Uttara Pradesh Election| ಉತ್ತರಪ್ರದೇಶ ಚುನಾವಣೆ ಎಫೆಕ್ಟ್​; 30 ಲಕ್ಷ ಬಿಜೆಪಿ ಕಾರ್ಯಕರ್ತರಿಗೆ ದೀಪಾವಳಿ ಉಡುಗೊರೆ ಘೋಷಣೆ!

ಈ ಬಾರಿ ಬಾಗಿಲಿಗೆ ಹಾಕುವ ತೋರಣಗಳು ಮತ್ತು ಕಮಲದ ಆಕಾರದ ಮಣ್ಣಿನ ದೀಪವನ್ನು ಒಳಗೊಂಡಿರುವ ಉಡುಗೊರೆ ಪೆಟ್ಟಿಗೆಗಳನ್ನು ಉತ್ತರ ಪ್ರದೇಶದ ಎಲ್ಲಾ ಬೂತ್ ಸಮಿತಿಗಳ ಸದಸ್ಯರಿಗೆ ಕಳುಹಿಸಲಾಗಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಲಖನೌ (ಅಕ್ಟೋಬರ್​​ 28); ಉತ್ತರ ಪ್ರದೇಶ (Uttara Pradesh) ವಿಧಾನಸಭೆ ಚುನಾವಣೆ ಮೇಲೆ ಇದೀಗ ಎಲ್ಲಾ ಪಕ್ಷಗಳೂ ಕಣ್ಣಿಟ್ಟಿದೆ. ಅದರಲ್ಲೂ ಬಿಜೆಪಿ (BJP) ಪಕ್ಷಕ್ಕೆ ಈ ರಾಜ್ಯದಲ್ಲಿ ಅಧಿಕಾರವನ್ನು ಮತ್ತೆ ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ. ಆದರೆ, ಲಖೀಂಪುರ್​ ಖೇರಿ (Lakhimpur Kheri Violence) ರೈತ ಹತ್ಯಾಕಾಂಡ ನಂತರ ಉತ್ತರ ಪ್ರದೇಶದಲ್ಲಿ ಬಿಜೆಪಿ ಪಕ್ಷದ ವಿರದ್ಧ ಆಡಳಿತ ವಿರೋಧಿ ಅಲೆ ಮನೆ ಮಾಡಿದೆ. ಹೀಗಾಗಿ ಈ ಡ್ಯಾಮೆಜ್ ಕಂಟ್ರೋಲ್ (Damage Cotrol) ಮಾಡುವುದೇ ಬಿಜೆಪಿ ಪಕ್ಷಕ್ಕೆ ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆಗೂ ಸಜ್ಜಾಗುವ ಅವಶ್ಯಕತೆ ಇದೆ. ಹೀಗಾಗಿ 2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಆಡಳಿತರೂಢ ಬಿಜೆಪಿ ಬೂತ್ ಮಟ್ಟದಲ್ಲಿ (BJP Booth Level Volunteer) ಕಾರ್ಯ ನಿರ್ವಹಿಸುವುದು ಮಹತ್ವದ ಕೆಲಸ ಎಂದಿದೆ. ಹೀಗಾಗಿ ದೀಪಾವಳಿ ನೆಪದಲ್ಲಿ ತನ್ನ 30 ಲಕ್ಷ ಬೂತ್ ಮಟ್ಟದ ಕಾರ್ಯಕರ್ತರಿಗೆ ಬಿಜೆಪಿ ದೀಪಾವಳಿ (Deepavali Gift)ಉಡುಗೊರೆಯನ್ನು ಕಳುಹಿಸಿದೆ ಎಂದು ವರದಿಯಾಗಿದೆ.

  ಬಿಜೆಪಿ ಕಾರ್ಯಕರ್ತರಿಗೆ ದೀಪಾವಳಿ ಗಿಫ್ಟ್​:

  ಉತ್ತರ ಪ್ರದೇಶ ರಾಜ್ಯದಲ್ಲಿ 1.63 ಲಕ್ಷ ಬೂತ್‌ಗಳಿದ್ದು, 1.5 ಲಕ್ಷಕ್ಕೂ ಹೆಚ್ಚು ಬೂತ್‌ಗಳಲ್ಲಿ ಬಿಜೆಪಿ 20-20 ಸದಸ್ಯರ ಸಮಿತಿಗಳನ್ನು ರಚಿಸಿದೆ. ಎಲ್ಲಾ ಸದಸ್ಯರಿಗೂ ಈ ವರ್ಷ ದೀಪಾವಳಿ ಉಡುಗೊರೆಯನ್ನು ಪಕ್ಷ ಕಳುಹಿಸಿಕೊಡಲಿದೆ ಎಂದು ತಿಳಿದುಬಂದಿದೆ.

  ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ವಿಜಯ್ ಬಹದ್ದೂರ್ ಪಾಠಕ್ ಈ ಬಗ್ಗೆ ಮಾತನಾಡಿದ್ದು, "ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುವ ಬಿಜೆಪಿ ಕುಟುಂಬದಲ್ಲಿ ಬೂತ್ ಮಟ್ಟದ ಕಾರ್ಯಕರ್ತರು ಪ್ರಮುಖ ಕೊಂಡಿಯಾಗಿದ್ದಾರೆ. ದೀಪಾವಳಿಯಂದು ಎಲ್ಲರಿಗೂ ಉಡುಗೊರೆಗಳನ್ನು ನೀಡುವ ಸಂಪ್ರದಾಯವಿದೆ. ಹೀಗಾಗಿ ಪಕ್ಷವು ಈ ಬಾರಿ 30 ಲಕ್ಷಕ್ಕೂ ಹೆಚ್ಚು ಬೂತ್ ಕಾರ್ಯಕರ್ತರಿಗೆ ಉಡುಗೊರೆಗಳನ್ನು ಕಳುಹಿಸಿದೆ ಎಂದು ತಿಳಿಸಿದ್ದಾರೆ.

  ಈ ಬಾರಿ ಬಾಗಿಲಿಗೆ ಹಾಕುವ ತೋರಣಗಳು ಮತ್ತು ಕಮಲದ ಆಕಾರದ ಮಣ್ಣಿನ ದೀಪವನ್ನು ಒಳಗೊಂಡಿರುವ ಉಡುಗೊರೆ ಪೆಟ್ಟಿಗೆಗಳನ್ನು ಉತ್ತರ ಪ್ರದೇಶದ ಎಲ್ಲಾ ಬೂತ್ ಸಮಿತಿಗಳ ಸದಸ್ಯರಿಗೆ ಕಳುಹಿಸಲಾಗಿದೆ.

  ಚುನಾವಣಾ ಪ್ರಚಾರದ ಭಾಗವಾದ ಉಡುಗೊರೆ:

  ಈ ಉಡುಗೊರೆಗಳು ಚುನಾವಣಾ ಪ್ರಚಾರದ ಭಾಗವೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಪಾಠಕ್, "ಸದ್ಯಕ್ಕೆ ಪಕ್ಷದ ಪ್ರಮುಖ ಗಮನವೇ 2022 ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಾಗಿದೆ. ಹೀಗಾಗಿ ಜನರ ಬಳಿಗೆ ಚುನಾವಣಾ ಚಿಹ್ನೆಯನ್ನು ತೆಗೆದುಕೊಂಡು ಹೋಗುವುದು ಸಹಜ ಪ್ರಕ್ರಿಯೆ" ಎಂದು ಹೇಳಿದ್ದಾರೆ.

  ಇದನ್ನೂ ಓದಿ: T20 World Cup| ಪಾಕ್​ ಗೆಲುವನ್ನು ಸಂಭ್ರಮಿಸಿದರೆ ದೇಶದ್ರೋಹ ಪ್ರಕರಣ; ಯೋಗಿ ಆದಿತ್ಯನಾಥ್ ಎಚ್ಚರಿಕೆ!

  "ಜನರು ಕಮಲದ ದೀಪವನ್ನು ಬೆಳಗಿಸಿದಾಗ, ಕತ್ತಲೆ ಮಾತ್ರ ಮಾಯವಾಗುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಾರಂಭಿಸಿದ ಅಭಿವೃದ್ಧಿ ಯೋಜನೆಗಳಲ್ಲಿ ನಂಬಿಕೆ ಬಲಗೊಳ್ಳುತ್ತದೆ" ಎಂದು ಪಾಠಕ್ ಹೇಳಿದರು.

  ಇದನ್ನೂ ಓದಿ: Viral News: ತಾಯಿ-ಮಗು ರಕ್ಷಿಸಲು ಬಂದವರೇ ಸಿಲುಕಿದ್ರು ಅಪಾಯಕ್ಕೆ : ಪ್ರವಾಹಕ್ಕೆ ಮುಖಮಾಡಿ ಗೆದ್ದು ಬಂದಿದ್ದೇ ಬಲು ರೋಚಕ!

  2017ರ ವಿಧಾನಸಭಾ ಚುನಾವಣೆಯಲ್ಲಿ ಆಗಿನ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೂತ್ ನಿರ್ವಹಣಾ ಸೂತ್ರವನ್ನು ಜಾರಿಗೆ ತಂದರು. ಜೊತೆಗೆ ಬೂತ್ ಮಟ್ಟದ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿದ್ದರು.
  Published by:MAshok Kumar
  First published: