ಅಹಮದಾಬಾದ್: ಕಳೆದ ವರ್ಷ ಅಕ್ಟೋಬರ್‌ನಲ್ಲಿ ಲಂಚದ ಕೇಸ್‌ನಲ್ಲಿ (Case) ತನ್ನ ಸಹೋದ್ಯೋಗಿಗೆ ತಪ್ಪಿಸಿಕೊಳಲು ಸಹಾಯ (Help) ಮಾಡಿದ ಆರೋಪದ ಮೇಲೆ ಆದಾಯ ತೆರಿಗೆ ಅಧಿಕಾರಿಯೊಬ್ಬರನ್ನು ಕೇಂದ್ರೀಯ ತನಿಖಾ ದಳ ಬಂಧಿಸಿದೆ. ಲಂಚ ತೆಗೆದುಕೊಂಡಿದ್ದಾರೆ ಎಂಬ ದೂರಿನ ಅನ್ವಯ ಕಳೆದ ವರ್ಷ ಗುಜರಾತ್ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಯೊಬ್ಬರಿಗೆ ಬಲೆ ಬೀಸಿತ್ತು. ಈ ವೇಳೆ ಆರೋಪಿ ಅಧಿಕಾರಿಯನ್ನು ಪ್ರಕರಣದಿಂದ ಬಜಾವ್ (Safe) ಮಾಡಲು ಇನ್ನೋರ್ವ ಅಧಿಕಾರಿ ಸಹಾಯ ಮಾಡಿದ್ದರು. ಈಗ ಈ ಸಂಬಂಧ ಸಹಾಯ ಮಾಡಿರುವ ಅಧಿಕಾರಿಯನ್ನು ಸಹ ಬಂಧಿಸಲಾಗಿದೆ.
ಏನಿದು ಪ್ರಕರಣ?
ಅಹಮದಾಬಾದ್‌ನ ಅಂದಿನ ಆದಾಯ ತೆರಿಗೆ ಹೆಚ್ಚುವರಿ ಆಯುಕ್ತರಾಗಿದ್ದ ಐಆರ್‌ಎಸ್ ಅಧಿಕಾರಿ ಸಂತೋಷ್ ಕರ್ಣಾನಿ ಅವರ ವಿರುದ್ಧ ಲಂಚದ ಆರೋಪ ಕೇಳಿ ಬಂದಿತ್ತು. ರೆಡ್ ಹ್ಯಾಂಡ್ ಆಗಿ ಹಿಡಿಯಲು ಭ್ರಷ್ಟಾಚಾರ ನಿಗ್ರಹ ದಳ ಕಚೇರಿಗೆ ಧಾವಿಸಿತ್ತು. ಆದರೆ ಈ ಸಂಕಷ್ಟದಿಂದ ಸಹೋದ್ಯೋಗಿಯನ್ನು ಪಾರು ಮಾಡಲು ಆದಾಯ ತೆರಿಗೆ ಸಹಾಯಕ ಆಯುಕ್ತ ವಿವೇಕ್ ಜೋಹ್ರಿ, ಕರ್ಣಾನಿ ಅವರಿಗೆ ಸಹಾಯ ಮಾಡಿದ್ದರು. ಹೀಗೆ ಲಂಚದ ಪ್ರಕರಣಕ್ಕೆ ಕುಮ್ಮುಕ್ಕು ನೀಡಿದ ಮತ್ತು ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಪ್ರಕರಣದಲ್ಲಿ ಅಧಿಕಾರಿ ವಿವೇಕ್ ಜೋಹ್ರಿ ಅವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ನಗರ ಮೂಲದ ಬಿಲ್ಡರ್ ರೂಪೇಶ್ ಬ್ರಹ್ಮಭಟ್ ಅವರು ಗುಜರಾತ್ ಎಸಿಬಿಯನ್ನು ಸಂಪರ್ಕಿಸಿದ ನಂತರ ಕರ್ಣಾನಿ ಅವರು ತಮ್ಮ ವಿರುದ್ಧ ಕ್ರಮ ಕೈಗೊಳ್ಳದಿದ್ದಕ್ಕಾಗಿ ₹ 30 ಲಕ್ಷ ಲಂಚ ಕೇಳಿದ್ದಾರೆ ಎಂದು ಆರೋಪಿಸಿ ಬಲೆ ಬೀಸಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: Bangarpet Chats Secret: ಬಂಗಾರ್ಪೇಟ್ ಚಾಟ್ಸ್ ಹುಟ್ಟಿದ್ದೇಗೆ? ಇದು ಬಿಳಿ ಪಾನಿ ಹಿಂದಿನ ಕಥೆ!
ಕರ್ಣಾನಿಗೆ ಸಹಾಯ ಮಾಡಿದ ಜೋಹ್ರಿ
ಟ್ರ್ಯಾಪ್ ಪ್ರಕ್ರಿಯೆಯ ಭಾಗವಾಗಿ ₹ 30 ಲಕ್ಷ ವಸೂಲಿ ಮಾಡಿದ ನಂತರ ಕರ್ಣಾನಿಯನ್ನು ಬಂಧಿಸಲು ಎಸಿಬಿ ತಂಡವು ಆಶ್ರಮ ರಸ್ತೆಯಲ್ಲಿರುವ ಆದಾಯ ತೆರಿಗೆ ಕಚೇರಿಗೆ ತೆರಳಿತ್ತು. ಆದರೆ ಈ ವೇಳೆ ಜೋಹ್ರಿ ಕರ್ಣಾನಿ ಅವರನ್ನು ಸ್ಥಳದಿಂದ ಪರಾರಿಯಾಗಲು ಸಹಾಯ ಮಾಡಿದರು ಎಂದು ಹೇಳಿಕೆಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಎಲ್ಲಾ ಬೆಳಣಿಗೆಯ ನಂತರ ಗುಜರಾತ್ ಸರ್ಕಾರವು ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿತು ಮತ್ತು ಅಕ್ಟೋಬರ್ 12 ರಂದು ಎಫ್ಐಆರ್ ಕೂಡ ದಾಖಲು ಮಾಡಿತು.
ಕರ್ಣಾನಿ ಅವರ ಫೋನ್‌ಗಳನ್ನು ಎಸೆದು ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದ ಜೋಹ್ರಿ
ಕರ್ಣಾನಿ ಅವರು ತಪ್ಪಿಸಿಕೊಳ್ಳುವ ಮೊದಲು ಎರಡು ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಜೋಹ್ರಿಗೆ ಹಸ್ತಾಂತರಿಸಿದ್ದರು. ಆದರೆ ಬುದ್ಧಿವಂತ ಅಧಿಕಾರಿ ಅವರ ಬಗ್ಗೆ ಸಾಕ್ಷ್ಯ ನಾಶಪಡಿಸಲು ಎರಡೂ ಫೋನ್‌ಗಳನ್ನು ಸಾಬರಮತಿ ನದಿಗೆ ಎಸೆದಿದ್ದರು. ಜೋಹ್ರಿ ಅವರು ಕರ್ಣಾನಿ ಅವರ ನಿರ್ದೇಶನದ ಮೇರೆಗೆ ಎರಡು ಮೊಬೈಲ್ ಫೋನ್‌ಗಳನ್ನು ಸಾಬರಮತಿ ನದಿಗೆ ಎಸೆದು ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದ ಸಿಬಿಐ ಸೋಮವಾರದ ಪ್ರಕಟಣೆಯಲ್ಲಿ, ಸಿಬಿಐ ಎರಡೂ ಮೊಬೈಲ್‌ಗಳನ್ನು ಸಬರಮತಿ ನದಿಯಿಂದ ಹೊರತೆಗೆಯಲಾಗಿದೆ ಮತ್ತು ಜೋಹ್ರಿ ಅವರನ್ನು ಸಹ ಬಂಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಡೈವರ್‌ಗಳು ಮತ್ತು ಇತರ ಏಜೆನ್ಸಿಗಳ ಸಹಾಯದಿಂದ ಡೈವಿಂಗ್ ಉಪಕರಣಗಳು ಮತ್ತು ಸೋನಾರ್ ತಂತ್ರಜ್ಞಾನವನ್ನು ಹೊಂದಿದ ರಿಮೋಟ್ ಚಾಲಿತ ವಾಹನವನ್ನು ಬಳಸಿಕೊಂಡು ಎರಡೂ ಮೊಬೈಲ್ ಫೋನ್‌ಗಳನ್ನು ನದಿಯಿಂದ ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ತಿಳಿಸಿದ್ದಾರೆ.
ಸಂಬಂಧಿತ ಬೆಳವಣಿಗೆಯಲ್ಲಿ, ಸುಪ್ರೀಂ ಕೋರ್ಟ್ ಕರ್ಣಾನಿಗೆ ನೀಡಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಿದೆ. ಕರ್ಣಾನಿ ತನಿಖಾ ಅಧಿಕಾರಿಗಳ ಮುಂದೆ ಹಾಜರಾಗಲು ನಿರಾಕರಿಸಿದ್ದು ನಂತರ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದರು, ಇದನ್ನು ಹೈಕೋರ್ಟ್ ಮಂಜೂರು ಮಾಡಿದೆ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ದಾಖಲಿಸಿ ಕಳೆದ ಅಕ್ಟೋಬರ್‌ನಲ್ಲಿ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ