Court: ಕೇವಲ 31 ಪೈಸೆಗಾಗಿ ನ್ಯಾಯಾಧೀಶರಿಗೆ ಕೋಪ ತರಿಸುವಂತೆ ಮಾಡಿದ ಭಾರತೀಯ ಸ್ಟೇಟ್ ಬ್ಯಾಂಕ್; ಆಗಿದ್ದೇನು ಗೊತ್ತೆ..?

ರೈತನೊಬ್ಬ ತನ್ನ ಭೂಮಿಯ ಡೀಲ್ ಮಾಡಿದ್ದು ಅದಕ್ಕಾಗಿ ಅವನಿಗೆ ಭಾರತೀಯ ಸ್ಟೇಟ್ ಬ್ಯಾಂಕಿನಿಂದ ತನ್ನೆಲ್ಲ ಸಾಲ ಪಾವತಿಯಾಗಿದ್ದು ಯಾವುದೇ ಬಾಕಿ ಉಳಿದಿಲ್ಲ ಎಂಬುದರ ಬಗ್ಗೆ ಪ್ರಮಾಣ ಪತ್ರ ಬೇಕಾಗಿತ್ತು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನಮ್ಮ ದೇಶದಲ್ಲಿ ಎಲ್ಲ ರೀತಿಯ ವಾಣಿಜ್ಯಾತ್ಮಕ ವ್ಯವಹಾರಗಳು (Business) ಕಾನೂನಾತ್ಮಕವಾಗಿ ನಿಗದಿಪಡಿಸಲಾದ ನಿಯಮಗಳಿಂದಲೇ ನಡೇಯುತ್ತವೆ. ಭೂಮಿ ಕೊಳ್ಳುವುದಿರಲಿ ಅಥವಾ ಖರೀದಿಸುವುದಿರಲಿ ಅದಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆ-ಪತ್ರಗಳು ಸರಿಯಾಗಿದ್ದಾಗ ಮಾತ್ರ ವ್ಯವಹಾರ ಮುಂದೆ ಕುದುರುತ್ತದೆ. ಒಮ್ಮೊಮ್ಮೆ ಖರೀದಿದಾರರು ಯಾವುದಾದರೂ ಭೂಮಿಯ ತುಂಡನ್ನು ಖರೀದಿಸಲು ಮುಂದಾದಾಗ ಆಗ ಅವರಿಗೆ ಆ ಭೂಮಿ ಮೇಲೆ ಸಾಲವಿದೆ (Debt) ಎಂಬ ವಿಷಯ ತಿಳಿದರೆ ಸಾಕು ಅವರು ಆ ಖರೀದಿಯನ್ನು ಅಲ್ಲಿಯೇ ನಿಲ್ಲಿಸಿ ಬಿಡುತ್ತಾರೆ. ಹಾಗಾಗಿ ಯಾವುದೇ ಸಾಲವಿಲ್ಲ ಎಂಬ ಪ್ರಮಾಣ ಪತ್ರವು ಖರೀದಿ ವ್ಯವಹಾರದಲ್ಲಿ ಮುಖ್ಯವಾಗುತ್ತದೆ.

ಪ್ರಮಾಣ ಪತ್ರ ನೀಡಲು ಸತಾಯಿಸಿದ ಬ್ಯಾಂಕ್​

ಇಂತಹ ವಿಷಯಕ್ಕೆ ಸಂಬಂಧಿಸಿದಂತೆಯೇ ಗುಜರಾತ್ ರಾಜ್ಯದಲ್ಲಿ ರೈತನೊಬ್ಬನ ಜೊತೆ ಒಂದು ಘಟನೆ ನಡೆದಿದ್ದು ಅದರಲ್ಲಿ ಬ್ಯಾಂಕ್ ನಡೆದುಕೊಂಡ ರೀತಿ ಅಸಮಾಧಾನಕರವಾಗಿರುವುದು ಕಂಡುಬಂದಿದೆ. ರೈತನೊಬ್ಬ ತನ್ನ ಭೂಮಿಯ ಡೀಲ್ ಮಾಡಿದ್ದು ಅದಕ್ಕಾಗಿ ಅವನಿಗೆ ಭಾರತೀಯ ಸ್ಟೇಟ್ ಬ್ಯಾಂಕಿನಿಂದ ತನ್ನೆಲ್ಲ ಸಾಲ ಪಾವತಿಯಾಗಿದ್ದು ಯಾವುದೇ ಬಾಕಿ ಉಳಿದಿಲ್ಲ ಎಂಬುದರ ಬಗ್ಗೆ ಪ್ರಮಾಣ ಪತ್ರ ಬೇಕಾಗಿತ್ತು. ಆದರೆ ಬ್ಯಾಂಕ್ ಆ ಪ್ರಮಾಣ ಪತ್ರವನ್ನು ಆ ರೈತನಿಗೆ ನೀಡಲು ಸತಾಯಿಸಿತ್ತು, ಕಾರಣ ಅವನ ಹೆಸರಿನಲ್ಲಿ ಇನ್ನೂ ಸ್ವಲ್ಪ ಹಣ ಬಾಕಿ ಇತ್ತಂತೆ....ಎಷ್ಟು ಗೊತ್ತೆ? ಕೇವಲ 31 ಪೈಸೆ. ಹೌದು, ನೀವು ಓದಿದ್ದು ನಿಜ, ಕೇವಲ ಇಷ್ಟು ಮೊತ್ತ ಬಾಕಿ ಇದೆ ಎಂದು ರೈತನಿಗೆ ಬ್ಯಾಂಕ್ ಪ್ರಮಾಣ ಪತ್ರ ನೀಡಿರಲಿಲ್ಲ.

ಇದು ಕಿರುಕುಳ ಎಂದ ನ್ಯಾಯಾಲಯ

ಕೊನೆಗೆ ಇದು ಗುಜರಾತ್ ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಾಗ ಇದನ್ನು ಆಲಿಸಿದ ನ್ಯಾಯಾಧೀಶರಾದ ಭಾರ್ಗವ ಕಾರಿಯಾ ಅವರಿಗೆ ಇನ್ನಿಲ್ಲದಂತೆ ಕೋಪ ತರಿಸಿದೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾರಿಯಾ "ಇದು ಅತಿಯಾಯಿತು" ಎಂದು ಬ್ಯಾಂಕಿಗೆ ಜರಿದಿದ್ದಲ್ಲದೆ ಕೇವಲ ಇಷ್ಟು ಸಣ್ಣ ಮೊತ್ತ ಬಾಕಿ ಇದೆ ಎಂದು ರೈತನಿಗೆ ಸಾಲ ಬಾಕಿ ಇಲ್ಲದ ಪ್ರಮಾಣ ಪತ್ರ ನೀಡದೆ ಸತಾಯಿಸಿರುವುದನ್ನು "ಕಿರುಕುಳ" ಎಂದಷ್ಟೆ ಕರೆಯಬಹುದು ಎಂದಿದ್ದಾರೆ.

ಮುಂದುವರೆಯುತ್ತ ನ್ಯಾಯಾಧೀಶರು ಬ್ಯಾಂಕನ್ನು ಉದ್ದೇಶಿಸಿ, "ಕೇವಲ 31 ಪೈಸೆ ಬಾಕಿ ಇದೆಯೆ? 50 ಪೈಸೆಗಿಂತ ಕಡಿಮೆಯಿರುವುದನ್ನು ನಿರ್ಲಕ್ಷಿಸಬೇಕಾಗಿರುತ್ತದೆ ಎಂಬುದರ ಬಗ್ಗೆ ನಿಮಗೆ ಗೊತ್ತೆ?" ಎಂದು ತಮ್ಮ ಅಸಮಾಧಾನ ಹೊರಹಾಕುತ್ತ ಈ ಬಗ್ಗೆ ಬ್ಯಾಂಕ್, ಅಫಿಡವಿಟ್ ಸಲ್ಲಿಸಲು ಹೇಳಿ ಮುಂದಿನ ವಿಚಾರಣೆಯನ್ನು ಮೇ 2 ರಂದು ಮುಂದೂಡಿದರು ಎಂದು ವರದಿಯಾಗಿದೆ.

ಇದನ್ನು ಓದಿ: Assamನಲ್ಲಿ 7 ಅತ್ಯಾಧುನಿಕ ಕ್ಯಾನ್ಸರ್ ಆಸ್ಪತ್ರೆಗೆ ಚಾಲನೆ ನೀಡಿದ ಪ್ರಧಾನಿ, ರತನ್​ ಟಾಟಾ

ಪ್ರಕರಣದ ಹಿನ್ನೆಲೆ

ಗುಜರಾತಿನ ಅಹ್ಮದಾಬಾದ್ ನಗರದ ಹೊರ ವಲಯದಲ್ಲಿರುವ ಖೋರಜ್ ಎಂಬ ಗ್ರಾಮದಲ್ಲಿ ಶಾಮ್ಜಿಭಾಯಿ ಪಾಶಾಭಾಯಿ ಹಾಗೂ ಅವರ ಕುಟುಂಬ ಒಂದು ಜಮೀನು ಭಾಗವನ್ನು ಹೊಂದಿತ್ತು. ಅದನ್ನು ರಾಕೇಶ್ ವರ್ಮಾ ಹಾಗೂ ಮನೋಜ್ ವರ್ಮಾ ಎಂಬುವವರು ಖರೀದಿಸಿದ್ದರು. ಅದಕ್ಕೂ ಮುಂಚೆ ಪಾಶಾಭಾಯಿ ಅವರ ಕುಟುಂಬವು ಭಾರತೀಯ ಸ್ಟೇಟ್ ಬ್ಯಾಂಕಿನಿಂದ ಬೆಲೆ ಸಾಲ ಪಡೆದಿತ್ತು. ಈ ಪಡೆದ ಸಾಲ ಪೂರ್ಣವಾಗಿ ಪಾವತಿಸುವ ಮುಂಚೆ ಕುಟುಂಬವು ಭೂಮಿಯನ್ನು ಮಾರಿತು. ಆದರೆ, ಸಾಲ ಇನ್ನು ಬಾಕಿ ಇದೆ ಎಂದು ಬ್ಯಾಂಕ್ ಆ ಭೂಮಿಯ ಮೇಲೆ ಸ್ವಾಧೀನ ಪಡೆದುಕೊಂಡಿತು ಹಾಗೂ ಅದರಿಂದಾಗಿ ಈ ಭೂಮಿ ಖರೀದಿ ಮಾಡಿದವರ ಹೆಸರುಗಳು ಅಧಿಕೃತ ಖರೀದಿದಾರರ ಪಟ್ಟಿಯಲ್ಲಿ ಬರಲಿಲ್ಲ. ಈ ಸಂದರ್ಭದಲ್ಲಿ ಬ್ಯಾಂಕಿನಿಂದ ಪೂರಕವಾದ ಪ್ರಮಾಣ ಪತ್ರ ಪಡೆಯಲು ಬಾಕಿ ಇರುವ ಮೊತ್ತ ಭರಿಸಲು ಮುಂದಾದರೂ ಯಾವುದೇ ಪ್ರಗತಿ ಈ ವಿಷಯದಲ್ಲಿ ಆಗಲಿಲ್ಲ.

ಇದನ್ನು ಓದಿ: Vladimir Putin ಆರೋಗ್ಯದ ಬಗ್ಗೆ ಹಲವು ಅನುಮಾನ: ಪಾರ್ಕಿನ್ಸನ್‌ ಕಾಯಿಲೆಯಿಂದ ಬಳಲುತ್ತಿದ್ದಾರಾ ರಷ್ಯಾ ಅಧ್ಯಕ್ಷ?

ಕೊನೆಗೆ 2020 ರಲ್ಲಿ ಖರೀದಿದಾರರು ಈ ಪ್ರಕರಣವನ್ನು ಗುಜರಾತ್ ಹೈಕೋರ್ಟಿಗೆ ಕೊಂಡೊಯ್ದರು. ಅರ್ಜಿ ಬಾಕಿ ಇರುವ ಅವಧಿಯಲ್ಲಿ ಬ್ಯಾಂಕಿಗೆ ಮರಳಿಸಬೇಕಾಗಿದ್ದ ಎಲ್ಲ ಸಾಲವನ್ನು ಪಾವತಿಸಲಾಯಿತು. ಸಾಲದ ಹಣ ಪೂರ್ತಿ ಬಂದ ಮೇಲೆಯೂ ಬ್ಯಾಂಕ್ ಯಾವುದೇ ಬಾಕಿ ಇಲ್ಲ ಎಂದು ಹೇಳುವ ಪ್ರಮಾಣ ಪತ್ರ ನೀಡಲೇ ಇಲ್ಲ ಮತ್ತು ಇದರಿಂದಾಗಿ ಭೂಮಿಯು ಖರೀದಿದಾರರ ಹೆಸರಿಗೆ ವರ್ಗವಾಗಲೇ ಇಲ್ಲ. ಬುಧವಾರದಂದು ಕೋರ್ಟ್ ಒಂದೊಮ್ಮೆ ಸಾಲ ಪಾವತಿಯಾದ ಬಳಿಕ ಅದು ಬ್ಯಾಂಕಿಗೆ ಪ್ರಮಾಣ ಪತ್ರ ನೀಡಲು ಹೇಳುವುದಾಗಿ ಹೇಳಿತು.

ಆಗ ಬ್ಯಾಂಕ್ ಸಾಲ ಪೂರ್ತಿಯಾಗಿ ಪಾವತಿಯಾಗಿಲ್ಲ ಹಾಗೂ ಇನ್ನೂ 31 ಪೈಸೆ ಉಳಿದುಕೊಂಡಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿತು. ಇದರಿಂದಾಗಿ ನ್ಯಾಯಾಧೀಶರಿಗೆ ಕೋಪ ಬಂದು ಎಸ್‍ಬಿಐ ಬ್ಯಾಂಕನ್ನು ತರಾಟೆಗೆ ತೆಗೆದುಕೊಂಡರೆನ್ನಲಾಗಿದೆ. ರಾಷ್ಟ್ರೀಯ ಬ್ಯಾಂಕ್ ಆಗಿಯೂ ಸಹ ಜನರಿಗೆ ಕಿರುಕುಳ ನೀಡುತ್ತಿರುವಿರಿ ಎಂದು ಬ್ಯಾಂಕಿನ ಮೇಲೆ ಹರಿಹಾಯ್ದಿದಲ್ಲದೆ "50 ಪೈಸೆಗಿಂತ ಕಡಿಮೆಯಿರುವ ಮೊತ್ತವನ್ನು ಗಣನೆಗೆ ತೆಗೆದುಕೊಳ್ಳುವಂತಿಲ್ಲ ಎಂಬ ನಿಯಮವಿರುವುದು ಗೊತ್ತಿದೆಯೆ..?" ಎಂದು ಖಾರವಾಗಿ ಪ್ರಶ್ನಿಸಿದರೆನ್ನಲಾಗಿದೆ.
Published by:Seema R
First published: