ಹೆಂಡತಿಗೆ ಗಂಡ ಮತ್ತು ಅತ್ತೆ ಹೆಂಡತಿಗೆ ಕಾಟ ಕೊಡುವುದನ್ನು ಕೇಳಿದ್ದೇವೆ. ವರದಕ್ಷಿಣೆ (Dowry)ನೀಡುವಂತೆ ಪೀಡಿಸುವ ಹತ್ತು ಹಲವಾರು ಪ್ರಕರಣಗಳು ನಮ್ಮ ಮುಂದಿದೆ. ಹಾಗೆಯೆ ಲೈಗಿಂಕವಾಗಿ ದೌರ್ಜನ್ಯ ನಡೆಸುವ ಪ್ರಕರಣಗಳನ್ನು ನೊಡಿದ್ದೇವೆ. ಆದರೆ ಇಲ್ಲೊಬ್ಬ ಅಸಾಮಿ ಲಂಡನ್ನಿಂದ ಭಾರತದಲ್ಲಿರುವ ಹೆಂಡತಿಗೆ ವಿಡಿಯೋ ಕಾಲ್ ಮೂಲಕ ಲೈಂಗಿಕ ಚಟುವಟಿಕೆ ನಡೆಸು ಎಂದು ಪೀಡಿಸಿದ್ದಾನೆ. ಹೌದು ವಿಡಿಯೋ(Video Call) ಕಾಲ್ ಮೂಲಕ ಲೈಂಗಿಕ(Sexual Activity) ಚಟುವಟಿಕೆ ನಡೆಸುವಂತೆ ಒತ್ತಡ ಹೇರುವ ಮೂಲಕ ದೌರ್ಜನ್ಯ ಎಸಗುತ್ತಿದ್ದ ಲಂಡನ್‌ನಲ್ಲಿರುವ ಪತಿಯ ಮೇಲೆ ಹಾಗೂ ಆತನ ಆಸೆಗೆ ಸಮ್ಮತಿಸಲಿಲ್ಲ ಎಂದು ಕಿರುಕುಳ ನೀಡುತ್ತಿದ್ದ ತಂದೆ ತಾಯಿ ಮೇಲೂ ಎಂದು ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಿದ್ದಾರೆ.
ಮಹಿಳೆಯು ಅಹಮದಾಬಾದಿನ ಗೋಟಾ ಪ್ರದೇಶದ ನಿವಾಸಿಯಾಗಿದ್ದು, ಆರೋಪಿ ಪತಿಯನ್ನು ಕಳೆದ ವರ್ಷ ವಿವಾಹವಾಗಿದ್ದರು.
ಸಮುದಾಯದ ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಈತನನ್ನು ಮಹಿಳೆಯು ಕಳೆದ ವರ್ಷ ಆಗಸ್ಟ್ 21ರಂದು ವಿವಾಹವಾಗಿದ್ದರು. ಮದುವೆಯ ನಂತರ ಪ್ರತಿದಿನ ಮನೆಗೆ ಕುಡಿದು ತಡವಾಗಿ ಬರುತ್ತಿದ್ದನು. ಮದುವೆಯಾದ ತಕ್ಷಣವೇ ನನ್ನನ್ನು ಹಿಂಸೆ ನೀಡಲು ಆರಂಭಿಸಿದ್ದ. ಅಲ್ಲದೇ ಯಾವುದೇ ಮಾಹಿತಿ ನೀಡದೇ ಮದುವೆಯಾದ ಮೂರೇ ದಿನಗಳಲ್ಲಿ ಅಂದರೆ ಆಗಸ್ಟ್ 25, 2020 ರಂದು ಲಂಡನ್‍ಗೆ ಸಹ ತೆರಳಿದ. ಲಂಡನ್‍ಗೆ ಹೋಗುತ್ತಿದ್ದಂತೆ ಅಶ್ಲೀಲ ಸಂದೇಶಗಳನ್ನು ಕಳುಹಿಸಲು ಶುರು ಮಾಡಿದ. ಫೋನಿನಲ್ಲೇ ಲೈಂಗಿಕ ಚಾಟ್‍ಗೆ ಬೇಡಿಕೆ ಇಡುತ್ತಿದ್ದನು. ನನಗೆ ಪತಿಯ ವರ್ತನೆ ಇಷ್ಟವಾಗದ ಕಾರಣ ನಾನು ಇವರ ಬೇಡಿಕೆಯನ್ನು ನಿರಾಕರಿಸುತ್ತಿದ್ದೆ ಎಂದು ಎಂದು ಎಫ್‍ಐಆರ್‌ನಲ್ಲಿ ಆರೋಪಿಸಿದ್ದಾರೆ.
ಲೈಂಗಿಕ ಸಂಭಾಷಣೆಯಲ್ಲಿ ಸಹಕರಿಸದಿದ್ದಾಗ, ಅವನು ತನ್ನನ್ನು ಫೋನ್‌ನಲ್ಲಿ ನಿಂದಿಸುತ್ತಿದ್ದನು. ಫೋನ್ ಕ್ಯಾಮರಾ ಮುಂದೆ ಬಟ್ಟೆ ತೆಗೆಯಲು ಹೇಳುತ್ತಾ ಅವರು ಅಶ್ಲೀಲ ಬೇಡಿಕೆಗಳನ್ನು ಇಡುತ್ತಿದ್ದನು. ನಾನು ನಿರಾಕರಿಸಿದಂತೆ, ಅವನು ನನ್ನನ್ನು ಹೊಡೆಯುವಂತೆ ನನ್ನ ಅತ್ತೆಮಾವನನ್ನು ಪ್ರಚೋದಿಸುತ್ತಿದ್ದನು ಎಂದು ಆಕೆ ಎಫ್‍ಐಆರ್‌ನಲ್ಲಿ ಹೇಳಿದರು. ನಂತರ ಅತ್ತೆ ಮಾವ ತನ್ನ ಪತಿಯೊಂದಿಗೆ ಮಾತನಾಡಲು ಬಿಡಬಾರದೆಂದು ನಿರ್ಧರಿಸಿದರು ಎಂದು ಹೇಳಿಕೊಂಡಿದ್ದಾಳೆ.
ಅಲ್ಲದೇ ನನ್ನ ಅತ್ತೆ ಮಾವ ತನ್ನ ಮನೆಯಿಂದ ಬಂಗಾರ ಮತ್ತು ವರದಕ್ಷಿಣೆ ಹಣವನ್ನು ತರುವಂತೆ ಪೀಡಿಸುತ್ತಿದ್ದರು. ಹಣವನ್ನು ನೀಡದಿದ್ದ ಕಾರಣ ನನ್ನನ್ನು ನಿಂದಿಸುತ್ತಿದ್ದರು ಎಂದು ತಿಳಿಸಿದ್ದಾಳೆ. ನಂತರ ಪತಿಗೆ ಕೆನಡಕ್ಕೆ ಕರೆದುಕೊಂಡು ಹೋಗುವಂತೆ ಕೇಳಿದ ನಂತರ ಆತ ಕರೆದುಕೊಂಡು ಹೋಗುವುದಿಲ್ಲ ಎಂದು ಹೇಳಿ ವಿಚ್ಛೇದನ ನೀಡುವುದಾಗಿ ಹೇಳಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.
ಮಹಿಳೆಯು ಕೊನೆಗೆ ಅಕ್ಟೋಬರ್ 17, 2020 ರಂದು ತನ್ನ ತಂದೆ ತಾಯಿ ಬಳಿ ಹೋಗಿದ್ದಳು, ಆಗ ಪೋಷಕರು ಆಕೆಯ ಪತಿ ಮತ್ತು ಅತ್ತೆಯೊಂದಿಗೆ ರಾಜಿ ಮಾಡಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಅವರು ಅವಳನ್ನು ಒಪ್ಪಿಕೊಳ್ಳದಿದ್ದರಿಂದ ಆಕೆ ಪೊಲೀಸರನ್ನು ಸಂಪರ್ಕಿಸಿ ತನ್ನ ಪತಿ ಮತ್ತು ಅತ್ತೆಯರ ವಿರುದ್ಧ ಕೌಟುಂಬಿಕ ದೌರ್ಜನ್ಯದ ದೂರನ್ನು ದಾಖಲಿಸಿದ್ದಾಳೆ.
ಕೆಲವು ದಿನಗಳ ಹಿಂದೆ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಮಹಿಳೆಯೊಬ್ಬಳು ತನ್ನ ಮೂರು ವರ್ಷದ ಮಗುವನ್ನು ಬಿಟ್ಟು ಲೂದಿಯಾನದಲ್ಲಿನ ನಾಮದೇವ್ ಕಾಲೋನಿಯಲ್ಲಿರುವ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಐದು ವರ್ಷಗಳ ಹಿಂದೆ ಮದುವೆಯಾಗಿದ್ದ ಆಕೆ ತನ್ನ ಡೆತ್ ನೋಟಿನಲ್ಲಿ ಪತಿ ಹಾಗೂ ಅತ್ತೆ, ಮಾವ ಹಣಕ್ಕಾಗಿ ಪೀಡಿಸುತ್ತಿದ್ದರು ಎಂದು ಬರೆದಿದ್ದಾಳೆ. ಈ ಬಗ್ಗೆ ಪ್ರತಿಕ್ರಿಯಿಸಿದ ತಾಯಿಯು, ಅಳಿಯ ನಿರುದ್ಯೋಗಿಯಾಗಿದ್ದ, ಹಣವನ್ನು ತರುವಂತೆ ಪೀಡಿಸುತ್ತಿದ್ದನಲ್ಲದೇ ಕೆಲಸಕ್ಕೆ ಹೋಗುವಂತೆ ಒತ್ತಡ ಹಾಕುತ್ತಿದ್ದನು ಎಂದು ಆರೋಪಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ