• Home
 • »
 • News
 • »
 • national-international
 • »
 • China: ಐಫೋನ್ ಫ್ಯಾಕ್ಟ್ರಿಗೆ ಗುಡ್​ಬೈ ಎನ್ನುತ್ತಿರುವ ಉದ್ಯೋಗಿಗಳು; ಉಳಿಯುವವರಿಗೆ ನಾಲ್ಕು ಪಟ್ಟು ಬೋನಸ್ ಘೋಷಣೆ!

China: ಐಫೋನ್ ಫ್ಯಾಕ್ಟ್ರಿಗೆ ಗುಡ್​ಬೈ ಎನ್ನುತ್ತಿರುವ ಉದ್ಯೋಗಿಗಳು; ಉಳಿಯುವವರಿಗೆ ನಾಲ್ಕು ಪಟ್ಟು ಬೋನಸ್ ಘೋಷಣೆ!

Iphone

Iphone

ಚೀನಾವು ಶೂನ್ಯ-ಕೋವಿಡ್ ಕಾರ್ಯತಂತ್ರಕ್ಕೆ ಬದ್ಧವಾಗಿರುವ ಕೊನೆಯ ಪ್ರಮುಖ ಆರ್ಥಿಕತೆಯಾಗಿದ್ದು, ರಹಸ್ಯ ಲಾಕ್‌ಡೌನ್‌ಗಳು, ಸಾಮೂಹಿಕ ಪರೀಕ್ಷೆ ಮತ್ತು ಕೋವಿಡ್‌ನ ಹೊಸ ಅಲೆಗಳನ್ನು ತಡೆಗಟ್ಟುವ ಪ್ರಯತ್ನದಲ್ಲಿ ಸುದೀರ್ಘ ಸಂಪರ್ಕ ತಡೆಯನ್ನು ಹೊಂದಿದೆ. ಆದರೆ ಕೋವಿಡ್‌ನ ಹೊಸ ರೂಪಾಂತರಗಳು ವೇಗವಾಗಿ ಹರಡುತ್ತಿದ್ದು, ಕೋವಿಡ್ ತಪಾಸಣೆಗಳ ಅಡಿಯಲ್ಲಿಯೇ ಜನತೆ ವಾಸಿಸುವಂತೆ ಮಾಡುತ್ತಿದೆ.

ಮುಂದೆ ಓದಿ ...
 • Share this:

  ಕೇಂದ್ರ ಚೀನಾದಲ್ಲಿರುವ (China) ವಿಶ್ವದ ಅತಿದೊಡ್ಡ ಐಫೋನ್ (iPhone) ಕಾರ್ಖಾನೆಯು ತನ್ನ ಸಿಬ್ಬಂದಿಗೆ ಮಹತ್ವದ ಪ್ರಕಟಣೆಯೊಂದನ್ನು ಹೊರಡಿಸಿದ್ದು, ಕೋವಿಡ್ (Coronavirus) ಸ್ಫೋಟದ ನಂತರವೂ ಸಂಸ್ಥೆಯಲ್ಲಿ ಉಳಿಯುವ ಕಾರ್ಮಿಕರಿಗಾಗಿ ಬೋನಸ್‌ಗಳನ್ನು ನಾಲ್ಕು ಪಟ್ಟು ಹೆಚ್ಚಿಸಲಿದೆ ಎಂದು ತಿಳಿಸಿದೆ. ಕಾರ್ಮಿಕರನ್ನು ಸಂಸ್ಥೆಯಲ್ಲಿ ಉಳಿಸುವ ಹೊಸ ಯೋಜನೆಯಾಗಿ ಕಂಪನಿ ಈ ತೀರ್ಮಾನವನ್ನು ತೆಗೆದುಕೊಂಡಿದೆ ಎಂಬುದು ತಿಳಿದು ಬಂದಿದೆ.


  ಫಾಕ್ಸ್‌ಕಾನ್‌ ಸಂಸ್ಥೆಯಲ್ಲಿ ನಡೆಯುತ್ತಿದೆ ಅವ್ಯವಸ್ಥೆ


  ಚೀನಾವು ಶೂನ್ಯ-ಕೋವಿಡ್ ಕಾರ್ಯತಂತ್ರಕ್ಕೆ ಬದ್ಧವಾಗಿರುವ ಕೊನೆಯ ಪ್ರಮುಖ ಆರ್ಥಿಕತೆಯಾಗಿದ್ದು, ರಹಸ್ಯ ಲಾಕ್‌ಡೌನ್‌ಗಳು, ಸಾಮೂಹಿಕ ಪರೀಕ್ಷೆ ಮತ್ತು ಕೋವಿಡ್‌ನ ಹೊಸ ಅಲೆಗಳನ್ನು ತಡೆಗಟ್ಟುವ ಪ್ರಯತ್ನದಲ್ಲಿ ಸುದೀರ್ಘ ಸಂಪರ್ಕ ತಡೆಯನ್ನು ಹೊಂದಿದೆ. ಆದರೆ ಕೋವಿಡ್‌ನ ಹೊಸ ರೂಪಾಂತರಗಳು ವೇಗವಾಗಿ ಹರಡುತ್ತಿದ್ದು, ಕೋವಿಡ್ ತಪಾಸಣೆಗಳ ಅಡಿಯಲ್ಲಿಯೇ ಜನತೆ ವಾಸಿಸುವಂತೆ ಮಾಡುತ್ತಿದೆ. ತೈವಾನೀಸ್ ಟೆಕ್ ದೈತ್ಯ ಫಾಕ್ಸ್‌ಕಾನ್‌ನ ಝೆಂಗ್‌ಝೌ ಸ್ಥಾವರವು ಅಕ್ಟೋಬರ್ ಮಧ್ಯದಿಂದಲೇ ಲಾಕ್‌ಡೌನ್‌ನಲ್ಲಿದ್ದು, ಸಿಬ್ಬಂದಿಗಳನ್ನು ಪ್ರತಿನಿತ್ಯವೂ ಪರಿಶೀಲಿಸುತ್ತಿದ್ದು ಅವರ ಮೇಲೆ ತೀವ್ರವಾಗಿಯೇ ನಿಗಾ ವಹಿಸುತ್ತಿದೆ ಎಂದು ಹೇಳಿಕೊಂಡಿದೆ.


  ಇದನ್ನೂ ಓದಿ: ಊಟದ ಟೇಬಲ್ ಮೇಲೆ ಈ ವಸ್ತುಗಳನ್ನು ಇಡ್ತೀರಾ? ಹಾಗಿದ್ರೆ ಈಗಲೇ ಈ ಅಭ್ಯಾಸ ಬದಲಿಸಿಕೊಳ್ಳಿ


  ಸಂಸ್ಥೆಯಲ್ಲಿ ಕಳಪೆ ಸೌಕರ್ಯ


  ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ಸಂಸ್ಥೆಯ ಸಿಬ್ಬಂದಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದು ಸಂಸ್ಥೆಯು ಕಳಪೆ ಸೌಕರ್ಯಗಳನ್ನು ಕಾರ್ಮಿಕರಿಗೆ, ಸಿಬ್ಬಂದಿಗಳಿಗೆ ಒದಗಿಸಿದ್ದು ಸೋಂಕಿತ ಕಾರ್ಮಿಕರಿಗೆ ಯಾವುದೇ ರೀತಿಯ ರಕ್ಷಣೆ ಹಾಗೂ ಮುತುವರ್ಜಿಗಳನ್ನು ನೀಡದೇ ಇರುವ ಕಾರಣ ಆರೋಗ್ಯವಂತ ಕಾರ್ಮಿಕರು ಹಾಗೂ ಸಿಬ್ಬಂದಿಗಳಿಗೆ ರೋಗ ಹರಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.


  ಸಂಸ್ಥೆಯಲ್ಲಿ ಉಳಿಯಲಿರುವ ಉದ್ಯೋಗಿಗಳಿಗೆ ಬೋನಸ್ ಆಮಿಷ


  ಫಾಕ್ಸ್‌ಕಾನ್ ಕೆಲಸಗಾರನೊಬ್ಬ ಸಂಸ್ಥೆಯಿಂದ ಹೊರಬಂದ ನಂತರ ಮೂರು ಗಂಟೆಗಳ ಕಾಲ ನಡೆದು ಬಂದಿರುವುದಾಗಿ ತಿಳಿಸಿದ್ದು ಆಹಾರ ಪದಾರ್ಥಗಳನ್ನು ಸ್ವತಃ ಖರೀದಿಸಿದ್ದಾಗಿ ಹೇಳಿಕೊಂಡಿದ್ದಾರೆ. ಆನ್‌ಲೈನ್‌ನಲ್ಲಿ ಹಂಚಿಕೊಂಡಿರುವ ವಿಡಿಯೋಗಳು ಕೋವಿಡ್ ನಿರ್ಬಂಧಗಳನ್ನು ತಪ್ಪಿಸುವ ಪ್ರಯತ್ನದಲ್ಲಿ ಫಾಕ್ಸ್‌ಕಾನ್ ಉದ್ಯೋಗಿಗಳು ಕಂಪನಿಯಿಂದ ಪಲಾಯನ ಗೈಯ್ಯುತ್ತಿರುವ ಹಾಗೂ ಕಾಲ್ನಡಿಗೆಯಲ್ಲಿ ತಮ್ಮ ಊರುಗಳನ್ನು ತಲುಪುತ್ತಿರುವ ದೃಶ್ಯ ಕಂಡುಬಂದಿದೆ.


  ಕೆಲಸ ಮುಂದುವರೆಸುವವರಿಗೆ 15,000 ಯುವಾನ್‌


  ಫಾಕ್ಸ್‌ಕಾನ್‌ನ ಝೆಂಗ್‌ಝೌ ಸ್ಥಾವರವು ತನ್ನ ಅಧಿಕೃತ ವಿಚಾಟ್ ಖಾತೆಯಲ್ಲಿ ಹೇಳಿಕೆಯನ್ನು ನೀಡಿದ್ದು, ಉದ್ಯೋಗಿಗಳು 400 ಯುವಾನ್ ಬೋನಸ್ ಅನ್ನು ಸ್ವೀಕರಿಸಲಿದ್ದು ಈ ಹಿಂದೆ ಇದ್ದ 100 ಯುವಾನ್‌ಗಿಂತ ಇದು ಹೆಚ್ಚಾಗಿದೆ ಎಂದು ತಿಳಿಸಿದೆ. ಸಿಬ್ಬಂದಿ ನವೆಂಬರ್‌ನಲ್ಲಿ 15 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಕೆಲಸಕ್ಕೆ ಹಾಜರಾದರೆ ಹೆಚ್ಚುವರಿ ಬೋನಸ್‌ಗಳನ್ನು ಪಡೆಯುತ್ತಾರೆ, ಈ ತಿಂಗಳು ಪೂರ್ಣ ಹಾಜರಾತಿಯನ್ನು ದಾಖಲಿಸಿದರೆ 15,000 ಯುವಾನ್‌ಗಳನ್ನು ಪಡೆಯುತ್ತಾರೆ ಎಂದು ಪ್ರಕಟಿಸಿದೆ.


  ಸೋಂಕುಗಳನ್ನು ಏಕಾಏಕಿಯಾಗಿ ನಿಯಂತ್ರಿಸಬಹುದು ಎಂದು ತಿಳಿಸಿರುವ ಸಂಸ್ಥೆ


  ಫಾಕ್ಸ್‌ಕಾನ್ ಸಂಸ್ಥೆಯ ಮ್ಯಾನೇಜರ್ ತಿಳಿಸಿರುವಂತೆ ಸಂಸ್ಥೆಯಲ್ಲಿ ಯಾವುದೇ ಗಂಭೀರ ಸೋಂಕುಗಳು ವರದಿಯಾಗಿಲ್ಲ ಹಾಗೂ ಒಮ್ಮೆಲೆ ನಿಯಂತ್ರಿಸಬಹುದು ಎಂದು ತಿಳಿಸಿದ್ದಾರೆ. ಆ್ಯಪಲ್‌ಗೆ ಐಫೋನ್‌ಗಳನ್ನು ಪೂರೈಸುವ ಫಾಕ್ಸ್‌ಕಾನ್ ಸಂಸ್ಥೆ ಉದ್ಯೋಗಿಗಳಿಗೆ ನೆರವು ನೀಡಲು ಹಾಗೂ ಕಾರ್ಮಿಕರನ್ನು ತಮ್ಮ ಊರುಗಳಿಗೆ ಸಾಗಿಸಲು ಬಸ್‌ಗಳನ್ನು ಸಂಘಟಿಸುವುದರ ಜೊತೆಗೆ ಇನ್ನಷ್ಟು ಸೌಲಭ್ಯಗಳನ್ನು ವ್ಯವಸ್ಥೆ ಮಾಡುವುದಾಗಿ ತಿಳಿಸಿದೆ. ವೈರಸ್‌ನ ವಿರುದ್ಧ ಪ್ರತಿಯೊಬ್ಬರೂ ಕೈಗೊಳ್ಳಲಿರುವ ದೀರ್ಘಕಾಲದ ಯುದ್ಧ ಎಂದು ಇದನ್ನು ಕರೆದಿದೆ.


  ಕ್ಯಾಸಿನೊ ಲಾಕ್


  ನಗರದ ಸುತ್ತಮುತ್ತಲಿನ ಪ್ರದೇಶದ ಸ್ಥಳೀಯ ಅಧಿಕಾರಿಗಳು ಪಲಾಯನಗೊಂಡ ಕಾರ್ಮಿಕರು ಮನೆಗೆ ಹಿಂತಿರುಗಿದ ಸಮಯದಲ್ಲಿ ಅಧಿಕಾರಿಗಳೊಂದಿಗೆ ನೋಂದಾಯಿಸುವಂತೆ ವಿನಂತಿಸಿಕೊಂಡಿದ್ದು ಮನೆಗೆ ಆಗಮಿಸಿದ ನಂತರ ಹಲವಾರು ದಿನಗಳ ಸ್ವಯಂ ಕ್ವಾರಂಟೈನ್‌ಗೆ ಒಳಗಾಗುವಂತೆ ತಿಳಿಸಿದೆ. ಮಕಾವುವಿನ ದಕ್ಷಿಣದ ಅರೆ ಸ್ವಾಯತ್ತ ಪ್ರದೇಶದಲ್ಲಿ ಕೆಲವೊಂದು ಬೆರಳೆಣಿಕೆಯ ಕೋವಿಡ್ ಪ್ರಕರಣಗಳು ಪತ್ತೆಯಾದ ನಂತರ ತನ್ನ 70,000 ಜನಸಂಖ್ಯೆಯನ್ನು ಪರಿಶೀಲಿಸಿದ್ದು ತನ್ನ ಕ್ಯಾಸಿನೊಗಳಲ್ಲಿ ಒಂದನ್ನು ಲಾಕ್‌ಡೌನ್ ಮಾಡಿದೆ.


  ಇದನ್ನೂ ಓದಿ: ಮೂಳೆ ಕ್ಯಾನ್ಸರ್‌ಗೆ ಈ ಹೊಸ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಂತೆ, ಅಧ್ಯಯನದಲ್ಲಿ ಬಹಿರಂಗ


  ಚೀನಾದ ಮುಖ್ಯ ಭೂಭಾಗ ಮತ್ತು ಹಿಂದಿನ ಪೋರ್ಚುಗೀಸ್ ವಸಾಹತುಗಳ ಪ್ರಯಾಣ ತಾಣವಾಗಿರುವ ನಗರವು ಜೂಜಿನ ಉದ್ಯಮಕ್ಕೆ ಹೆಸರುವಾಸಿಯಾಗಿದೆ. ಅಂತೆಯೇ ಕೋವಿಡ್ ನಂತರ ನಿಧಾನವಾಗಿ ಚೇತರಿಕೆಯನ್ನು ಕಂಡುಕೊಳ್ಳುತ್ತಿದ್ದು ದಿಢೀರ್ ಲಾಕ್‌ಡೌನ್, ಉದ್ಯಮ ಕ್ಷೇತ್ರಕ್ಕೆ ಹೊಡೆತವನ್ನೇ ನೀಡಿದೆ.

  Published by:Precilla Olivia Dias
  First published: