Nurses: ನರ್ಸ್​ಗಳಲ್ಲಿ ವಲಸೆ ಹೋಗಲು ಹೆಚ್ಚುತ್ತಿದೆ ಆಸಕ್ತಿ; ಕಾರಣವೇನು?

ಕಳೆದ ಎರಡು ವರ್ಷಗಳು ಜಗತ್ತು ಭಯಾನಕ ಪರಿಸ್ಥಿತಿಯನ್ನು ಎದುರಿಸಬೇಕಾಗಿತ್ತು. ಕೋವಿಡ್ ಸಂಕ್ರಮಣ, ಅದರಿಂದ ಉಂಟಾದ ಸಾವು, ಲಾಕ್ಡೌನುಗಳು, ಅದರಿಂದ ಉಂಟಾದ ಆರ್ಥಿಕ ನಷ್ಟಗಳು, ಕೆಲಸದ ನಷ್ಟಗಳು ಒಂದೇ ಎರಡೇ ಹೀಗೆ ಹಲವು ಕಠಿಣ ಪರಿಸ್ಥಿತಿಗಳನ್ನು ಜಗತ್ತಿನ ಎಲ್ಲ ದೇಶಗಳು ಅನುಭವಿಸಿವೆ. ಈ ಸಂದರ್ಭದಲ್ಲಿ ಬೇಡಿಕೆ ಹೆಚ್ಚಿದ್ದು ಮಾತ್ರ ಆಸ್ಪತ್ರೆ, ವೈದ್ಯರುಗಳು ಹಾಗೂ ನರ್ಸುಗಳಿಗೆ ಎಂದರೆ ತಪ್ಪಿಲ್ಲ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕಳೆದ ಎರಡು ವರ್ಷಗಳು ಜಗತ್ತು ಭಯಾನಕ ಪರಿಸ್ಥಿತಿಯನ್ನು ಎದುರಿಸಬೇಕಾಗಿತ್ತು. ಕೋವಿಡ್ ಸಾಂಕ್ರಾಮಿಕ, ಅದರಿಂದ ಉಂಟಾದ ಸಾವು, ಲಾಕ್ಡೌನುಗಳು (Lockdown) ಅದರಿಂದ ಉಂಟಾದ ಆರ್ಥಿಕ ನಷ್ಟಗಳು, ಕೆಲಸದ ನಷ್ಟಗಳು ಒಂದೇ ಎರಡೇ ಹೀಗೆ ಹಲವು ಕಠಿಣ ಪರಿಸ್ಥಿತಿಗಳನ್ನು ಜಗತ್ತಿನ ಎಲ್ಲ ದೇಶಗಳು ಅನುಭವಿಸಿವೆ. ಈ ಸಂದರ್ಭದಲ್ಲಿ ಬೇಡಿಕೆ ಹೆಚ್ಚಿದ್ದು ಮಾತ್ರ ಆಸ್ಪತ್ರೆ (Hospital), ವೈದ್ಯರುಗಳು ಹಾಗೂ ನರ್ಸುಗಳಿಗೆ (Nurse) ಎಂದರೆ ತಪ್ಪಿಲ್ಲ. ಆದಾಗ್ಯೂ ಈಗ ಕೋವಿಡ್ ಉಲ್ಬಣ ಮುಂಚಿನಂತಿಲ್ಲ. ಜಗತ್ತು ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಆದರೂ ವೈದ್ಯಕೀಯ ಹಾಗೂ ಆರೈಕೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈಗಲೂ ನರ್ಸುಗಳ ಬೇಡಿಕೆ ರಾಷ್ಟ್ರೀಯ (National) ಹಾಗೂ ಅಂತಾರಾಷ್ಟ್ರೀಯ (International) ಮಟ್ಟದಲ್ಲಿ ಹೆಚ್ಚಾಗುತ್ತಲೇ ಇದೆ.

ಮಲಯಾಳಿ ಭಾಷಿಕ ನರ್ಸುಗಳು
ಭಾರತದ ಮಟ್ಟಿಗೆ ಹೇಳುವುದಾದರೆ ಅದರಲ್ಲೂ ನರ್ಸಿಂಗ್ ಕ್ಷೇತ್ರದಲ್ಲಿ ಗಮನಿಸಿದರೆ ದೇಶದ ಒಂದು ಪುಟ್ಟ ರಾಜ್ಯ ಸಮಸ್ತ ದೇಶದಲ್ಲೇ ನರ್ಸುಗಳ ವಿಷಯ ಬಂದಾಗ ಎತ್ತಿದ ಕೈಹೊಂದಿದೆ.  ಆ ರಾಜ್ಯವೇ ಕೇರಳ. ಹೌದು, ಮಲಯಾಳಿ ಭಾಷಿಕ ನರ್ಸುಗಳು ಈ ಕ್ಷೇತ್ರದಲ್ಲಿ ಅತಿ ಮಂಚೂಣಿಯಲ್ಲಿದ್ದಾರೆ ಎಂದರೂ ತಪ್ಪಾಗಲಾರದು. ಯಾವುದೇ ಭಾಗದ ದೊಡ್ಡ ದೊಡ್ಡ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿರುವ ನರ್ಸುಗಳಲ್ಲಿ ಬಹುಪಾಲು ಮಲಯಾಳಿಗರೆ ಇರುವುದನ್ನು ನಾವು ಗಮನಿಸಬಹುದು.

ನರ್ಸುಗಳಿಗಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ
ಈಗ ಅಹ್ಮದಾಬಾದಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲೂ ಶೇ. 50ಕ್ಕಿಂತ ಹೆಚ್ಚು ವೈದ್ಯಕೀಯ ಸಿಬ್ಬಂದಿ ಮಲಯಾಳಿಗರೆ ಆಗಿದ್ದಾರೆ. ಆದರೆ ಪೋಸ್ಟ್ ಕೋವಿಡ್ ಸಂದರ್ಭವು ನರ್ಸುಗಳಿಗಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಬೇಡಿಕೆ ನಿರ್ಮಾಣವಾಗುವಂತೆ ಮಾಡಿದೆ. ಇದರ ಪರಿಣಾಮದಿಂದಾಗಿ ಈಗ ನಗರದ ಹಲವು ದೊಡ್ಡ ಆಸ್ಪತ್ರೆಗಳು ಕಳೆದ ಒಂದು ವರ್ಷದಲ್ಲಿ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನುರಿತ ಹಾಗೂ ಪರಿಣಿತ ನರ್ಸುಗಳನ್ನು ಕಳೆದುಕೊಂಡಿದೆ.

ಈ ಕ್ಷೇತ್ರದ ಹಲವು ಪರಿಣಿತರ ಪ್ರಕಾರ, ಭಾರತದಲ್ಲಿ ಈಗ ಮೂರನೇ ಅಲೆಯ ನಂತರ ಆಸ್ಪತ್ರೆಗಳು ಮತ್ತೆ ಸಕ್ರಿಯವಾಗುತ್ತಿವೆ. ಸ್ಥಿರವಾಗಿ ಏರುತ್ತಿರುವ ಕೋವಿಡ್ ಪ್ರಕರಣಗಳು ಮುಂದಿನ ದಿನಗಳಲ್ಲಿ ಮತ್ತೆ ಏರಿಕೆ ಏನಾದರೂ ಕಂಡರೆ ಅದನ್ನು ನಿಭಾಯಿಸಲು ಸಮರ್ಪಕ ಸಂಖ್ಯೆಯಲ್ಲಿ ನರ್ಸುಗಳಿಲ್ಲದೆ ಆಸ್ಪತ್ರೆಗಳು ಹೆಣಗಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಡಿಮೆ ವೇತನವೇ ಇದಕೆಲ್ಲಾ ಕಾರಣ
ಶಾಲ್ಬಿ ಗ್ರೂಪ್ ಆಫ್ ಹಾಸ್ಪಿಟಲ್ಸ್ ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿಯಾದ ಬಾಬು ಥಾಮಸ್ ಹೇಳುವಂತೆ, ಅವರ ಆಸ್ಪತ್ರೆಯಲ್ಲಿ ಈ ಹಿಂದೆ 200ಕ್ಕೂ ಸ್ವಲ್ಪ ಹೆಚ್ಚು ಕೇರಳ ಮೂಲದ ನರ್ಸುಗಳು ಕೆಲಸ ಮಾಡುತ್ತಿದ್ದರು ಆದರೆ ಈಗ ಕೋವಿಡ್ ನಂತರದ ಸಂದರ್ಭದಲ್ಲಿ ಅವರ ಸಂಖ್ಯೆ 60-70ಕ್ಕೆ ಇಳಿದಿದೆ.

ಇದನ್ನೂ ಓದಿ:  Viral Video: ಮಗನ ಮೃತ ದೇಹ ಪಡೆಯಲು ಪೋಷಕರು ಪಡುವ ಕಷ್ಟ ನೋಡಿ; ಈ ವಿಡಿಯೋ ನೋಡ್ತಿದ್ರೆ ಮನಕಲಕುತ್ತೆ

ಇದಕ್ಕೆ ಒಂದು ಪ್ರಮುಖ ಕಾರಣ ಎಂದರೆ ಕೇರಳದಲ್ಲಿ ಕನಿಷ್ಠ ವೇತನ 22,000 ರೂಪಾಯಿಗಳಾಗಿದ್ದು ಗುಜರಾತಿನಲ್ಲಿ ಕೋವಿಡ್ ಹೆಚ್ಚಳದ ನಂತರವೂ ಆ ಮೊತ್ತ 15-20 ಸಾವಿರ ರೂಪಾಯಿಗಳಾಗಿರುವುದೇ ಆಗಿದೆ ಎನ್ನುತ್ತಾರೆ ಥಾಮಸ್. ಆದರೆ ಅವರು ಇನ್ನೊಂದು ಆಸಕ್ತಿಕರ ವಿಷಯ ಹೊರಹಾಕುತ್ತಾರೆ. ಅದೇನೆಂದರೆ, ಇದೀಗ ಸ್ಪರ್ಧಾತ್ಮಕ ವೇತನಗಳಿಗೆ ಹೊಂದಿಕೊಳ್ಳುತ್ತ ರಾಜಸ್ಥಾನ ಹಾಗೂ ಮಧ್ಯಪ್ರದೇಶಗಳ ಮೂಲದ ಪುರುಷ ನರ್ಸುಗಳು ಇಲ್ಲಿ ಆಗಮಿಸುತ್ತಿದ್ದಾರೆ.

ಗಲ್ಫ್ ದೇಶಗಳು ಸದ್ಯ ನರ್ಸುಗಳ ಆಕರ್ಷಕ ಕೆಲಸದ ತಾಣ
ಆದಾಗ್ಯೂ, ಹೊರದೇಶಗಳಲ್ಲಿ ನರ್ಸುಗಳಿಗೆ ಹೆಚ್ಚುತ್ತಿರುವ ಬೇಡಿಕೆ ನರ್ಸುಗಳು ತೊರೆಯಲು ಇನ್ನೊಂದು ಕಾರಣವಾಗಿದ್ದು ಪ್ಯಾಂಡೆಮಿಕ್ ಸಮಯದ ತಮ್ಮ ಅನುಭವವನ್ನು ಅವರು ಇನ್ನಷ್ಟು ಎನ್ಕ್ಯಾಶ್ ಮಾಡಿಕೊಳ್ಳುತ್ತಿರುವುದಾಗಿ ಸ್ಟರ್ಲಿಂಗ್ ಆಸ್ಪತ್ರೆಯ ವೈಸ್ ಪ್ರೆಸಿಡೆಂಟ್ ಆಗಿರುವ ನಮಿಶಾ ಗಾಂಧಿ ಹೇಳುತ್ತಾರೆ. ಗಲ್ಫ್ ದೇಶಗಳು ಸದ್ಯ ನರ್ಸುಗಳ ಆಕರ್ಷಕ ಕೆಲಸದ ತಾಣವಾಗಿ ಹೊರಹೊಮ್ಮಿದೆ ಎಂದು ನಮಿಶಾ ತಿಳಿಸುತ್ತಾರೆ.

ಆಸ್ಪತ್ರೆಗಳು ಎದುರಿಸುತ್ತಿರುವ ಸಿಬ್ಬಂದಿ ಕೊರತೆ ಬಹು ಆತಂಕಕಾರಿಯಾದ ವಿಷಯ
ಅಹ್ಮದಾಬಾದ್ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ನಿನ ಅಧ್ಯಕ್ಷರಾದ ಡಾ. ಭರತ್ ಗಡ್ವಿ ಅವರು ಹೇಳುವಂತೆ ನಗರದ ಹಲವು ದೊಡ್ಡ ಆಸ್ಪತ್ರೆಗಳು ಎದುರಿಸುತ್ತಿರುವ ಸಿಬ್ಬಂದಿ ಕೊರತೆ ಬಹು ಆತಂಕಕಾರಿಯಾದ ವಿಷಯವಾಗಿದೆ. ಈ ಕ್ಷೇತ್ರದಲ್ಲಿ ಈಗ ಹೊಸದಾಗಿ ತಲೆ ಎತ್ತುತ್ತಿರುವ ಆಸ್ಪತ್ರೆಗಳು ಹಾಗೂ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಗಳು ಮತ್ತಷ್ಟು ವಿಸ್ತೃತವಾಗುತ್ತಿರುವುದು ಮಗದೊಂದು ಕಾರಣವಾಗಿದೆ ಎನ್ನುತ್ತಾರೆ.

ಇದನ್ನೂ ಓದಿ:  Spiritual Tourism: ಕೋವಿಡ್ ಬಂದ್ಮೇಲೆ ಭಾರತದಲ್ಲಿ ದೇವರ ದರ್ಶನ ಮಾಡುವವರ ಸಂಖ್ಯೆ ಹೆಚ್ಚಳ! ಕಾರಣ ಏನು ಗೊತ್ತಾ?

ಮುಂದುವರೆಯುತ್ತ ಅವರು, ಕೇರಳದ ನರ್ಸುಗಳು ತಮ್ಮ ಅನುಭವ ಹಾಗೂ ಕಾರ್ಯಕ್ಷಮತೆಯಿಂದಾಗಿ ಈ ಕ್ಷೇತ್ರದ ಬೆನ್ನೆಲುಬಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಅವರೆಲ್ಲರಿಗೂ ಹೆಚ್ಚಿನ ಇನ್ಸೆಂಟಿವ್ ನೀಡಲಾಗುತ್ತಿತ್ತು. ಆದರೆ, ಈಗ ಶೂನ್ಯ ಕೋವಿಡ್ ಪ್ರಕರಣಗಳಿಂದಾಗಿ ಇನ್ಸೆಂಟಿವ್ ನಿಲ್ಲಿಸಲಾಗಿದ್ದು ಅವರು ಹೆಚ್ಚಿನ ಅವಕಾಶಕ್ಕಾಗಿ ಬೇರೆಡೆ ವಲಸೆ ಹೋಗುತ್ತಿರುವುದಾಗಿ ಡಾ. ಭರತ್ ತಿಳಿಸುತ್ತಾರೆ.
Published by:Ashwini Prabhu
First published: