Agnipath Protest: ಅಗ್ನಿಪಥ್ ವಿರೋಧಿಸಿ 2 ರೈಲುಗಳಿಗೆ ಬೆಂಕಿಯಿಟ್ಟ ಪ್ರತಿಭಟನಾಕಾರರು

ಹಲವಾರು ರಾಜ್ಯಗಳಲ್ಲಿ ಪ್ರತಿಭಟನೆಗಳ ನಂತರ ಸರ್ಕಾರವು 2022 ರ ಯೋಜನೆಯಡಿಯಲ್ಲಿ ನೇಮಕಾತಿಗಾಗಿ ಗರಿಷ್ಠ ವಯಸ್ಸಿನ ಮಿತಿಯನ್ನು 21 ವರ್ಷದಿಂದ 23 ವರ್ಷಕ್ಕೆ ಏರಿಸಿದೆ.

ರೈಲಿಗೆ ಬೆಂಕಿ

ರೈಲಿಗೆ ಬೆಂಕಿ

 • Share this:
  ಕೇಂದ್ರ ಸರ್ಕಾರದ ಹೊಸ ಸೇನಾ ನೇಮಕಾತಿ ಯೋಜನೆ ಅಗ್ನಿಪಥ್ (Agnipath) ವಿರುದ್ಧ ಬಿಹಾರ ಮತ್ತು ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಪ್ರತಿಭಟನೆಗಳು (Agnipath Protest) ಗಂಭೀರ ಸ್ವರೂಪ ಪಡೆಯುತ್ತಿವೆ. ಉದ್ರಿಕ್ತ ಪ್ರತಿಭಟನಾಕಾರರ ಗುಂಪುಗಳು ರೈಲುಬೋಗಿಗಳಿಗೆ ಬೆಂಕಿ ಇಡುತ್ತಿವೆ. ಉತ್ತರಪ್ರದೇಶದಲ್ಲಿ (Uttar Pradesh) ಇಂದು ಬೆಳಗ್ಗೆ ಬಲ್ಲಿಯಾದಲ್ಲಿ ರೈಲ್ವೇ ನಿಲ್ದಾಣಕ್ಕೆ ನುಗ್ಗಿದ ಗುಂಪೊಂದು ರೈಲಿಗೆ ಬೆಂಕಿ ಹಚ್ಚಿದೆ.  ಪೊಲೀಸರು ಅವರನ್ನು ಚದುರಿಸಲು ಬಲಪ್ರಯೋಗ ಮಾಡುವ ಮೊದಲು ರೈಲ್ವೇ ನಿಲ್ದಾಣದ ಆಸ್ತಿಯನ್ನು ಉದ್ರಿಕ್ತ ಪ್ರತಿಭಟನಾಕಾರರ ಗುಂಪು ಹಾನಿಗೊಳಿಸಿದೆ. ಬಿಹಾರದ (Bihar) ಮೊಹಿಯುದ್ದಿನಗರ ನಿಲ್ದಾಣದಲ್ಲಿ ಜಮ್ಮು ತಾವಿ ಎಕ್ಸ್‌ಪ್ರೆಸ್ ರೈಲಿನ ಎರಡು ಕೋಚ್‌ಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೃಷ್ಟವಷಾತ್ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಬಿಜೆಪಿ ಆಡಳಿತವಿರುವ ಹರಿಯಾಣ ಮತ್ತು ಮಧ್ಯಪ್ರದೇಶಕ್ಕೂ ಪ್ರತಿಭಟನೆ ವ್ಯಾಪಿಸುತ್ತಿದೆ.

  ಅಖಿಲ ಭಾರತ ವಿದ್ಯಾರ್ಥಿ ಸಂಘ (AISA) ಶುಕ್ರವಾರ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿದೆ. ಹಲವಾರು ರಾಜ್ಯಗಳಲ್ಲಿ ಪ್ರತಿಭಟನೆಗಳ ನಂತರ ಸರ್ಕಾರವು 2022 ರ ಯೋಜನೆಯಡಿಯಲ್ಲಿ ನೇಮಕಾತಿಗಾಗಿ ಗರಿಷ್ಠ ವಯಸ್ಸಿನ ಮಿತಿಯನ್ನು 21 ವರ್ಷದಿಂದ 23 ವರ್ಷಕ್ಕೆ ಏರಿಸಿದೆ.  ಸಹಾಯವಾಣಿ ಸಂಖ್ಯೆ ಆರಂಭ
  ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಅಧಿಕಾರಿಗಳು ವಿವಿಧ ರೈಲು ನಿಲ್ದಾಣಗಳಿಗೆ ಸಹಾಯವಾಣಿ ಸಂಖ್ಯೆಗಳನ್ನು ಆರಂಭಿಸಿದ್ದಾರೆ. ಜನರು 8252912031 ಸಂಖ್ಯೆಗೆ ಕರೆ ಮಾಡುವ ಮೂಲಕ ಅಗತ್ಯ ಸಂದರ್ಭಗಳಲ್ಲಿ ಸಹಾಯಕ್ಕಾಗಿ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಹಾಜಿಪುರ ಪ್ರದೇಶಕ್ಕೆ ಅಧಿಕೃತ ಸಹಾಯವಾಣಿ 8252912078 ಮತ್ತು ಬರೌನಿಗೆ ಇದು 8252912043 ಆಗಿದೆ.

  ತಪ್ಪು ಮಾಹಿತಿಗೆ ಆಸ್ಪದವಿಲ್ಲ
  ಅಗ್ನಿಪಥ್ ಯೋಜನೆಯ ಕುರಿತು ಗೊಂದಲ ಮತ್ತು ತಪ್ಪು ಮಾಹಿತಿ ಉಂಟಾಗಿದೆ ಎಂದು ಹೇಳಿರುವ ಕೇಂದ್ರ ಸರ್ಕಾರ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪೋಸ್ಟ್​ಗಳ ಮೂಲಕ ಸ್ಪಷ್ಟ ಮಾಹಿತಿಗಳನ್ನು ರವಾನಿಸುತ್ತಿದೆ.

  ಇದನ್ನೂ ಓದಿ: President Poll: ದೇವೇಗೌಡರು ರಾಷ್ಟ್ರಪತಿ ಆಗ್ತಾರಾ? ಮುನ್ನೆಲೆಗೆ ಬಂದಿದೆ ಹೆಸರು, ಹೆಚ್ಚಿದ ಕುತೂಹಲ

  ಹೊಸ ಯೋಜನೆಯು ರಕ್ಷಣಾ ಪಡೆಗಳಲ್ಲಿ ಸೇವೆ ಸಲ್ಲಿಸುವ ಅಧಿಕಾರಾವಧಿಯನ್ನು ಕೇವಲ ನಾಲ್ಕು ವರ್ಷಗಳಿಗೆ ಕಡಿಮೆ ಮಾಡುತ್ತದೆ ಎಂದು ಪ್ರತಿಭಟನಾನಿರತ ಯುವಕರ ವಾದವಾಗಿದೆ. ಹೊಸ ಅಗ್ನಿಪಥ್ ಯೋಜನೆಯು ಉದ್ಯೋಗ ಭದ್ರತೆಯ ಕೊರತೆಯನ್ನು ಉಂಟುಮಾಡುತ್ತದೆ. ಇದಲ್ಲದೆ, ನಾಲ್ಕು ವರ್ಷಗಳ ಅಧಿಕಾರಾವಧಿಯ ನಂತರ ನಿವೃತ್ತಿ ಹೊಂದಿದವರಿಗೆ ಯಾವುದೇ ಪಿಂಚಣಿ ಕೂಡ ಅಗ್ನಿಪಥ್ ಯೋಜನೆಯನ್ನು ತಿರಸ್ಕರಿಸುವವರ ಪ್ರಮುಖ ಟೀಕೆ-ಆಕ್ರೋಶಗಳಲ್ಲಿ ಒಂದಾಗಿದೆ.

  ಪೊಲೀಸರ ಮೇಲೆ ಕಲ್ಲು ತೂರಾಟ
  ಸತತ ಮೂರನೇ ದಿನವೂ ಪ್ರತಿಭಟನೆ ಮುಂದುವರೆದಿದೆ. ನಿನ್ನೆ ಜೆಹನಾಬಾದ್‌ನಲ್ಲಿ ರೈಲ್ವೆ ಸಂಚಾರಕ್ಕೆ ಅಡ್ಡಿಪಡಿಸಲು ರೈಲು ಹಳಿಗಳ ಮೇಲೆ ನಿಂತುಕೊಂಡಿದ್ದ ಪ್ರತಿಭಟನಾಕಾರರನ್ನು ತೆರವುಗೊಳಿಸಲು ಪೊಲೀಸರು ಬೆನ್ನಟ್ಟಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಪೊಲೀಸರು ಸೇರಿದಂತೆ ಅನೇಕ ಮಂದಿಗೆ ಗಾಯಗಳಾಗಿವೆ.

  ಜಾರ್ಖಂಡ್‌, ರಾಜಸ್ಥಾನದಲ್ಲೂ ಪ್ರತಿಭಟನೆ
  ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿಯೂ ಪ್ರತಿಭಟನೆ ನಡೆಸಲಾಯಿತು. ಜೂನ್ 10 ರಂದು ಹಿಂಸಾಚಾರದ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ನಿಷೇಧಾಜ್ಞೆಯನ್ನು ಮುಂದುವರೆಸಲಾಗಿದೆ. ಅತ್ತ ರಾಜಸ್ಥಾನದ ಹಲವೆಡೆ ಕೂಡ ಅಗ್ನಿಪಥ್ ವಿರೋಧಿಸಿ ಪ್ರತಿಭಟನೆಗಳು ನಡೆದವು.

  Frog Army: ಕಪ್ಪೆಗಳ ಸೇನೆ ನೋಡಿದ್ದೀರಾ? ಇಲ್ಲಿವೆ ನೋಡಿ 10 ಲಕ್ಷಕ್ಕೂ ಅಧಿಕ ಮಂಡೂಕ! ವಿಡಿಯೋ ವೈರಲ್

  ಅಗ್ನಿಪತ್ ಯೋಜನೆಯ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಉದ್ದೇಶಿತ ಸೇನಾ ಬದಲಾವಣೆಗಳನ್ನು ಯುವ ಜನರು ಸೇರಿದಂತೆ ಹಲವು ಭಾಗಗಳಲ್ಲಿ ಜನರು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಈ ಸಂಬಂಧ ಈಗಾಗಲೇ ಸಾಕಷ್ಟು ಹಾನಿ ಸಂಭವಿಸಿದ್ದು ಪ್ರತಿಭಟನೆಯು ಹಿಂಸಾತ್ಮಕ ರೂಪವನ್ನು ತಾಳುತ್ತಿದೆ. ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತವನ್ನು ವಿಜಯದತ್ತ ಮುನ್ನಡೆಸಿದ ಸೇನಾ ಮುಖ್ಯಸ್ಥ ಜನರಲ್ ವಿಪಿ ಮಲಿಕ್ ಅವರು ಇಂದು ಅಗ್ನಿಪಥ್ ಯೋಜನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
  Published by:guruganesh bhat
  First published: