2021ರ ಚುನಾವಣೆಗೂ ಬಿಜೆಪಿಯೊಂದಿಗೆ ಎಐಎಡಿಎಂಕೆ ಮೈತ್ರಿ; ಪನ್ನೀರ್​ಸೆಲ್ವಂ

ಅಮಿತ್​ ಶಾ ಚೆನ್ನೈನ ನೀರಿನ ಸಮಸ್ಯೆಯನ್ನು ನೀಗಿಸಿದರು. ಹಲವು ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಿದರು. ಅವರೊಬ್ಬ ಆಧುನಿಕ ಯುಗದ ಚಾಣಕ್ಯ ಎಂದು ಪನ್ನಿರ್​ ಸೆಲ್ವಂ ಹಾಡಿ ಹೊಗಳಿದರು.

news18-kannada
Updated:November 21, 2020, 6:49 PM IST
2021ರ ಚುನಾವಣೆಗೂ ಬಿಜೆಪಿಯೊಂದಿಗೆ ಎಐಎಡಿಎಂಕೆ ಮೈತ್ರಿ; ಪನ್ನೀರ್​ಸೆಲ್ವಂ
ಕಾರ್ಯಕ್ರಮಕ್ಕೆ ಮುನ್ನ ಎಂಜಿಆರ್​, ಜಯಾಲಲಿತಾ ಫೋಟೋಗೆ ಪುಷ್ಪಮಾಲೆ ಸಲ್ಲಿಸಲಾಯಿತು
  • Share this:
ಚೆನ್ನೈ (ನ.21): . ಮುಂದಿನ‌ ವರ್ಷ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲೂ ಅಖಿಲ ಭಾರತ ದ್ರಾವಿಡ ಮುನ್ನೆತ್ರ ಕಳಗಂ (ಎಐಎಡಿಎಂಕೆ) ಪಕ್ಷದೊಂದಿಗೆ ಭಾರತೀಯ ಜನತಾ ಪಕ್ಷದ ಮೈತ್ರಿ ಮುಂದುವರೆಯಲಿದೆ ಎಂದು ಉಪ ಮುಖ್ಯಮಂತ್ರಿ ಒ ಪನ್ನೀರ್​ಸೆಲ್ವಂ ತಿಳಿಸಿದ್ದಾರೆ. ಲೋಕಸಭಾ ಮೈತ್ರಿ ವಿಧಾನಸಭಾ ಚುನಾವಣೆಯಲ್ಲಿಯೂ ಮುಂದುವರೆಯಲಿದ್ದು 2021ರ ಸಾರ್ವತ್ರಿಕ ಚುನಾವಣೆಯಲ್ಲಿಯೂ ಈ ಮಹಾಬಂಧನದ ಮೂಲಕವೇ ಚುನಾವಣೆ ಎದುರಿಸುವುದಾಗಿ ಅವರು ತಿಳಿಸಿದ್ದಾರೆ. ವಿಧಾನಸಭಾ ಚುನಾವಣಾ ಪೂರ್ವ ಸಿದ್ಧತಾ ಹಿನ್ನಲೆ ಅಮಿತ್​ ಶಾ ಇಂದು ಚೆನ್ನೈಗೆ ಭೇಟಿ ನೀಡಿದ್ದಾರೆ. ಅವರನ್ನು ಸನ್ಮಾನಿಸಿ ಮಾತನಾಡಿದ ಮುಖ್ಯಮಂತ್ರಿ, ಬಿಜೆಪಿ ಜೊತೆಗಿನ ಮೈತ್ರಿಯಿಂದಿಗೆ 10 ವರ್ಷಗಳ ಉತ್ತಮ ಆಡಳಿತ ನೀಡಿದ್ದೇವೆ. 2021ರ ಚುನಾವಣೆಯಲ್ಲಿಯೂ ಗೆಲ್ಲುತ್ತೇವೆ. ತಮಿಳುನಾಡು ಪ್ರಧಾನಿ ನರೇಂದ್ರ ಮೋದಿಯವರಿಗೆ ಸದಾ ಬೆಂಬಲಿಸುತ್ತದೆ ಎಂದರು.ಇದೇ ವೇಳೆ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್​ ಶಾ, ರಾಜ್ಯ ಸರ್ಕಾರ ಕೊರೋನಾ ವೈರಸ್​ ನಿಯಂತ್ರಿಸಿದ ಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ರಾಜ್ಯ ಮಟ್ಟದ ಆಡಳಿತದ ಕೇಂದ್ರದ ರ್ಯಾಕಿಂಗ್​ನಲ್ಲಿ ತಮಿಳುನಾಡು ಸರ್ಕಾರ ಈ ಬಾರಿ ಉತ್ತಮ ಆಡಳಿತ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

ಇಡೀ ವಿಶ್ವವೇ ಕೋವಿಡ್​ ನಿಯಂತ್ರಣಕ್ಕೆ ಹರಸಾಹಸ ನಡೆಸುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿ ಇದರ ಹರಡದಂತೆ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾದರು. ಈ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿತ್ತು. ಇಂತಹ ಸಂದರ್ಭದಲ್ಲಿ ಡಿಸಿಎಂ ಪನ್ನಿರ್​ಸೆಲ್ವಂ ಮತ್ತು ಮುಖ್ಯಮಂತ್ರಿ ಪಳನಿಸ್ವಾಮಿ ನಿರ್ವಹಿಸಿದ ಕಾರ್ಯ ಶ್ಲಾಘನೀಯ. ಸೋಂಕಿನ ವೇಳೆ ಗರ್ಭಿಣಿಯರ ಆರೋಗ್ಯ ಕಾಳಜಿಗೆ ಬೇರಾವುದೇ ರಾಜ್ಯ ತೆಗೆದುಕೊಳ್ಳದಂತಹ ಕ್ರಮ ತೆಗೆದುಕೊಂಡು ಉತ್ತಮ ಕಾರ್ಯನಿರ್ವಹಿಸಿದರು ಎಂದರು.

ತಮಿಳುನಾಡಿಗೆ ಅನ್ಯಾಯವಾಗಿದೆ ಎಂದು ಕೆಲ ಡಿಎಂಕೆ ನಾಯಕರು ಟೀಕಿಸುತ್ತಾರೆ. 10 ವರ್ಷಗಳ ಕಾಲ ಕೇಂದ್ರದಲ್ಲಿ ಡಿಎಂಕೆ ಮತ್ತು ಕಾಂಗ್ರೆಸ್​ ಮೈತ್ರಿ ಮಾಡಿಕೊಂಡಿದ್ದವು. ಈ ಸರ್ಕಾರದ ಅವಧಿಯಲ್ಲಿ ತಮಿಳುನಾಡಿಗೆ ಹೆಚ್ಚಿನ ಸಹಾಯ ದೊರೆತಿದೆಯೇ ಎಂದು ಪ್ರಶ್ನಿಸಿದ ಅವರು ಈ ಕುರಿತು ಚರ್ಚೆಗೂ ತಾವು ಸಿದ್ದ ಎಂದು ಸವಾಲ್​ ಹಾಕಿದರು.

ಅಮಿತ್​ ಶಾ ಚೆನ್ನೈನ ನೀರಿನ ಸಮಸ್ಯೆಯನ್ನು ನೀಗಿಸಿದರು. ಹಲವು ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಿದರು. ಅವರೊಬ್ಬ ಆಧುನಿಕ ಯುಗದ ಚಾಣಕ್ಯ ಎಂದು ಪನ್ನಿರ್​ ಸೆಲ್ವಂ ಹಾಡಿ ಹೊಗಳಿದರು. ಇದೇ ವೇಳೆ ಚೆನ್ನೈನ ಕಲೈವಾನಾರ್​ ಅರಂಗಂನಲ್ಲಿ 380 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ನೀರಿನ ಪೂರೈಕೆ ಸಂಗ್ರಹವನ್ನು ಅವರು ಉದ್ಘಾಟಿಸಿದರು. ಇದರ ಜೊತೆಗೆ ಎರಡನೇ ಹಂತದ 61,843 ಕೋಟಿ ರೂ ವೆಚ್ಚದ 173 ಕಿ.ಮೀ ವಿಸ್ತಾರವಾದ ಮೆಟ್ರೋ ಕಾಮಾಗರಿಗೆ ಚಾಲನೆ ನೀಡಿದರು.
Published by: Seema R
First published: November 21, 2020, 6:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading