AIADMK Tussle: ಎಐಎಡಿಎಂಕೆ ಕಚ್ಚಾಟ; ಪನ್ನೀರಸೆಲ್ವಂ ಬಣಕ್ಕೆ ಭಾರೀ ಗೆಲುವು ನೀಡಿದ ಹೈಕೋರ್ಟ್ ತೀರ್ಪು​

ಹಿಂದಿನ ಸಭೆಯಲ್ಲಿ ದ್ವಿ ನಾಯಕತ್ವ ರಚನೆಯನ್ನು ತಡೆಹಿಡಿದ ನಿರ್ಣಯಗಳಿಗೆ ಮದ್ರಾಸ್ ಹೈಕೋರ್ಟ್ ತಡೆ ನೀಡಿದೆ. ಎಐಎಡಿಎಂಕೆ ಪಕ್ಷದ ಆಂತರಿಕ ಕಚ್ಚಾಟದ ಕುರಿತು ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ (Tamil Nadu Politics) ಸಂಚಲನ ಹುಟ್ಟಿಸುವ ಸುದ್ದಿಯೊಂದು ಹೊರಬಿದ್ದಿದೆ. ಎಐಎಡಿಎಂಕೆ ಪಕ್ಷದ ಆಂತರಿಕ ಕಚ್ಚಾಟದ ಕುರಿತು ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ.  ಎಐಎಡಿಎಂಕೆಗೆ (AIADMK) ಹೊಸ ಜನರಲ್ ಕೌನ್ಸಿಲ್ ಸಭೆಯನ್ನು ನಡೆಸಲು ಮದ್ರಾಸ್ ಹೈಕೋರ್ಟ್ (Madras High Court) ಆದೇಶಿಸಿದೆ. ಹಿಂದಿನ ಸಭೆಯಲ್ಲಿ ದ್ವಿ ನಾಯಕತ್ವ ರಚನೆಯನ್ನು ತಡೆಹಿಡಿದ ನಿರ್ಣಯಗಳಿಗೆ ಮದ್ರಾಸ್ ಹೈಕೋರ್ಟ್ ತಡೆ ನೀಡಿದೆ. ಮದ್ರಾಸ್ ಹೈಕೋರ್ಟ್ ಇಂದು (ಆಗಸ್ಟ್ 17) ನೀಡಿರುವ ಆದೇಶವು ಓ ಪನ್ನೀರಸೆಲ್ವಂ (O Panneerselvam) ಬಣಕ್ಕೆ ದೊಡ್ಡ ಗೆಲುವು ನೀಡಿದೆ. ಆದರೆ ಇ.ಪಳನಿಸ್ವಾಮಿ (Edappadi Palaniswami) ಬಣಕ್ಕೆ ಭಾರಿ ಹಿನ್ನೆಡೆ ಉಂಟಾಗಿದೆ ಎಂದೇ ವ್ಯಾಖ್ಯಾನ ಕೇಳಿಬರುತ್ತಿದೆ.

    ಈ ಮುನ್ನ ಎಐಎಡಿಎಂಕೆ ಪಕ್ಷ ಜೂನ್ 23 ರಂದು ನಡೆದ ಜನರಲ್ ಕೌನ್ಸಿಲ್ ಸಭೆಯಲ್ಲಿ, ಎಐಎಡಿಎಂಕೆ ಓ ಪನ್ನೀರಸೆಲ್ವಂ ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು. ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಎಐಎಡಿಎಂಕೆಯ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿತ್ತು. ಆದರೆ ಮದ್ರಾಸ್ ಹೈಕೋರ್ಟ್ ಈಗ ಈ ನಿರ್ಧಾರಗಳನ್ನು ತಡೆಹಿಡಿದಿದೆ. ಅಲ್ಲದೇ ಹೊಸ ಸಾಮಾನ್ಯ ಮಂಡಳಿ ಸಭೆ ನಡೆಯುವವರೆಗೆ ಯಥಾಸ್ಥಿತಿಗೆ ಆದೇಶಿಸಿದೆ.

    ಜನರಲ್ ಕೌನ್ಸಿಲ್​ನಲ್ಲಿ ಏನಾಗಿತ್ತು?
    ಎಐಎಡಿಎಂಕೆ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ಓ ಪನ್ನೀರಸೆಲ್ವಂ  ಅವರನ್ನು ವಜಾಗೊಳಿಸಲಾಗಿತ್ತು. ಖಜಾಂಚಿ ಸ್ಥಾನದಿಂದ ಹೊರಹಾಕಲಾಗಿತ್ತು. ಜುಲೈ 11 ರಂದು ನಡೆದ ಎಐಎಡಿಎಂಕೆ ಪಕ್ಷದ ಜನರಲ್ ಕೌನ್ಸಿಲ್ ಸಭೆಯಲ್ಲಿ ಪಳನಿಸ್ವಾಮಿ ಬಣವು ಪನ್ನೀರಸೆಲ್ವಂ ಬಣವನ್ನು ಪಕ್ಷದಿಂದ ಸಂಪೂರ್ಣ ಹೊರಹಾಕಿತ್ತು. ಜನರಲ್ ಕೌನ್ಸಿಲ್ ಸಭೆಯಲ್ಲಿ  ಪನ್ನೀರಸೆಲ್ವಂ ಅವರನ್ನು ಪಕ್ಷದಿಂದ ಉಚ್ಚಾಟಿಸಲು ಕ್ರಮ ಕೈಗೊಳ್ಳುವಂತೆ ಜನರಲ್ ಕೌನ್ಸಿಲ್ ಸದಸ್ಯರು ಒತ್ತಾಯಿಸಿದ್ದರು.

    ಇದನ್ನೂ ಓದಿ: M K Stalin: ದೆಹಲಿಗೆ ಕೈಕಟ್ಟಿ ನಿಲ್ಲಲು ಹೋಗಲ್ಲ, ಬಿಜೆಪಿ ಜೊತೆ ಹೊಂದಾಣಿಕೆಯೇ ಇಲ್ಲ: ಎಂ ಕೆ ಸ್ಟಾಲಿನ್

    ಏಕೈಕ ಸರ್ವೋಚ್ಚ ನಾಯಕ ಪಳನಿಸ್ವಾಮಿ
    2500-ಪ್ಲಸ್ ಪ್ರಬಲ ಜನರಲ್ ಕೌನ್ಸಿಲ್ ಪಕ್ಷವನ್ನು ಏಕೈಕ ಸರ್ವೋಚ್ಚ ನಾಯಕನಾಗಿ ಮುನ್ನಡೆಸಲು ಪಳನಿಸ್ವಾಮಿ ಅವರಿಗೆ ಅಧಿಕಾರ ನೀಡಿತ್ತು. ಜೊತೆಗೆ ಪ್ರತಿಸ್ಪರ್ಧಿ ನಾಯಕ ಓ ಪನ್ನೀರಸೆಲ್ವಂ ಅಥವಾ ಒಪಿಎಸ್ ಬಣವನ್ನು "ಪಕ್ಷ ವಿರೋಧಿ" ಚಟುವಟಿಕೆಗಳಿಗಾಗಿ ಹೊರಹಾಕಲಾಗಿತ್ತು.

    ಇದನ್ನೂ ಓದಿ:Sabarimala Temple: ಭಕ್ತಾದಿಗಳೇ ಗಮನಿಸಿ, ಶಬರಿಮಲೆ ಅಯ್ಯಪ್ಪ ದೇವಸ್ಥಾನ ದರ್ಶನಕ್ಕೆ ಇಂದಿನಿಂದ ಅವಕಾಶ

    ಎಐಎಡಿಎಂಕೆ ಜನರಲ್ ಕೌನ್ಸಿಲ್ ಕ್ರಮವಾಗಿ ಓ ಪನ್ನೀರಸೆಲ್ವಂ ಮತ್ತು ಪಳನಿಸ್ವಾಮಿ ಹೊಂದಿದ್ದ ಸಂಯೋಜಕ ಮತ್ತು ಜಂಟಿ ಸಂಯೋಜಕ ಹುದ್ದೆಗಳನ್ನು ರದ್ದುಗೊಳಿಸುವಾಗ ನಿರ್ಧಾರ ತೆಗೆದುಕೊಳ್ಳುವಲ್ಲಿ ಉಂಟಾದ ತೊಂದರೆ ಮತ್ತು ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನವನ್ನು ಉಲ್ಲೇಖಿಸಿತ್ತು. ಉಭಯ ನಾಯಕತ್ವದಲ್ಲಿ, ಎಐಎಡಿಎಂಕೆ ಸತತ ಮೂರು ಚುನಾವಣಾ ಸೋಲುಗಳನ್ನು ಅನುಭವಿಸಿತ್ತು.

    ಎಐಡಿಎಂಕೆ ಇಬ್ಭಾಗ
    ಜನರಲ್ ಕೌನ್ಸಿಲ್ ಸಭೆಯ ನಂತರ ಪಳನಿಸ್ವಾಮಿ ಮತ್ತು ಪನ್ನೀರಸೆಲ್ವಂ ಬೆಂಬಲಿಗರ ನಡುವೆ ಹೊಡೆದಾಟ, ಮಾರಾಮಾರಿ ನಡೆದಿತ್ತು
    Published by:guruganesh bhat
    First published: