Bharat Ratna: ಎಂಜಿಆರ್, ಜಯಲಲಿತಾಗೆ ಭಾರತ ರತ್ನ ನೀಡಿ! ಎಐಎಡಿಎಂಕೆ ಜನರಲ್ ಕೌನ್ಸಿಲ್ ಸಭೆಯಲ್ಲಿ ಶಿಫಾರಸು

ತಮಿಳು ಚಿತ್ರರಂಗದ ಸೂಪರ್ ಸ್ಟಾರ್, ಮಾಜಿ ಮುಖ್ಯಮಂತ್ರಿ ಎಂಜಿ ರಾಮಚಂದ್ರನ್ ಹಾಗೂ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಭಾರತ ರತ್ನ ಬೇಕು ಎಂಬ ನಿರ್ಧಾರ ಕೈಗೊಳ್ಳಳಾಗಿದೆ. ಇಂದು ಚೆನ್ನೈನಲ್ಲಿ ನಡೆದ ಎಐಎಡಿಎಂಕೆ ಕೌನ್ಸಿಲ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಜಯಲಲಿತಾ ಮತ್ತು ಎಂಜಿಆರ್‌

ಜಯಲಲಿತಾ ಮತ್ತು ಎಂಜಿಆರ್‌

  • Share this:
ತಮಿಳುನಾಡು: ದಕ್ಷಿಣ ಭಾರತದ (South India) ಸೂಪರ್ ಸ್ಟಾರ್ (Super Star), ತಮಿಳು ಚಿತ್ರರಂಗದ (Tamil Film Industry) ಖ್ಯಾತ ನಟ (Famous Actor), ಮಾಜಿ ಮುಖ್ಯಮಂತ್ರಿ ಎಂಜಿಆರ್‌ (MGR) ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಮತ್ತೊಂದೆಡೆ ತಮಿಳಿನ ಖ್ಯಾತ ನಟಿ (Famous Actress), ಮಾಜಿ ಮುಖ್ಯಮಂತ್ರಿ (Ex CM), ಅಮ್ಮ ಜಯಲಲಿತಾ (Amma Jayalalitha) ಬಗ್ಗೆಯೂ ಎಲ್ಲರಿಗೂ ಗೊತ್ತಿರುತ್ತೆ. ಇವರಿಬ್ಬರ ಕಾಂಬಿನೇಷನ್ (Combination) ಆ ಕಾಲದ ಸೂಪರ್‌ ಹಿಟ್‌ (Super Hit) ಜೋಡಿಗಳಲ್ಲಿ ಒಂದು. ಇದೀಗ ಈ ಇಬ್ಬರಿಗೂ ಭಾರತ ರತ್ನ (Bharat Ratna) ಕೊಡಬೇಕು ಎಂಬ ಕೂಗು ಕೇಳಿ ಬಂದಿದೆ. ತಮಿಳುನಾಡು ರಾಜಕೀಯ (Tamil Nadu Politics) ಮತ್ತು ಸಿನಿಮಾದಲ್ಲಿ ತಮ್ಮದೇ ಛಾಪು ಮೂಡಿಸಿದ ಈ ಇಬ್ಬರು, ತಮಿಳುನಾಡು ಜನರ ಮನದಲ್ಲೂ ಎಂದೂ ಅಮರರಾಗೇ ಇರುತ್ತಾರೆ. ಸಿನಿಮಾ ಮತ್ತು ರಾಜಕೀಯ ಹಾಗೂ ಸಮಾಜಸೇವೆಯಲ್ಲಿ ಈ ಇಬ್ಬರು ಮಾಡಿದ ಸಾಧನೆಯಿಂದಾಗಿ ಇವರಿಬ್ಬರು ಭಾರತರತ್ನಕ್ಕೆ ಅರ್ಹ ಎಂಬ ಕೂಗು ಕೇಳಿ ಬಂದಿದೆ. ಎಐಎಡಿಎಂಕೆ ಕೌನ್ಸಿಲ್ ಸಭೆಯಲ್ಲಿ (AIADMK Council Meet) ಎಂಜಿ ರಾಮಚಂದ್ರನ್ ಹಾಗೂ ಜಯಲಲಿತಾ ಇಬ್ಬರಿಗೂ ಭಾರತ ರತ್ನ ಕೊಡಬೇಕು ಅಂತ ಶಿಫಾರಸು ಮಾಡಲಾಗಿದೆ.

ಎಂಜಿಆರ್‌, ಜಯಲಲಿತಾಗೆ ಭಾರತರತ್ನ ಕೊಡಿ

ತಮಿಳು ಚಿತ್ರರಂಗದ ಸೂಪರ್ ಸ್ಟಾರ್, ಮಾಜಿ ಮುಖ್ಯಮಂತ್ರಿ ಎಂಜಿ ರಾಮಚಂದ್ರನ್ ಹಾಗೂ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಭಾರತ ರತ್ನ ಬೇಕು ಎಂಬ ನಿರ್ಧಾರ ಕೈಗೊಳ್ಳಳಾಗಿದೆ. ಇಂದು ಚೆನ್ನೈನಲ್ಲಿ ನಡೆದ ಎಐಎಡಿಎಂಕೆ ಕೌನ್ಸಿಲ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಪೆರಿಯಾರ್, ಅಣ್ಣಾ ದೊರೆೈಗೂ ಭಾರತ ರತ್ನಕ್ಕೆ ಶಿಫಾರಸು

ಇನ್ನು ತಮಿಳುನಾಡಿನ ಇನ್ನೋರ್ವ ಮಾಜಿ ಮುಖ್ಯಮಂತ್ರಿ ಅಣ್ಣಾದೊರೈ ಅವರಿಗೂ ಭಾರತ ರತ್ನ ನೀಡುವಂತೆ ಶಿಫಾರಸು ಮಾಡಲಾಗಿದೆ.

ಇದನ್ನೂ ಓದಿ: AIADMK Tussle: ಪಳನಿಸ್ವಾಮಿ vs ಪನ್ನೀರಸೆಲ್ವಂ: ಎಐಎಡಿಎಂಕೆ ಪಕ್ಷದಿಂದ ಪನ್ನೀರಸೆಲ್ವಂ ಬಣವೇ ಉಚ್ಛಾಟನೆ

ಹಿಂದಿ ವಿರೋಧಿ ಚಳವಳಿಯ ನಾಯಕ

ಅಣ್ಣಾ ದೊರೆ ಅವರು 1965ರ ಮದ್ರಾಸ್ ಹಿಂದಿ ವಿರೋಧಿ ಚಳವಳಿ ನಡೆಸಿದರು. ಅಣ್ಣಾದೊರೈ ಅವರ ಈ ಪ್ರತಿಭಟನೆಯು ಸ್ವತಃ ಅವರ ಪಕ್ಷಕ್ಕೆ ಜನಪ್ರಿಯ ಬೆಂಬಲವನ್ನು ಗಳಿಸಿಕೊಡುವಲ್ಲಿ ಸಹಾಯಕವಾಯಿತು. 1967ರಲ್ಲಿ ರಾಜ್ಯದಲ್ಲಿ ನಡೆದ ಚುನಾವಣೆಗಳಲ್ಲಿ ಅವರ ಪಕ್ಷವು ಪ್ರಚಂಡ ಬಹುಮತವನ್ನು ಗಳಿಸಿತು. ಬಳಿಕ ಸಿಎಂ ಆದ ಮೇಲೆ ಇತರ ರಾಜ್ಯಗಳಲ್ಲಿರುವ ತ್ರಿ ಭಾಷಾ ಸೂತ್ರಕ್ಕೆ ಬದಲಾಗಿ ತಮಿಳುನಾಡು ರಾಜ್ಯಕ್ಕೆ ಎರಡು ಭಾಷಾ ನೀತಿಯನ್ನು ಜಾರಿಗೆ ತಂದರು. ಅಕ್ಕಿಗೆ ಅನುದಾನದ ದರವ ಅನುಷ್ಠಾನಕ್ಕೆ ತಂದರು ಹಾಗು ಮದ್ರಾಸ್ ರಾಜ್ಯವನ್ನು ತಮಿಳುನಾಡು ಎಂದು ಮರುನಾಮಕರಣ ಮಾಡಿದರು. ಅವರಿಗೆ ಭಾರತ ರತ್ನ ನೀಡುವಂತೆ ಶಿಫಾರಸು ಮಾಡಲಾಗಿದೆ.

ಎಐಎಡಿಎಂಕೆ ಪಕ್ಷದಿಂದ ಪನ್ನೀರಸೆಲ್ವಂ ಬಣವೇ ಉಚ್ಛಾಟನೆ

ಎಐಎಡಿಎಂಕೆ ಪಕ್ಷದ ಪ್ರಾಥಮಿಕ ಸದಸ್ಯತ್ವ  ಸ್ಥಾನದಿಂದ ಓ ಪನ್ನೀರಸೆಲ್ವಂ (Panneerselvam) ಅವರನ್ನು ವಜಾಗೊಳಿಸಲಾಗಿದ್ದು, ಖಜಾಂಚಿ ಸ್ಥಾನದಿಂದ ಹೊರಹಾಕಲಾಗಿದೆ.  ಇಂದು  (ಜುಲೈ 11) ನಡೆದ ಎಐಎಡಿಎಂಕೆ ಪಕ್ಷದ ಜನರಲ್ ಕೌನ್ಸಿಲ್ ಸಭೆಯಲ್ಲಿ ಪಳನಿಸ್ವಾಮಿ (Palaniswami) ಬಣವು ಪನ್ನೀರಸೆಲ್ವಂ ಬಣವನ್ನು ಪಕ್ಷದಿಂದ ಸಂಪೂರ್ಣ ಹೊರಹಾಕಿದೆ.

ಇದನ್ನೂ ಓದಿ: Mekedatu Project: ಮೇಕೆದಾಟು ಯೋಜನೆ ವಿರೋಧಿಸಿ ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ತಮಿಳುನಾಡು

ಜನರಲ್ ಕೌನ್ಸಿಲ್ ಸಭೆಯಲ್ಲಿ (AIADMK General Council ) ಪನ್ನೀರಸೆಲ್ವಂ ಅವರನ್ನು ಪಕ್ಷದಿಂದ ಉಚ್ಚಾಟಿಸಲು ಕ್ರಮ ಕೈಗೊಳ್ಳುವಂತೆ ಜನರಲ್ ಕೌನ್ಸಿಲ್ ಸದಸ್ಯರು ಒತ್ತಾಯಿಸಿದ್ದರು. 2500-ಪ್ಲಸ್ ಪ್ರಬಲ ಜನರಲ್ ಕೌನ್ಸಿಲ್ ಪಕ್ಷವನ್ನು ಏಕೈಕ ಸರ್ವೋಚ್ಚ ನಾಯಕನಾಗಿ ಮುನ್ನಡೆಸಲು ಪಳನಿಸ್ವಾಮಿ ಅವರಿಗೆ ಅಧಿಕಾರ ನೀಡಿತು. ಜೊತೆಗೆ ಪ್ರತಿಸ್ಪರ್ಧಿ ನಾಯಕ ಓ ಪನ್ನೀರಸೆಲ್ವಂ ಅಥವಾ ಒಪಿಎಸ್ ಬಣವನ್ನು "ಪಕ್ಷ ವಿರೋಧಿ" ಚಟುವಟಿಕೆಗಳಿಗಾಗಿ ಹೊರಹಾಕಲಾಗಿದೆ.
Published by:Annappa Achari
First published: