• Home
  • »
  • News
  • »
  • national-international
  • »
  • Tamilnadu: ಕಪ್ಪು ಅಂಗಿ ಧರಿಸಿ ವಿಧಾನಸಭೆಗೆ ಬಂದ AIADMK ಶಾಸಕರು; ಡಿಎಂಕೆ ಸರ್ಕಾರದ ವಿರುದ್ಧ ಪ್ರತಿಭಟನೆ!

Tamilnadu: ಕಪ್ಪು ಅಂಗಿ ಧರಿಸಿ ವಿಧಾನಸಭೆಗೆ ಬಂದ AIADMK ಶಾಸಕರು; ಡಿಎಂಕೆ ಸರ್ಕಾರದ ವಿರುದ್ಧ ಪ್ರತಿಭಟನೆ!

ಎಐಎಡಿಎಂಕೆ ಶಾಸಕರು

ಎಐಎಡಿಎಂಕೆ ಶಾಸಕರು

ಎಐಎಡಿಎಂಕೆಯ ಎಲ್ಲ ಶಾಸಕರು ಕಪ್ಪು ಅಂಗಿ ಧರಿಸಿದ್ದು ಕಂಡುಬಂದರೆ, ಓ ಪನ್ನೀರಸೆಲ್ವಂ ಅವರು ಬಿಳಿ ಅಂಗಿ ಧರಿಸಿ ವಿಧಾನಸಭೆಗೆ ಆಗಮಿಸಿದ್ದರು. ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ, ಆಸನ ವ್ಯವಸ್ಥೆ ವಿರುದ್ಧ ಪ್ರತಿಭಟನೆ ನಡೆಸಿದರು. ಅಲ್ಲದೇ ಪನ್ನೀರಸೆಲ್ವಂ ಅವರ ಸ್ಥಾನವನ್ನು ಆರ್‌ಬಿ ಉದಯಕುಮಾರ್‌ಗೆ ನೀಡುವಂತೆ ಸ್ಪೀಕರ್‌ಗೆ ಆಗ್ರಹಿಸಿದರು.

ಮುಂದೆ ಓದಿ ...
  • News18 Kannada
  • Last Updated :
  • Tamil Nadu, India
  • Share this:

ಚೆನ್ನೈ: ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ (Former Chief Minister Edappadi K Palaniswami) ನೇತೃತ್ವದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) (All India Anna Dravida Munnetra Kazhagam), ಪಕ್ಷದ ಶಾಸಕರು ಇಂದು ಕಪ್ಪು ಬಣ್ಣದ​ ಬಟ್ಟೆಯನ್ನು ಧರಿಸಿ ತಮಿಳುನಾಡು ವಿಧಾನಸಭೆಗೆ (Tamil Nadu Assembly) ಆಗಮಿಸಿದ್ದರು. ಕಪ್ಪು ಬಣ್ಣದ ಶರ್ಟ್​​ (Black Shirts) ಧರಿಸುವ ಮೂಲಕ ಡಿಎಂಕೆ ಸರ್ಕಾರ (DMK government) ಮತ್ತು ಸ್ಪೀಕರ್ ಅಪ್ಪಾವು (Speaker Appavu) ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದಾಗಿ ಸೂಚಿಸಿದರು. ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಡಿಎಂಕೆ ಸರ್ಕಾರವನ್ನು ಖಂಡಿಸಿದ ಶಾಸಕರು, ಪಳನಿಸ್ವಾಮಿ ಮತ್ತು ಓ ಪನ್ನೀರಸೆಲ್ವಂ ಅವರಿಗೆ ಆಸನ ವ್ಯವಸ್ಥೆ ಮಾಡಿಕೊಟ್ಟಿದ್ದನ್ನು ಕುರಿತು ಸ್ಪೀಕರ್ ಮುತ್ತುವೇಲಾಯುಧ ಪೆರುಮಾಳ್ ಅಪ್ಪಾವು ಅವರನ್ನು ತರಾಟೆಗೆ ತೆಗೆದುಕೊಂಡರು.


ಪನ್ನೀರಸೆಲ್ವಂ ಆರ್‌ಬಿ ಉದಯಕುಮಾರ್‌ಗೆ ನೀಡುವಂತೆ ಸ್ಪೀಕರ್‌ಗೆ ಆಗ್ರಹ


ಎಐಎಡಿಎಂಕೆಯ ಎಲ್ಲ ಶಾಸಕರು ಕಪ್ಪು ಅಂಗಿ ಧರಿಸಿದ್ದು ಕಂಡುಬಂದರೆ, ಓ ಪನ್ನೀರಸೆಲ್ವಂ ಅವರು ಬಿಳಿ ಅಂಗಿ ಧರಿಸಿ ವಿಧಾನಸಭೆಗೆ ಆಗಮಿಸಿದ್ದರು. ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ, ಆಸನ ವ್ಯವಸ್ಥೆ ವಿರುದ್ಧ ಪ್ರತಿಭಟನೆ ನಡೆಸಿದರು. ಅಲ್ಲದೇ ಪನ್ನೀರಸೆಲ್ವಂ ಅವರ ಸ್ಥಾನವನ್ನು ಆರ್‌ಬಿ ಉದಯಕುಮಾರ್‌ಗೆ ನೀಡುವಂತೆ ಸ್ಪೀಕರ್‌ಗೆ ಆಗ್ರಹಿಸಿದರು.


ನಂತರ ಸದನದಲ್ಲಿ ಸಾಂಪ್ರದಾಯದಂತೆ ಭಾಷಣ ಮಾಡಿದ್ದಕ್ಕಾಗಿ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರಿಗೆ ಧನ್ಯವಾದ ಸಲ್ಲಿಸುವ ಮೂಲಕ ಇಂದಿನ ವಿಧಾನಸಭೆ ಅಧಿವೇಶನ ಆರಂಭವಾಯಿತು.


ಇತ್ತೀಚೆಗಷ್ಟೇ ಅಧಿವೇಶನ ನಡೆಯುತ್ತಿರುವಾಗಲೇ ಹೊರನಡೆದಿದ್ದ ಸ್ಪೀಕರ್


ಇತ್ತೀಚೆಗೆ ತಮಿಳುನಾಡಲ್ಲಿ ವಿಧಾನಸಭಾ ಅಧಿವೇಶನ ನಡೆಯುತ್ತಿರುವಾಗಲೇ ರಾಜ್ಯಪಾಲರು ಸದನದಿಂದ ಹೊರ ನಡೆದಿದ್ದರು. ತಮಿಳುನಾಡಲ್ಲಿ ಚಳಿಗಾಲದ ವಿಧಾನಸಭಾ ಅಧಿವೇಶನ ನಡೆಯುತ್ತಿದೆ. ಆದರೆ ಮೊದಲ ದಿನ ರಾಜ್ಯಪಾಲರು ಆಗಮಿಸಿ, ಭಾಷಣ ಮಾಡುವುದಕ್ಕೆ ಮುನ್ನವೇ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅಡ್ಡಿಪಡಿಸಿದ್ದರು ಎನ್ನಲಾಗಿತ್ತು.


ಸಿಎಂ ಸ್ಟಾಲಿನ್


ಸ್ಪೀಕರ್ ವಿರುದ್ಧ ತಮಿಳುನಾಡು ಬಿಟ್ಟು ತೊಲಗಿ ಘೋಷಣೆ


ಇದರಿಂದ ಆಕ್ರೋಶಗೊಂಡ ರಾಜ್ಯಪಾಲ ಆರ್‌.ಎನ್. ರವಿ ಭಾಷಣ ಮಾಡದೇ, ಸದನದಿಂದಲೇ ಹೊರ ನಡೆದಿದ್ದರು. ಇನ್ನು ರಾಜ್ಯಪಾಲ ಆರ್‌.ಎನ್. ರವಿ ವಿರುದ್ಧ ಆಡಳಿತಾರೂಢ ಡಿಎಂಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ರಾಜ್ಯಪಾಲರೇ, ತಮಿಳುನಾಡು ಬಿಟ್ಟು ತೊಲಗಿ” ಎಂದು ಘೋಷಣೆ ಕೂಗಿದ್ದರು.


ಮೊದಲ ದಿನವೇ ತಮಿಳುನಾಡು ವಿಧಾನಸಭೆಯಲ್ಲಿ ನಡೆದಿತ್ತು ಕೋಲಾಹಲ


ತಮಿಳುನಾಡಲ್ಲಿ ಚಳಿಗಾಲದ ವಿಧಾನಸಭಾ ಅಧಿವೇಶನ ಆರಂಭವಾಗಿದೆ. ಸಂಪ್ರದಾಯದಂತೆ ಮೊದಲ ದಿನ ರಾಜ್ಯಪಾಲರು ಬಂದು ಅಧಿವೇಶನದಲ್ಲಿ ಭಾಷಣ ಮಾಡುವುದು ವಾಡಿಕೆ. ಆದರೆ ಮೊದಲ ದಿನವಾದಂದೇ ತಮಿಳುನಾಡು ವಿಧಾನಸಭೆಯಲ್ಲಿ ಕೋಲಾಹಲವೇ ನಡೆದಿತ್ತು.


ರಾಜ್ಯ ಸರ್ಕಾರ ನೀಡಿದ್ದ ಭಾಷಣ ಪ್ರತಿ ಮಾತ್ರ ಓದುವಂತೆ ಡಿಎಂಕೆ ಪಟ್ಟು


ರಾಜ್ಯಪಾಲ ಆರ್‌ಎನ್ ರವಿ ಸದನಕ್ಕೆ ಬರುತ್ತಿದ್ದಂತೆ ರಾಜ್ಯ ಸರ್ಕಾರ ನೀಡಿರುವ ಭಾಷಣದ ಪ್ರತಿ ಮಾತ್ರ ಓದಬೇಕೆಂದು ಆಡಳಿತಾರೂಢ ಡಿಎಂಕೆ ಸದಸ್ಯರು ಪಟ್ಟು ಹಿಡಿದಿದ್ದರು. ರಾಜ್ಯಪಾಲರು ತಾವು ಸೇರಿಸಿರುವ ಭಾಷಣದ ಸಾಲುಗಳನ್ನು ತೆಗೆಯುವಂತೆ ಖುದ್ದು ಸಿಎಂ ಎಂಕೆ ಸ್ಟಾಲಿನ್ ಮನವಿ ಮಾಡಿದ್ದರು. ಆದರೆ ಇದಕ್ಕೆ ಒಪ್ಪದ ರಾಜ್ಯಪಾಲ ಆರ್‌ಎನ್‌ ರವಿ, ತಾವೇ ಸಿದ್ಧಪಡಿಸಿಕೊಂಡು ಬಂದ ಭಾಷಣ ಓದಲು ಮುಂದಾಗಿದ್ದರು.


ಇದನ್ನೂ ಓದಿ: Tamil Nadu Governor: ತಾರಕಕ್ಕೇರಿದ ತಮಿಳುನಾಡು ಗವರ್ನರ್-ಸರ್ಕಾರದ ಸಂಘರ್ಷ; ಸದನದಿಂದ ಹೊರನಡೆದ ರಾಜ್ಯಪಾಲ!


ಹೀಗಾಗಿ ಸಿಎಂ ಸ್ಟಾಲಿನ್ ರಾಜ್ಯಪಾಲರು ಸೇರಿಸಿರುವ ಭಾಷಣದ ಸಾಲುಗಳನ್ನು ಕಡತದಿಂದ ತೆಗೆದುಹಾಕಿ, ರಾಜ್ಯ ಸರ್ಕಾರ ನೀಡಿದ್ದ ಭಾಷಣದ ಸಾಲುಗಳನ್ನು ಮಾತ್ರ ಕಡತದಲ್ಲಿ ಉಳಿಸಿಕೊಳ್ಳುವಂತೆ ಆಗ್ರಹಿಸಿದ್ದರು.

Published by:Monika N
First published: