America vs Afghan| ಅಫ್ಘಾನಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲಿನ ಅಮೆರಿಕದ ಡ್ರೋಣ್ ದಾಳಿಗೆ ಬಳಕೆಯಾಗಲಿದೆಯೇ ಭಾರತ?
ಅಮೆರಿಕ ಭಾರತದ ವಾಯು ನೆಲೆಯನ್ನು ತಾಲಿಬಾನ್ ಉಗ್ರರ ಅಡಗುತಾಣಗಳ ಮೇಲೆ ನಿಗಾ ವಹಿಸಲು ಮತ್ತು ಅಗತ್ಯವಿದ್ದರೆ ಡ್ರೋನ್ ದಾಳಿ ನಡೆಸಲು ಬಳಸಿಕೊಳ್ಳಲಿದೆ ಎನ್ನಲಾಗುತ್ತಿದೆ. 2018 ರಲ್ಲಿ ಸಂವಹನ ಹೊಂದಾಣಿಕೆ ಮತ್ತು ಭದ್ರತಾ ಒಪ್ಪಂದದ ಪ್ರಕಾರ ಭಾರತ ಇದಕ್ಕೆ ಸಹಕರಿಸಬೇಕಿದೆ ಎನ್ನಲಾಗುತ್ತಿದೆ.
ನವ ದೆಹಲಿ (ಸೆಪ್ಟೆಂಬರ್ 15); ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು (Taliban Terrorist) ವಶಪಡಿಸಿಕೊಂಡು ತಿಂಗಳುಗಳೇ ಕಳೆದಿದೆ. ಸತತ 2 ವರ್ಷಗಳ ಹೋರಾಟದ ನಂತರ ತಾಲಿಬಾನಿಗಳು ಅಫ್ಘಾನಿಸ್ತಾನವನ್ನು (Afghanistan) ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಹೊಸ ಸರ್ಕಾರವನ್ನೂ ರಚನೆ ಮಾಡಿದ್ದು, ವಿಶ್ವ ರಾಷ್ಟ್ರಗಳು ಆ ಸರ್ಕಾರಕ್ಕೆ ಮನ್ನಣೆ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ, ಅಫ್ಘಾನಿಸ್ತಾನವನ್ನು ತಾಲಿಬಾನ್ ಅಧಿಕಾರಕ್ಕೆ ವಹಿಸಿದ ನಂತರ ಅಮೆರಿಕ ಕಾಬೂಲ್ನಿಂದ ಸಂಪೂರ್ಣವಾಗಿ ತನ್ನ ಸೇನೆಯೊಂದಿಗೆ ಹೊರ ನಡೆಯಬೇಕು ಎಂಬುದು ಒಪ್ಪಂದ. ಅದರಂತೆ ಅಮೆರಿಕ (America) ಹಂತ ಹಂತವಾಗಿ ತನ್ನ ಸೇನೆಯನ್ನು ಅಫ್ಘಾನಿಸ್ತಾನದಿಂದ ಹಿಂಪಡೆದದ್ದೂ ಆಗಿದೆ. ಆದರೆ, ಇದೀಗ ಅಮೆರಿಕ ವಿರುದ್ಧ ತಾಲಿಬಾನ್ ನಡೆಸಬಹುದಾದ ಉಗ್ರವಾದಿ ಚಟುವಟಿಗಳ ವಿರುದ್ಧ ಅಮೆರಿಕ ಹೇಗೆ ಕಣ್ಣಿಡುವುದು? ಅಲ್ಲಿನ ಉಗ್ರರ ನೆಲೆಗಳ ಮೇಲೆ ಹೇಗೆ ವಾಯುದಾಳಿ ಅಥವಾ ಡ್ರೋನ್ ದಾಳಿ (Drone Attack) ನಡೆಸುವುದು? ಎಂಬುದು ಇದೀಗ ಅಮೆರಿಕ ಎದುರಿರುವ ದೊಡ್ಡ ಪ್ರಶ್ನೆ. ಆದರೆ, ಅಮೆರಿಕದ ಈ ಡ್ರೋನ್ ದಾಳಿ ಯೋಜನೆಗೆ ಭಾರತದ ವಾಯುನೆಲೆ ಬಳಕೆಯಾಗುತ್ತದೆಯೇ? ಎಂಬ ಸಂಶಗಳೂ ಇದೀಗ ಮನೆ ಮಾಡಿದೆ.
2001 ಸೆಪ್ಟೆಂಬರ್ 11 ರಂದು ತಾಲಿಬಾನ್ ಉಗ್ರರು ಅಮೆರಿಕದ ಅವಳಿ ಪೆಂಟಗನ್ ಕಟ್ಟಡದ ಮೇಲೆ ವೈಮಾನಿಕ ದಾಳಿ ನಡೆಸಿ ಸಾವಿರಾರು ಜನರ ಪ್ರಾಣವನ್ನು ತೆಗೆದಿದ್ದರು. ಆಗಿನಿಂದಲೂ ತಾಲಿಬಾನ್ ಉಗ್ರರ ಮೇಲೆ ಸೈನಿಕ ಕಾರ್ಯಾಚರಣೆಗೆ ಕರೆ ನೀಡಿದ್ದ ಅಮೆರಿಕ ಇಡೀ ಅಫ್ಘನ್ನಲ್ಲಿನ ತಾಲಿಬಾನ್ ಅಧಿಕಾರವನ್ನು ಕೊನೆಗೊಳಿಸಿ ಪ್ರಜಾಪ್ರಭುತ್ವ ಸ್ಥಾಪನೆಗೆ ಕಾರಣರಾಗಿದ್ದರು. 20ವರ್ಷಗಳ ಕಾಲ ಅಫ್ಘನ್ಗೆ ರಕ್ಷಣಾ ಕವಚವಾಗಿ ಕೆಲಸ ನಿರ್ವಹಿಸಿದ್ದರು.
ಅಲ್ಲದೆ, 2008ರಲ್ಲಿ ಪಾಕಿಸ್ತಾನದ ಅಬೋಟಾಬಾದ್ನಲ್ಲಿದ್ದ 9/ 11 ರ ರುವಾರು ಓಸಾಮಾ ಬಿನ್ ಲಾಡೆನ್ನನ್ನು ಸೈನಿಕ ಕಾರ್ಯಾಚರಣೆ ನಡೆಸಿ ಕೊಂದಿದ್ದರು. ಆದರೂ, ತಾಲಿಬಾನ್ ಉಗ್ರರನ್ನು ಮಾತ್ರ ಸಂಪೂರ್ಣವಾಗಿ ನಾಶ ಮಾಡುವುದು ಅಮೆರಿಕದಿಂದ ಸಾಧ್ಯವಾಗಿರಲ್ಲಿ. ವಿಪರ್ಯಾಸ ಎಂಬಂತೆ ಇದೀಗ ತಾಲಿಬಾನಿಗಳೇ ಮತ್ತೆ ಅಫ್ಘನ್ನಲ್ಲಿ ಅಧಿಕಾರ ಹಿಡಿದಿದ್ದಾರೆ. ಹೀಗಾಗಿ ಅಧಿಕಾರ ಹಿಡಿದ ಅವರು ಮತ್ತೆ ಅಮೆರಿಕದ ಮೇಲೆ ಸೇಡು ತೀರಿಸಿಕೊಳ್ಳದೆ ಬಿಡರು ಎಂಬ ನಂಬಿಕೆ ದೊಡ್ಡಣ್ಣ ಅಮೆರಿಕಾದ್ದು. ಹೀಗಾಗಿ ಅಫ್ಘನ್ ಮೇಲೆ ಯಾವಾಗಲೂ ಒಂದು ಕಣ್ಣಿಡಬೇಕಾದ ಅಗತ್ಯತೆ ಅಮೆರಿಕಾಕ್ಕೆ ಇದೆ. ಹೀಗಾಗಿ ಅವರಿಗೆ ಒಂದು ಸೇನಾ ನೆಲೆಯೂ ಅಗತ್ಯವಿದೆ.
ಹೀಗಾಗಿ ಅಮೆರಿಕ ಭಾರತದ ವಾಯು ನೆಲೆಯನ್ನು ತಾಲಿಬಾನ್ ಉಗ್ರರ ಅಡಗುತಾಣಗಳ ಮೇಲೆ ನಿಗಾ ವಹಿಸಲು ಮತ್ತು ಅಗತ್ಯವಿದ್ದರೆ ಡ್ರೋನ್ ದಾಳಿ ನಡೆಸಲು ಬಳಸಿಕೊಳ್ಳಲಿದೆ ಎನ್ನಲಾಗುತ್ತಿದೆ. 2018 ರಲ್ಲಿ ಸಂವಹನ ಹೊಂದಾಣಿಕೆ ಮತ್ತು ಭದ್ರತಾ ಒಪ್ಪಂದಕ್ಕೆ (COMCASA) ಮತ್ತು 2020 ರಲ್ಲಿ ಮೂಲ ವಿನಿಮಯ ಮತ್ತು ಸಹಕಾರ ಒಪ್ಪಂದಕ್ಕೆ (BECA) ಭಾರತ-ಅಮೆರಿಕ ಎರಡೂ ದೇಶಗಳೂ ಸಹಿ ಹಾಕಿದ್ದು, ಎರಡು ದೇಶಗಳ ನಡುವೆ ಭೂಗೋಳದ ಮಾಹಿತಿ ವಿನಿಮಯ ಮಾಡಿಕೊಳ್ಳುವ ಅಗತ್ಯವಿದೆ.
ಇದೇ ಹಿನ್ನೆಲೆಯಲ್ಲಿ ತಾಲಿಬಾನ್ ವಿರುದ್ಧ ವೈಮಾನಿಕ ಕಣ್ಗಾವಲು ನಡೆಸಲು ಮತ್ತು ದಾಳಿ ನಡೆಸಲು ಭಾರತದಲ್ಲಿ ಏರ್ಫೀಲ್ಡ್ಗಳನ್ನು 'ಸ್ಟೇಜಿಂಗ್ ಏರಿಯಾ' ಗಳಾಗಿ ಬಳಸಲು ದೆಹಲಿಯೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ತಿಳಿಸಿರುವುದು ಇದೀಗ ವ್ಯಾಪಕ ಚರ್ಚೆಗೆ ವೇದಿಕೆ ಕಲ್ಪಿಸಿ ಕೊಟ್ಟಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಸಹ ಈ ಬಗ್ಗೆ ಮಾತನಾಡಿದ್ದು, ಭಾರತ ಸರ್ಕಾರ ಈ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳಲಿದೆ? ಎಂಬ ವಿಚಾರ ಇದೀಗ ಕುತೂಹಲಕ್ಕೆ ಕಾರಣವಾಗಿದೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ