Crime News: ಪತ್ನಿ ಹಾಗೂ 3 ವರ್ಷದ ಮಗಳೊಂದಿಗೆ 12ನೇ ಮಹಡಿಯಿಂದ ಕೆಳಗೆ ಹಾರಿದ ಪೊಲೀಸ್​!

ಪತ್ನಿ ಹಾಗೂ 3 ವರ್ಷದ ಮಗಳೊಂದಿಗೆ 12ನೇ ಮಹಡಿಯಿಂದ ಕೆಳಗೆ ಹಾರಿದ ಪೊಲೀಸ್​! ಗುಜರಾತ್ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೇದೆ ಅಹಮದಾಬಾದ್‌ನ ವಸ್ತ್ರಾಪುರ ಪ್ರದೇಶದಲ್ಲಿ ಪತ್ನಿ ಮತ್ತು 3 ವರ್ಷದ ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂವರೂ ಕಟ್ಟಡದ 12 ನೇ ಮಹಡಿಯಿಂದ ಜಿಗಿದ ಕಾರಣ ಸಾವನ್ನಪ್ಪಿದ್ದಾರೆ. ಪೊಲೀಸರು ಮೂವರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.

ಆತ್ಮಹತ್ಯೆ ಮಾಡಿಕೊಂಡ ಕುಲದೀಪ್ ಸಿಂಗ್ ಯಾದವ್

ಆತ್ಮಹತ್ಯೆ ಮಾಡಿಕೊಂಡ ಕುಲದೀಪ್ ಸಿಂಗ್ ಯಾದವ್

  • Share this:
ಅಹಮದಾಬಾದ್(ಸೆ.07): ಗುಜರಾತ್‌ನ ಅಹಮದಾಬಾದ್‌ನಲ್ಲಿ (Ahmedabad) ಪೊಲೀಸ್ ಪೇದೆಯೊಬ್ಬರು ತಮ್ಮ ಪತ್ನಿ ಮತ್ತು 3 ವರ್ಷದ ಮಗಳೊಂದಿಗೆ ಕಟ್ಟಡದ 12 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಈ ಘಟನೆ ವಸ್ತ್ರಾಪುರ ಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್ (Police Constable) ಆಗಿ ನೇಮಕಗೊಂಡಿದ್ದ ಕುಲದೀಪ್ ಸಿಂಗ್ ಯಾದವ್ ಹತ್ತಿರದ ಫ್ಲ್ಯಾಟ್‌ನಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸದ್ಯಕ್ಕೆ ಘಟನಾ ಸ್ಥಳದಿಂದ ಪೊಲೀಸರಿಗೆ ಯಾವುದೇ ಸೂಸೈಡ್ ನೋಟ್ ಸಿಕ್ಕಿಲ್ಲ ಮತ್ತು ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತ ಕುಲದೀಪ್ ಮತ್ತು ಆತನ ಪತ್ನಿಯ ಫೋನ್‌ಗಳನ್ನು ತನಿಖೆಗಾಗಿ ಕಳುಹಿಸಲಾಗಿದೆ.

ಮತ್ತೊಂದೆಡೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಈ ಬಗ್ಗೆ ಪೊಲೀಸರು ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂದಿನ ಕ್ರಮ ಪ್ರಗತಿಯಲ್ಲಿದೆ ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ: ತಂದೆ & ಆತನ ಜೊತೆಗಿದ್ದ ಮಹಿಳೆಯನ್ನು ಕೊಚ್ಚಿ ಕೊಲೆಗೈದ ಮಗ..!

23 ವರ್ಷದ ಯುವಕ ಆತ್ಮಹತ್ಯೆ

ಇತ್ತೀಚೆಗೆ ಆನಂದ್ ಜಿಲ್ಲೆಯ ಮಹಿಸಾಗರ ನದಿಗೆ 23 ವರ್ಷದ ಯುವಕನೊಬ್ಬ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಯುವಕನಿಗೆ ವಿವಾಹವಾಗಿದ್ದು, ಆತನಿಗೆ ಒಂದೂವರೆ ವರ್ಷದ ಹೆಣ್ಣು ಮಗುವಿದೆ ಎಂದು ಹೇಳಲಾಗಿದೆ. ಹೀಗಿದ್ದರೂ ಯುವಕನಿಗೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಈ ವಿಚಾರ ಪತ್ನಿಗೆ ತಿಳಿದಿತ್ತು. ಆದರೂ, ಯುವಕ ತನ್ನ ಗೆಳತಿಯನ್ನು ಭೇಟಿಯಾಗುವುದನ್ನು ನಿಲ್ಲಿಸಲಿಲ್ಲ. ಆದರೆ ಗೆಳತಿ ಹುಟ್ಟುಹಬ್ಬದ ಬಳಿಕ ಭೇಟಿಯಾಗಲು ಬಾರದಿದ್ದಾಗ ಯುವಕ ಬೇಸತ್ತು ಮಹಿಸಾಗರ ನದಿಗೆ ಹಾರಿದ್ದಾನೆ. ಮರುದಿನ ನದಿಯಲ್ಲಿ ಯುವಕನ ಶವ ಪತ್ತೆಯಾಗಿತ್ತು.

ಮೃತ ಅಭಿಷೇಕ್ ದಿಲೀಪ್ ಭಾಯ್ ಆಂಬ್ಯುಲೆನ್ಸ್ ಚಾಲಕ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವು ತಿಂಗಳ ಹಿಂದೆ ಆತ ಹುಡುಗಿಯನ್ನು ಭೇಟಿಯಾಗಿದ್ದು ಮತ್ತು ಇಬ್ಬರ ನಡುವೆ ಸಂಬಂಧ ಹುಟ್ಟಿಕೊಂಡಿತ್ತಯ. ಅಭಿಷೇಕ್ ಪತ್ನಿ ಮತ್ತು ಕುಟುಂಬಕ್ಕಿಂತ ಹೆಚ್ಚಾಗಿ ತನ್ನ ಗೆಳತಿಯೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಗೃಹಿಣಿಯ ಬರ್ಬರ ಕೊಲೆ; ಗಂಡನನ್ನು ವಶಕ್ಕೆ ಪಡೆದ ಪೊಲೀಸರು!

ಈ ವಿಚಾರ ಪತ್ನಿಗೆ ಗೊತ್ತಾಗಿದ್ದು, ಬಳಿಕ ಪತಿ-ಪತ್ನಿಯ ನಡುವೆ ಜಗಳ ಆರಂಭವಾಗಿದೆ. ಮನೆಯ ಉದ್ವಿಗ್ನತೆಯಿಂದಾಗಿ, ಅಭಿಷೇಕ್ ತನ್ನ ಗೆಳತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಪ್ರಾರಂಭಿಸಿದ್ದ. ಅಷ್ಟರಲ್ಲಿ ಅಭಿಷೇಕ್ ಹುಟ್ಟುಹಬ್ಬ ಬಂದಿತ್ತು. ಅವನು ತನ್ನ ಗೆಳತಿಯನ್ನು ಭೇಟಿಯಾಗಲು ಕರೆದಿದ್ದ. ಆದರೆ ಆಕೆ ಬರಲಿಲ್ಲ.ಇದರಿಂದ ಕೋಪಗೊಂಡ ಅಭಿಷೇಕ್ ಮಹಿಸಾಗರ ನದಿಗೆ ಹಾರಿದ್ದಾನೆ.
Published by:Precilla Olivia Dias
First published: