Agnipath Recruitment: ಅಗ್ನಿಪಥ್ ನೇಮಕಾತಿ ದಾಖಲೆ! ಅಗ್ನಿವೀರರಾಗಲು 56,960 ಅರ್ಜಿ ಸಲ್ಲಿಕೆ

Agniveer's: ಆಸಕ್ತ ಅಭ್ಯರ್ಥಿಗಳು ತಮ್ಮ ಅಧಿಕೃತ ವೆಬ್‌ಸೈಟ್ ಮೂಲಕ ನೇರವಾಗಿ ಅಗ್ನಿಪಥ್ ಯೋಜನೆ 2022 ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ದೆಹಲಿ: ಶುಕ್ರವಾರದಂದು ನೋಂದಣಿ ಪ್ರಕ್ರಿಯೆಗೆ ಚಾಲನೆ ದೊರೆತ ಮೂರು ದಿನಗಳಲ್ಲಿ ಅಗ್ನಿಪಥ್ ನೇಮಕಾತಿ (Agnipath Scheme) ಯೋಜನೆಯಡಿ 56,960 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಭಾರತೀಯ ವಾಯುಪಡೆ (IAF) ಭಾನುವಾರ ತಿಳಿಸಿದೆ. “56960! ಇದು  ಅಗ್ನಿಪಥ್ ನೇಮಕಾತಿ ಅರ್ಜಿ ಪ್ರಕ್ರಿಯೆಗೆ (Agnipath Recruitment Scheme) ಭವಿಷ್ಯದ ಅಗ್ನಿವೀರ್‌ಗಳಿಂದ (Agniveer) ಇಲ್ಲಿಯವರೆಗೆ ಸ್ವೀಕರಿಸಲಾದ ಒಟ್ಟು ಅರ್ಜಿಗಳ ಸಂಖ್ಯೆ" ಎಂದು ಐಎಎಫ್ ಟ್ವಿಟರ್‌ನಲ್ಲಿ ತಿಳಿಸಿದೆ. ಅಲ್ಲದೇ ಜುಲೈ 5 ರಂದು ನೋಂದಣಿ ಪ್ರಕ್ರಿಯೆ ಮುಗಿಯುತ್ತದೆ ಎಂದು ಐಎಎಫ್ ಮಾಹಿತಿ ನೀಡಿದೆ. ಹೀಗಾಗಿ ಅಗ್ನಿವೀರ್ ಆಗಿ ಸೇವೆ ಸಲ್ಲಿಸಲು ದಾಖಲೆ ಮಟ್ಟದಲ್ಲಿ ಅರ್ಜಿ ಸಲ್ಲಿಕೆಯಾಗಿದೆ. 

    ಅಗ್ನಿಪಥ್ ಯೋಜನೆ 2022 ಮೂಲಕ ಭಾರತೀಯ ವಾಯುಪಡೆಯ ನೇಮಕಾತಿಯು ಅಧಿಕೃತ ಅಧಿಸೂಚನೆಯ ಪ್ರಕಾರ ಜೂನ್ 24, 2022 ರಂದು ಪ್ರಾರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಅಧಿಕೃತ ವೆಬ್‌ಸೈಟ್ ಮೂಲಕ ನೇರವಾಗಿ ಅಗ್ನಿಪಥ್ ಯೋಜನೆ 2022 ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.



    ಜುಲೈ 5ಕ್ಕೆ ಕೊನೆಗೊಳ್ಳುತ್ತೆ ಗಮನಿಸಿ
    ಅಗ್ನಿಪಥ್ ಯೋಜನೆ 2022 ರ ಅಡಿಯಲ್ಲಿ IAF ನೇಮಕಾತಿಗಾಗಿ ನೋಂದಣಿಗಳು ಸೂಚನೆಯ ಪ್ರಕಾರ ಜುಲೈ 5, 2022 ರಂದು ಕೊನೆಗೊಳ್ಳುತ್ತವೆ. ಅಗ್ನಿವೀರ್ ಆಗಿ ಅರ್ಹತೆ ಪಡೆಯಲು, ಅರ್ಹತಾ ಮಾನದಂಡಗಳನ್ನು ಪೂರೈಸುವುದು ನಿರ್ಣಾಯಕವಾಗಿದೆ.

    ಇದನ್ನೂ ಓದಿ: Agnipath Scheme: 30 ರಜೆ, ಸಾವಿನ ಸಂದರ್ಭ 1 ಕೋಟಿ ರೂ! ಅಗ್ನಿಪತ್​ನ ಕೆಲವು ಪ್ರಮುಖ ಪ್ರಯೋಜನಗಳಿವು

    ಆಸಕ್ತ ಅಭ್ಯರ್ಥಿಗಳು 10ನೇ ತರಗತಿ ಅಥವಾ ಮೆಟ್ರಿಕ್ಯುಲೇಷನ್ ಉತ್ತೀರ್ಣ ಪ್ರಮಾಣಪತ್ರ, ಮಧ್ಯಂತರ ಅಥವಾ 10+2 ಅಥವಾ ತತ್ಸಮಾನ ಅಂಕಪಟ್ಟಿ ಅಥವಾ 3 ವರ್ಷಗಳ ಎಂಜಿನಿಯರಿಂಗ್ ಡಿಪ್ಲೊಮಾ ಅಂತಿಮ ವರ್ಷದ ಮಾರ್ಕ್ ಶೀಟ್ ಮತ್ತು ಮೆಟ್ರಿಕ್ಯುಲೇಷನ್ ಅಂಕಪಟ್ಟಿ ಅಥವಾ 2 ವರ್ಷಗಳ ವೃತ್ತಿಪರ ಕೋರ್ಸ್ ಮಾರ್ಕ್ ಶೀಟ್ ಮತ್ತು ವೃತ್ತಿಯಲ್ಲದ ಅಂಕಪಟ್ಟಿಗಳನ್ನು ಹೊಂದಿರಬೇಕು.

    ಗರಿಷ್ಠ ವಯಸ್ಸಿನ ಮಿತಿ ಹೆಚ್ಚಳ
    ಅಗ್ನಿಪಥ್ ಯೋಜನೆಯಡಿಯಲ್ಲಿ ನೇಮಕಗೊಂಡವರನ್ನು ' ಅಗ್ನಿವೀರ್ ' ಎಂದು ಕರೆಯಲಾಗುತ್ತದೆ. ಜೂನ್ 16 ರಂದು ಸರ್ಕಾರವು ಯೋಜನೆಯಡಿಯಲ್ಲಿ ನೇಮಕಾತಿಗಾಗಿ ಗರಿಷ್ಠ ವಯಸ್ಸಿನ ಮಿತಿಯನ್ನು 2022 ಕ್ಕೆ 21 ರಿಂದ 23 ವರ್ಷಗಳಿಗೆ ಹೆಚ್ಚಿಸಿದೆ.

    ಅಗ್ನಿಪಥ್ ವಿರೋಧಿಸಿ ಪ್ರತಿಭಟನೆ; ಗಲಭೆಕೋರರಿಂದ ನಷ್ಟ ವಸೂಲಿ ಮಾಡಲು ನಿರ್ಧಾರ
    ಕೇಂದ್ರ ಸರ್ಕಾರದ ಹೊಸ ಅಗ್ನೀಪಥ ಯೋಜನೆಯನ್ನು  ವಿರೋಧಿಸಿ ದೇಶದ ಹಲವೆಡೆ ಪ್ರತಿಭಟನೆಗಳು ಆರಂಭವಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ/ಸರ್ಕಾರಿ ಆಸ್ತಿ ನಾಶ ಮಾಡಿದ ಗಲಭೆಕೋರರಿಂದ ನಷ್ಟವನ್ನು ವಸೂಲಿ ಮಾಡುವುದಾಗಿ ಯು.ಪಿ ಸರ್ಕಾರ ಹೇಳಿದೆ.

    ಇದನ್ನೂ ಓದಿ: Explained: ಅಗ್ನಿವೀರರಿಂದ ಚೀನಾಕ್ಕೆ ಸವಾಲ್! ಸರ್ಕಾರದ ಖಡಕ್ ಪ್ಲಾನ್

    ಕೇಂದ್ರದ ಹೊಸ ಸೇನಾ ನೇಮಕಾತಿ ಯೋಜನೆ ಹೊರಬಂದ ತಕ್ಷಣ, ಪ್ರತಿಭಟನೆ ಶುರುವಾಯಿತು. ಆ ಸಂದರ್ಭದಲ್ಲಿ ಪ್ರತಿಭಟನೆಯ ಹೆಸರಿನಲ್ಲಿ ಕೆಲವರು ಬಸ್ಸು, ರೈಲು ಹಾಗು ಇನ್ನಿತರ ಸರ್ಕಾರಿ ಹಾಗೂ ಸಾರ್ವಜನಿಕ ಆಸ್ತಿಯನ್ನು  ಬೆಂಕಿ ಹಚ್ಚಿ ನಾಶ ಮಾಡಿದರು. ಅದಕ್ಕೆ ಉತ್ತರ ಪ್ರದೇಶ ರಾಜ್ಯ ಸರ್ಕಾರವು ಹಾನಿ ಮಾಡಿದವರಿಂದ ನಮ್ಮ ನಷ್ಟವನ್ನು ಮರುಪಡೆಯುತ್ತೇವೆ ಹಾಗೂ ಅವರ ವಿರುದ್ಧ ಕಠಿಣ ಕ್ರಮ ತೆಗೆದು ಕೊಳ್ಳುತ್ತೇವೆ ಎಂದು ಹೇಳಿದೆ.
    Published by:guruganesh bhat
    First published: