ನವದೆಹಲಿ (ಜೂನ್ 14): ಇಂದು ಕೇಂದ್ರ ಸರ್ಕಾರ ಸೇನಾ ನೇಮಕಾತಿಯಲ್ಲಿ ಐತಿಹಾಸಿಕ ನಿರ್ಣಯಬವನ್ನು ತೆಗೆದುಕೊಂಡಿದೆ. ಸೇನಾ ನೇಮಕಾತಿ ಪ್ರಕ್ರಿಯೆಯಲ್ಲಿ ಅಗ್ನಿಪಥ ಯೋಜನೆಗೆ ಕೇಂದ್ರದ ಸಂಪುಟ ಸಮಿತಿಯಲ್ಲಿ ಇಂದು ಅನುಮೋದನೆ ದೊರಕಿದೆ. ಈ ಯೋಜನೆಯು ಒಂದು ಯತಿಹಾಸಿಕ ಯೋಜನೆ ಆಗಿದ್ದು, ಈ ಮೂಲಕ 4 ವರ್ಷಗಳ, ಕಾಲ ಸೇನೆಯಲ್ಲಿ ಉತ್ಸಾಹಿ ಯುವಕರನ್ನು ನೇಮಿಸಿಕೊಳ್ಳಲಾಗುವುದು ಎಂದು ಕೆಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಈ ಮೂಲಕ ಭಾರತೀಯ ಸೇನೆಯು ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಹೇಳಿದ್ದಾರೆ. ಅಲ್ಲದೇ ಈ ಯೋಜನೆಯ ಮೂಲಕ ಕೆಲಸವನ್ನು ತೊರೆಯುವಾಗ ಅವರುಗಳಿಗೆ ಸೇವಾ ನಿಧಿ ಪ್ಯಾಕೇಜ್ ಗಳನ್ನೂ ಸಹ ನೀಡಲಾಗುತ್ತದೆ ಎಂದು ರಕ್ಷಣಾ ಸಚಿವರು ತಿಳಿಸಿದ್ದಾರೆ.
ಅಗ್ನಿವೀರ್ ಆಗಿ ಸಶಸ್ತ್ರ ಪಡೆಗಳಲ್ಲಿ ಸೇವೆ:
ಇನ್ನು, ಅಗ್ನಿಪಥ್ ಯೋಜನೆಯನ್ನು ಜಾರಿಗೊಳಿಸಿದ ನಂತರ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ‘ಅಗ್ನಿಪಥ್ ಯೋಜನೆಯಡಿಯಲ್ಲಿ , ಭಾರತೀಯ ಯುವಕರಿಗೆ ಅಗ್ನಿವೀರ್ ಆಗಿ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶವನ್ನು ಒದಗಿಸಲಾಗುವುದು. ಭಾರತದ ಭದ್ರತೆಯನ್ನು ಬಲಪಡಿಸಲು ಅಗ್ನಿಪಥ್ ಯೋಜನೆಯನ್ನು ತರಲಾಗಿದೆ. ಅಲ್ಲದೇ ಅಗ್ನಿವೀರ್ಸ್ ಗೆ ಉತ್ತಮ ವೇತನ ಪ್ಯಾಕೇಜ್ ಮತ್ತು 4 ವರ್ಷಗಳ ಸೇವೆಯ ನಂತರ ನಿರ್ಗಮನ ನಿವೃತ್ತಿ ಪ್ಯಾಕೇಜ್ ನೀಡಲಾಗುವುದು. ಅಲ್ಲದೇ ಇದರಿಂದ ಭಾರತದಲ್ಲಿ ಉದ್ಯೋಗ ಸೃಷ್ಟಿಯಾಗಲಿದ್ದು, ನಿರುದ್ಯೋಗ ದೂರವಾಗಲಿದೆ‘ ಎಂದು ಹೇಳಿದ್ದಾರೆ.
ಏನಿದು ಅಗ್ನಿಪಥ್ ಯೋಜನೆ?:
ಅಗ್ನಿಪಥ್ ಸೈನಿಕರು, ವಾಯು ಸೇನೆ ಮತ್ತು ನಾವಿಕರು ಸೇರ್ಪಡೆಗೊಳ್ಳಲು ಪ್ಯಾನ್ ಇಂಡಿಯಾ ಮೆರಿಟ್ ಆಧಾರಿತ ನೇಮಕಾತಿ ಯೋಜನೆಯಾಗಿದೆ. ಈ ಯೋಜನೆಯು ಯುವಕರಿಗೆ ಸಶಸ್ತ್ರ ಪಡೆಗಳ ನಿಯಮಿತ ಕೇಡರ್‌ನಲ್ಲಿ ಸೇವೆ ಸಲ್ಲಿಸಲು ಅವಕಾಶವನ್ನು ಒದಗಿಸುತ್ತದೆ. ‘ಅಗ್ನಿಪಥ’ ಯೋಜನೆಯಡಿ ನೇಮಕಗೊಂಡವರೆಲ್ಲರನ್ನು ‘ಅಗ್ನಿವೀರ್’ ಎಂದು ಕರೆಯಲಾಗುವುದು. ತರಬೇತಿ ಅವಧಿ ಸೇರಿದಂತೆ 4 ವರ್ಷಗಳ ಸೇವಾ ಅವಧಿಗೆ ಅಗ್ನಿವೀರ್‌ಗಳನ್ನು ನೋಂದಾಯಿಸಿಕೊಳ್ಳಲಾಗುತ್ತದೆ. ನಾಲ್ಕು ವರ್ಷಗಳ ನಂತರ, ಕೇವಲ 25% ಅಗ್ನಿವೀರ್‌ಗಳನ್ನು ಅರ್ಹತೆ, ಇಚ್ಛೆ ಮತ್ತು ವೈದ್ಯಕೀಯ ಫಿಟ್‌ನೆಸ್ ಆಧಾರದ ಮೇಲೆ ನಿಯಮಿತ ಕೇಡರ್‌ನಲ್ಲಿ ಉಳಿಸಿಕೊಳ್ಳಲಾಗುತ್ತದೆ.
ಇದನ್ನೂ ಓದಿ: DK Suresh: ನವದೆಹಲಿಯಲ್ಲಿ ಜೋರಾಯ್ತು ಕೈ ಪ್ರೊಟೆಸ್ಟ್, ಸಂಸದ ಡಿಕೆ ಸುರೇಶ್‌ರನ್ನು ವ್ಯಾನ್‌ಗೆ ತಳ್ಳಿದ ಪೊಲೀಸ್!
1.25 ಲಕ್ಷ ಹುದ್ದೆಗಳು ಖಾಲಿ:
ಕಳೆದ ಕೆಲ ವರ್ಷಗಳಿಂದ ಸೇನಾ ನೇಮಕಾತಿ ಕಡಿಮೆಯಾಗಿದ್ದು, ಸೇನಾ ಸಿಬ್ಬಂದಿಗಳ ಸಂಕ್ಯೆಯಲ್ಲಿಯೂ ಕಡಿಮೆ ಇದೆ. ಇದರಿಂದಾಗಿ ಪ್ರಸ್ಥುತ ಭಾರತೀಯ ವಾಯು ಸೇನೆ, ನೌಆ ಪಡೆ ಮತ್ತು ಭೂ ಸೇನಯಲ್ಲಿ ಒಟ್ಟು 1.25 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಅಗ್ನಿಪಥ್ ಯೋಜನೆಯಿಂದ ಈ ಖಾಲಿ ಇರುವ ಅನೇಕ ಹುದ್ದೆಗಳು ತುಂಬಲಿದೆ ಎಂಬ ನಿರೀಕ್ಷೆಯಿದೆ.
ಇದನ್ನೂ ಓದಿ: Condom Sales: ಲಾಕ್ಡೌನ್ ಬಳಿಕ ಕಾಂಡೋಮ್ ಖರೀದಿಯಲ್ಲಿ ಇಳಿಮುಖ, ಕಾರಣವೇನು? ಇದರ ಪರಿಣಾಮಗಳೇನು?
ಶೀಘ್ರದಲ್ಲಿಯೇ ಸಿಡಿಎಸ್ ನೇಮಕಾತಿ:
ಇನ್ನು, ಸದ್ಯ ಖಾಲಿ ಇರುವ ಸಿಡಿಎಸ್ (CDS) ನೇಮಕಾತಿ ಕುರಿತು ಮಾತನಾಡಿರುವ ರಾಜನಾಥ್ ಸಿಂಗ್, ‘ಸೇನಾಪಡೆಗಳ ಮುಖ್ಯಸ್ಥರ (ಸಿಡಿಎಸ್) ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ‘ ಎಂದು ಹೇಳಿದ್ದಾರೆ. ಕಳೆದ ವರ್ಷ ಡಿಸೆರಂಬರ್ ನಲ್ಲಿ ಸಿಡಿಎಸ್ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೆಲಿಕಾಪ್ಟರ್ ಅಪಘಾತದಲ್ಲಿ ಹುತಾತ್ಮರಾದ ಬಳಿಕ CDS ಹುದ್ದೆಗೆ ಯಾವುದೇ ನೇಮಕಾತಿಗಳಾಗಿಲ್ಲ. ಹೀಗಾಗಿ ಈ ತಿಂಗಳ ಆರಂಭದಲ್ಲಿಯೇ ಸಿಡಿಎಸ್ ನೇಮಕಾತಿಗೆ ಸುತ್ತೋಲೆ ಹೊರಡಿಸಲಾಗಿತ್ತು. ಇನ್ನು, 2020ರ ಜನವರಿ 1ರಂದು ಬಿಪಿನ್ ರಾವತ್ ಅವರು ಮೊದಲ ದೇಶದ ಸಿಡಿಎಸ್ ಅಧಿಕಾರ ಸ್ವೀಕರಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ