Agnipath Scheme: ಅಗ್ನಿಪಥ್ ಯೋಜನೆಯಲ್ಲಿ ಬರೋಬ್ಬರಿ 7.5 ಲಕ್ಷ ನೋಂದಣಿ; ಶೇಕಡಾ 20ರಷ್ಟು ಅಗ್ನಿವೀರರು ಮಹಿಳೆಯರೇ

Indian Army Recruitment Scheme: ಯಾವುದೇ ಸೇನಾ ನೇಮಕಾತಿ ಪ್ರಕ್ರಿಯೆಯಲ್ಲಿ ಅಗ್ನಿಪಥ್ ಯೋಜನೆಗೆ ಬಂದ ನೋಂದಣಿಗಳೇ ಅಧಿಕವಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದೆ ಭಾರತೀಯ ವಾಯುಪಡೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಭಾರತೀಯ ವಾಯುಪಡೆ (IAF) ಮಂಗಳವಾರ "ಅಗ್ನಿಪಥ್" ಸೇನಾ ನೇಮಕಾತಿ ಯೋಜನೆಯಡಿ 7.5 ಲಕ್ಷ ಅರ್ಜಿಗಳನ್ನು ಸ್ವೀಕರಿಸಿದೆ ಎಂದು ಮಾಹಿತಿ ನೀಡಿದೆ. ಯೋಜನೆಯಡಿ ನೋಂದಣಿ ಪ್ರಕ್ರಿಯೆಯು ಜೂನ್ 24 ರಂದು ಪ್ರಾರಂಭವಾಗಿದ್ದು ಇದೇ ಮಂಗಳವಾರ ಕೊನೆಗೊಂಡಿದೆ. ಸದ್ಯ ಅಗ್ನಿಪಥ್ ನೇಮಕಾತಿ ಯೋಜನೆಗೆ (Agnipath Recruitment Scheme) ಐಎಎಫ್ ನಡೆಸಿದ ಆನ್‌ಲೈನ್ ನೋಂದಣಿ ಪ್ರಕ್ರಿಯೆಯು ಪೂರ್ಣಗೊಂಡಿದೆ ಎಂದು ಐಎಎಫ್ ಟ್ವಿಟರ್‌ನಲ್ಲಿ ತಿಳಿಸಿದೆ. ಯಾವುದೇ ಸೇನಾ ನೇಮಕಾತಿ ಪ್ರಕ್ರಿಯೆಯಲ್ಲಿ ಅಗ್ನಿಪಥ್ ಯೋಜನೆಗೆ (Agnipath Yojana)  ಬಂದ ನೋಂದಣಿಗಳೇ ಅಧಿಕವಾಗಿದೆ. ಈ ಬಾರಿ 7,49,899 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇದು ದಾಖಲೆಯನ್ನೇ ನಿರ್ಮಿಸಿದೆ ಎಂದು ಭಾರತೀಯ ವಾಯುಪಡೆಯು ಮಾಹಿತಿ ನೀಡಿದೆ.

    ಜೂನ್ 14 ರಂದು ಯೋಜನೆಯನ್ನು ಘೋಷಿಸಿದ ನಂತರ ಅಗ್ನಿಪಥ್ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ಸುಮಾರು ಒಂದು ವಾರದವರೆಗೆ ಹಲವಾರು ರಾಜ್ಯಗಳಲ್ಲಿ ನಡೆದಿದ್ದವು. ವಿವಿಧ ವಿರೋಧ ಪಕ್ಷಗಳು ಅಗ್ನಿಪಥ್ ಯೋಜನೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದವು.

    ಶೇಕಡಾ 20ರಷ್ಟು ಅಗ್ನಿವೀರರು ಮಹಿಳೆಯರು
    ಭಾರತೀಯ ನೌಕಾಪಡೆಯು ಅಗ್ನಿಪಥ್ ನೇಮಕಾತಿ ಯೋಜನೆಗಾಗಿ ಜುಲೈ 1 ರಂದು ನೋಂದಣಿಯನ್ನು ಪ್ರಾರಂಭಿಸಿತ್ತು. ಭಾರತೀಯ ನೌಕಾಪಡೆಯ ಅಧಿಕಾರಿಗಳ ಪ್ರಕಾರ, ಅಗ್ನಿಪಥ್ ನೇಮಕಾತಿ ಯೋಜನೆಗಾಗಿ ಅಗ್ನಿವೀರ್‌ಗಳ ಮೊದಲ ಬ್ಯಾಚ್‌ನಲ್ಲಿ ಶೇಕಡಾ 20 ರಷ್ಟು ಅಭ್ಯರ್ಥಿಗಳು ಮಹಿಳೆಯರಾಗಿರುತ್ತಾರೆ. ಅವರನ್ನು ನೌಕಾಪಡೆಯ ವಿವಿಧ ಭಾಗಗಳಿಗೆ ಮತ್ತು ಶಾಖೆಗಳಿಗೆ ಕಳುಹಿಸಲಾಗುವುದು ಎಂದು ನೌಕಾಪಡೆಯ ಅಧಿಕಾರಿಗಳನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.

    ಇದನ್ನೂ ಓದಿ: Agniveer: ಅಗ್ನಿವೀರರನ್ನು ಸೇನೆಗೆ ಸೇರಿಸುವ ಮುನ್ನ ಅವರ ಸಂಪೂರ್ಣ ಮೌಲ್ಯಮಾಪನ ಮಾಡಲಾಗುವುದು: ಲೆಫ್ಟಿನೆಂಟ್ ಜನರಲ್

    ಅಗ್ನಿವೀರರಿಗೆ ಆರು ತಿಂಗಳ ತರಬೇತಿ
    ಮೆಚ್ಚುಗೆಯ ಆಧಾರದಲ್ಲಿರದೆ ಅಥವಾ ಪಕ್ಷಪಾತ ಮಾಡದೆ ಇಲ್ಲವೆ ಅನಾರೋಗ್ಯಕರ ಸ್ಪರ್ಧೆಯಿಲ್ಲದೆ ಖಾಯಂ ನೇಮಕಾತಿಗಳಾಗಿ ಅಗ್ನಿವೀರರ ಆಯ್ಕೆಯನ್ನು ವಸ್ತುನಿಷ್ಠವಾಗಿ ಕೈಗೊಳ್ಳಲಾಗುವುದು ಎಂಬ ಅಂಶವನ್ನು ಸೇನೆಯು ಹೇಗೆ ಖಚಿತಪಡಿಸುತ್ತದೆ ಎಂಬುದರ ಬಗ್ಗೆ ವಿವರಣೆ ನೀಡಿದ ಲೆಫ್ಟಿನೆಂಟ್ ಜನರಲ್ ರಾಜು ಅವರು ಅಗ್ನಿವೀರ ತನ್ನ ಆರು ತಿಂಗಳ ತರಬೇತಿ ಅವಧಿಯ ಕೊನೆಯಲ್ಲಿ ತನ್ನ ಮೊದಲ ಮೌಲ್ಯಮಾಪನವನ್ನು ಎದುರಿಸಲಿದ್ದಾನೆ ಎಂದರು.

    ಇದನ್ನೂ ಓದಿ:  Agnipath Scheme: ಅಗ್ನಿಪಥ್​ನಂತಹ ಯೋಜನೆ ಬೇರೆ ದೇಶಗಳಲ್ಲೂ ಇದೆ, ಇಲ್ಲೆಲ್ಲಾ ಮಿಲಿಟರಿ ಸೇವೆ ಕಡ್ಡಾಯ

    ಅಗ್ನಿವೀರರಿಗೆ ಆರು ತಿಂಗಳ ತರಬೇತಿ
    ಮೆಚ್ಚುಗೆಯ ಆಧಾರದಲ್ಲಿರದೆ ಅಥವಾ ಪಕ್ಷಪಾತ ಮಾಡದೆ ಇಲ್ಲವೆ ಅನಾರೋಗ್ಯಕರ ಸ್ಪರ್ಧೆಯಿಲ್ಲದೆ ಖಾಯಂ ನೇಮಕಾತಿಗಳಾಗಿ ಅಗ್ನಿವೀರರ ಆಯ್ಕೆಯನ್ನು ವಸ್ತುನಿಷ್ಠವಾಗಿ ಕೈಗೊಳ್ಳಲಾಗುವುದು ಎಂಬ ಅಂಶವನ್ನು ಸೇನೆಯು ಹೇಗೆ ಖಚಿತಪಡಿಸುತ್ತದೆ ಎಂಬುದರ ಬಗ್ಗೆ ವಿವರಣೆ ನೀಡಿದ ಲೆಫ್ಟಿನೆಂಟ್ ಜನರಲ್ ರಾಜು ಅವರು ಅಗ್ನಿವೀರ ತನ್ನ ಆರು ತಿಂಗಳ ತರಬೇತಿ ಅವಧಿಯ ಕೊನೆಯಲ್ಲಿ ತನ್ನ ಮೊದಲ ಮೌಲ್ಯಮಾಪನವನ್ನು ಎದುರಿಸಲಿದ್ದಾನೆ ಎಂದರು.

    ಅರ್ಹತೆಯ ಮಾನದಂಡಗಳು ಹೀಗಿವೆ
    ಆಸಕ್ತ ಅಭ್ಯರ್ಥಿಗಳು 10ನೇ ತರಗತಿ ಅಥವಾ ಮೆಟ್ರಿಕ್ಯುಲೇಷನ್ ಉತ್ತೀರ್ಣ ಪ್ರಮಾಣಪತ್ರ, ಮಧ್ಯಂತರ ಅಥವಾ 10+2 ಅಥವಾ ತತ್ಸಮಾನ ಅಂಕಪಟ್ಟಿ ಅಥವಾ 3 ವರ್ಷಗಳ ಎಂಜಿನಿಯರಿಂಗ್ ಡಿಪ್ಲೊಮಾ ಅಂತಿಮ ವರ್ಷದ ಮಾರ್ಕ್ ಶೀಟ್ ಮತ್ತು ಮೆಟ್ರಿಕ್ಯುಲೇಷನ್ ಅಂಕಪಟ್ಟಿ ಅಥವಾ 2 ವರ್ಷಗಳ ವೃತ್ತಿಪರ ಕೋರ್ಸ್ ಮಾರ್ಕ್ ಶೀಟ್ ಮತ್ತು ವೃತ್ತಿಯಲ್ಲದ ಅಂಕಪಟ್ಟಿಗಳನ್ನು ಹೊಂದಿರಬೇಕು.

    ಮಹಿಂದ್ರಾ ಕಂಪನಿಯಲ್ಲಿ ಆಫರ್
    ಈ ನಡುವೆ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ (Anand Mahindra) ಸೋಮವಾರ ಈ ಯೋಜನೆಯಡಿ ತರಬೇತಿ ಪಡೆದ ಯುವಕರನ್ನು ತಮ್ಮ ಕಂಪನಿಗಳನ್ನು (Mahindra Group) ಆದ್ಯತೆಯ ಮೇರೆಗೆ ಉದ್ಯೊಗಿಗಳನ್ನಾಗಿ ನೇಮಿಸಿಕೊಳ್ಳುವುದಾಗಿ ಘೋಷಿಸಿದ್ದಾರೆ. ಕಳೆದ ವರ್ಷ ಈ ಯೋಜನೆಯನ್ನು ಪ್ರಸ್ತಾಪಿಸಿದಾಗ ಅಗ್ನಿವೀರ್‌ಗಳು (Agniveer) ಗಳಿಸುವ ಶಿಸ್ತು ಮತ್ತು ಕೌಶಲ್ಯಗಳು ಅವರನ್ನು ಅತ್ಯುತ್ತಮವಾಗಿ ಉದ್ಯೋಗಿಯನ್ನಾಗಿ ಮಾಡುತ್ತದೆ ಎಂದು ಹೇಳಿದ್ದಾಗಿ ಆನಂದ್ ಮಹೀಂದ್ರಾ ಉಲ್ಲೇಖಿಸಿದ್ದಾರೆ. ಅಗ್ನಿಪಥ್ ಯೋಜನೆಯಂತಹ ತರಬೇತಿ ಪಡೆದ, ಸಮರ್ಥ ಯುವಕರನ್ನು ನೇಮಿಸಿಕೊಳ್ಳುವ ಅವಕಾಶವನ್ನು ಮಹೀಂದ್ರಾ ಗ್ರೂಪ್ ಸ್ವಾಗತಿಸುತ್ತದೆ ಎಂದು ಅವರು ಟ್ವೀಟ್‌ನಲ್ಲಿ ಪ್ರಕಟಿಸಿದ್ದಾರೆ.
    Published by:guruganesh bhat
    First published: