ಚೆನ್ನೈನಲ್ಲಿ ಯುವತಿಯನ್ನು ಬಲಿ ಪಡೆದ ಎಐಎಡಿಎಂಕೆ ಬ್ಯಾನರ್​!

ಅನಧಿಕೃತ ಬ್ಯಾನರ್​ಗಳನ್ನು ತೆರವುಗೊಳಿಸಲು ಕೋರ್ಟ್​ ಈಗಾಗಲೇ ಹಲವು ಬಾರಿ ಸೂಚನೆ ನೀಡಿದೆ. ಆದರೆ, ಅದನ್ನು ಸಮಪರ್ಕವಾಗಿ ಕಾರ್ಯರೂಪಕ್ಕೆ ತರದ ಕಾರಣ ಇಂತಹ ಘಟನೆಗಳು ಪದೇಪದೆ ಮರುಕಳಿಸುತ್ತಿವೆ.

Sushma Chakre | news18-kannada
Updated:September 12, 2019, 9:18 PM IST
ಚೆನ್ನೈನಲ್ಲಿ ಯುವತಿಯನ್ನು ಬಲಿ ಪಡೆದ ಎಐಎಡಿಎಂಕೆ ಬ್ಯಾನರ್​!
ಮೃತ ಯುವತಿ ಶುಭಶ್ರೀ
  • Share this:
ಚೆನ್ನೈ (ಸೆ. 12):  ಕಾಲೇಜಿನಿಂದ ಪರೀಕ್ಷೆ ಮುಗಿಸಿಕೊಂಡು ಮನೆಗೆ ಹೊರಟಿದ್ದ ಯುವತಿಯ ಮೇಲೆ ಬಿದ್ದ ಬೃಹತ್ ಬ್ಯಾನರ್​ನಿಂದ ಆಕೆಯ ಪ್ರಾಣವೇ ಹೋಗಿದೆ. ರಸ್ತೆ ಬದಿಯಲ್ಲಿ ನಡೆದುಹೋಗುತ್ತಿದ್ದ ಯುವತಿಯ ತಲೆಯ ಮೇಲೆ ಇದ್ದಕ್ಕಿದ್ದಂತೆ ಬ್ಯಾನರ್ ಬಿದ್ದ ಕಾರಣ ಆಕೆ ಕೆಳಗೆ ಬಿದ್ದಳು. ಆಗ ಹಿಂದಿನಿಂದ ವೇಗವಾಗಿ ಬರುತ್ತಿದ್ದ ನೀರಿನ ಟ್ಯಾಂಕರ್ ಆಕೆಯ ಮೇಲೆ ಹಾದುಹೋಗಿದೆ.

ಈ ದುರ್ಘಟನೆ ನಡೆದಿರುವುದು ತಮಿಳುನಾಡಿನ ಚೆನ್ನೈನ ಪಳ್ಳಿಕರನಾನಿ ಎಂಬಲ್ಲಿ. 22 ವರ್ಷದ ಶುಭಶ್ರೀ ಎಂಬ ಯುವತಿ ರಸ್ತೆಯಲ್ಲಿ ಹಾದುಹೋಗುತ್ತಿದ್ದಾಗ ತಮಿಳುನಾಡಿನ ಆಡಳಿತ ಪಕ್ಷ ಎಐಎಡಿಎಂಕೆಯ ಬೃಹತ್ ಬ್ಯಾನರ್​ ಕೆಳಗೆ ಬಿದ್ದಿದೆ. ಕೆಳಗೆ ಬಿದ್ದ ಆಕೆಯ ಮೇಲೆ ಟ್ಯಾಂಕರ್ ಹಾದುಹೋದ ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ, ಆಕೆಯ ದೇಹ ಸಂಪೂರ್ಣ ಜಜ್ಜಿ ಹೋಗಿದ್ದರಿಂದ ಪ್ರಾಣ ಉಳಿಯಲಿಲ್ಲ.

ಅನಧಿಕೃತ ಬ್ಯಾನರ್​ಗಳನ್ನು ತೆರವುಗೊಳಿಸಲು ಕೋರ್ಟ್​ ಈಗಾಗಲೇ ಹಲವು ಬಾರಿ ಸೂಚನೆ ನೀಡಿದೆ. ಆದರೆ, ಅದನ್ನು ಸಮಪರ್ಕವಾಗಿ ಕಾರ್ಯರೂಪಕ್ಕೆ ತರದ ಕಾರಣ ಇಂತಹ ಘಟನೆಗಳು ಪದೇಪದೆ ಮರುಕಳಿಸುತ್ತಿವೆ. ಈ ಯುವತಿಯ ಮೈಮೇಲೆ ಬಿದ್ದ ಬ್ಯಾನರ್​ ಕೂಡ ಅನಧಿಕೃತ ಎನ್ನಲಾಗಿದೆ. ಮದ್ರಾಸ್​ ಹೈಕೋರ್ಟ್​ ಅನಧಿಕೃತ ಬ್ಯಾನರ್, ಹೋಲ್ಡಿಂಗ್ಸ್​ಗಳನ್ನು ತೆರವುಗೊಳಿಸಲು ಆದೇಶ ನೀಡಿದ್ದರೂ ತಮಿಳುನಾಡಿನ ರಾಜಕೀಯ ಪಕ್ಷಗಳು ದಿನಕ್ಕೊಂದು ಕಡೆ ಬ್ಯಾನರ್​ಗಳನ್ನು ಹಾಕುತ್ತಿವೆ.

ಪ್ರೇಯಸಿಯ ಶವದೊಂದಿಗೆ 24 ಗಂಟೆ ಕಾರಿನಲ್ಲಿ ಸುತ್ತಾಡಿದ ಯುವಕ ಮಾಡಿದ್ದೇನು ಗೊತ್ತಾ?

2017ರಲ್ಲಿ ಅಮೆರಿಕದಿಂದ ಕೊಯಮತ್ತೂರಿಗೆ ವಧುವನ್ನು ನೋಡಲು ಬಂದಿದ್ದ ಇಂಜಿನಿಯರ್ ಒಬ್ಬರು ಹೋಲ್ಡಿಂಗ್ಸ್​ಗೆ ಬಲಿಯಾಗಿದ್ದರು. ಕಾರ್ಯಕ್ರಮವೊಂದಕ್ಕೆ ಸಿಎಂ ಕೆ. ಪಳನಿಸ್ವಾಮಿ ಅವರಿಗೆ ಸ್ವಾಗತ ಕೋರಿ ಹಾಕಲಾಗಿದ್ದ ಬೃಹತ್ ಹೋಲ್ಡಿಂಗ್ಸ್​ಗೆ ಆ ಇಂಜಿನಿಯರ್​ನ ವಾಹನ ಡಿಕ್ಕಿ ಹೊಡೆದಿತ್ತು. ಆಗ ಹೋಲ್ಡಿಂಗ್​ಗೆ​ ಅವರ ಗಾಡಿಯ ಮೇಲೆ ಬಿದ್ದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಕಳೆದ ವರ್ಷ ಪುಣೆಯಲ್ಲಿ ಇಂಥದ್ದೇ ಘಟನೆ ನಡೆದಿತ್ತು. ಭಾರೀ ಪ್ರಮಾಣದ ಹೋಲ್ಡಿಂಗ್ಸ್​​ ನೆಲಕ್ಕೆ ಉರುಳಿದ ಕಾರಣ ಮೂವರು ಸಾವನ್ನಪ್ಪಿ, 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

First published:September 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ