ಜಯಲಲಿತಾ ಸಮಾಧಿಯನ್ನೇ ಮದುವೆ ಮಂಟಪ ಮಾಡಿಕೊಂಡ ಎಐಎಡಿಎಂಕೆ ನಾಯಕ

ಮರೀನಾ ಬೀಚ್​ನಲ್ಲಿರುವ ಜಯಲಲಿತಾ ಸಮಾಧಿಗೆ ಇಂದಿಗೂ ದಿನನಿತ್ಯ ಅನೇಕ ಜನರು ಹೋಗಿ ನಮಿಸಿ ಬರುತ್ತಾರೆ. ಸಮಾಧಿ ಸ್ಥಳದಲ್ಲಿ ಮದುವೆ ಮಾಡುವುದು ಉತ್ತಮವಲ್ಲ ಎಂಬ ಭಾವನೆ ಅನೇಕರಲ್ಲಿ ಇದೆ. ಆದರೆ, ಜಯಲಲಿತಾ ಸಮಾಧಿ ಈ ಭಾವನೆ ಮೀರಿದ ಭಕ್ತಿ, ಭಾವನೆ ಮೂಡುವ ಸ್ಥಳವಾಗಿ ನಿರ್ಮಾಣವಾಗಿದೆ.

Seema.R | news18-kannada
Updated:September 12, 2019, 1:27 PM IST
ಜಯಲಲಿತಾ ಸಮಾಧಿಯನ್ನೇ ಮದುವೆ ಮಂಟಪ ಮಾಡಿಕೊಂಡ ಎಐಎಡಿಎಂಕೆ ನಾಯಕ
ಜಯಲಲಿತಾ ಸಮಾಧಿ ಸ್ಥಳ
  • Share this:
ಚೆನ್ನೈ (ಸೆ.12): ತಮಿಳುನಾಡು  ಮಾಜಿ ಸಿಎಂ ಜಯಲಲಿತಾ ಮೇಲೆ ತಮಿಳಿಗರಿಗೆ ವಿಶೇಷವಾದ ಪೂಜ್ಯನೀಯ ಭಾವನೆ. ಅವರು ಸಾವನ್ನಪ್ಪಿ ಮೂರು ವರ್ಷಗಳೆದರೂ ಆ ಭಾವನೆ ಅಚ್ಚಳಿಯದಂತೆ ಉಳಿದಿದೆ. ಇಂದಿಗೂ ಕೂಡ ಅಮ್ಮ ಎಂದೇ ತಮಿಳಿಗರು ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದ ಜಯಲಲಿತಾಗಾಗಿ ದೇವಸ್ಥಾನವನ್ನು ಕಟ್ಟಿ ಪೂಜೆ ನಡೆಸಲಾಗುತ್ತಿದೆ.

ಇದೇ ಪೂಜ್ಯ ಹಾಗೂ ಆರಾಧನೆ ಭಾವನೆಯಿಂದಾಗಿ ಎಐಎಡಿಎಂಕೆ ಪಕ್ಷದ ನಾಯಕರೊಬ್ಬರು ಜಯಲಲಿತಾ ಸಮಾಧಿ ಮುಂದೆಯೇ ಮಗನ ಮದುವೆ ಮಾಡಿ ತಮ್ಮ ಶ್ರದ್ಧೆ, ಭಕ್ತಿ ಮೆರೆದಿದ್ದಾರೆ. ಎಐಎಡಿಎಂಕೆ ಪಕ್ಷ ಕಟ್ಟುವಲ್ಲಿ ಜಯಲಲಿತಾ ಪಾತ್ರ ಕಡಿಮೆ ಇಲ್ಲ. ಇದೇ ಹಿನ್ನೆಲೆ ಪಕ್ಷದ ಕಾರ್ಯಕರ್ತರಲ್ಲಿ ಜಯಲಲಿತಾ ಎಂದರೇ ಪುರುಚ್ಚಿತಲೈವಿ (ಕ್ರಾಂತಿಕಾರಿ ಮಹಿಳೆ) ಎಂದೇ ಖ್ಯಾತಿಗೊಂಡಿದ್ದರು. ಇದೇ ಉದ್ದೇಶದಿಂದ ಆತ ಸಮಾಧಿ ಸ್ಥಳವನ್ನು ಮದುವೆ ವೇದಿಕೆಯಾಗಿ ಮಾರ್ಪಡಿಸಿದ್ದಾರೆ.

ಮರೀನಾ ಬೀಚ್​ನಲ್ಲಿರುವ ಜಯಲಲಿತಾ ಸಮಾಧಿಗೆ ಇಂದಿಗೂ ದಿನನಿತ್ಯ ಅನೇಕ ಜನರು ಹೋಗಿ ನಮಿಸಿ ಬರುತ್ತಾರೆ. ಸಮಾಧಿ ಸ್ಥಳದಲ್ಲಿ ಮದುವೆ ಮಾಡುವುದು ಉತ್ತಮವಲ್ಲ ಎಂಬ ಭಾವನೆ ಅನೇಕರಲ್ಲಿ ಇದೆ. ಆದರೆ, ಜಯಲಲಿತಾ ಸಮಾಧಿ ಈ ಭಾವನೆ ಮೀರಿದ ಭಕ್ತಿ, ಭಾವನೆ ಮೂಡುವ ಸ್ಥಳವಾಗಿ ನಿರ್ಮಾಣವಾಗಿದೆ.

ಇದೇ ಕಾರಣಕ್ಕೆ ಎಐಎಡಿಎಂಕೆ ನಾಯಕ ಎಸ್​ ಭವಾನಿಶಂಕರ್​ ತಮ್ಮ ಮಗ ಎಸ್​ಪಿ ಸಂಬಾಶಿವರಾಮನ್​ ಆಲಿಯಾಸ್​ ಸತೀಶ್​ ಮದುವೆಯನ್ನು ಆರ್​ ದೀಪಿಕಾ ಎಂಬ ಯುವತಿ ಜೊತೆ  ಜಯಲಲಿತಾ ಸಮಾಧಿ ಮುಂದೆ ಸಾಂಪ್ರದಾಯಿಕವಾಗಿ ನೆರೆವೇರಿಸಿದ್ದಾರೆ.

ಇದನ್ನು ಓದಿ: ಆಂಧ್ರದಲ್ಲಿ ಟಿಡಿಪಿ-ವೈಎಸ್​​ಆರ್​​​ ಸಂಘರ್ಷ; ಮುಂದುವರೆದ ಚಂದ್ರಬಾಬು ನಾಯ್ಡು ಗೃಹಬಂಧನ; ಪ್ರಕ್ಷುಬ್ಧ ವಾತಾವರಣ

ಸಮಾಧಿ ಮುಂದಿರುವ ಸ್ಥಳದ ಮುಂದೆ ಸರಳವಾಗಿ ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ಇವರ ಮದುವೆ ನೆರೆವೇರಿದೆ.

ಈ ಮದುವೆ ಕುರಿತು ಮಾತನಾಡಿರುವ ಎಐಎಡಿಎಂಕೆ ಪಕ್ಷದ ನಾಯಕ ಅಮ್ಮನ ಸಮಾಧಿ ಮುಂದೆ ಮಗನ ಮದುವೆ ಮಾಡಿರುವುದು ತೃಪ್ತಿ ಭಾವನೆ ಮೂಡಿದೆ. ನೂತನ ಮಧುವರರ ಮೇಲೆ ಅಮ್ಮನ ಆಶೀರ್ವಾದವಿರಲಿದೆ ಎಂದರು.ಮದುವೆ ಹಿನ್ನೆಲೆ ಸಮಾಧಿ ಸ್ಥಳವನ್ನು ಹೂವಿನಿಂದ ಅಲಂಕಾರ ಮಾಡಲಾಗಿತ್ತು.

First published: September 12, 2019, 1:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading