ದೆಹಲಿ ಲಾಕ್‌ಡೌನ್‌: ಮದ್ಯದಂಗಡಿಗಳ ಮುಂದೆ ಜನಸಾಗರ, ಕೊರೋನಾಗೆ ಕ್ಯಾರೇ ಎನ್ನದ ಜನತೆ

ಹಲವಾರು ವ್ಯರ್ಥ ಪ್ರಯತ್ನಗಳ ಬಳಿಕ ಈಗ ದೆಹಲಿ ಸರ್ಕಾರವು ಏಪ್ರಿಲ್ 19 ರಂದು ರಾಷ್ಟ್ರ ರಾಜಧಾನಿಯಲ್ಲಿ ಒಂದು ವಾರದವರೆಗೆ ಲಾಕ್ ಡೌನ್ ವಿಧಿಸಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಜನರು ಒಂದು ವಾರಗಳ ಕಾಲ ತಮಗೆ ಎಣ್ಣೆಗೆ ಅಭಾವವಾಗುತ್ತದೆ ಎಂದು ತಿಳಿದು ಮದ್ಯದ ಬಾಟಲಿ ಕೊಳ್ಳಲು ಮದ್ಯದದಂಗಡಿಗಳ ಮುಂದೆ ಜಮಾಯಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೆಹಲಿ: ಕೊರೋನಾ ಎರಡನೇ ಅಲೆಯಿಂದಾಗಿ ಸೋಂಕಿತರ ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಭಾನುವಾರವೊಂದರಲ್ಲೇ ಸುಮಾರು 24,000 ಸೋಂಕಿತರ ಪ್ರಕರಣಗಳು ದಾಖಲಾಗಿವೆ. ಸದ್ಯ ದೆಹಲಿಯಲ್ಲಿ 29.74% ರವರೆಗೆ ಏರಿಕೆಯಾಗಿದ್ದು, ಪ್ರತಿ ಮೂವರಲ್ಲಿ ಒಬ್ಬ ಸೋಂಕಿತರಿದ್ದಾರೆ ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ಹಲವಾರು ವ್ಯರ್ಥ ಪ್ರಯತ್ನಗಳ ಬಳಿಕ ಈಗ ದೆಹಲಿ ಸರ್ಕಾರವು ಏಪ್ರಿಲ್ 19 ರಂದು ರಾಷ್ಟ್ರ ರಾಜಧಾನಿಯಲ್ಲಿ ಒಂದು ವಾರದವರೆಗೆ ಲಾಕ್ ಡೌನ್ ವಿಧಿಸಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಜನರು ಒಂದು ವಾರಗಳ ಕಾಲ ತಮಗೆ ಎಣ್ಣೆಗೆ ಅಭಾವವಾಗುತ್ತದೆ ಎಂದು ತಿಳಿದು ಮದ್ಯದ ಬಾಟಲಿ ಕೊಳ್ಳಲು ಮದ್ಯದದಂಗಡಿಗಳ ಮುಂದೆ ಜಮಾಯಿಸಿದ್ದಾರೆ.

ಕೊರೋನಾ ಹತೋಟಿಗೆ ತರುವ ನಿಟ್ಟಿನಲ್ಲಿ ದೆಹಲಿ ಸರ್ಕಾರವು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಒಂದು ವಾರಗಳ ಕಾಲ ಲಾಕ್‌ಡೌನ್ ಘೋಷಿಸಿದೆ. ಪತ್ರಿಕಾಗೋಷ್ಠಿ ನಡೆಸಿದ ದೆಹಲಿ ಮುಖ್ಯಮಂತ್ರಿ ಕ್ರೇಜಿವಾಲ್, " ದೆಹಲಿಗರೆಲ್ಲರೂ ಒಂದೇ ಕುಟುಂಬದಂತೇ ಇದ್ದಾರೆ. ಈ ಹಿಂದೆ ಮಾಡಿದ ಲಾಕ್‌ಡೌನ್‌ ಅನ್ನು ಯಶಸ್ವಿಯಾಗಿ ನಿಭಾಯಿಸಿ ಕೊರೋನಾವನ್ನು ಹತೋಟಿಗೆ ತಂದಿದ್ದರು. ಈಗಲೂ ಸಹ ನಮ್ಮ ದೆಹಲಿಗರು ಯಶಸ್ವಿಯಾಗಿ ಕೊರೋನಾವನ್ನು ಜಯಿಸುವರು." ಎಂದು ಹೇಳಿದರು. ಈ ಲಾಕ್ ಡೌನ್ ಸಮಯದಲ್ಲಿ ಕೊರೋನಾ ವಿರುದ್ಧ ಹೋರಾಡಲು ಅಗತ್ಯವಿರುವ ಆಮ್ಲಜನಕ ಮತ್ತು ರೆಮ್‌ಡೆಸಿವಿರ್ ಔಷಧಿಗಳ ಅಭಾವವನ್ನು ನಿವಾರಿಸಲಾಗುವುದು ಎಂದು ಹೇಳಿದರು. ಆಷ್ಟೇ ಅಲ್ಲದೇ ವಲಸಿಗರು ತಮ್ಮ ಊರಿಗೆ ಹೋಗದೇ ದೆಹಲಿಯಲ್ಲೇ ಇರಬೇಕೆಂದು ಕ್ರೇಜಿವಾಲ್ ಮನವಿ ಮಾಡಿದರು.

ಈ ಒಂದು ವಾರದ ಲಾಕ್ ಡೌನ್ ಸಮಯದಲ್ಲಿ ಜನರಿಗೆ ಬೇಕಾದ ಕಿರಾಣಿ ಸಾಮಾನು ಮತ್ತು ಔಷಧಿಗಳಂತಹ ಅಗತ್ಯ ವಸ್ತುಗಳನ್ನು ತಲುಪಿಸಲು ಇ-ಕಾಮರ್ಸ್‌ಗಳಿಗೆ ಕಾರ್ಯನಿರ್ವಹಿಸಲು ದೆಹಲಿ ಸರ್ಕಾರವು ನಿರ್ದೇಶಿಸಿದೆ. ಆಹಾರ, ದಿನಸಿ, ತರಕಾರಿಗಳು, ಹಾಲು, ಮಾಂಸ, ಔಷಧಿಗಳು, ದಿನಪತ್ರಿಕೆಗಳ ಮಾರಾಟಗಳಂತಹ ಅಗತ್ಯವಸ್ತುಗಳ ಮಾರಾಟ ಮಾಡಲು ಲಾಕ್‌ಡೌನ್‌ನಿಂದ ವಿನಾಯಿತಿ ನೀಡಲಾಗಿದೆ. ಆದರೆ ಮದ್ಯದಂಗಡಿಗಳು ಲಾಕ್‌ಡೌನ್‌ ಅವಧಿಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆಯೇ ಎಂಬುದರ ಸ್ಪಷ್ಟತೆ ಇರಲಿಲ್ಲ. ಈ ಕಾರಣದಿಂದಾಗಿ ಮದ್ಯದಂಗಡಿಗಳ ಮುಂದೆ ಎಣ್ಣೆಪ್ಪ್ರಿಯರು ಮುಗಿಬಿದ್ದಿದ್ದಾರೆ.

ದೆಹಲಿ ಸರ್ಕಾರವು ಸೋಮವಾರ ರಾತ್ರಿಯಿಂದ ಏಪ್ರಿಲ್ 26 ರ ಬೆಳಿಗ್ಗೆ ರಾಷ್ಟ್ರ ರಾಜಧಾನಿಯಲ್ಲಿ ಒಂದು ವಾರದವರೆಗೆ ಲಾಕ್ ಡೌನ್ ಘೋಷಿಸಿದ ಕೂಡಲೇ ಜನರು ಮದ್ಯವನ್ನು ಕೊಂಡುಕೊಳ್ಳಲು ಮುಂದಾದರು. ನಗರದ ಮದ್ಯದಂಗಡಿಗಳ ಹೊರಗೆ ಉದ್ದನೆಯ ಸರತಿ ಸಾಲುಗಳು ಕಂಡುಬಂದವು.

ಲಾಕ್‌ಡೌನ್ ಸಮಯದಲ್ಲಿ ಮುಚ್ಚಲ್ಪಡುವ ವಿವಿಧ ಸ್ಥಳಗಳಲ್ಲಿ ಮದ್ಯದಂಗಡಿಗಳು ಕೂಡಾ ಇವೆ. ಇದರರ್ಥ ಲಾಕ್‌ಡೌನ್ ಸಮಯದಲ್ಲಿ ದೆಹಲಿಯವರಿಗೆ ಈ ಅಂಗಡಿಗಳಿಂದ ಮದ್ಯವನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಈ ಲಾಕ್‌ಡೌನ್ ಸಮಯದಲ್ಲಿ ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳು ಸಹ ಮುಚ್ಚಲ್ಪಡುತ್ತವೆ.

ಈ ಹಿಂದೆ ಮಾರ್ಚ್ 2020 ರಲ್ಲಿ ಕೇಂದ್ರವು ವಿಧಿಸಿದ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಸಮಯದಲ್ಲಿ ಮದ್ಯದಂಗಡಿಗಳನ್ನು ಸಹ ಮುಚ್ಚಲಾಗಿತ್ತು. ದೇಶದಲ್ಲಿ 8-12 ವಾರಗಳವರೆಗೆ ಮದ್ಯದಂಗಡಿಗಳಿಗೆ ಮಾರಾಟ ಮಾಡಲು ನಿರ್ಬಂಧ ಹೇರಲಾಗಿತ್ತು.

ಹೀಗಾಗಿ ಜನರು ಮುಖ್ಯಮಂತ್ರಿಯವರ ಒಂದು ವಾರದ ಲಾಕ್‌ಡೌನ್ ಘೋಷಣೆಯ ನಂತರ, ಜನರು ವಾರಕ್ಕಾಗುವಷ್ಟು ಮದ್ಯವನ್ನು ಸಂಗ್ರಹಣೆ ಮಾಡಿಕೊಳ್ಳಲು ಮದ್ಯದಂಗಡಿಗಳ ಹೊರಗೆ ಉದ್ದನೆಯ ಸರತಿ ಸಾಲುಗಳಲ್ಲಿ ಕಾದು ನಿಂತಿರುವ ದೃಶ್ಯ ರಾಷ್ಟ್ರ ರಾಜಧಾನಿಯಲ್ಲಿ ಕಂಡು ಬಂದಿದೆ.

ಈ ಮದ್ಯದಂಗಡಿಗಳಲ್ಲಿ ದೆಹಲಿ ಪೊಲೀಸರು ಗುಂಪನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದರು. ಹಲವಾರು ಜನರು ಮದ್ಯದಂಗಡಿಗಳ ಮಂದೆ ಜಮಾಯಿಸಿದ್ದು ಮದ್ಯ ಖರೀದಿಸುತ್ತಿರುವುದು ಕಂಡುಬಂತು.
Published by:Soumya KN
First published: