Agnipath Scheme: ಅಗ್ನಿಪಥ್ ಯೋಜನೆ ವಿರೋಧಿಸಿದ್ದ ಕಾಂಗ್ರೆಸ್​ಗೆ ತೀವ್ರ ಮುಜುಗರ!

ಈ ಮುನ್ನ ಮನೀಷ್ ತಿವಾರಿ ಅಗ್ನಿಪಥ್ ಯೋಜನೆಗೆ ಮೌಖಿಕವಾಗಿ ವಿರೋಧವನ್ನು ವ್ಯಕ್ತಪಡಿಸಿದ ಕಾಂಗ್ರೆಸ್ ನಿಲುವನ್ನು ಬೆಂಬಲಿಸಿದ್ದರು. ಇಂದು ಅವರು ಭಾರತೀಯ ಸೇನೆಯ ಆಧುನೀಕರಣದ ಪರವಾಗಿದ್ದೇನೆ ಎಂದು ತಿಳಿಸಿದ್ದರು.

ಮನೀಷ್ ತಿವಾರಿ

ಮನೀಷ್ ತಿವಾರಿ

  • Share this:
    ಭಾರತೀಯ ಸೇನೆಯ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ವಿರೋಧಿಸಿದ್ದ ಕಾಂಗ್ರೆಸ್​ಗೆ ತೀವ್ರ ಮುಜುಗರ ಎದುರಾಗಿದೆ.  ಸಶಸ್ತ್ರ ಪಡೆಗಳಿಗೆ ವಿವಾದಾತ್ಮಕ ಅಗ್ನಿಪಥ್ ನೇಮಕಾತಿ ಯೋಜನೆಗೆ ಸಂಬಂಧಿಸಿದಂತೆ ವಿರೋಧ ವ್ಯಕ್ತಪಡಿಸಲು ಬರೆದಿದ್ದ ಪತ್ರಕ್ಕೆ ಕಾಂಗ್ರೆಸ್ ಇಂದು ದೊಡ್ಡ ಮುಖಭಂಗವನ್ನು ಎದುರಿಸಿದೆ. ಕಾಂಗ್ರೆಸ್ ಹಿರಿಯ ನಾಯಕ ಮನೀಶ್ ತಿವಾರಿ (Manish Tiwari) ಅಗ್ನಿಪಥ್ ಯೋಜನೆಗೆ (Agnipath Army Recruitment Scheme) ಕಾಂಗ್ರೆಸ್ ವಿರೋಧಿಸಿ ಬರೆದಿದ್ದ ಪತ್ರಕ್ಕೆ ಸಹಿ ಹಾಕಲು ನಿರಾಕರಿಸಿದ್ದಾರೆ. ಕೇಂದ್ರ ಸಚಿವ ರಾಜನಾಥ್ ಸಿಂಗ್ (Rajnath Singh) ಅಧ್ಯಕ್ಷತೆಯ ರಕ್ಷಣಾ ಸಮಿತಿಯು 20 ಸದಸ್ಯರನ್ನು ಹೊಂದಿದೆ. 13 ಲೋಕಸಭೆಯಿಂದ ಮತ್ತು ಸುಮಾರು 7 ರಾಜ್ಯಸಭೆಯ ಸದಸ್ಯರನ್ನು ಈ ಸಮಿತಿಯು ಒಳಗೊಂಡಿದೆ. ಈ ಸಮಿತಿಗೆ ನೀಡಲು ಕಾಂಗ್ರೆಸ್ ಈ ಪತ್ರ ಬರೆದಿತ್ತು ಎನ್ನಲಾಗಿದೆ. 

    ಈ ಮುನ್ನ ಮನೀಷ್ ತಿವಾರಿ ಅವರು ಅಗ್ನಿಪಥ್ ಯೋಜನೆಗೆ ಮೌಖಿಕವಾಗಿ ವಿರೋಧವನ್ನು ವ್ಯಕ್ತಪಡಿಸಿದ ಕಾಂಗ್ರೆಸ್ ನಿಲುವನ್ನು ಬೆಂಬಲಿಸಿದ್ದರು. ಇಂದು ಅವರು ಭಾರತೀಯ ಸೇನೆಯ ಆಧುನೀಕರಣದ ಪರವಾಗಿದ್ದೇನೆ. ಆದರೂ ಅಗ್ನಿಪಥ್ ಅನುಷ್ಠಾನಕ್ಕೆ ವಿರುದ್ಧವಾಗಿದ್ದೇನೆ ಎಂದು ತಿಳಿಸಿದ್ದಾರೆ. ಆದರೂ ಅಗ್ನಿಪಥ್ ಯೋಜನೆ ವಿರೋಧಿಸಿ ಕಾಂಗ್ರೆಸ್ ಬರೆದ ಪತ್ರಕ್ಕೆ ಸಹಿ ಹಾಕಲು ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸಹಿ ಹಾಕಿದ 6 ನಾಯಕರು
    ಅಗ್ನಿಪಥ್ ಸೇನಾ ನೇಮಕಾತಿ ಯೋಜನೆ ವಿರೋಧಿಸಿ ಬೇಡಿಕೆಗಳ ಪಟ್ಟಿಯನ್ನು ಹೊಂದಿರುವ ಪತ್ರಕ್ಕೆ ಕಾಂಗ್ರೆಸ್‌ನ ಶಕ್ತಿಸಿನ್ಹ್ ಗೋಹಿಲ್, ತೃಣಮೂಲ ಕಾಂಗ್ರೆಸ್‌ನ ಸುದೀಪ್ ಬಂಡೋಪಾಧ್ಯಾಯ ಮತ್ತು ಸೌಗತ ರಾಯ್, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಸುಪ್ರಿಯಾ ಸುಳೆ ಮತ್ತು ರಾಷ್ಟ್ರೀಯ ಜನತಾ ದಳದ ಎಡಿ ಸಿಂಗ್ ಸೇರಿದಂತೆ ಆರು ವಿರೋಧ ಪಕ್ಷದ ಸಂಸದರು ಸಹಿ ಹಾಕಿದ್ದಾರೆ.

    ಇದನ್ನೂ ಓದಿ: India's Population: ಜನಸಂಖ್ಯೆಯಲ್ಲಿ ಚೀನಾವನ್ನೂ ಮೀರಿಸಲಿದೆ ಭಾರತ! ಓರ್ವನ ಜೀವಿತಾವಧಿ ಇಷ್ಟೇ ವರ್ಷ

    ಜೂನ್ 16 ರಂದು, ಕೇಂದ್ರ ಸರ್ಕಾರವು ಭಾರತೀಯ ಸೇನೆಗೆ ಹೊಸ ನೇಮಕಾತಿ ಮಾದರಿಯನ್ನು ಘೋಷಿಸಿದ ಕೂಡಲೇ, ಮನೀಶ್ ತಿವಾರಿ ಅವರು ಮೊದಲ ಬಾರಿಗೆ 'ಅಗ್ನಿಪಥ್' ಗೆ ತಮ್ಮ ಬೆಂಬಲವನ್ನು ನೀಡಿದ್ದರು. ನಂತರ ಜೂನ್ 30 ರಂದು, ತಿವಾರಿ ಅವರು ಮತ್ತೊಮ್ಮೆ 'ಅಗ್ನಿಪಥ್' ನೇಮಕಾತಿ ಯೋಜನೆಗೆ ಬೆಂಬಲವನ್ನು ನೀಡಿದ ನಂತರ ಕಾಂಗ್ರೆಸ್ ತನ್ನನ್ನು ದೂರವಿಡಬೇಕಾಯಿತು.

    ದಾಖಲೆ ಪ್ರಮಾಣದ ನೋಂದಣಿ
    ಭಾರತೀಯ ವಾಯುಪಡೆ (IAF) ಮಂಗಳವಾರ "ಅಗ್ನಿಪಥ್" ಸೇನಾ ನೇಮಕಾತಿ ಯೋಜನೆಯಡಿ 7.5 ಲಕ್ಷ ಅರ್ಜಿಗಳನ್ನು ಸ್ವೀಕರಿಸಿದೆ ಎಂದು ಮಾಹಿತಿ ನೀಡಿದೆ. ಯೋಜನೆಯಡಿ ನೋಂದಣಿ ಪ್ರಕ್ರಿಯೆಯು ಜೂನ್ 24 ರಂದು ಪ್ರಾರಂಭವಾಗಿದ್ದು ಇದೇ ಮಂಗಳವಾರ ಕೊನೆಗೊಂಡಿದೆ. ಸದ್ಯ ಅಗ್ನಿಪಥ್ ನೇಮಕಾತಿ ಯೋಜನೆಗೆ (Agnipath Recruitment Scheme) ಐಎಎಫ್ ನಡೆಸಿದ ಆನ್‌ಲೈನ್ ನೋಂದಣಿ ಪ್ರಕ್ರಿಯೆಯು ಪೂರ್ಣಗೊಂಡಿದೆ ಎಂದು ಐಎಎಫ್ ಟ್ವಿಟರ್‌ನಲ್ಲಿ ತಿಳಿಸಿದೆ. ಯಾವುದೇ ಸೇನಾ ನೇಮಕಾತಿ ಪ್ರಕ್ರಿಯೆಯಲ್ಲಿ ಅಗ್ನಿಪಥ್ ಯೋಜನೆಗೆ (Agnipath Yojana) ಬಂದ ನೋಂದಣಿಗಳೇ ಅಧಿಕವಾಗಿದೆ. ಈ ಬಾರಿ 7,49,899 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇದು ದಾಖಲೆಯನ್ನೇ ನಿರ್ಮಿಸಿದೆ ಎಂದು ಭಾರತೀಯ ವಾಯುಪಡೆಯು ಮಾಹಿತಿ ನೀಡಿದೆ.

    ಇದನ್ನೂ ಓದಿ:Vijay Mallya: ವಿಜಯ್ ಮಲ್ಯಗೆ 4 ತಿಂಗಳು ಜೈಲು, 2 ಸಾವಿರ ರೂ. ದಂಡ ವಿಧಿಸಿದ ಸುಪ್ರೀಂಕೋರ್ಟ್; ಯಾವ ಕೇಸ್ ಇದು?

    ಜೂನ್ 14 ರಂದು ಯೋಜನೆಯನ್ನು ಘೋಷಿಸಿದ ನಂತರ ಅಗ್ನಿಪಥ್ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ಸುಮಾರು ಒಂದು ವಾರದವರೆಗೆ ಹಲವಾರು ರಾಜ್ಯಗಳಲ್ಲಿ ನಡೆದಿದ್ದವು. ವಿವಿಧ ವಿರೋಧ ಪಕ್ಷಗಳು ಅಗ್ನಿಪಥ್ ಯೋಜನೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದವು.

    ಶೇಕಡಾ 20ರಷ್ಟು ಅಗ್ನಿವೀರರು ಮಹಿಳೆಯರು
    ಭಾರತೀಯ ನೌಕಾಪಡೆಯು ಅಗ್ನಿಪಥ್ ನೇಮಕಾತಿ ಯೋಜನೆಗಾಗಿ ಜುಲೈ 1 ರಂದು ನೋಂದಣಿಯನ್ನು ಪ್ರಾರಂಭಿಸಿತ್ತು. ಭಾರತೀಯ ನೌಕಾಪಡೆಯ ಅಧಿಕಾರಿಗಳ ಪ್ರಕಾರ, ಅಗ್ನಿಪಥ್ ನೇಮಕಾತಿ ಯೋಜನೆಗಾಗಿ ಅಗ್ನಿವೀರ್‌ಗಳ ಮೊದಲ ಬ್ಯಾಚ್‌ನಲ್ಲಿ ಶೇಕಡಾ 20 ರಷ್ಟು ಅಭ್ಯರ್ಥಿಗಳು ಮಹಿಳೆಯರಾಗಿರುತ್ತಾರೆ. ಅವರನ್ನು ನೌಕಾಪಡೆಯ ವಿವಿಧ ಭಾಗಗಳಿಗೆ ಮತ್ತು ಶಾಖೆಗಳಿಗೆ ಕಳುಹಿಸಲಾಗುವುದು ಎಂದು ನೌಕಾಪಡೆಯ ಅಧಿಕಾರಿಗಳನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.
    Published by:guruganesh bhat
    First published: