ನೂತನ ಕೃಷಿ ಕಾನೂನಿನ ದೋಷ ಹುಡುಕುವಲ್ಲಿ ವಿಪಕ್ಷಗಳು, ರೈತ ಸಂಘಟನೆಗಳು ವಿಫಲ; ಕೇಂದ್ರ ಕೃಷಿ ಸಚಿವ

ಹೊಸ ಕೃಷಿ ಕಾನೂನಿನಲ್ಲಿರುವ ಒಂದೇ ಒಂದು ನ್ಯೂನತೆಯನ್ನು ತೋರಿಸುವಲ್ಲಿ ಕೂಡ ರೈತ ಸಂಘಟನೆಗಳು, ವಿಪಕ್ಷಗಳು ಸೋತಿವೆ

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್​ ಥೋಮರ್

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್​ ಥೋಮರ್

 • Share this:
  ನವದೆಹಲಿ (ಫೆ. 5): ಕೃಷಿ ಕಾನೂನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಕೇವಲ ಒಂದು ರಾಜ್ಯಕ್ಕೆ ಮಾತ್ರ ಸೀಮಿತವಾಗಿದೆ. ಈ ಕಾಯ್ದೆ ಮೂಲಕ ರೈತರನ್ನು ಪ್ರಚೋದಿಸಲಾಗುತ್ತಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್​ ಥೋಮರ್​ ತಿಳಿಸಿದ್ದಾರೆ. ರಾಜ್ಯಸಭೆಯಲ್ಲಿ ಮೂರು ನೂತನ ಕೃಷಿ ಮಸೂದೆಗಳನ್ನು ಸಮರ್ಥಿಸಿ ಮಾತನಾಡಿದ ಅವರು ಕೃಷಿ ಕಾನೂನನ್ನು ಮುಖ್ಯವಾಗಿ ಕಾಂಗ್ರೆಸ್​ ಆಡಳಿತಾರೂಡ ಪಂಜಾಬ್​ನ ರೈತರಿಂದ ಮಾತ್ರ ವಿರೋಧ ವ್ಯಕ್ತವಾಗುತ್ತಿದೆ. ಆದರೆ, ವಿರೋಧ ಪಕ್ಷ ಈ ಕೃಷಿ ಕಾನೂನಿಗೆ ದೇಶದೆಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ ಎಂದು ಆರೋಪಿಸುತ್ತಿದೆ. ಕೃಷಿಯನ್ನು ನೀರಿನಿಂದ ಮಾಡಲಾಗುತ್ತದೆ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಆದರೆ, ಕಾಂಗ್ರೆಸ್​ ಮಾತ್ರ ರಕ್ತದ ಮೂಲಕ ಕೃಷಿ ಮಾಡುತ್ತಿದೆ ಎಂದು ಟೀಕಿಸಿದರು.

  ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ರೈತರ ಕಲ್ಯಾಣಕ್ಕಾಗಿ ಬದ್ಧವಾಗಿದೆ. ಈ ಹೊಸ ಕೃಷಿ ಕಾನೂನಿನಲ್ಲಿರುವ ಒಂದೇ ಒಂದು ನ್ಯೂನತೆಯನ್ನು ತೋರಿಸುವಲ್ಲಿ ಕೂಡ ರೈತ ಸಂಘಟನೆಗಳು, ವಿಪಕ್ಷಗಳು ಸೋತಿವೆ ಎಂದು ತಿಳಿಸಿದರು.

  ನಾವು ಈ ಕಾನೂನನ್ನು ತಂದೇ ತಿರುತ್ತೇವೆ ಎಂಬ ಪ್ರತಿಷ್ಠ ಮೇಲೆ ನಿಂತಿಲ್ಲ. ಈಗಾಗಲೇ ಈ ಕಾನೂನಿನನ್ನಲರಿವ ತೊಡಗು ಏನು? ಅದನ್ನು ಸರಿಪಡಿಸೋಣ ಎನ್ನುತ್ತಿದ್ದೇವೆ. ಆದರೆ ಈ ಬಗ್ಗೆ ತಿಳಿಸಲು ರೈತ ಸಂಘಟನೆಗಳು, ವಿಪಕ್ಷಗಳು ವಿಫಲವಾಗಿವೆ ಎಂದರು.

  ಇದನ್ನು ಓದಿ: ಕೃಷಿ ಕಾಯ್ದೆಗಳನ್ನ ಸಂಸದೀಯ ಸಮಿತಿಯೊಂದರ ಅವಗಾಹನೆಗೆ ಬಿಡಲು ಕೇಂದ್ರ ಚಿಂತನೆ

  ಆತ್ಮ ನಿರ್ಭರ ಪ್ಯಾಕೇಜ್​ ಅಡಿಯಲ್ಲಿ 1 ಲಕ್ಷ ಕೋಟಿ ಕೃಷಿ ಮೂಲಸೌಕರ್ಯ ನಿಧಿಯನ್ನು ಒದಗಿಸಲಾಗಿದೆ. ಕೃಷಿಗೆ ಅಗತ್ಯ ಹೂಡಿಕೆ ತಲುಪುವಂತೆ ಕೇಂದ್ರವು ಪ್ರಯತ್ನಿಸುತ್ತಿದೆ ಎಂದು ಇದೇ ವೇಳೆ ತಿಳಿಸಿದರು.

  ಕೇಂದ್ರ ಸಚಿವರ ಸಮರ್ಥನೆ ಹೊರತಾಗಿ ಕೂಡ ಈ ವಿವಾದಾತ್ಮಕ ಕಾನೂನಿನ ವಿರುದ್ಧ ಕಾಂಗ್ರೆಸ್​ ಸೇರಿದಂತೆ ಇತರೆ ವಿಪಕ್ಷಗಳು ಸಂಸತ್ತಿನಲ್ಲಿ ದಾಳಿ ನಡೆಸಿದವು.  ರೈತರು ಗಡಿ ಪ್ರವೇಶಿಸದಂತೆ ಕಂದಕ ಅಗೆಯಲಾಗುತ್ತಿದೆ. ರಸ್ತೆಗಳಲ್ಲಿ ಮೊಳಗೆಗಳನ್ನು ಇಡಲಾಗುತ್ತಿದೆ. ಮುಳ್ಳು ತಂತಿ ಹಾಕುವ ಕಾರ್ಯ ನಡೆಸಲಾಗುತ್ತಿದೆ ಇವುಗಳ ಹೊರತಾಗಿ ರೈತರನ್ನು ಗೆಲ್ಲಲ್ಲು ಸೇತುವೆ ನಿರ್ಮಿಸಬೇಕು ಎಂದು ವಿಪಕ್ಷಗಳು ತಿಳಿಸಿದವು
  Published by:Seema R
  First published: