ಐಟಿ ನಿಯಮಗಳನ್ನು ಪಾಲನೆ ಮಾಡದ ಕಾರಣಕ್ಕೆ ಹಾಗೂ, ಟ್ವಿಟ್ಟರ್ನ ನಿಯಮಗಳನ್ನು ಉಲ್ಲಂಘನೆ ಮಾಡಿ, ವಿವಾದಾತ್ಮಕ ಪೋಸ್ಟ್ಗಳನ್ನು ಹಾಕಿದ ಕಾರಣಕ್ಕೆ ಹಾಗೇ ಟ್ವಿಟ್ಟರ್ನಲ್ಲಿ ಆ್ಯಕ್ಟಿವ್ ಆಗಿರದ ಅನೇಕರ ಗಣ್ಯರ ಖಾತೆಯ ಬ್ಲೂಟಿಕ್ ಅನ್ನು ಟ್ವಿಟ್ಟರ್ ತೆಗೆದುಹಾಕಿದೆ. ದೇಶದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅಧಿಕೃತ ಖಾತೆಯ ಬ್ಲೂಟಿಕ್ ರದ್ದುಮಾಡಿ ಸುದ್ದಿಯಾಗಿದ್ದ ಟ್ವಿಟ್ಟರ್ ಇದೀಗ ತನ್ನ ಬಳಕೆದಾರರಾಗಿರುವ ಅನೇಕ ಆರ್ಎಸ್ಎಸ್ ನಾಯಕರ ಖಾತೆಯ ಬ್ಲೂ ವೇರಿಫೈಡ್ ಮಾರ್ಕ್ ಅನ್ನು ತೆಗೆದುಹಾಕಿದೆ.
ಆರ್ಎಸ್ಎಸ್ ಜಂಟಿ ಕಾರ್ಯದರ್ಶಿಗಳಾದ ಕೃಷ್ಣ ಗೋಪಾಲ್ ಮತ್ತು ಅರುಣ್ ಕುಮಾರ್, ಆರ್ಎಸ್ಎಸ್ನ ಮಾಜಿ ಪ್ರಧಾನ ಕಾರ್ಯದರ್ಶಿ ಸುರೇಶ್ ಜೋಷಿ ಅಲಿಯಾಸ್ ಭಯ್ಯಾಜಿ, ಮಾಜಿ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಶ್ ಸೋನಿ ಹಾಗೂ ಆರ್ಎಸ್ಎಸ್ ಸಂಪರ್ಕ ಪ್ರಮುಖ್ ಅನಿರುದ್ಧ ದೇಶಪಾಂಡೆ ಅವರ ಟ್ವಿಟ್ಟರ್ ಖಾತೆಯ ಬ್ಲೂ ಟಿಕ್ ಅನ್ನು ಟ್ವಿಟ್ಟರ್ ರದ್ದುಪಡಿಸಿದೆ.
ಟ್ವಿಟ್ಟರ್ನ ಈ ನಡೆಗೆ ಭಾರೀ ಟೀಕೆ ವ್ಯಕ್ತವಾಗಿದೆ. ಸಿನಿಮಾ ತಾರೆಯರು, ಕ್ರಿಕೆಟಿಗರು, ಫುಟ್ಬಾಲ್ ತಾರೆಯರು, ಸಾಧನೆ ಮಾಡಿದ ಸರದಾರರು, ರಾಜಕಾರಣಿಗಳು ಹೀಗೆ ಜನಪ್ರಿಯತೆ ಪಡೆದವರ ಖಾತೆಗೆ ಟ್ವಿಟ್ಟರ್ ವಿಶೇಷ ನೀಲಿ ಬಣ್ಣದ ಬ್ಲೂ ಟಿಕ್ ಅನ್ನು ನೀಡುತ್ತದೆ. ಬ್ಲೂ ಟಿಕ್ ಟಿಕ್ ಹೊಂದಿದ ಖಾತೆಯು ಸಕ್ರಿಯವಾಗಿರದಿದ್ದರೂ ಆ ಖಾತೆಯ ಬ್ಲೂ ಟಿಕ್ ಅನ್ನು ಟ್ವಿಟ್ಟರ್ ರದ್ದುಪಡಿಸುತ್ತದೆ.
ಸರ್ಕಾರದಿಂದ ಗುರುತಿಸಿಕೊಂಡಿರುವ, ಬ್ರಾಂಡ್ಗಳು, ಲಾಭ ರಹಿತ ಸಂಸ್ಥೆ, ಸುದ್ದಿ ಸಂಸ್ಥೆಗಳಿಗೆ ಟ್ವಿಟ್ಟರ್ ಬ್ಲೂ ಟಿಕ್ ನೀಡುತ್ತದೆ. ಕಳೆದ ಕೆಲ ತಿಂಗಳ ಹಿಂದೆ ಟ್ವಿಟ್ಟರ್ ಬ್ಲೂ ಟಿಕ್ ವೇರಿಫಿಕೇಶನ್ ಬ್ಯಾಡ್ಜ್ ಆಯ್ಕೆಯನ್ನು ಮತ್ತೆ ಪ್ರಾರಂಭಿಸಿದೆ. 2017ರ ನಂತರ ಸ್ಥಗಿತಗೊಳಿಸಿದ ಈ ಪ್ರಕ್ರಿಯೆಯನ್ನು ಇದೀಗ ಪ್ರಾರಂಭಸಿದೆ. ಮುಂದಿನ ಕೆಲವು ವಾರಗಳಲ್ಲಿ ಹೊಸ ಧೃಢೀಕರಣ ಆಯ್ಕೆಯನ್ನು ಕಲ್ಪಿಸುತ್ತಿದ್ದೇವೆ ಎಂದು ತಿಳಿಸಿತ್ತು. ಟ್ವಿಟ್ಟರ್ ಖಾತೆ ವೇರಿಫೈಡ್ ಆದರೆ ಮಾತ್ರ ಅವರ ಹೆಸರಿನ ಮುಂದೆ ನೀಲಿ ಬಣ್ಣದ ಬ್ಲೂ ಟಿಕ್ ಕಾಣಿಸುತ್ತದೆ.
ವೇರಿಫೈಡ್ ಆಗಿರುವ ಬ್ಲೂ ಟಿಕ್ಗಾಗಿ ಅರ್ಜಿ ಸಲ್ಲಿಸುವವರು ಕಳೆದ 12 ತಿಂಗಳುಗಳಿಂದ ಟ್ವಿಟ್ಟರ್ ಮಾರ್ಗಸೂಚಿಯನ್ನು ಉಲ್ಲಂಘಿಸಿರಬಾರದು. ಇನ್ನು ದ್ವೇಷ ಪೂರಿತ ಸಂದೇಶ, ಮಾಹಿತಿ, ನ್ಯೂಸ್ ಫೀಡ್, ಕಾಮೆಂಟರಿ ಅಕೌಂಟ್ಗಳು ಟ್ವಿಟ್ಟರ್ ಮಾರ್ಗಸೂಚಿಯನ್ನು ಉಲ್ಲಂಘಿಸಿದ ಅಕೌಂಟ್ಗಳನ್ನು ಪರಿಗಣಿಸುವುದಿಲ್ಲ ಎಂದು ತಿಳಿಸಿತ್ತು.
ಭಾರತದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಟ್ವಿಟ್ಟರ್ ಖಾತೆಯ ಬ್ಲೂ ಟಿಕ್ ರದ್ದಾಗಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಭಾರತಕ್ಕೆ ತನ್ನದೇ ಆದ ಸಾಮಾಜಿಕ ಜಾಲತಾಣದ ಪ್ಲಾಟ್ಫಾರ್ಮ್ ಇದ್ದರೆ ಉತ್ತಮ. ಇಲ್ಲದಿದ್ದರೆ ಇದೇ ರೀತಿಯ ಮುಜುಗರವನ್ನು ಎದುರಿಸುತ್ತಿರಬೇಕಾಗುತ್ತದೆ. ಟ್ವಿಟ್ಟರ್ ಭಾರತೀಯರ ವಿರೋಧಿ ನೀತಿಯನ್ನು ತಳೆಯುತ್ತಿದೆ. ಇದರ ವಿರುದ್ಧ ಪಕ್ಷಭೇದ ಮರೆತು ಭಾರತೀಯರೆಲ್ಲರೂ ಧ್ವನಿಯೆತ್ತಬೇಕು ಎಂದು ಬಿಜೆಪಿ ನಾಯಕರು ಹೇಳಿಕೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ