Agnipath Recruitment: ಅಗ್ನಿವೀರರಾಗಲು ಅತ್ಯುತ್ಸಾಹ; 6 ದಿನಗಳಲ್ಲಿ ಒಟ್ಟು 1.83 ಲಕ್ಷಕ್ಕೂ ಹೆಚ್ಚು ಅರ್ಜಿ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಜೂನ್ 24 ರಂದು ಪ್ರಾರಂಭವಾದ ನೋಂದಣಿ ಪ್ರಕ್ರಿಯೆಯು ಜುಲೈ 5 ರಂದು ಮುಕ್ತಾಯಗೊಳ್ಳಲಿದೆ. ಆನ್‌ಲೈನ್ ಪರೀಕ್ಷೆ ಪ್ರಕ್ರಿಯೆ ಜುಲೈ 24 ರಿಂದ ಪ್ರಾರಂಭವಾಗಿದೆ.

  • Share this:

    ದೆಹಲಿ: ಭಾರತೀಯ ವಾಯುಪಡೆಯು (IAF) ಅಗ್ನಿಪಥ್ ನೇಮಕಾತಿ ಯೋಜನೆಯಡಿ (Agnipath Scheme) ಈವರೆಗೆ ಅಂದರೆ 6 ದಿನಗಳಲ್ಲಿ ಒಟ್ಟು 1.83 ಲಕ್ಷಕ್ಕೂ ಹೆಚ್ಚು  ಅರ್ಜಿಗಳನ್ನು ಸ್ವೀಕರಿಸಿದೆ. ಅಗ್ನಿಪಥ್ ಯೋಜನೆಯಡಿ ಅಗ್ನಿವೀರರಾಗಿ (Agniveer) ಸೇವೆ ಸಲ್ಲಿಸಲು ದೇಶದ ಯುವಕರು ಅತ್ಯುತ್ಸಾಹ ತೋರಿಸಿದ್ದಾರೆ. ಇಲ್ಲಿಯವರೆಗೆ, 1,83,634 ಭವಿಷ್ಯದ ಅಗ್ನಿವೀರ್‌ಗಳು ನೋಂದಣಿ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಜುಲೈ 5, 2022 ರಂದು ನೋಂದಣಿ ಮುಕ್ತಾಯವಾಗುತ್ತದೆ ಎಂದು ಭಾರತೀಯ ವಾಯುಪಡೆಯು ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿದೆ. 


    ಜೂನ್ 24 ರಂದು ಪ್ರಾರಂಭವಾದ ನೋಂದಣಿ ಪ್ರಕ್ರಿಯೆಯು ಜುಲೈ 5 ರಂದು ಮುಕ್ತಾಯಗೊಳ್ಳಲಿದೆ. ಆನ್‌ಲೈನ್ ಪರೀಕ್ಷೆ ಪ್ರಕ್ರಿಯೆ ಜುಲೈ 24 ರಿಂದ ಪ್ರಾರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಅಧಿಕೃತ ವೆಬ್‌ಸೈಟ್ ಮೂಲಕ ನೇರವಾಗಿ ಅಗ್ನಿಪಥ್ ಯೋಜನೆ 2022 ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.


    ಅಗ್ನಿವೀರರಿಗೆ ಆರು ತಿಂಗಳ ತರಬೇತಿ
    ಮೆಚ್ಚುಗೆಯ ಆಧಾರದಲ್ಲಿರದೆ ಅಥವಾ ಪಕ್ಷಪಾತ ಮಾಡದೆ ಇಲ್ಲವೆ ಅನಾರೋಗ್ಯಕರ ಸ್ಪರ್ಧೆಯಿಲ್ಲದೆ ಖಾಯಂ ನೇಮಕಾತಿಗಳಾಗಿ ಅಗ್ನಿವೀರರ ಆಯ್ಕೆಯನ್ನು ವಸ್ತುನಿಷ್ಠವಾಗಿ ಕೈಗೊಳ್ಳಲಾಗುವುದು ಎಂಬ ಅಂಶವನ್ನು ಸೇನೆಯು ಹೇಗೆ ಖಚಿತಪಡಿಸುತ್ತದೆ ಎಂಬುದರ ಬಗ್ಗೆ ವಿವರಣೆ ನೀಡಿದ ಲೆಫ್ಟಿನೆಂಟ್ ಜನರಲ್ ರಾಜು ಅವರು ಅಗ್ನಿವೀರ ತನ್ನ ಆರು ತಿಂಗಳ ತರಬೇತಿ ಅವಧಿಯ ಕೊನೆಯಲ್ಲಿ ತನ್ನ ಮೊದಲ ಮೌಲ್ಯಮಾಪನವನ್ನು ಎದುರಿಸಲಿದ್ದಾನೆ ಎಂದರು.


    ಅರ್ಹತೆಯ ಮಾನದಂಡಗಳು ಹೀಗಿವೆ
    ಆಸಕ್ತ ಅಭ್ಯರ್ಥಿಗಳು 10ನೇ ತರಗತಿ ಅಥವಾ ಮೆಟ್ರಿಕ್ಯುಲೇಷನ್ ಉತ್ತೀರ್ಣ ಪ್ರಮಾಣಪತ್ರ, ಮಧ್ಯಂತರ ಅಥವಾ 10+2 ಅಥವಾ ತತ್ಸಮಾನ ಅಂಕಪಟ್ಟಿ ಅಥವಾ 3 ವರ್ಷಗಳ ಎಂಜಿನಿಯರಿಂಗ್ ಡಿಪ್ಲೊಮಾ ಅಂತಿಮ ವರ್ಷದ ಮಾರ್ಕ್ ಶೀಟ್ ಮತ್ತು ಮೆಟ್ರಿಕ್ಯುಲೇಷನ್ ಅಂಕಪಟ್ಟಿ ಅಥವಾ 2 ವರ್ಷಗಳ ವೃತ್ತಿಪರ ಕೋರ್ಸ್ ಮಾರ್ಕ್ ಶೀಟ್ ಮತ್ತು ವೃತ್ತಿಯಲ್ಲದ ಅಂಕಪಟ್ಟಿಗಳನ್ನು ಹೊಂದಿರಬೇಕು.


    ಇದನ್ನೂ ಓದಿ: Agnipath Scheme: 30 ರಜೆ, ಸಾವಿನ ಸಂದರ್ಭ 1 ಕೋಟಿ ರೂ! ಅಗ್ನಿಪತ್​ನ ಕೆಲವು ಪ್ರಮುಖ ಪ್ರಯೋಜನಗಳಿವು


    ಗರಿಷ್ಠ ವಯಸ್ಸಿನ ಮಿತಿ ಹೆಚ್ಚಳ
    ಅಗ್ನಿಪಥ್ ಯೋಜನೆಯಡಿಯಲ್ಲಿ ನೇಮಕಗೊಂಡವರನ್ನು ' ಅಗ್ನಿವೀರ್ ' ಎಂದು ಕರೆಯಲಾಗುತ್ತದೆ. ಜೂನ್ 16 ರಂದು ಸರ್ಕಾರವು ಯೋಜನೆಯಡಿಯಲ್ಲಿ ನೇಮಕಾತಿಗಾಗಿ ಗರಿಷ್ಠ ವಯಸ್ಸಿನ ಮಿತಿಯನ್ನು 2022 ಕ್ಕೆ 21 ರಿಂದ 23 ವರ್ಷಗಳಿಗೆ ಹೆಚ್ಚಿಸಿದೆ.


    ಗಲಭೆಕೋರರಿಂದ ನಷ್ಟ ವಸೂಲಿ ಮಾಡಲು ನಿರ್ಧಾರ
    ಕೇಂದ್ರ ಸರ್ಕಾರದ ಹೊಸ ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ದೇಶದ ಹಲವೆಡೆ ಪ್ರತಿಭಟನೆಗಳು ಆರಂಭವಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ/ಸರ್ಕಾರಿ ಆಸ್ತಿ ನಾಶ ಮಾಡಿದ ಗಲಭೆಕೋರರಿಂದ ನಷ್ಟವನ್ನು ವಸೂಲಿ ಮಾಡುವುದಾಗಿ ಯು.ಪಿ ಸರ್ಕಾರ ಹೇಳಿದೆ.


    ಮಹಿಂದ್ರಾ ಕಂಪನಿಯಲ್ಲಿ ಆಫರ್
    ಈ ನಡುವೆ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ (Anand Mahindra) ಸೋಮವಾರ ಈ ಯೋಜನೆಯಡಿ ತರಬೇತಿ ಪಡೆದ ಯುವಕರನ್ನು ತಮ್ಮ ಕಂಪನಿಗಳನ್ನು (Mahindra Group) ಆದ್ಯತೆಯ ಮೇರೆಗೆ ಉದ್ಯೊಗಿಗಳನ್ನಾಗಿ ನೇಮಿಸಿಕೊಳ್ಳುವುದಾಗಿ ಘೋಷಿಸಿದ್ದಾರೆ. ಕಳೆದ ವರ್ಷ ಈ ಯೋಜನೆಯನ್ನು ಪ್ರಸ್ತಾಪಿಸಿದಾಗ ಅಗ್ನಿವೀರ್‌ಗಳು (Agniveer) ಗಳಿಸುವ ಶಿಸ್ತು ಮತ್ತು ಕೌಶಲ್ಯಗಳು ಅವರನ್ನು ಅತ್ಯುತ್ತಮವಾಗಿ ಉದ್ಯೋಗಿಯನ್ನಾಗಿ ಮಾಡುತ್ತದೆ ಎಂದು ಹೇಳಿದ್ದಾಗಿ ಆನಂದ್ ಮಹೀಂದ್ರಾ ಉಲ್ಲೇಖಿಸಿದ್ದಾರೆ. ಅಗ್ನಿಪಥ್ ಯೋಜನೆಯಂತಹ ತರಬೇತಿ ಪಡೆದ, ಸಮರ್ಥ ಯುವಕರನ್ನು ನೇಮಿಸಿಕೊಳ್ಳುವ ಅವಕಾಶವನ್ನು ಮಹೀಂದ್ರಾ ಗ್ರೂಪ್ ಸ್ವಾಗತಿಸುತ್ತದೆ ಎಂದು ಅವರು ಟ್ವೀಟ್‌ನಲ್ಲಿ ಪ್ರಕಟಿಸಿದ್ದಾರೆ.


    ಇದನ್ನೂ ಓದಿ: Explained: ಅಗ್ನಿವೀರರಿಂದ ಚೀನಾಕ್ಕೆ ಸವಾಲ್! ಸರ್ಕಾರದ ಖಡಕ್ ಪ್ಲಾನ್


    ಅಗ್ನಿವೀರ್​ಗಳಿಗೆ ಮಹೀಂದ್ರಾ ಕಂಪನಿ ಯಾವ ಹುದ್ದೆಯನ್ನು ನೀಡುತ್ತದೆ?
    ಮಹೀಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹೀಂದ್ರಾ ಕೈಗೊಂಡಿರುವು ಈ ನಿರ್ಧಾರವನ್ನು ಸಾಕಷ್ಟು ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆದರೆ ಒಬ್ಬರು ಅಗ್ನಿವೀರ್​ ಮಹೀಂದ್ರಾ ಗ್ರೂಪ್​ನಿಂದ ಯಾವ ಹುದ್ದೆಯನ್ನು ನೀಡುತ್ತಾರೆ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಆನಂದ್ ಮಹೀಂದ್ರಾ, "ಕಾರ್ಪೊರೇಟ್ ವಲಯದಲ್ಲಿ ಅಗ್ನಿವೀರ್‌ಗಳ ಉದ್ಯೋಗಕ್ಕೆ ದೊಡ್ಡ ಅವಕಾಶಗಳಿವೆ" ಎಂದು ಉತ್ತರಿಸಿದ್ದಾರೆ.

    Published by:guruganesh bhat
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು