HOME » NEWS » National-international » AHMEDABAD WOMAN ACCUSES HUSBAND OF NOT HAVING SEX FOR ONE YEAR FORCING DAUGHTER TO DRINK BEER STG LG

ಒಂದು ವರ್ಷದಿಂದ ಗಂಡ ತನ್ನೊಂದಿಗೆ ಸೆಕ್ಸ್​ ಮಾಡಿಲ್ಲವೆಂದು ದೂರು ನೀಡಿದ ಹೆಂಡತಿ...!

ನಿತ್ಯವೂ ಮದ್ಯ ಸೇವಿಸುವ ಪತಿಯು ನನ್ನೊಟ್ಟಿಗೆ ಪ್ರತಿನಿತ್ಯ ಜಗಳವಾಡುತ್ತಾರೆ. ನನಗೆ ಕುಡಿಯಲು ಇಷ್ಟವಿಲ್ಲದಿದ್ದರೂ ನನಗೆ ಕುಡಿಯುವಂತೆ ಬೆದರಿಕೆ ಹಾಕುತ್ತಾನೆ. ಅಲ್ಲದೇ ನನ್ನ ದೈಹಿಕ ಪರಿಸ್ಥಿತಿಯ ಬಗ್ಗೆ ವ್ಯಂಗ್ಯವಾಗಿ ಮಾತನಾಡಿ ನೋಯಿಸುತ್ತಾನೆ ಎಂದು ದೂರಿದ್ದಾಳೆ.

news18-kannada
Updated:April 1, 2021, 7:28 AM IST
ಒಂದು ವರ್ಷದಿಂದ ಗಂಡ ತನ್ನೊಂದಿಗೆ ಸೆಕ್ಸ್​ ಮಾಡಿಲ್ಲವೆಂದು ದೂರು ನೀಡಿದ ಹೆಂಡತಿ...!
ಪ್ರಾತಿನಿಧಿಕ ಚಿತ್ರ
  • Share this:
ದುಬೈ ಮೂಲದವನಾದ ನನ್ನ ಗಂಡ ಎರಡು ವರ್ಷದ ಮಗಳಿಗೆ ಒತ್ತಾಯ ಪೂರ್ವಕವಾಗಿ ಮದ್ಯ ಕುಡಿಸಿದ್ದಾನೆ. ಅಲ್ಲದೇ ಪ್ರತಿದಿನ ಕುಡಿದು ಬಂದು ನನ್ನ ಮೇಲೆ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ, ಒಂದು ವರ್ಷಕ್ಕೂ ಹೆಚ್ಚು ಕಾಲ ನನ್ನ ಜೊತೆ ಯಾವುದೇ ಲೈಂಗಿಕ ಚಟುವಟಿಕೆ ನಡೆಸಿಲ್ಲ ಎಂದು ಹೆಂಡತಿಯೊಬ್ಬಳು ತನ್ನ ಗಂಡನ ವಿರುದ್ಧವೇ ದೂರು ದಾಖಲಿಸಿರುವ ಘಟನೆ ಗುಜರಾತ್‌ನ ಅಹಮದಾಬಾದ್‌ನ ಗೋಟಾ ಪ್ರದೇಶದಲ್ಲಿ ಮಂಗಳವಾರ ನಡೆದಿದೆ.

ನಾವಿಬ್ಬರೂ ಮದುವೆಯಾಗಿದ್ದು 2016ರಲ್ಲಿ, 2017ರಿಂದ ದುಬೈನಲ್ಲಿ ನೆಲೆಸಿದ್ದೇವೆ. ನನಗೆ ಮದ್ಯ ಸೇವಿಸುವಂತೆ ಒತ್ತಾಯಮಾಡುವುದಲ್ಲದೇ, ನನ್ನ ಮಗಳಿಗೆ ಖಾಲಿ ಬಿಯರ್‌ ಕ್ಯಾನ್‌ ಕೊಟ್ಟು ಆಟವಾಡಲು ಹೇಳುತ್ತಾರೆ, ಹಿಂಸೆ ಕೊಡುತ್ತಾರೆ ಎಂದು ಸಹ ದೂರಿನಲ್ಲಿ ತಿಳಿಸಿದ್ದಾರೆ.

ನಿತ್ಯವೂ ಮದ್ಯ ಸೇವಿಸುವ ಗಂಡ ನನ್ನೊಟ್ಟಿಗೆ ಪ್ರತಿನಿತ್ಯ ಜಗಳವಾಡುತ್ತಾರೆ. ನನಗೆ ಕುಡಿಯಲು ಇಷ್ಟವಿಲ್ಲದಿದ್ದರೂ ನನಗೆ ಕುಡಿಯುವಂತೆ ಬೆದರಿಕೆ ಹಾಕುತ್ತಾನೆ. ಅಲ್ಲದೇ ನನ್ನ ದೈಹಿಕ ಪರಿಸ್ಥಿತಿಯ ಬಗ್ಗೆ ವ್ಯಂಗ್ಯವಾಗಿ ಮಾತನಾಡಿ ನೋಯಿಸುತ್ತಾನೆ. ನನ್ನ ಮಗಳಿಗೆ ಹುಷಾರಿಲ್ಲ ಎಂದಾಗಲೂ ಮಗಳಿಗೆ ಔಷಧಿಗಳನ್ನು ತರಿಸದೆ ನನ್ನ ಹಾಗೂ ಮಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದಾನೆ. ನನ್ನನ್ನು ದುಬೈಯಿಂದ ತವರು ಮನೆಗೆ ಕಳುಹಿಸಿ ಅವರು ದುಬೈನಲ್ಲಿ ನೆಲೆಸಿದ್ದಾರೆ ಎಂದು ದೂರಿದ್ದಾಳೆ.

ಯುವತಿ ಎದುರು ಅಸಭ್ಯ ವರ್ತನೆ ತೋರಿದವ ಅಂದರ್

ಇದೇ ರೀತಿ ಕೆಲ ತಿಂಗಳ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ವಿಳಾಸ ಕೇಳುವ ನೆಪದಲ್ಲಿ ಯುವತಿಯ ಎದುರು ಪ್ಯಾಂಟ್‌ನ ಜಿಪ್ ತೆಗೆದು ಗುಪ್ತಾಂಗಗಳನ್ನು ತೋರಿಸುವ ಮೂಲಕ ಯುವತಿಯನ್ನು ಮುಜುಗರಕ್ಕೀಡು ಮಾಡಿದ ಯುವಕನನ್ನು ಬಂಧಿಸಿದ ಘಟನೆ ಅಹಮದಾಬಾದ್‌ನ ನವರಂಗಪುರದಲ್ಲಿ ಜನವರಿ 29 (ಬುಧವಾರ) ನಡೆದಿತ್ತು.

Kitchen Tips: ಓವನ್‌, ಯೀಸ್ಟ್‌ ಇಲ್ಲದೆ ಮನೆಯಲ್ಲೇ ಬ್ರೆಡ್ ತಯಾರಿಸುವುದು ಹೇಗೆ ನೋಡಿ...!

ಘಟನೆಯ ವಿವರ?ಉಸ್ಮಾನಪುರ ನಿವಾಸಿಯಾದ ಚಿರಾಗ್ ಭಾಟಿ (24) ಜನವರಿ 22 ರಂದು ತನ್ನ ದ್ವಿಚಕ್ರ ವಾಹನದಲ್ಲಿ ನವರಂಗಪುರದಲ್ಲಿರುವ ಸಂವೇದಿ ಆಸ್ಪತ್ರೆಯ ಬಳಿ ಬಂದಿದ್ದಾನೆ. ಆಗ ಆತ ಅಲ್ಲೇ ಇದ್ದ ಕಾನೂನಿನ ವಿದ್ಯಾರ್ಥಿನಿ (21) ಬಳಿ ವಿಳಾಸ ಕೇಳಿದ್ದಾನೆ. ಆಗ ಆಕೆ ವಿಳಾಸ ಹೇಳುತ್ತಿರುವ ಸಮಯದಲ್ಲಿ ಆಕೆಯ ಎದುರು ಪ್ಯಾಂಟ್‌ನ ಜಿಪ್ ತೆಗೆದು ಗುಪ್ತಾಂಗಗಳನ್ನು ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ಈತನ ಈ ದುರ್ವತನೆಯಿಂದ ಹೆದರಿದ ಯುವತಿ ಕಿರುಚಿಕೊಂಡಾಗ ಆತ ಅಲ್ಲಿಂದ ಪಲಾಯನ ಗೈದಿದ್ದಾನೆ.

ಪೊಲೀಸರು ಯುವಕನನ್ನು ಪತ್ತೆಹಚ್ಚಿದ್ದು ಹೇಗೆ?

ಯುವಕ ಈ ರೀತಿಯಲ್ಲಿ ನಡೆದುಕೊಂಡಿದ್ದನ್ನು ಖಂಡಿಸಿದ ಯುವತಿಯು ತಕ್ಷಣವೇ ಹತ್ತಿರದಲ್ಲಿದ್ದ ನವರಂಗಪುರ ಮಹಿಳಾ ಪೊಲೀಸ್ ಠಾಣೆಗೆ ತೆರಳಿ ಚಿರಾಗ್ ಭಾಟಿಯ ಮೇಲೆ ದೂರು ದಾಖಲಿಸಿದ್ದಾಳೆ. ನಂತರ ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಆತನನ್ನು ಜನವರಿ 29 ರಂದು ಬುಧವಾರ ಬಂಧಿಸಿದ್ದರು.

ಯುವಕ ಹೇಳಿದ್ದೇನು?

‘ನನ್ನ ಪತ್ನಿ ಗರ್ಭಿಣಿಯಾಗಿದ್ದಳು. ನಾನು ಕಳೆದ ಮೂರು ತಿಂಗಳಿಂದ ಆಕೆಯೊಟ್ಟಿಗೆ ಲೈಂಗಿಕ ಕ್ರಿಯೆ ನಡೆಸಿರಲಿಲ್ಲ. ಇದರಿಂದ ಬೇಸತ್ತು ಈ ರೀತಿಯಾಗಿ ವರ್ತಿಸಿದೆ’ ಎಂದು ಚಿರಾಗ್ ಬಾಟಿಯ ತನ್ನ ತಪ್ಪೊಪ್ಪಿಕೊಂಡಿದ್ದಾನೆ. ಲೈಂಗಿಕ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯ ತನಿಖೆ ನಡೆಸಿದ್ದರು.
Published by: Latha CG
First published: April 1, 2021, 7:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories