ಎಐಎಡಿಎಂಕೆ ಹೋರ್ಡಿಂಗ್​ಗೆ ಯುವತಿ ಬಲಿ; ಕೇಸಿನಿಂದ ಪ್ರಭಾವಿಗಳು ಬಚಾವ್

ಶುಭಶ್ರೀ ಸಾವಿಗೆ ಸಂಬಂಧಿಸಿದಂತೆ ಪೊಲೀಸರು ವಾಟರ್ ಟ್ಯಾಂಕರ್ ಡ್ರೈವರ್ ವಿರುದ್ಧ ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ. ಆದರೆ, ಬೇರಾವ ವ್ಯಕ್ತಿಗಳ ವಿರುದ್ಧವೂ ಕೇಸು ದಾಖಲಿಸಿಕೊಂಡಿಲ್ಲ. ಎಐಎಡಿಎಂಕೆ ಹಾಕಿದ್ದ ಅನಧಿಕೃತ ಬ್ಯಾನರ್​ನಿಂದಲೇ ಈ ಅವಘಡ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದರೂ ಸ್ಥಳೀಯ ನಾಯಕರ ವಿರುದ್ಧ ಯಾವ ಕೇಸನ್ನೂ ದಾಖಲಿಸಿಕೊಂಡಿಲ್ಲ.

Sushma Chakre | news18-kannada
Updated:September 13, 2019, 2:54 PM IST
ಎಐಎಡಿಎಂಕೆ ಹೋರ್ಡಿಂಗ್​ಗೆ ಯುವತಿ ಬಲಿ; ಕೇಸಿನಿಂದ ಪ್ರಭಾವಿಗಳು ಬಚಾವ್
ಮೃತ ಯುವತಿ ಶುಭಶ್ರೀ
  • Share this:
ಚೆನ್ನೈ (ಸೆ. 13): ನಿನ್ನೆ ಪರೀಕ್ಷೆ ಮುಗಿಸಿಕೊಂಡು  ಕಾಲೇಜಿನಿಂದ ಮನೆಗೆ ಹೊರಟಿದ್ದ ಚೆನ್ನೈನ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ಎಐಎಡಿಎಂಕೆ ಪಕ್ಷದ ಬೃಹತ್ ಬ್ಯಾನರ್​ ಬಿದ್ದು ಕೊನೆಯುಸಿರೆಳೆದಿದ್ದಳು. 

ನಿನ್ನೆ ಮಧ್ಯಾಹ್ನ ಸ್ಕೂಟಿಯಲ್ಲಿ ಮನೆಗೆ ಹೋಗುತ್ತಿದ್ದ ಶುಭಶ್ರೀ ತಲೆಯ ಮೇಲೆ ಇದ್ದಕ್ಕಿದ್ದಂತೆ ಬ್ಯಾನರ್ ಬಿದ್ದ ಕಾರಣ ಆಕೆ ಸ್ಕೂಟಿಯಿಂದ ಕೆಳಗೆ ಬಿದ್ದಳು. ಆಗ ಹಿಂದಿನಿಂದ ವೇಗವಾಗಿ ಬರುತ್ತಿದ್ದ ನೀರಿನ ಟ್ಯಾಂಕರ್ ಆಕೆಯ ಮೇಲೆ ಹಾದುಹೋಗಿದೆ. ಈ ದುರ್ಘಟನೆ ನಡೆದಿರುವುದು ತಮಿಳುನಾಡಿನ ಚೆನ್ನೈನ ಪಳ್ಳಿಕರನಾನಿ ಎಂಬಲ್ಲಿ. 22 ವರ್ಷದ ಶುಭಶ್ರೀ ಎಂಬ ಯುವತಿ ಸ್ಕೂಟರ್​ನಲ್ಲಿ ಹೋಗುತ್ತಿದ್ದಾಗ ತಮಿಳುನಾಡಿನ ಆಡಳಿತ ಪಕ್ಷ ಎಐಎಡಿಎಂಕೆಯ ಬೃಹತ್ ಬ್ಯಾನರ್​ ಕೆಳಗೆ ಬಿದ್ದಿದೆ. ಸ್ಕೂಟರ್​ನಿಂದ ಕೆಳಗೆ ಬಿದ್ದ ಆಕೆಯ ಮೇಲೆ ಟ್ಯಾಂಕರ್ ಹಾದುಹೋದ ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ, ಆಕೆಯ ದೇಹ ಸಂಪೂರ್ಣ ಜಜ್ಜಿ ಹೋಗಿದ್ದರಿಂದ ಪ್ರಾಣ ಉಳಿಯಲಿಲ್ಲ.

ಚೆನ್ನೈನ ಯುವತಿ ಶುಭಶ್ರೀ ಸಾವನ್ನಪ್ಪಿ 1 ದಿನವೂ ಕಳೆದಿಲ್ಲ. ಆದರೆ, ಅಷ್ಟರಲ್ಲಾಗಲೇ ಆಕೆಯ ಸಾವಿಗೆ ಕಾರಣರಾದವರು ತಮ್ಮ ಅಧಿಕಾರ ಬಳಸಿಕೊಂಡು ಬಚಾವಾಗಿಬಿಟ್ಟಿದ್ದಾರೆ. ಚೆನ್ನೈನ ಪಲ್ಲಾವರಂ- ತೊರೈಪಕ್ಕಂ ರೇಡಿಯಲ್ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ನಿನ್ನೆ ಶುಭಶ್ರೀ ಸಾವನ್ನಪ್ಪಿದ್ದಳು.

ಚೆನ್ನೈನಲ್ಲಿ ಯುವತಿಯನ್ನು ಬಲಿ ಪಡೆದ ಎಐಎಡಿಎಂಕೆ ಬ್ಯಾನರ್​!

ಈ ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ವಾಟರ್ ಟ್ಯಾಂಕರ್ ಡ್ರೈವರ್ ವಿರುದ್ಧ ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ. ಆದರೆ, ಬೇರಾವ ವ್ಯಕ್ತಿಗಳ ವಿರುದ್ಧವೂ ಕೇಸು ದಾಖಲಿಸಿಕೊಂಡಿಲ್ಲ. ಎಐಎಡಿಎಂಕೆ ಹಾಕಿದ್ದ ಅನಧಿಕೃತ ಬ್ಯಾನರ್​ನಿಂದಲೇ ಈ ಅವಘಡ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದರೂ ಸ್ಥಳೀಯ ನಾಯಕರ ವಿರುದ್ಧ ಯಾವ ಕೇಸನ್ನೂ ದಾಖಲಿಸಿಕೊಂಡಿಲ್ಲ. ಜನಸಂದಣಿ ಹೆಚ್ಚಾಗಿರುವ ರಸ್ತೆ ಬದಿಯಲ್ಲಿ ಬೃಹತ್ ಬ್ಯಾನರ್​ಗಳನ್ನು ಹಾಕುವಾಗ ಅದು ಸುರಕ್ಷಿತವೇ ಎಂಬುದನ್ನು ಪರಿಶೀಲಿಸದ ಕಾರಣ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

ತಮಿಳುನಾಡು ಸಿಎಂ ಇ. ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಓ. ಪನ್ನೀರ್​ ಸೆಲ್ವಂ,
ಮತ್ತು ಮಾಜಿ ಸಿಎಂ ಜಯಲಲಿತಾ ಫೋಟೋ ಇದ್ದ ಬೃಹತ್ ಹೋರ್ಡಿಂಗ್ ಶುಭಶ್ರೀ ಮೈಮೇಲೆ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷವಾದ ಡಿಎಂಕೆ ನಾಯಕರು ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಜೀವ ಬಲಿ ಪಡೆದ ತಪ್ಪಿತಸ್ಥರಿಗೆ ಶಿಕ್ಷಯಾಗಬೇಕು ಎಂದು ಆಗ್ರಹಿಸಿದ್ದರು.ಎಮ್ಮೆ, ಪುಸ್ತಕಗಳಾಯ್ತು, ಈಗ ಮೇಕೆಗಳ ಕಳ್ಳತನ: ಎಸ್​ಪಿ ಸಂಸದ ಆಜಮ್ ಖಾನ್ ವಿರುದ್ಧ ಎಫ್ಐಆರ್

ಒಬ್ಬಳೇ ಮಗಳು ಇನ್ನಿಲ್ಲ:

ಶುಭಶ್ರೀಯ ಕುಟುಂಬಸ್ಥರು ತಮ್ಮ ಮಗಳನ್ನು ಕಳೆದುಕೊಂಡ ಆಘಾತದಿಂದ ಇನ್ನೂ ಹೊರಬಂದಿಲ್ಲ. ಮಗಳ ಸಾವಿಗೆ ಕಾರಣರಾದವರ ಬಗ್ಗೆ ಆಕ್ರೋಶ ಹೊರಹಾಕಿರುವ ಆಕೆಯ ತಂದೆ ರವಿ, 'ಈ ಬ್ಯಾನರ್​ ಸಂಸ್ಕೃತಿಯಿಂದ ನಾನು ನನ್ನ ಮಗಳನ್ನು ಕಳೆದುಕೊಳ್ಳುವಂತಾಯಿತು. ಬ್ಯಾನರ್ ನನ್ನ ಮಗಳ ಮೇಲೆ ಬಿದ್ದಿದ್ದರಿಂದ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಪರೀಕ್ಷೆಗಳು ಮುಗಿದ ಹಿನ್ನೆಲೆಯಲ್ಲಿ ಅವಳು ಮುಂದಿನ ತಿಂಗಳು ಕೆನಡಾಗೆ ಹೋಗಲು ಪ್ಲಾನ್ ಮಾಡಿದ್ದಳು. ಆದರೀಗ ನಮ್ಮನ್ನೆಲ್ಲ ಬಿಟ್ಟು ಶಾಶ್ವತವಾಗಿ ದೂರ ಹೋಗಿದ್ದಾಳೆ ' ಎಂದು ಕಣ್ಣೀರು ಹಾಕಿದ್ದಾರೆ.

'ನಮಗೆ ಶುಭಶ್ರೀ ಒಬ್ಬಳೇ ಮಗಳು. ಆಕೆಯ ಬಗ್ಗೆ ನಾವು ನೂರಾರು ಕನಸುಗಳನ್ನು ಕಟ್ಟಿದ್ದೆವು. ನಮ್ಮ ರೀತಿ ಬೇರಾವ ತಂದೆ-ತಾಯಿಯೂ ಕಣ್ಣಿರು ಹಾಕುವಂತಾಗಬಾರದು. ಟ್ರಕ್ ಡ್ರೈವರ್ ಕೂಡ ಹೈಸ್ಪೀಡ್​ನಲ್ಲಿ ಬಂದು ನನ್ನ ಮಗಳ ಮೇಲೇ ಗಾಡಿ ಹತ್ತಿಸಿಬಿಟ್ಟ. ನಮ್ಮ ಮಗಳು ಶುಭಶ್ರೀ ನಮ್ಮ ಶಕ್ತಿಯಾಗಿದ್ದಳು. ಆಕೆಯ ಸಾವಿನ ರೀತಿ ಇನ್ನೊಂದು ಪ್ರಕರಣ ಸಂಭವಿಸದಂತೆ ಇನ್ನಾದರೂ ಸರ್ಕಾರ ಗಮನ ಹರಿಸಬೇಕು' ಎಂದು ಅವರು ಒತ್ತಾಯಿಸಿದ್ದಾರೆ.

ಮೇಕೆಗಳನ್ನು ಬಂಧಿಸಿದ ಪೊಲೀಸರು; ಮೂಕ ಪ್ರಾಣಿಗಳು ಮಾಡಿದ ತಪ್ಪೇನು?

ಅನಧಿಕೃತ ಬ್ಯಾನರ್​ಗಳನ್ನು ತೆರವುಗೊಳಿಸಲು ಕೋರ್ಟ್​ ಈಗಾಗಲೇ ಹಲವು ಬಾರಿ ಸೂಚನೆ ನೀಡಿದೆ. ಆದರೆ, ಅದನ್ನು ಸಮಪರ್ಕವಾಗಿ ಕಾರ್ಯರೂಪಕ್ಕೆ ತರದ ಕಾರಣ ಇಂತಹ ಘಟನೆಗಳು ಪದೇಪದೆ ಮರುಕಳಿಸುತ್ತಿವೆ. ಈ ಯುವತಿಯ ಮೈಮೇಲೆ ಬಿದ್ದ ಬ್ಯಾನರ್​ ಕೂಡ ಅನಧಿಕೃತ ಎನ್ನಲಾಗಿದೆ. ಮದ್ರಾಸ್​ ಹೈಕೋರ್ಟ್​ ಅನಧಿಕೃತ ಬ್ಯಾನರ್, ಹೋರ್ಡಿಂಗ್ಸ್​ಗಳನ್ನು ತೆರವುಗೊಳಿಸಲು ಆದೇಶ ನೀಡಿದ್ದರೂ ತಮಿಳುನಾಡಿನ ರಾಜಕೀಯ ಪಕ್ಷಗಳು ದಿನಕ್ಕೊಂದು ಕಡೆ ಬ್ಯಾನರ್​ಗಳನ್ನು ಹಾಕುತ್ತಿವೆ.

2017ರಲ್ಲಿ ಅಮೆರಿಕದಿಂದ ಕೊಯಮತ್ತೂರಿಗೆ ವಧುವನ್ನು ನೋಡಲು ಬಂದಿದ್ದ ಇಂಜಿನಿಯರ್ ಒಬ್ಬರು ಹೋರ್ಡಿಂಗ್ಸ್​ಗೆ ಬಲಿಯಾಗಿದ್ದರು. ಕಾರ್ಯಕ್ರಮವೊಂದಕ್ಕೆ ಸಿಎಂ ಕೆ. ಪಳನಿಸ್ವಾಮಿ ಅವರಿಗೆ ಸ್ವಾಗತ ಕೋರಿ ಹಾಕಲಾಗಿದ್ದ ಬೃಹತ್ ಹೋರ್ಡಿಂಗ್ಸ್​ಗೆ ಆ ಇಂಜಿನಿಯರ್​ನ ವಾಹನ ಡಿಕ್ಕಿ ಹೊಡೆದಿತ್ತು. ಆಗ ಹೋರ್ಡಿಂಗ್ಸ್​​ ಅವರ ಗಾಡಿಯ ಮೇಲೆ ಬಿದ್ದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಕಳೆದ ವರ್ಷ ಪುಣೆಯಲ್ಲಿ ಇಂಥದ್ದೇ ಘಟನೆ ನಡೆದಿತ್ತು. ಭಾರೀ ಪ್ರಮಾಣದ ಬ್ಯಾನರ್​​ ನೆಲಕ್ಕೆ ಉರುಳಿದ ಕಾರಣ ಮೂವರು ಸಾವನ್ನಪ್ಪಿ, 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

(ವರದಿ: ಪೂರ್ಣಿಮಾ ಮುರಳಿ)

First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading