಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಚೆನ್ನೈ: AIADMK ಪಕ್ಷದ ಭವಿಷ್ಯದ ನಾಯಕತ್ವ ರಚನೆಯನ್ನು ನಿರ್ಧರಿಸಲು ಎಐಎಡಿಎಂಕೆಯ ನಿರ್ಣಾಯಕ ಸಾಮಾನ್ಯ ಮಂಡಳಿ ಸಭೆ ನಡೆಸಲು ಮದ್ರಾಸ್ ಹೈಕೋರ್ಟ್ (Madras High Court ) ಸೋಮವಾರ ಅನುಮತಿ ನೀಡಿದೆ. ಇಪಿಎಸ್ ಎಂದೂ ಕರೆಯಲ್ಪಡುವ ಎಡಪ್ಪಾಡಿ ಕೆ ಪಳನಿಸ್ವಾಮಿ (Edappady K Palaniswami) ನೇತೃತ್ವದ ಬಣವು ಕರೆದಿರುವ ಸಭೆಯನ್ನು ಸ್ಥಗಿತಗೊಳಿಸುವಂತೆ ಎಐಎಡಿಎಂಕೆಯ ಉನ್ನತ ನಾಯಕ ಓ ಪನ್ನೀರಸೆಲ್ವಂ (O Panneerselvam) ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿ ಅವರ ಮನವಿಯನ್ನು ತಳ್ಳಿಹಾಕಿದೆ. ಈ ಮೂಲಕ ತಮಿಳುನಾಡು ರಾಜಕೀಯದ  (Tamil Nadu Politics) ಎಐಎಡಿಎಂಕೆ  ಪಕ್ಷದ ನಾಯಕತ್ವದಲ್ಲಿ ನಿರ್ಣಾಯಕ ಬದಲಾವಣೆಗಳು (AIADMK Tussle) ಆಗುವ ಲಕ್ಷಣಗಳು ಗೋಚರಿಸುತ್ತಿವೆ.

    ಸೋಮವಾರದ ಪ್ರಸ್ತಾವಿತ ಸಭೆಯಲ್ಲಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಸಂಘಟನೆಯ ಏಕೈಕ ನಾಯಕರನ್ನಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಹೀಗಾಗಿ ಪಳನಿಸ್ವಾಮಿ ಬೆಂಬಲಿಗರಿಗೆ ಈ ಸಭೆಯು ಮಹತ್ವ ಪಡೆದಿದೆ.

    ಉಭಯ ನಾಯಕತ್ವದ ಮಾದರಿ ರದ್ದು?
    2500 ಕ್ಕೂ ಹೆಚ್ಚು ಸದಸ್ಯರ ಜನರಲ್ ಕೌನ್ಸಿಲ್ ಹೆಚ್ಚಾಗಿ ಪಳನಿಸ್ವಾಮಿ ಪರ ಸದಸ್ಯರನ್ನು ಹೊಂದಿದ್ದು, ಪಳನಿಸ್ವಾಮಿ ಅವರನ್ನು ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಮೇಲ್ದರ್ಜೆಗೆ ಏರಿಸುವ ನಿರೀಕ್ಷೆಯಿದೆ. ಈ ಸಭೆಯ ಮೂಲಕ ಪ್ರಸ್ತುತ ಚಾಲ್ತಿಯಲ್ಲಿರುವ ಉಭಯ ನಾಯಕತ್ವದ ಮಾದರಿಯನ್ನು ರದ್ದುಗೊಳಿಸುವ ಸಂಭವವಿದೆ.

    ಪನ್ನೀರಸೆಲ್ವಂ ಬಣದ ಪ್ರತಿಪಾದನೆ ಏನು?
    ಆದರೆ ಪಳನಿಸ್ವಾಮಿ ಪರ ಸದಸ್ಯರು ಕರೆದಿರುವ ಸಭೆ ಕಾನೂನುಬಾಹಿರ ಎಂದು ಪನ್ನೀರಸೆಲ್ವಂ ಬಣ ಪ್ರತಿಪಾದಿಸಿದೆ. ಕಾನೂನಿನ ಪ್ರಕಾರ ಸಂಯೋಜಕರು ಮತ್ತು ಜಂಟಿ ಸಂಯೋಜಕರು ಮಾತ್ರ ಸಭೆ ಕರೆಯಬಹುದು ಎಂದು ಪನ್ನೀರಸೆಲ್ವಂ ಬಣ ವಾದಿಸಿದೆ. ಹೊಸದಾಗಿ ನೇಮಕಗೊಂಡ ಪ್ರೆಸಿಡಿಯಂ ಅಧ್ಯಕ್ಷರು ಕರೆದಿರುವ ಈ ಸಭೆಯು ತಾಂತ್ರಿಕವಾಗಿ ಕಾನೂನುಬಾಹಿರವಾಗಿದೆ. ಆದ್ದರಿಂದ ಅಸಮರ್ಥನೀಯವಾಗಿದೆ ಎಂದು ಪನ್ನೀರಸೆಲ್ವಂ ಬಣ ಹೇಳಿದೆ.

    ಉಭಯ ನಾಯಕತ್ವವು ಇನ್ನು ಮುಂದೆ ಜಾರಿಯಲ್ಲಿ ಎನ್ನುತ್ತದೆ  ಪನ್ನೀರಸೆಲ್ವಂ ಬಣ
    ಜೂನ್ 23 ರಂದು ನಡೆದ ಹಿಂದಿನ ಸಭೆಯು ಉಭಯ ನಾಯಕರ ಆಯ್ಕೆಯನ್ನು ಅನುಮೋದಿಸದ ಕಾರಣ ಉಭಯ ನಾಯಕತ್ವವು ಇನ್ನು ಮುಂದೆ ಜಾರಿಯಲ್ಲಿಲ್ಲ ಎಂದು ತಂಡ ಪನ್ನೀರಸೆಲ್ವಂ ಬಣ ವಾದಿಸಿದೆ.

    ಇದನ್ನೂ ಓದಿ: Goa Politis: ಗೋವಾ ಕಾಂಗ್ರೆಸ್​​ಗೆ ಶಾಕ್? 7 ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರಂತೆ!

    ಆದ್ದರಿಂದ ಪ್ರೆಸಿಡಿಯಂ ಅಧ್ಯಕ್ಷರು ಸಭೆಯನ್ನು ಕರೆಯುತ್ತಾರೆ. ಪ್ರಧಾನ ಕಚೇರಿಯ ಪದಾಧಿಕಾರಿಗಳಿಗೆ ಆಹ್ವಾನಗಳನ್ನು ಕಳುಹಿಸುವುದು ಕಾನೂನುಬದ್ಧವಾಗಿದೆ  ಎಂದು ಪನ್ನೀರಸೆಲ್ವಂ ಬೆಂಬಲಿಗರು ಬಿಂಬಿಸುತ್ತಾರೆ. ಇದೇ ಮಾದರಿಯನ್ನು ಅಳವಡಿಸಿಕೊಂಡು 2017 ರಲ್ಲಿ ಪನ್ನೀರಸೆಲ್ವಂ   ಅವರನ್ನು ಪಕ್ಷದ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಜಯಲಲಿತಾ ಅವರು ಪ್ರಧಾನ ಆರೋಪಿಯಾಗಿದ್ದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲಿಗೆ ಹೋಗುವ ಮುನ್ನ ಪಳನೀಸ್ವಾಮಿ ಅವರನ್ನು ಮುಖ್ಯಮಂತ್ರಿ ಎಂದು ಘೋಷಿಸಿದ್ದರು.

    ಪಕ್ಷದ ಸರ್ವೋಚ್ಚ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಈ ಸಭೆಗಿದೆ
    ನ್ಯಾಯಮೂರ್ತಿ ಕೃಷ್ಣನ್ ರಾಮಸ್ವಾಮಿ ಅವರು ಸೋಮವಾರ ಬೆಳಿಗ್ಗೆ ತೀರ್ಪು ನೀಡಿದ್ದು, ತಮಿಳುನಾಡಿನ ಪ್ರಮುಖ ವಿರೋಧ ಪಕ್ಷದ ಸರ್ವೋಚ್ಚ ನಿರ್ಧಾರ ತೆಗೆದುಕೊಳ್ಳುವ ಜಿಸಿ ಸಭೆಯನ್ನು ನಡೆಸಲು ಇಪಿಎಸ್ ಬಣಕ್ಕೆ ಅಥವಾ ಪಳನಿಸ್ವಾಮಿ ಅವರ ಬೆಂಬಲಿಗರ ಗುಂಪಿಗೆ ಅನುಮತಿ ನೀಡಿದೆ.

    ಇದನ್ನೂ ಓದಿ: Lanka Protest: ಶ್ರೀಲಂಕಾ ಅಧ್ಯಕ್ಷರ ನಿವಾಸಕ್ಕೆ ನುಗ್ಗಿ ಲಕ್ಷಾಂತರ ರೂಪಾಯಿ ದೋಚಿದ ಪ್ರತಿಭಟನಾಕಾರರು!

    ಒಪಿಎಸ್ ಅಥವಾ ಪನ್ನೀರಸೆಲ್ವಂ ಮತ್ತು ಇಪಿಎಸ್ ಅಥವಾ ಪಳನಿಸ್ವಾಮಿ ಪರ ಹಿರಿಯ ವಕೀಲರ ಸುದೀರ್ಘ ವಾದ ಆಲಿಸಿದ ನ್ಯಾಯಾಧೀಶರು ಜುಲೈ 8ರಂದು ಆದೇಶವನ್ನು ಇಂದಿಗೆ ಕಾಯ್ದಿರಿಸಿದ್ದರು.
    Published by:guruganesh bhat
    First published: