ಖಾಲಿಯಾದ ಕಾಂಗ್ರೆಸ್ ಖಜಾನೆ ತುಂಬಲು ಅಹ್ಮದ್​ ಪಟೇಲ್​ಗೆ ರಾಹುಲ್​ ಗಾಂಧಿ ಆದೇಶ

ಕಳೆದ ನಾಲ್ಕು ವರ್ಷಗಳಿಂದ ರಾಜ್ಯಗಳ ಮೇಲೆ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡು ಬಂದಿರುವ ಕಾಂಗ್ರೆಸ್​ ಖಜಾನೆ ಈಗ ಖಾಲಿ ಖಾಲಿ, ತುಂಬುತ್ತಾರ ಸೋನಿಯಾ ಗಾಂಧಿ ಆಪ್ತ ಪಟೇಲ್​?

Sharath Sharma Kalagaru | news18
Updated:August 21, 2018, 8:24 PM IST
ಖಾಲಿಯಾದ ಕಾಂಗ್ರೆಸ್ ಖಜಾನೆ ತುಂಬಲು ಅಹ್ಮದ್​ ಪಟೇಲ್​ಗೆ ರಾಹುಲ್​ ಗಾಂಧಿ ಆದೇಶ
ಅಹ್ಮದ್​ ಪಟೇಲ್​ರ ಸಾಂದರ್ಭಿಕ ಚಿತ್ರ
Sharath Sharma Kalagaru | news18
Updated: August 21, 2018, 8:24 PM IST
ನವದೆಹಲಿ (ಆಗಸ್ಟ್​ 21): ಕಾಂಗ್ರೆಸ್​ನ ಹಿರಿಯ ಮುಖಂಡ, ಕಾಂಗ್ರೆಸ್​ನ ಮಾಜಿ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿಯವರ ಆಪ್ತ ಅಹ್ಮದ್​ ಪಟೇಲ್​ಗೆ ಇಂದು 69ನೇ ಹುಟ್ಟು ಹಬ್ಬ. ಹುಟ್ಟು ಹಬ್ಬಕ್ಕೆ ಒಂದರ್ಥದಲ್ಲಿ ಗಿಫ್ಟ್​ ಮತ್ತೊಂದು ಅರ್ಥದಲ್ಲಿ ಗುರುತರ ಜವಾಬ್ದಾರಿಯನ್ನು ರಾಹುಲ್​ ಗಾಂಧಿ ನೀಡಿದ್ದಾರೆ. 18 ವರ್ಷಗಳ ಬಳಿಕ ಮತ್ತೆ ಅಹ್ಮದ್​ ಪಟೇಲ್​ರನ್ನು ಅಖಿಲ ಭಾರತ ಕಾಂಗ್ರೆಸ್​ ಪ್ರದೇಶ ಸಮಿತಿಯ ಖಜಾಂಚಿ ಸ್ಥಾನಕ್ಕೆ ನೇಮಿಸಿದ್ದಾರೆ.

ಎಐಸಿಸಿಯಲ್ಲಿ ಭಾರೀ ಬದಲಾವಣೆಯನ್ನು ರಾಷ್ಟ್ರಾಧ್ಯಕ್ಷ ರಾಹುಲ್​ ಗಾಂಧಿ ಮಾಡಿದ್ದಾರೆ. ಸೋನಿಯಾ ಗಾಂಧಿಯವರ ಪರಮಾಪ್ತ ಅಹ್ಮದ್​ ಪಟೇಲ್​ರಿಗೆ ಎಐಸಿಸಿ ಖಜಾಂಚಿ ಸ್ಥಾನಕ್ಕೇರಿಸಲಾಗಿದೆ. ಜತೆಗೆ ಇನ್ನೂ ಹಲವು ಬದಲಾವಣೆಗಳನ್ನು ರಾಹುಲ್​ ಗಾಂಧಿ ತಂದಿದ್ದಾರೆ, ಈ ಮೂಲಕ ಮುಂಬರುವ ಲೋಕಸಭಾ ಚುನಾವಣೆಗೆ ಹೊಸ ರಣನೀತಿ ಹೆಣೆಯಲು ಈ ಮೂಲಕ ರಾಹುಲ್​ ಮುಂದಾಗಿದ್ದಾರೆ.

ಈ ಬದಲಾವಣೆಯ ಮೂಲವನ್ನು ಹುಡುಕಿ ಹೊರಟರೆ ಕಾಂಗ್ರೆಸ್​ನ ಸಾಲು ಸಾಲು ಸೋಲುಗಳು ಕಣ್ಣಿಗೆ ಬೀಳುತ್ತವೆ. ಅದಕ್ಕಿಂತ ಮುಖ್ಯವಾಗಿ ಖಾಲಿಯಾದ ಕಾಂಗ್ರೆಸ್​ ಖಜಾನೆ ಗೋಚರಿಸುತ್ತದೆ. ರಾಹುಲ್​ ಗಾಂಧಿ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೇರಿದ ನಂತರ ಹಲವು ಬದಲಾವಣೆಗಳನ್ನು ಮಾಡಿದ್ದಾರೆ. ಈಗ ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿರುವಾಗ ಪಕ್ಷದ ಬಲವರ್ಧನೆಯ ಕೆಲಸ ಒಂದು ಕಡೆಗಾದರೆ, ಪಕ್ಷದ ಖಜಾನೆಯನ್ನು ತುಂಬಿಸುವುದು ಮತ್ತೊಂದು ಕೆಲಸ. ಅದಕ್ಕಾಗಿಯೇ ಸೋನಿಯಾ ಗಾಂಧಿಯವರ ನಂಬಿಕಸ್ಥ ಭಂಟನೆಂದೇ ಗುರುತಿಸಿ ಕೊಂಡಿರುವ ಅಹ್ಮದ್​ ಪಟೇಲ್​ರಿಗೆ ಖಜಾನೆ ಬೀಗ ಕೊಟ್ಟಿದ್ದಾರೆ.

ಕಾಂಗ್ರೆಸ್​ ಮಾಜಿ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿಯಾಗಿದ್ದವರು ಅಹಮದ್ ಪಟೇಲ್​. ಈ ಹಿಂದೆಯೂ ಹಲವು ಮಹತ್ವದ ಹುದ್ದೆಗಳನ್ನು ಅಲಂಕರಿಸಿದ್ದ ಅಹಮದ್ ಪಟೇಲ್​ಗೆ ಮತ್ತೊಂದು ಮಹತ್ವದ ಹುದ್ದೆ ನೀಡುವ ಮೂಲಕ ಸೋನಿಯಾ ಗಾಂಧಿಯವರ ಆಪ್ತರು ಈಗಲೂ ಪಕ್ಷದಲ್ಲಿ ಹಿಡಿತ ಹೊಂದಿದ್ದಾರೆ ಎಂಬುದಕ್ಕೆ ರಾಹುಲ್​ ಸಾಕ್ಷಿ ಒದಗಿಸಿದ್ದಾರೆ.

ದಶಕಗಳಿಂದ ಎಐಸಿಸಿ ಖಜಾಂಚಿಯಾಗಿದ್ದ ಮೋತಿಲಾಲ್ ವೋರಾ ಅವರನ್ನು ಖಜಾಂಚಿ ಸ್ಥಾನದಿಂದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನೇಮಿಸಿದ್ದಾರೆ. ಎಐಸಿಸಿ ಆಡಳಿತ ವಿಭಾಗದ ಉಸ್ತುವಾರಿ ಜವಾಬ್ದಾರಿಯನ್ನೂ ಮೋತಿಲಾಲ್ ವೋರಾಗೆ ನೀಡಲಾಗಿದೆ.

ಎಐಸಿಸಿಯ ವಿದೇಶಾಂಗ ವ್ಯವಹಾರಗಳ ವಿಭಾಗಕ್ಕೂ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಆನಂದ ಶರ್ಮಾ ವಿದೇಶಾಂಗ ವ್ಯವಹಾರಗಳ ಅಧ್ಯಕ್ಷ ಸ್ಥಾನಕ್ಕೆ ನೇಮಕಗೊಂಡಿದ್ದಾರೆ. ಆನಂದ ಶರ್ಮಾ, ರಾಜ್ಯಸಭೆಯ ಪ್ರತಿಪಕ್ಷದ ಉಪ ನಾಯಕ ಕೂಡ ಹೌದು. ವಿದೇಶಾಂಗ ವ್ಯವಹಾರಗಳ ಉಸ್ತುವಾರಿಯಾಗಿದ್ದ ಕರಣ್ ಸಿಂಗ್​ರಿಗೆ ಈಗ ಕೊಕ್​ ನೀಡಿದಂತಾಗಿದೆ.

ಕಾಂಗ್ರೆಸ್​ನ ಈಶಾನ್ಯ ರಾಜ್ಯಗಳ ಉಸ್ತುವಾರಿಯನ್ನು ಲುಜಿನೋ ಫೆಲೋರೋಗೆ ವಹಿಸಲಾಗಿದೆ. ಕೆಲ ದಿನಗಳ ಹಿಂದಷ್ಟೇ ಈಶಾನ್ಯ ರಾಜ್ಯಗಳ ಉಸ್ತುವಾರಿಯಾಗಿ ನೇಮಕವಾಗಿದ್ದ ಸಿ.ಪಿ. ಜೋಷಿಗೆ ಕೊಕ್​ ನೀಡಲಾಗಿದೆ. ಎಐಸಿಸಿ ಕಾರ್ಯಕಾರಿಣಿಯಲ್ಲಿ ಆದ ಬದಲಾವಣೆಗಳಿಂದ ಲೋಕಸಭೆಯಲ್ಲಿ ಕಾಂಗ್ರೆಸ್​ಗೆ ಯಾವ ರೀತಿಯ ಲಾಭವಾಗಲಿದೆ ಎಂಬುದನ್ನು ಕಾದು ನೋಡಬೇಕು.
Loading...

ಇದೆಲ್ಲಕ್ಕಿಂತ ಮುಖ್ಯವೆಂದರೆ ಅಹ್ಮದ್​ ಪಟೇಲ್​ ಖಾಲಿಯಾಗಿರುವ ಖಜಾನೆಯನ್ನು ತುಂಬುತ್ತಾರ ಮತ್ತು ಕಾಂಗ್ರೆಸ್​ಗೆ ಮುಚ್ಚಿ ಹೋಗಿರುವ ಡೊನೇಷನ್​ಗಳ ಬಾಗಿಲುಗಳನ್ನು ಮತ್ತೆ ತೆರೆಯುತ್ತಾರ ಎಂಬುದನ್ನು ಕಾದು ನೋಡಬೇಕು. ಕಾಂಗ್ರೆಸ್​ ಪಾಲಿಗೆ ಅಧಿಕಾರದಲ್ಲಿರುವ ದೊಡ್ಡ ರಾಜ್ಯಗಳು ಎಂದರೆ ಪಂಜಾಬ್​ ಮತ್ತು ಕರ್ನಾಟಕ. ಅದರಲ್ಲೂ ಕರ್ನಾಟಕದಲ್ಲಿ ಜೆಡಿಎಸ್​ ಜತೆಗಿನ ಮೈತ್ರಿ ಸರ್ಕಾರ. ಹೀಗಿರುವಾಗ ಲೋಕಸಭಾ ಚುನಾವಣೆ ಎದುರಿಸಲು ಬೇಕಾದ ಹಣವನ್ನು ಸಂಗ್ರಹಿಸುವಲ್ಲಿ ಪಟೇಲ್​ ಯಶಸ್ವಿಯಾಗುತ್ತಾರ ಎಂಬುದು ಮುಂದಿರುವ ಪ್ರಶ್ನೆ.
First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ