• Home
  • »
  • News
  • »
  • national-international
  • »
  • Morbi Bridge: ಮೊರ್ಬಿ ದುರಂತ ಕಲಿಸಿದ ಪಾಠ: ಅಟಲ್ ಸೇತುವೆ ಪ್ರವೇಶಕ್ಕೆ ಮಿತಿ ಹೇರಿದ ಆಡಳಿತ

Morbi Bridge: ಮೊರ್ಬಿ ದುರಂತ ಕಲಿಸಿದ ಪಾಠ: ಅಟಲ್ ಸೇತುವೆ ಪ್ರವೇಶಕ್ಕೆ ಮಿತಿ ಹೇರಿದ ಆಡಳಿತ

ಅಟಲ್ ಸೇತುವೆ

ಅಟಲ್ ಸೇತುವೆ

Ahmedabad Atal Bridge: ಮೊರ್ಬಿಯಲ್ಲಿ ತೂಗುಸೇತುವೆ ಕುಸಿದು 134 ಮಂದಿ ಸಾವನ್ನಪ್ಪಿದ ಒಂದು ದಿನದ ನಂತರ, ಅಹಮದಾಬಾದ್ ಮುನ್ಸಿಪಾಲಿಟಿ ಸೋಮವಾರ ನಗರದ ಸಾಬರಮತಿ ನದಿಯ ಮೇಲೆ ನಿರ್ಮಿಸಲಾದ ಅಟಲ್ ಸೇತುವೆಯ ಪ್ರವೇಶಕ್ಕೆ ಕೆಲ ಮಿತಿಗಳನ್ನು ಹೇರಿದೆ. ಈ ಸೇತುವೆ ಮೇಲೆ ಪ್ರತಿ ಗಂಟೆಗೆ ಕೇವಲ 3,000 ಜನರಷ್ಟೇ ಓಡಾಡಬಹುದಾಗಿದೆ.

ಮುಂದೆ ಓದಿ ...
  • News18 Kannada
  • Last Updated :
  • Ahmadabad (Ahmedabad) [Ahmedabad], India
  • Share this:

ಅಹಮದಾಬಾದ್(ನ.01): ಮೊರ್ಬಿಯಲ್ಲಿ (Morbi Bridge Collapse) ತೂಗು ಸೇತುವೆ ಕುಸಿದು 134 ಜನರು ಸಾವನ್ನಪ್ಪಿದ ಒಂದು ದಿನದ ನಂತರ, ಅಹಮದಾಬಾದ್ (Ahmedabad) ಮುನ್ಸಿಪಾಲಿಟಿ ಸೋಮವಾರ ನಗರದ ಸಾಬರಮತಿ ನದಿಯ ಮೇಲಿನ ಅಟಲ್ ಸೇತುವೆಯಲ್ಲಿ ಓಡಾಡುವವರ ಸಂಖ್ಯೆ ಪ್ರತಿ ಗಂಟೆಗೆ 3,000ಕ್ಕೆ ಸೀಮಿತಗೊಳಿಸಲು ನಿರ್ಧರಿಸಿದೆ. ಜನರ ಸುರಕ್ಷತೆ ದೃಷ್ಟಿಯಿಂದ ಮುಂಜಾಗ್ರತೆ ವಹಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. 300-ಮೀಟರ್ ಉದ್ದ ಮತ್ತು 14-ಮೀಟರ್ ಅಗಲದ ಅಟಲ್ ಸೇತುವೆಯು (Atal Bridge) ಸಬರಮತಿ ನದಿಯ ಪಶ್ಚಿಮ ತುದಿಯಲ್ಲಿರುವ ಹೂವಿನ ಉದ್ಯಾನವನ್ನು ಮತ್ತು ಪೂರ್ವ ತುದಿಯಲ್ಲಿರುವ ಕಲೆ ಮತ್ತು ಸಂಸ್ಕೃತಿ ಕೇಂದ್ರವನ್ನು ಸಂಪರ್ಕಿಸುತ್ತದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 27 ರಂದು ಉದ್ಘಾಟಿಸಿದರು. ಅದರ ನಂತರ ಅಟಲ್ ಸೇತುವೆ ಪ್ರಮುಖ ಆಕರ್ಷಣೆಯಾಗಿದೆ.


ಇದನ್ನೂ ಓದಿ:Viral Video: ಅಪ್ಪ ಕಳಿಸಿದ ಪೋಸ್ಟ್​ ಕಾರ್ಡ್​ ಬೆಲೆ ಸರಿಗಟ್ಟೋ ಯಾವ ವಸ್ತುವೂ ಇಲ್ಲ! ಭಾವುಕ ವಿಡಿಯೋ ನೋಡಿ


12,000 ಜನರ ತೂಕ ತಡೆಯುವ ಸಾಮರ್ಥ್ಯ


ಅಟಲ್ ಸೇತುವೆಯನ್ನು ನಿರ್ವಹಿಸುವ ಕಂಪನಿಯಾದ ಸಬರಮತಿ ರಿವರ್‌ಫ್ರಂಟ್ ಡೆವಲಪ್‌ಮೆಂಟ್ ಕಾರ್ಪೊರೇಶನ್ ಲಿಮಿಟೆಡ್ ತನ್ನ ಹೇಳಿಕೆಯಲ್ಲಿ ಸೇತುವೆಯು ಸುಮಾರು 12,000 ಜನರ ತೂಕವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದೆ.


3,000 ಜನರಿಗೆ ಮಾತ್ರ ಪ್ರವೇಶ


ಅದೇನೇ ಇದ್ದರೂ, ಮೊರ್ಬಿ ಸೇತುವೆ ದುರಂತವನ್ನು ಗಮನದಲ್ಲಿಟ್ಟುಕೊಂಡು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಮುನ್ನೆಚ್ಚರಿಕೆಯಾಗಿ ಅಟಲ್ ಸೇತುವೆಯ ಮೇಲೆ ಜನರ ಸಂಖ್ಯೆಯನ್ನು ಮಿತಿಗೊಳಿಸಲು ನಿರ್ಧರಿಸಿದೆ. ಈಗ ಪ್ರತಿ ಗಂಟೆಗೆ 3,000 ಜನರಿಗೆ ಮಾತ್ರ ಅಟಲ್ ಸೇತುವೆಯನ್ನು ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಪ್ರತಿ ಗಂಟೆಗೆ 3,000 ಕ್ಕಿಂತ ಹೆಚ್ಚು ಜನರನ್ನು ಸೇತುವೆಯ ಮೇಲೆ ನಿಲ್ಲಲು ಅನುಮತಿಸಲಾಗುವುದಿಲ್ಲ ಮತ್ತು ಉಳಿದವರನ್ನು ನದಿಯ ಮುಂಭಾಗದಲ್ಲಿ ಅವರ ಸರದಿಗಾಗಿ ಕಾಯಲು ಕೇಳಲಾಗುತ್ತದೆ.


ಇದನ್ನೂ ಓದಿ: Mango Rate: ಒಂದು ಕೆಜಿ ಮಾವಿನ ಹಣ್ಣಿಗೆ 2.70 ಲಕ್ಷ! ಎಲ್ಲಿ ಸಿಗುತ್ತೆ ಈ ಮಾವು?


ಆಕರ್ಷಕ ವಿನ್ಯಾಸ ಹೊಂದಿರುವ ಅಟಲ್ ಸೇತುವೆ


ಸಬರಮತಿ ರಿವರ್‌ಫ್ರಂಟ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಸೇತುವೆಯು ಅತ್ಯಂತ ಬಲಿಷ್ಠವಾಗಿದೆ ಮತ್ತು ಸುರಕ್ಷಿತವಾಗಿದೆ ಆದರೆ ಸಂದರ್ಶಕರ ಸುರಕ್ಷತೆಗಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದಿದೆ. ಅಲ್ಲದೇ ಈ ಸಮಸ್ಯೆಗೆ ಸಹಕರಿಸಲು ಮನವಿ ಮಾಡಿದೆ. ಆಕರ್ಷಕ ವಿನ್ಯಾಸ ಮತ್ತು ಎಲ್ ಇಡಿ ಲೈಟಿಂಗ್ ಹೊಂದಿರುವ ಈ ಸೇತುವೆಯನ್ನು 2,600 ಟನ್ ಸ್ಟೀಲ್ ಪೈಪ್ ಬಳಸಿ ನಿರ್ಮಿಸಲಾಗಿದೆ. ಇದರ ಛಾವಣಿಯು ಬಣ್ಣದ ಬಟ್ಟೆಯಿಂದ ಮಾಡಲ್ಪಟ್ಟಿದೆ ಮತ್ತು ರೇಲಿಂಗ್ ಅನ್ನು ಗಾಜು ಮತ್ತು ಸ್ಟೇನ್ಲೆಸ್ ಸ್ಟೀಲ್ನಿಂದ ಮಾಡಲಾಗಿದೆ.


ಇನ್ನು ಭಾನುವಾರ ಸಂಜೆ, ಮೊರ್ಬಿ ಪಟ್ಟಣದಲ್ಲಿ ಮಚ್ಚು ನದಿಗೆ 140 ವರ್ಷ ಹಳೆಯದಾದ ಕೇಬಲ್ ತೂಗು ಸೇತುವೆ ಕುಸಿದು 134 ಜನರು ಸಾವನ್ನಪ್ಪಿದ್ದಾರೆ ಎಂಬುವುದು ಉಲ್ಲೇಖನೀಯ.


ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ


ಮೋರ್ಬಿ ಅಪಘಾತದ ನಂತರ, ಪ್ರಧಾನಿ ಮೋದಿ ಅವರು ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಅಧಿಕಾರಿಗಳೊಂದಿಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳ ಕುರಿತು ಮಾಹಿತಿ ಪಡೆದರು. ಅಪಘಾತಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಚರ್ಚಿಸಲಾಯಿತು. ಸಂತ್ರಸ್ತ ಜನರಿಗೆ ಸಾಧ್ಯವಿರುವ ಎಲ್ಲ ಸಹಾಯ ಸಿಗುವಂತೆ ನೋಡಿಕೊಳ್ಳಲು ಪ್ರಧಾನಿ ಮತ್ತೊಮ್ಮೆ ಒತ್ತು ನೀಡಿದರು.

Published by:Precilla Olivia Dias
First published: