Ahmadabad Lift Collapse: 7 ಅಂತಸ್ತಿನಿಂದ ಲಿಫ್ಟ್ ಕುಸಿತ; ಭೀಕರ ಅವಘಡದಲ್ಲಿ 8 ಜನರ ಸಾವು

ನಿರ್ಮಾಣ ಹಂತದಲ್ಲಿ ಇದ್ದ ಕಟ್ಟಡ ಕುಸಿದು ಕಾರ್ಮಿಕರು ಮೃತಪಟ್ಟ ಘಟನೆ ಇದೀಗ ತಾನೇ ವರದಿಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಅಹಮದಾಬಾದ್: ನಿರ್ಮಾಣ ಹಂತದಲ್ಲಿರುವ ಕಟ್ಟಡದ ಲಿಫ್ಟ್ 7ನೇ ಮಹಡಿಯಲ್ಲಿ​ ಕುಸಿದು 8 ಜನರು ಸಾವನ್ನಪ್ಪಿರುವ (Ahmadabad Lift Collapse) ದುರ್ಘಟನೆ ಗುಜರಾತ್​ನ ಅಹ್ಮದಾಬಾದ್​ನಲ್ಲಿ ನಡೆದಿದೆ. ಅಲ್ಲದೇ ಹಲವು ಜನರು ಈ ಭೀಕರ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಅಹ್ಮದಾಬಾದ್​ ವಿಶ್ವವಿದ್ಯಾಲಯದ ನಿರ್ಮಾಣ ಹಂತದ ಕಟ್ಟದಲ್ಲೇ ಈ ಅವಘಡ ಸಂಭವಿಸಿದೆ.  ಕಟ್ಟಡ ಕುಸಿತದ (Elevator Collapse) ಸುದ್ದಿ ತಿಳಿಯುವುದೇ ತಡವಾಗಿದ್ದು ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ತುರ್ತು ನಿರ್ವಹಣಾ ದಳ ಸ್ಥಳಕ್ಕೆ ಆಗಮಿಸಿದೆ ಎಂದು ವರದಿಯಾಗಿದೆ.  ಅಲ್ಲದೇ ಕಟ್ಟಡ ನಿರ್ಮಾಣ ಸಂಸ್ಥೆಯ ವತಿಯಿಂದಲೂ ಯಾವುದೇ ಮಾಹಿತಿಯನ್ನು ರವಾನಿಸಿರಲಿಲ್ಲ ಎಂದು ಹೇಳಲಾಗಿದೆ.

    ಖಾಸಗಿ ನಿರ್ಮಾಣ ಸಂಸ್ಥೆ ಈ ಕಟ್ಟಡವನ್ನು ನಿರ್ಮಾಣ ಮಾಡುತ್ತಿದೆ.  ಹೀಗಾಗಿ ಕಟ್ಟಡ ಕಟ್ಟಲು ಅಗತ್ಯ ಪರವಾನಗಿ ಪಡೆಯಲಾಗಿದೆಯೇ? ಎಲ್ಲ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೇ ಎಂದು ಪರಿಶೀಲಿಸಲಾಗುವುದು ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.

    ಮಕ್ಕಳ ಕಳ್ಳರು ಎಂದು ಸಾಧುಗಳಿಗೆ ಥಳಿತ
    ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ಆತಂಕದ ಮಾತು ನಮ್ಮ ಹಳ್ಳಿಗಳ ಕಡೆ ಆಗಾಗ ಕೇಳಿಬರುತ್ತಲೇ ಇರುತ್ತದೆ. ಮಕ್ಕಳ ಕಳ್ಳರು ಎಂದು ಆರೋಪಿಸಿ ಊರವರೆಲ್ಲ ಹಿಗ್ಗಾಮುಗ್ಗಾ ಥಳಿಸಿದ ಘಟನೆಗಳೂ ವರದಿಯಾಗುತ್ತಲೇ ಇರುತ್ತವೆ.

    ಇದನ್ನೂ ಓದಿ: Actress Rape: ಯುವನಟಿ ಮೇಲೆ ಹಲವು ಬಾರಿ ರೇಪ್; ಪೊಲೀಸರಿಂದ ಬಿಲ್ಡರ್ ಬಂಧನ

    ನಾಲ್ವರು ಸಾಧುಗಳ ಮೇಲೆ ಗುಂಪೊಂದು ಮಕ್ಕಳನ್ನು ಕದಿಯುವವರು ಎಂದು ಶಂಕಿಸಿ ಹಲ್ಲೆ ನಡೆಸಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಲವಣ ಗ್ರಾಮದಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಆದರೆ ನಾಲ್ವರ ಮೇಲೆ ದಾಳಿಯಾದ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: Supreme Court: ಚುನಾವಣೆಯಲ್ಲಿ ಸ್ಪರ್ಧೆ; ಸುಪ್ರೀಂ ಮಹತ್ವದ ಆದೇಶ

    ನಾವು ಯಾವುದೇ ದೂರು ಅಥವಾ ಔಪಚಾರಿಕ ವರದಿಯನ್ನು ಸ್ವೀಕರಿಸಿಲ್ಲ. ಆದರೆ ವೈರಲ್ ವಿಡಿಯೊಗಳನ್ನು ಪರಿಶೀಲಿಸುತ್ತಿದ್ದೇವೆ. ಅಲ್ಲದೇ ಆ ನಾಲ್ವರು ನಿಜಕ್ಕೂ ಸಾಧುಗಳೇ ಅಥವಾ ಮಕ್ಕಳ ಕಳ್ಳರೇ ಎಂದು ಸತ್ಯವನ್ನು ಪರಿಶೀಲಿಸುತ್ತಿದ್ದೇವೆ. ಈ ಘಟನೆಯ ಕುರಿತು ಖಂಡಿತವಾಗಿಯೂ ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ ಎಂದು ಸಾಂಗ್ಲಿ ಎಸ್​ಪಿ ದೀಕ್ಷಿತ್ ಗೆಡಮ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ANI ತಿಳಿಸಿದೆ.

    ಪಂಡರಾಪುರಕ್ಕೆ ತೆರಳುತ್ತಿದ್ದ ಸಾಧುಗಳು
    ಉತ್ತರ ಪ್ರದೇಶದ ನಾಲ್ವರು ಸಾಧುಗಳು ಕರ್ನಾಟಕದ ವಿಜಯಪುರದಿಂದ ದೇವಸ್ಥಾನದ ಪಟ್ಟಣವಾದ ಪಂಡರಾಪುರಕ್ಕೆ ತೆರಳುತ್ತಿದ್ದಾಗ ಬಾಲಕನೊಬ್ಬನಿಗೆ ದಾರಿ ಕೇಳಿದ್ದಾರೆ. ಅವರು ಮಕ್ಕಳನ್ನು ಅಪಹರಿಸುವ ಗ್ಯಾಂಗ್‌ನವರೇ ಎಂದು ಸ್ಥಳೀಯರು ಶಂಕಿಸಿದ್ದಾರೆ. ತಕ್ಷಣ ಕೋಲುಗಳನ್ನು ಹಿಡಿದುಕೊಂಡು ಆ ನಾಲ್ವರ ಮೇಲೆ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
    Published by:ಗುರುಗಣೇಶ ಡಬ್ಗುಳಿ
    First published: