Amit Shah: ಚುನಾವಣೆಯನ್ನು ಗೆಲ್ಲೋದು ಹೇಗೆ? ಈ ಬಗ್ಗೆ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ ಅಮಿತ್ ಶಾ: ಯುಪಿ ಗದ್ದುಗೆ ಏರಲು ಕಮಲ ಕಸರತ್ತು!

Amit Shah: ಬಿಜೆಪಿ ಪಕ್ಷ ಚಾಣಕ್ಯ, ಮಾಸ್ಟರ್​ ಮೈಂಡ್​(Mastermind) ಎನಿಸಿಕೊಂಡಿರುವ ಅಮಿತ್​ ಶಾ(Amit Sha) ಎಂಟ್ರಿಯಾಗಿದ್ದಾರೆ. ಇಂದು ರಾಜ್ಯದ ಬಿಜೆಪಿ ನಾಯಕ(BJP Leaders)ರೊಂದಿಗೆ ಅಮಿತ್​ ಶಾ ಸಭೆ ನಡೆಸಲಿದ್ದು, ತಂತ್ರ ಹೆಣೆಯಲಿದ್ದಾರೆ.

ಅಮಿತ್ ಶಾ

ಅಮಿತ್ ಶಾ

  • Share this:
ಉತ್ತರ ಪ್ರದೇಶ(Uttar Pradesh)ದಲ್ಲಿ 2022 ರಲ್ಲಿ ವಿಧಾನಸಭೆ ಚುನಾವಣೆ(Assembly Elections)ಯು ನಡೆದ ಬಳಿಕ ಮತ್ತೆ ರಾಜ್ಯದ ಗದ್ದುಗೆಯನ್ನು ಏರಲು ಬಿಜೆಪಿ(BJP) ಎಲ್ಲಾ ತಂತ್ರಗಾರಿಕೆ ನಡೆಸುತ್ತಿದೆ. ಈಗಾಗಲೇ ಉತ್ತರ ಪ್ರದೇಶದಲ್ಲಿ ಎಸ್‌ಪಿ(SP), ಬಿಎಸ್‌ಪಿ(BSP), ಕಾಂಗ್ರೆಸ್‌)Congress), ಬಿಜೆಪಿ(BJP) ಸೇರಿದಂತೆ ಎಲ್ಲಾ ಪಕ್ಷಗಳು ಜಾತಿ ಆಧಾರದಲ್ಲಿ ಮತ ಪಡೆಯುವ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಅದಕ್ಕಾಗಿ ಎಸ್‌ಪಿ, ಬಿಎಸ್‌ಪಿ ಬ್ರಾಹ್ಮಣರ ಸಭೆ, ಸಮಾವೇಶಗಳನ್ನೂ ನಡೆಸಿದೆ. ಇತ್ತ ಮತ್ತೆ ಶತಾಯಗತಾಯ ಗದ್ದುಗೆ ಏರಲೇಬೇಕೆಂದು ಬಿಜೆಪಿ ಪ್ಲ್ಯಾನ್​ ಮಾಡಿಕೊಂಡಿದೆ. ಅಖಾಡಕ್ಕೆ ಖುದ್ಧು ಬಿಜೆಪಿ ಪಕ್ಷ ಚಾಣಕ್ಯ, ಮಾಸ್ಟರ್​ ಮೈಂಡ್​(Mastermind) ಎನಿಸಿಕೊಂಡಿರುವ ಅಮಿತ್​ ಶಾ(Amit Sha) ಎಂಟ್ರಿಯಾಗಿದ್ದಾರೆ. ಇಂದು ರಾಜ್ಯದ ಬಿಜೆಪಿ ನಾಯಕ(BJP Leaders)ರೊಂದಿಗೆ ಅಮಿತ್​ ಶಾ ಸಭೆ ನಡೆಸಲಿದ್ದು, ತಂತ್ರ ಹೆಣೆಯಲಿದ್ದಾರೆ.  ಆಡಳಿತರೂಢ ಬಿಜೆಪಿ ಪಕ್ಷವು ಮುಂದಿನ 2022 ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಅಧಿಕಾರವನ್ನು ತನ್ನ ತೆಕ್ಕೆಗೆ ಪಡೆಯುವ ತಂತ್ರ ರೂಪಿಸಿದೆ.

700 ಬಿಜೆಪಿ ನಾಯಕರಿಗೆ ಆಹ್ವಾನ

ಉತ್ತರ ಪ್ರದೇಶದ ಎಲ್ಲಾ 98 ಜಿಲ್ಲಾ ಅಧ್ಯಕ್ಷರು ಹಾಗೂ 403 ವಿಧಾನಸಭಾ ಸ್ಥಾನಗಳ ಉಸ್ತುವಾರಿಗಳು, ಆರು ಪ್ರಾದೇಶಿಕ ಅಧ್ಯಕ್ಷರು, ಎಲ್ಲಾ ಹಿರಿಯ ರಾಜ್ಯ ಪದಾಧಿಕಾರಿಗಳು ಮತ್ತು ಸಹ-ಪ್ರಭಾರಿಗಳು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಉತ್ತರ ಪ್ರದೇಶದ ಮುಂದಿನ ಚುನಾವಣೆಯಲ್ಲಿ ಹೇಗೆ ಕೆಲಸ ಮಾಡಬೇಕೆಂದು ಅಮಿತ್ ಶಾ ಇವರಿಗೆ ಪಾಠ ಮಾಡಲಿದ್ದಾರೆ. ಈ ಮೆಗಾ ಸಭೆಯನ್ನು ವಾರಣಾಸಿಯಲ್ಲಿ ಆಯೋಜಿಸಲಾಗಿದೆ. ಚುನಾವಣೆ ಮುನ್ನ ಹೇಗೆ ಪೂರ್ವ ತಯಾರಿ ಮಾಡಿಕೊಳ್ಳಬೇಕು ಎಂದು ಅಮಿತ್​ ಶಾ ಸಲಹೆ ನೀಡಿದ್ದಾರೆ.  ಮುಂದಿನ ಚುನಾವಣೆ ಗೆಲ್ಲಲ್ಲು ನಾಯಕರು ಈಗಾಗಲೇ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಅಂತ  ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷ ವಿಜಯ್ ಬಹದ್ದೂರ್ ಪಾಠಕ್ ತಿಳಿಸಿದ್ದಾರೆ.

ಇದನ್ನು ಓದಿ : ಭಾರತದ ಯುದ್ಧತಂತ್ರ ವಿಚಾರಗಳಿಗೆ ಆಧ್ಯಾತ್ಮಿಕ ಮಾರ್ಗದರ್ಶಿ

ಅಮಿತ್​ ಶಾ ಅವರಿಂದ ಚುನಾವಣಾ ಪಾಠ!

ಉತ್ತರ ಪ್ರದೇಶದಲ್ಲಿ 2022ರಲ್ಲಿ ಚುನಾವಣೆ ನಡೆಯಲಿದೆ. ಈ ಸಂಬಂಧ ಪೂರ್ವ ತಯಾರಿ ಬಗ್ಗೆ ಚರ್ಚಿಸಲು ಇಂದು ಅಮಿತ್​ ಶಾ ಸಭೆ ನಡೆಸಲಿದ್ದಾರೆ. ಹೆಸರಿಗಷ್ಟೇ ಇದು ಸಭೆ. ರಾಜ್ಯದ ಎಲ್ಲ ನಾಯಕರಿಗೆ ಅಮಿತ್​ ಶಾ ಚುನಾವಣಾ ಪಾಠ ಮಾಡಲಿದ್ದಾರೆ. ಚುನಾವಣೆಗೂ ಮುನ್ನ ಹೇಗೆ ಕಾರ್ಯ ತಂತ್ರ ರೂಪಿಸಬೇಕು ಅಂತ  ಸಲಹೆಗಳನ್ನು ನೀಡಲಿದ್ದಾರೆ. ಇನ್ನೂ ಇದೇ ರೀತಿಯ ಸಭೆಗಳನ್ನು ಎಲ್ಲ ರಾಜ್ಯಗಳಲ್ಲೂ ಚುನಾವಣೆಗೂ ಮುನ್ನ ಅಮಿತ್​ ಶಾ ಇದೇ ರೀತಿಯ ಸಭೆಗಳನ್ನು ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಂದು ಇಡೀ ದಿನ ನಡೆಯಲಿರುವ ಮೆಗಾ ಸಭೆ

ಇಂದು ಇಡೀ ದಿನ ಮೆಗಾ ಸಭೆ ನಡೆಯುವ ಸಾಧ್ಯತೆಯಿದೆ. ಸಭೆಯಲ್ಲಿ ಸಂಚಾಲಕರಾಗಿರುವ ಕೇಂದ್ರ ಸಚಿವ ಅಮಿತ್ ಶಾ ಅವರು ಚುನಾವಣಾ ಪರಿಸ್ಥಿತಿ ಮತ್ತು ರಾಜ್ಯದಲ್ಲಿ ಬಿಜೆಪಿಯ ಮೆಗಾ ಸದಸ್ಯತ್ವ ಅಭಿಯಾನದ ಬಗ್ಗೆ ಅವಲೋಕನ ನಡೆಸಲಿದ್ದಾರೆ. ‘ವಿಸ್ತೃತ ಸಭೆಯು ಪ್ರಚಾರವನ್ನು ಹೇಗೆ ನಡೆಸಬೇಕು, ಸಿದ್ಧತೆಗಳೇನು ಎಂಬುದರ ಕುರಿತು ಚರ್ಚಿಸಬಹುದು ಮತ್ತು ಯುಪಿಯಲ್ಲಿ ಚುನಾವಣೆಯನ್ನು ನಿರ್ವಹಿಸಿದ ಸುದೀರ್ಘ ಅನುಭವವನ್ನು ಹೊಂದಿರುವ ಅಮಿತ್ ಶಾ ಅವರಿಂದ ನಾಯಕರು ಮಾರ್ಗದರ್ಶನ ಪಡೆಯುತ್ತಾರೆ’ ಎಂದು ಪಕ್ಷದಿಂದ ಮಾಹಿತಿ ಬಂದಿದೆ.

ಇದನ್ನು ಓದಿ : Bitcoin ಹಗರಣದ ಬಗ್ಗೆ​ ಅವರೇಕೆ ಕೇಳುತ್ತಾರೆ; ಡಿಸೆಂಬರ್​ಗೆ ಬೆಂಗಳೂರಿಗೆ ಪ್ರಧಾನಿ: ಸಿಎಂ ಬೊಮ್ಮಾಯಿ

ಅಲ್ಪಸಂಖ್ಯಾತರನ್ನು ತಲುಪಲು ಬಿಜೆಪಿ ಯತ್ನ

ಇನ್ನೂ ಉತ್ತರ ಪ್ರದೇಶದಲ್ಲಿ ಅಲ್ಪಸಂಖ್ಯಾತರನ್ನು ತಲುಪಲು ಬಿಜೆಪಿ ಪ್ರಯತ್ನಿಸುತ್ತಿದೆ. ನಿಶಾದ್ ಸಮುದಾಯವನ್ನು ಓಲೈಸುವ ಹೊಸ ಪ್ರಯತ್ನದಲ್ಲಿ, ನಿಶಾದ್ ಮತ್ತು ಕಶ್ಯಪ್‌ಗಳಂತಹ 22 ಪ್ರಭಾವಿ ಉಪಜಾತಿಗಳನ್ನು ಒಳಗೊಂಡಿರುವ ನದಿಪಾತ್ರದ ಸಮುದಾಯದೊಂದಿಗೆ ಪಕ್ಷವು ಸಂಪರ್ಕ ಸಾಧಿಸಲು ಯೋಜಿಸುತ್ತಿದೆ. ಇಂದಿನ ಬೃಹತ್ ಸಭೆಯ ನಂತರ, ಅಮಿತ್​ ಶಾ ಮರುದಿನ ನವೆಂಬರ್ 13 ರಂದು ಅಖಿಲೇಶ್ ಯಾದವ್ ಅವರ ಕ್ಷೇತ್ರ ಅಜಂಗಢಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಅಮಿತ್​ ಶಾ ಭರ್ಜರಿ ರ‍್ಯಾಲಿ ನಡೆಸಲಿದ್ದಾರೆ.
Published by:Vasudeva M
First published: