ಕಾಂಗ್ರೆಸ್​ ಕೋರ್​ ಕಮಿಟಿ ಸಭೆ; ಚಿದಂಬರ ರಹಸ್ಯವಾಗಿ ಉಳಿಯಲಿದೆಯೇ ಪಕ್ಷದ ಅಧ್ಯಕ್ಷ ಗಾದಿ ವಿಚಾರ?

ಇದೇ ವೇಳೆ ಲೋಕಸಭೆ ಸೋಲಿನ ಬಳಿಕ ಪದತ್ಯಾಗಕ್ಕೆ ಸಜ್ಜಾಗಿರುವ ರಾಹುಲ್​ ಗಾಂಧಿ ರಾಜೀನಾಮೆ ಕುರಿತು ಕೂಡ ನಾಯಕರು ಪ್ರಸ್ತಾಪ ನಡೆಸಲಿದ್ದಾರೆ. ಈಗಾಗಲೇ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಕಾರ್ಯಕಾರಿ ಸಮಿತಿಯಲ್ಲಿ ರಾಹುಲ್​ ಗಾಂಧಿ ರಾಜೀನಾಮೆ ನೀಡಿದ್ದು, ಅವರ ಮನವೊಲಿಸಲು ಹಿರಿಯ ನಾಯಕರು ಮುಂದಾಗಿದ್ದಾರೆ.

Seema.R | news18
Updated:June 12, 2019, 2:08 PM IST
ಕಾಂಗ್ರೆಸ್​ ಕೋರ್​ ಕಮಿಟಿ ಸಭೆ; ಚಿದಂಬರ ರಹಸ್ಯವಾಗಿ ಉಳಿಯಲಿದೆಯೇ ಪಕ್ಷದ ಅಧ್ಯಕ್ಷ ಗಾದಿ ವಿಚಾರ?
ಸೋನಿಯಾ- ರಾಹುಲ್​ -ಮನಮೋಹನ್​
  • News18
  • Last Updated: June 12, 2019, 2:08 PM IST
  • Share this:
ನವದೆಹಲಿ (ಜೂ.12):  ಲೋಕಸಭಾ ಚುನಾವಣಾ ಬಳಿಕ ನಡೆಯಲಿರುವ ಮೊದಲ ಅಧಿವೇಶದಲ್ಲಿ ಆಡಳಿತ ಪಕ್ಷವನ್ನು ಎದುರಿಸುವ ಕಾರ್ಯತಂತ್ರದ ಕುರಿತು ಚರ್ಚೆ ನಡೆಸಲು ಇಂದು ಕಾಂಗ್ರೆಸ್​ ಪಕ್ಷದ ಕೋರ್​ ಕಮಿಟಿ ಸಭೆ ನಡೆಸಲಿದೆ.

ಎ.ಕೆ.ಆಂಟನಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ಕಾಂಗ್ರೆಸ್​ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಪಿ ಚಿದಂಬರಂ, ಅಹಮದ್​ ಪಟೇಲ್​, ಗುಲಾಂ ನಬಿ ಆಜಾದ್​, ಚಿದಂಬರಂ, ಕೆಸಿ ವೇಣುಗೋಪಾಲ್​, ಜೈ ರಾಮ್​ ರಮೇಶ್​ ಕೂಡ ಭಾಗಿಯಾಗಿದ್ದಾರೆ. ದೆಹಲಿಯ ಗುರುದ್ವಾರ ರಾಕಾಬಂಗ್ಜ್​ ರಸ್ತೆಯಲ್ಲಿರುವ ಕಾಂಗ್ರೆಸ್​ ವಾರ್​ ರೂಂನಲ್ಲಿ ಇಂದು ಸಭೆ ನಡೆಯಲಿದೆ. ಇನ್ನು ಈ ಸಭೆಗೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಗೈರಾಗಲಿದ್ದಾರೆ.

ಇದೇ ವೇಳೆ ಲೋಕಸಭೆ ಸೋಲಿನ ಬಳಿಕ ಪದತ್ಯಾಗಕ್ಕೆ ಸಜ್ಜಾಗಿರುವ ರಾಹುಲ್​ ಗಾಂಧಿ ರಾಜೀನಾಮೆ ಕುರಿತು ಕೂಡ ನಾಯಕರು ಪ್ರಸ್ತಾಪ ನಡೆಸಲಿದ್ದಾರೆ. ಈಗಾಗಲೇ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಕಾರ್ಯಕಾರಿ ಸಮಿತಿಯಲ್ಲಿ ರಾಹುಲ್​ ಗಾಂಧಿ ರಾಜೀನಾಮೆ ನೀಡಿದ್ದು, ಅವರ ಮನವೊಲಿಸಲು ಹಿರಿಯ ನಾಯಕರು ಮುಂದಾಗಿದ್ದಾರೆ.

2019ರಲ್ಲಿ‌ 4 ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಹುಲ್ ಅವರನ್ನೇ ಮುಂದುವರೆಸುವ ಬಗ್ಗೆ ಚರ್ಚೆ ನಡೆಯಲಿದೆ. ಒಂದು ವೇಳೆ ರಾಹುಲ್ ಒಪ್ಪದಿದ್ದರೆ ಏನು ಮಾಡಬೇಕೆಂದು ಎಂಬುದರ ಬಗ್ಗೆಯೂ ನಾಯಕರು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ರಾಹುಲ್​ ಗಾಂಧಿ ಒಪ್ಪದಿದ್ದರೆ, ಅವರ ಬದಲು ಯಾರನ್ನು ಅಧ್ಯಕ್ಷರನ್ನಾಗಿ ಮಾಡಬಹುದು ಎಂಬ ಬಗ್ಗೆಯೂ ಚರ್ಚೆ ನಡೆಯಲಿದ್ದು, ಈ ಪಟ್ಟಿಯಲ್ಲಿ  ಶಶಿ ತರೂರ್​, ಮನೀಶ್​ ತಿವಾರಿ, ಅಧೀರ್​ ರಂಜನ್​ ಚೌಧರಿ, ಗೌರವ್​ ಗೋಗಾಯಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವರು ಹೆಸರು ಚಾಲ್ತಿಯಲ್ಲಿದೆ.

ಇದನ್ನು ಓದಿ: ಜುಲೈನಲ್ಲಿ ಚಂದ್ರಯಾನ-2 ಉಡಾವಣೆಗೆ ಸಜ್ಜಾದ ಇಸ್ರೋ; ಉಪಗ್ರಹದ ಮಾದರಿಯನ್ನು ಪ್ರದರ್ಶಿಸಿದ ವಿಜ್ಞಾನಿಗಳು

ಇದೇ ವೇಳೆ ಹಂಗಾಮಿ ಅಧ್ಯಕ್ಷರ ನೇಮಕ  ಹಾಗೂ ಕಾರ್ಯಾಧ್ಯಕ್ಷರ ನೇಮಕದ‌ ಬಗ್ಗೆಯೂ ನಾಯಕರು ಸಮಾಲೋಚನೆ ನಡೆಸಲಿದ್ದಾರೆ. ಚುನಾವಣೆ ಬಳಿಕ ಕಾಂಗ್ರೆಸ್​ ಸಂಸದೀಯ ಪಕ್ಷದ ಕಾರ್ಯದರ್ಶಿಯಾಗಿ ಸೋನಿಯಾ ಗಾಂಧಿ ನಾಲ್ಕನೇ ಅವಧಿಗೆ ಆಯ್ಕೆಯಾಗಿದ್ದಾರೆ.ಜೂನ್​ 17ರಿಂದ ಲೋಕಸಭಾ ಸದಸ್ಯರ ಮೊದಲ ಸಭೆ ನಡೆಯಲಿದ್ದು, 17 ಮತ್ತು 18ರಂದು ಇವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಜೂನ್​ 19ರಂದು ಸ್ಪೀಕರ್​ ಚುನಾವಣೆ ನಡೆಯಲಿದ್ದು, ಜುಲೈ 5ರಂದು ಬಜೆಟ್​ ಮಂಡನೆಯಾಗಲಿದೆ.

First published:June 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading